ಭೂತಾರಾಧನೆ/ದೈವಾರಾಧನೆ

ಬೆಳ್ಳಾರೆ ( ಸುಳ್ಯ ತಾ,ದ ಕ ಜಿಲ್ಲೆ ) ಬೀಡಿನ ಕೊನೆಯ ಅರಸ ಯಾರು ?

ProfileImg
23 Apr '24
5 min read


image


              
                                                ನೈದಾಲ ಪಾಂಡಿಯ ಪಾತ್ರಿ



 

೨೦೧೧  ಮಾರ್ಚ್  ೧೪  ನನ್ನ ಪಾಲಿಗೆ ಮರೆಯಲಾಗದ ದಿನ .ಅಂದು ಸುಮನಕ್ಕೊಂದಿಗೆ ಅರೆಕಲ್ಲಿಗೆ ಹೋಗಿ ನೈದಾಲ ಪಾಂಡಿ ಭೂತದ ರೆಕಾರ್ಡಿಂಗ್ ಗೆ ಅನುಮತಿ ಪಡೆದದ್ದು  ಅದೇರಾತ್ರಿ  ೧೨-೧೨.೩೦ ಗೆ ನಡೆದ ನೈದಾಲ ಪಾಂಡಿ ನೇಮ ರೆಕಾರ್ಡ್ ಮಾಡಿದ್ದುದನ್ನು  ನೆನೆದರೆ ಈಗ ಕೂಡ  ಮೈ ಜುಮ್ಮೆನ್ನುತ್ತ ದೆ !

ಬೆಳ್ಳಾರೆ ಯಿಂದ ಸುಮಾರು ೧೫-೨೦ ಮೈಲು ದೂರದಲ್ಲಿ ಅರೆಕಲ್ಲು ಪೂಮಲೆ ಕಾಡಿನಲ್ಲಿ ಸಮುದ್ರ ಮಟ್ಟಕ್ಕಿಂತ ೧೦೦೦ ಅಡಿ ಎತ್ತರದಲ್ಲಿ  ಅರೆಕಲ್ಲು ಕ್ಷೇತ್ರವಿದೆ.ಇಲ್ಲಿ ೭ ವರ್ಷಕ್ಕೊಮ್ಮೆ  ನೈದಾಲ ಪಾಂಡಿ (ಅರೆಕಲ್ಲಿನಲ್ಲಿ ಮೆದಲ ಪಾಂಡಿ ಎಂಬ ಭೂತಕ್ಕೆ ಆರಾದನೆ ಇದೆ ಎಂಬ ಬಗ್ಗೆ ಕೆ  ಗಣಪತಿ ಭಟ್ ಅವರು ಅವರ ಕೃತಿಯಲ್ಲಿ ಉಲ್ಲೇಖಿಸಿದ್ದರರು) ಭೂತಕ್ಕೆ ಏಳು ವರ್ಷಗಳಿಗೊಮ್ಮೆ   ಆರಾಧನೆ ನಡೆಯುತ್ತದೆ .  ಇಲ್ಲಿ ಅನೇಕ ವಿಧಿ ನಿಷೆ ಧಗಳಿವೆ   ಇಲ್ಲಿ ಒಂದು ಶಿವಾಲಯ ಇರುವುದಾದರೂ  ಇದು ಪ್ರಧಾನವಾಗಿ ಅಯ್ಯಪ್ಪನ ದೇವಾಲಯ ಇದೆಯಾದ್ದರಿಂದ ಇಲ್ಲಿ  ಸ್ತ್ರೀಯರಿಗೆ ಪ್ರವೇಶ ಇಲ್ಲ . ಫೋಟೋ ತೆಗೆಯಲು  ಅನುಮತಿ ಇಲ್ಲ .ಸುಮಾರು ೧ ಮೈಲು ಮೊದಲು ಒಂದು ತೋಡು ಇದೆ ಅಲ್ಲಿಂದ ಮತ್ತೆ ಬರಿಗಾಲಿನಲ್ಲಿ ನಡೆದು ಕೊಂದು ಹೋಗ ಬೇಕು ಇತ್ಯಾದಿ ಅನೇಕ ಕಟ್ಟು  ಪಾಡುಗಳು ಇದ್ದ ಬಗ್ಗೆ ತಿಳಿದು ಬಂದಿತ್ತು

 ೨೦೧೧ ಮಾರ್ಚ್  ೧೪ ರಂದು  ಅಲ್ಲಿ ನೇಮ ನಡೆಯುವ ಬಗ್ಗೆ ೪ ದಿವಸ ಮೊದಲು ನನಗೆ ತಿಳಿದು ಬಂತು.  ಸಹೋದ್ಯೋಗಿ  ಗೆಳತಿ ಸತ್ಯವತಿ ಅವರ ಗಂಡ  ಆ ಪ್ರದೇಶ ಸಮೀಪದಲ್ಲಿ ಶಿಕ್ಷಕರರಾಗಿದ್ದರು  ಅವರಲ್ಲಿ ಅಲ್ಲಿಗೆ ಹೋಗುವ ದಾರಿ ಹಾಗೂ ಅಲ್ಲಿ ಯಾರಾದರು ಸ್ಥಳೀಯರ ಫೋನ್ ನಂಬರ್ ಸಂಪಾದಿಸಿ ಕೊಡುವಂತೆ  ವಿನಂತಿಸಿದೆ .ಅವರು ಸ್ಥಳೀಯರಾದ ಶಿಕ್ಷಕಿಯೊಬ್ಬರ ಫೋನ್ ನಂಬರ್ ಕೊಟ್ಟರು.ಆ ಪ್ರದೇಶಕ್ಕೆ ಹೋಗಬೇಡಿ ಅಲ್ಲಿ ನಿಮ್ಮನ್ನ ಬಡಿದು ಸಾಯಿಸಿ ಬಿಟ್ಟಾರು !ಎಂದು ಎಚ್ಚರಿಕೆಯನ್ನು ಕೊಟ್ಟರು . ಆ ಸ್ಥಳೀಯ ಶಿಕ್ಷಕಿಗೆ  ನನ್ನನ್ನು  ಅ ಪ್ರದೇಶಕ್ಕೆ ಕರೆದೊಯ್ಯಲು ಧೈರ್ಯ ಸಾ ಲಿಲ್ಲ' ಅವರು ಶ್ರೀಧರ ಭಟ್ ಅವರ ನಂಬರ್  ಕೊಟ್ಟು  ಸಂಪರ್ಕಿಸಲು ತಿಳಿಸಿದರು.ಇಷ್ಟಗುವಾಗ ಎರಡು ದಿವಸ ಕಳೆದು ಒಂದು ದಿವಸ ಮಾತ್ರ ಉಳಿದಿತ್ತು.  ಕೂಡಲೇ ಶ್ರೀಧರ ಭಟ್ ಅವರನ್ನು ಸಂಪರ್ಕಿಸಿ  ನನಗೆ  ಅಲ್ಲಿಗೆ ಬರಲು  ಅನುಮತಿ ಕೊಡಿಸುವಂತೆ ವಿನಂತಿಸಿದೆ .ಅರೆಕಲ್ಲಿನಲ್ಲಿ ಆರಾಧನೆ ನಡೆಸುವವರು ದೂರದ ಗಾಳಿ ಬೀಡಿನ  ಪಾಂಡೀರ  ರಾಜ ವಂಶದವರು .                                           ಆ ದೇವಾಲಯದಜೀರ್ಣೋದ್ದಾರಮಾಡಲು ಉದ್ದೇಶಿಸಿದ್ದು  ಅದಕ್ಕೆ  ಸ್ಥಳೀಯರಾದ ಶ್ರೀಧರ ಭಟ್ ಅವರು ಮುಖ್ಯಸ್ಥರಾಗಿದ್ದರು. ಆದ್ರೆ ಅವ್ರು ಕೂಡ ಅನುಮತಿ ಕೊಡಿಸುವುದು ಕಷ್ಟ .ರೆಕಾರ್ಡ್ ಮಾಡ್ಲಿಕ್ಕಂತು ಸಾಧ್ಯವೇ ಇಲ್ಲ ಈ ಹಿಂದೆ ಚಂದ್ರ ಶೇಖ ರ ದಾಮ್ಲೆ ಮೊದಲಾ ದ ತುಂಬಾ ಜನ ಹಿರಿಯ ಸಂಶೋದರು ಯತ್ನಿಸಿದ್ದಾರೆ ಅವರಿಗೆ ಅನುಮತಿ ಸಿಗಲಿಲ್ಲ .ನೀವು ಬಂದು ಪ್ರಯೋಜನ ಇಲ್ಲ ಎಂದು ತಿಳಿಸಿದರು.

ಏನೇ ಆದರು ಅಲ್ಲಿ ತನಕ ಹೋಗಿ ನೋಡೋಣ ಎಂದು ೧೩ ನೆ ತಾರೀಕಿನಂದು ಮಗನೊಂದಿಗೆ ಸಂಪಾಜೆಗೆ ಬಸ್ಸಿನಲ್ಲಿ ಹೋಗಿ ಅಲ್ಲಿಂದ ಜೀಪಿನಲ್ಲಿ ಶ್ರೀಧರ ಭಟ್ ಮನೆಗೆ ಹೋದೆ.ಅಲ್ಲಿಗೆ ಮುಟ್ಟುವಾಗ ಮಧ್ಯಾಹ್ನ ೨ ಗಂಟೆ .ನಾವು ಹೋದ ತಕ್ಷಣ  ಸುಮನಕ್ಕ (ಶ್ರೀಧರ ಭಟ್ಟರ ಮಡದಿ ) ಬಾಯಾರಿಕೆಗೆ  ಕೊಟ್ಟು ಊಟಕ್ಕೆ  ತಟ್ಟೆ ಇಟ್ಟರು . ನಮ್ಮ ಊರ  ಕಡೆ ಹಳ್ಳಿಗಳಲ್ಲಿ ಈಗ ಕೂಡ ೩-೪ ಜನ ಉಣುವಷ್ಟು  ಅಡಿಗೆ ಹೆಚ್ಚಿಗೆ ಮಾಡಿರ್ತಾರೆ . ಮಧ್ಯಾಹ್ನ ಯಾರು ಅತಿಥಿಗಳು ಬಾರದೆ ಇದ್ದರೆ ರಾತ್ರಿ ಅದನ್ನು ಸರಿದುಗಿಸುತ್ತಾರೆ ಹಾಗೂ ಉಳಿದರೆ ನಾಯಿ ದನಕರುಗಳಿಗೆ ಮರು ದಿನ ಕೊಡುತ್ತಾರೆ.ಸುಮನಕ್ಕ ನನಗಿಂತ ೩-೪ ವರ್ಷ ಹಿರಿಯ ಮಹಿಳೆ.ಹೆಸರಿನಷ್ಟೇ ಒಳ್ಳೆಯ ಮನಸ್ಸು ಅವರದು.ಊಟ ಮಾಡುತ್ತಾ ನಾನು ಬಂದ ಕಾರಣವನ್ನು  ನನಗೆ ಅಪರೂಪದ ಭೂತಗಳನ್ನು ದಾಖಲಿಸಿ ಅಧ್ಯಯನ ಮಾಡುವ ನನ್ನ ಆಸಕ್ತಿಯನ್ನು ತಿಳಿಸಿದೆ.ಹಾಗಾದರೆ ನಾವು ಈಗ ಹೋಗಿ ಅವರಲ್ಲಿ ಮಾತನಾಡಿ ಪ್ರಯತ್ನಿಸುವ ಅಂತ ಹೇಳಿದ್ರು.

ಮಧ್ಯಾಹ್ನ ಸುಮಾರು ೩-೩.೩೦ ಗೆ ಅವರ ಜೀಪಿನಲ್ಲಿ ನನ್ನನ್ನು  ತೋಡಿನ  ತನಕ  ಕರೆತಂದು ಇನ್ನು ಸ್ವಲ್ಪ ದೂರ ಇದೆ ಅಲ್ಲಿಗೆ ಬರಿಗಾಲಿನಲ್ಲಿ ಹೋಗಬೇಕು .ನಾವು ಚಪ್ಪಲಿ ಇಲ್ಲಿಯೇ ಇಡುವ ಅಂತ ಹೇಳಿ ಅಲ್ಲೇ ಬಿಟ್ಟು  ಮುಂದೆ ನಡೆದರು  ಕಾಡಿನ ದಾರಿ  ನೆಲ ಬಿಸಿಯಾಗಿ ಕಾಲು ಸುಡುತ್ತಿತ್ತು ಚಪ್ಪಲಿ ಹಾಕಿ ನಡೆದು ಅಭ್ಯಾಸವಾದ ನಂಗೆ ಬರಿಗಾಲಿನಲ್ಲಿ ನಡೆಯುವುದು ಬಹಳ ಕಷ್ಟವಾಗಿತ್ತು ಅಂತು ಸುಮನಕ್ಕ ನಮ್ಮನ್ನು ಅರೆಕಲ್ಲು ದೇವಾಲಯದ ಸಮೀಪ ಕರಕೊಂಡು ಗಾಳಿಬೀಡಿನಿಂದ  ಬಂದಿದ್ದ  ಮುಖ್ಯಸ್ಥರಿಗೆ   ನನ್ನನ್ನು ಪರಿಚಯಿಸಿ  ನನಗೆ ರೆಕಾರ್ಡಿಂಗ್ ಗೆ ಅನುವು ಮಾಡಿ ಕೊಡುವಂತೆ ವಿನಂತಿಸಿದರು. ಆಗ ಅವರು ಈಗ ದೈವ ದರ್ಶನ ಇದೆ ಆಗ ದೈವ ನುಡಿಯಲ್ಲಿ ಅನುಮತಿ ಸಿಕ್ಕರೆ ಮಾಡಬಹುದು ಎಂದರು .ಸ್ವಲ್ಪ ಹೊತ್ತಿನಲ್ಲಿ ಪಾತ್ರ್ಗೆ ದರ್ಶನ ಬಂದಾಗ ಈ ಬಗ್ಗೆ ಅವರು ಪಾತ್ರಿಯಲ್ಲಿ ಕೇಳಿದರು.ಆಗ ದೈವ "ದೂರದ ಊರಿನಿಂದ ಹೆಣ್ಣು ಮಗಳು ಒಳ್ಳೆ ಉದ್ದೇಶದಿಂದ ಬಂದಿದ್ದಾರೆ .ತಂದೆ ತಾಯಿಯರಿಗೆ ಮಕ್ಕಳಲ್ಲಿ ಹೆಣ್ಣು ಗಂಡು ಭೇದ ಇಲ್ಲ .ಆ ನನ್ನ ಮಗಳನ್ನು ನನ್ನ ಸನ್ನಿಧಿಗೆ ಬರಮಾಡಿ ಕೊಳ್ಳಿ "

 ಎಂದು ದೈವ ನುಡಿಯಾಗಿ ನಾವು ಒಳ ಪ್ರವೇಶಿಸಿದೆವು

 ಮತ್ತೆ ಪುನಃ ರೆಕಾರ್ಡ್ ಮಾಡಬಹುದೇ ಎಂಬುದನ್ನು ತಿಳಿಯಲು ದೇವರ ಎದುರಿಗಿನ ಹೂವನ್ನು ಚಿಕ್ಕ ಮಗುವಿನ ಕೈಯಲ್ಲಿ ಎತ್ತಿಸಿದಾಗ ಆ ಮಗು ದೇವರಬಲ ಭಾಗದಲ್ಲಿದ್ದ ಮಲ್ಲಿಗೆ ಮಾಲೆಯನ್ನು ಎತ್ತಿಕೊಂಡು ಬಂದು ನಮ್ಮ ಕೈಗೆ ನೀಡಿತು.!! ಅಲ್ಲಿಗೆ ದೇವರ ಒಲವು ನಮಗೆ ಸಿಕ್ಕಿ ಇದ್ದ ಅಡ್ಡಿ ಆತಂಕಗಳೆಲ್ಲ ದೂರವಾಯಿತು.ಇಷ್ಟೆಲ್ಲಾ ಆಗುವಾಗ ರಾತ್ರಿಯಾಗಿತ್ತು .ಸುಮನಕ್ಕನೊಂದಿಗೆ ಅವರ ಮನೆಗೆ ಬಂದು ರಾತ್ರಿ ಅಲ್ಲೇ ಉಳಿದು ಕೊಂಡೆ.

ಮರುದಿವಸ  ಮತ್ತೆ ಸುಮನಕ್ಕ ಮತ್ತು ಶ್ರೀಧರಣ್ಣ  ನನ್ನನ್ನು  ಅರೆಕಲ್ಲಿಗೆ ಕರೆದು  ಕೊಂಡು  ಬಂದರು ಅಲ್ಲಿ ಬೇಕಾದ ಎಲ್ಲ ಮಾಹಿತಿ ಸಂಗ್ರಹಿಸಿದೆ . ನೇಮದ ಸಂದರ್ಭದಲ್ಲಿ ನೈದಾಲ ಪಾಂದಿಗೆ ಸಂಬಂಧಿಸಿದ ಹಾಡನ್ನು  ಹೇಳುತ್ತಾರೆ ಇದು ಕೊಡವ ಭಾಷೆಯಲ್ಲಿದೆ. ಆ ಹಾಡಿನ ಸಾರಾಂಶವನ್ನು ನನಗೆ ಕನ್ನಡದಲ್ಲಿ ತಿಳಿಸಿದ್ದಾರೆ

ನೈದಾಲ ಪಾಂಡಿ  ಗಾಳಿಬೀಡಿನಲ್ಲಿ ಈಗ ನೆಲೆಸಿರುವ ಪಾಂಡೀರ  ರಾಜವಂಶದ ಮೂಲ ಪುರುಷ.ಈತ ಬೆಳ್ಳಾರೆಯ ರಾಜ ಕುಮಾರ ಈತನ ಮೂಲ ಹೆಸರು ಕಾಸರಗೋಡು ಕಾಳಯ್ಯ. ಬೆಳ್ಳಾರೆಯನ್ನು ಶತ್ರುಗಳು ಆಕ್ರಮಿಸಿದಾಗ ಅಲ್ಲಿಂದ ತಪ್ಪಿಸಿಕೊಂಡು ಬಂದು ಪೂ ಮಲೆ ಕಾಡಿನಲ್ಲಿ ಪೂ ಮಲೆಕುಡಿಯರ ಆಶ್ರಯ ಪಡೆದು ಇರುತ್ತಾನೆ .ವನ ವಿಹಾರಕ್ಕೆ ಬಂದ ಕೊಡಗರಸರ ತಂಗಿಗೆ  ಮತ್ತು  ಇವನಲ್ಲಿ ಪ್ರೇಮಾಂಕುರವಾಗಿ ಅವಳನ್ನು ಮದುವೆಯಾಗುತ್ತಾನೆ ಆಗ ಇವನು ಲಿಂಗಾಯಿತಾನಾಗಿ ಮತಾಂತರ ಹೊಂದುತ್ತಾನೆ 

 

ಹೀಗೆ ಎರಡು ವಂಶವನ್ನು ಬೆಸೆದ ಅಂದರೆ ನೈದ ಪಾಂಡಿ  ನೈದಾಲ ಪಾಂಡಿ ಎಂಬ ಹೆಸರು ಈತನಿಗೆ ಬಂತು ಅಲ್ಲಿಗೂ ಶತ್ರುಗಳು ಆಕ್ರಮಿಸಿದಾಗ ಅಲ್ಲಿಂದ ತಪ್ಪಿಸಿಕೊಂಡು ಬಂದು ಅರೆಕಲ್ಲಿನ ಶಿವನ ಸಾನ್ನಿಧ್ಯಕ್ಕೆ ಬಂದು ಶಿವನಲ್ಲಿ ಐಕ್ಯನಾಗಿ  ದೈವತ್ವ ಪಡೆದು ನೈದಾಲ ಪಾಂಡಿ ಎಂಬ ಭೂತವಾಗಿ ಆರಾಧನೆ ಪಡೆಯುತ್ತಾನೆ

ಈ ಕಥಾನಕದಲ್ಲಿ ಬೆಳ್ಳಾರೆಯ ಇತಿಹಾಸವು ಸೇರಿಕೊಂಡಿದೆ ಆದರೆ ಬೆಳ್ಳಾರೆ ಯಲ್ಲಿ ಯಾರಿಗೂ ಈ ಬಗ್ಗೆ ಮಾಹಿತಿ ತಿಳಿದಿಲ್ಲ . ಬೆಳ್ಳಾರೆ ಯಲ್ಲಿ ಬೀಡಿನ ಅವಶೇಷಗಳು  ಆನೆ ಕಟ್ಟುವ ಕಲ್ಲು ಮೊದಲಾದದವು ಇವೆ ಆದರೆ ಬೆಳ್ಳಾರೆ ಬೀಡಿನ ರಾಜರು ಯಾರಾಗಿದ್ದರೆಂಬ  ಬಗ್ಗೆ ಮಾಹಿತಿ ಇಲ್ಲ .

 

ಕಾರ್ಕಳದ ಬೈರರಸರಲ್ಲಿ ಕೊನೆಯವ ಪಾಂಡ್ಯ  ರಾಯ  ಬಲ್ಲಾಳನ ಅಧೀನದಲ್ಲಿ  ಬೆಳ್ಳಾರೆಯ ಕೋಟೆ ಮತ್ತು  ಬೀಡು ಇದ್ದ ಬಗ್ಗೆ  ತುಸು ಮಾಹಿತಿ ಲಭ್ಯವಾಗಿದೆ ಹೈದರಾಲಿಯ ಆಕ್ರಮಣದ ಅಥವಾ ಟಿಪ್ಪುವಿನ ದಾಳಿ  ಸಂದರ್ಭದಲ್ಲಿ(ತುರುಕ ಪಡೆಗೆ ಎದುರಾಗಿ ಕಾದಲಾಗದೆ ) ದುರಂತವನ್ನಪ್ಪಿರುವ ಬಗ್ಗೆ ಪಾಡ್ದನ ಒಂದರಲ್ಲಿಮಾಹಿತಿಇದ್ದಬಗ್ಗೆ ಕಾರ್ಕಳ -ಒಂದುಅಧ್ಯಯನ  ಕೃತಿಯಲ್ಲಿ ಪಿ  ಎನ್ ನರಸಿಂಹಮೂರ್ತಿಯವರು ಉಲ್ಲೇಖಿಸಿದ್ದಾರೆ .


ಕೊಡಗಿನ ಚಿಕ್ಕವೀರ ರಾಜೇಂದ್ರನ ತಂಗಿ ದೇವಮ್ಮಾಜಿಯ ಗಂಡ ಕೊಡವ (?)ನಾಗಿದ್ದು ಮದುವೆಯ ಸಂದರ್ಭದಲ್ಲಿ ಲಿನ್ಗಾಯನಾದ ಬಗ್ಗೆ ಇತಿಹಾಸ ಕೃತಿಗಳಲ್ಲಿ ಮಾಹಿತಿ ಇದೆ 
ಅಮರ ಸುಳ್ಯ ಕ್ರಾಂತಿ (ಕಲ್ಯಾಣಪ್ಪನ ಕಾಟುಕಾಯಿ ) ಪುಟ್ಟ ಬಸವ ಎಂಬ ಜನ್ಗಮನನ್ನು ಕೆಲಕಾಲ ಪೂಮಲೆ  ಕಾಡಿನಲ್ಲಿ ಇರಿಸಿ ಆತನನ್ನು ಕಲ್ಯಾಣ ಸ್ವಾಮಿ ಎಂದು ಬಿಂಬಿಸಿ ಬೆಳ್ಳಾರೆಯ ಕೋಟೆಯಲ್ಲಿ ಪಟ್ಟಾಭಿಷೇಕ ಮಾಡಿದ ಬಗ್ಗೆ ಐತಿಹ್ಯಗಳು ಪ್ರಚಲಿತವಿವೆ . 
ದೈವತ್ವಕ್ಕೆರಿದ ಬೆಳ್ಳಾರೆಯ ಈ ರಾಜ ಕುಮಾರ ಯಾರು ? ಈತನನ್ನು ಆಕ್ರಮಿಸಿದ ಶತ್ರುಗಳು ಯಾರು? ಯಾವ ಕಾಲದಲ್ಲಿ ಎಂಬ ಬಗ್ಗೆ ಮಾಹಿತಿ ಸರಿಯಾಗಿ ಸಿಕ್ಕಿಲ್ಲಹೈದರಾಲಿಯ ಸಹಾಯದಿಂದ ಲಿಂಗಯ್ಯ (ಲಿಂಗರಾಜ ?)ಕೊಡಗನ್ನು ಆಳುತ್ತಿದ್ದ ಹಾಲೇರಿ ವಂಶದ ದೇವಯ್ಯ (ದೇವಪ್ಪ?) ನನ್ನು ಸೋಲಿಸುತ್ತಾನೆ.ವೈರಿ ಸೇನೆಯೆದುರು ನಿಲ್ಲಲಾಗದ ದೇವಯ್ಯನು ಓಡಿಹೋಗಿ ಕಾಡುಗಳಲ್ಲಿ ತಲೆಮರೆಸಿಕೊಲ್ಲುತ್ತಾನೆ ಎಂಬ ಬಗ್ಗೆ ಕರ್ನಾಟಕ ಚರಿತ್ರೆ ಸಂಪುಟದಲ್ಲಿ ಹೇಳಿದೆ .ಈತನಿಗೂ ಬೆಳ್ಳಾರೆಯ ರಾಜಕುಮಾರನಿಗು ಏನಾದರು ಸಂಬಂಧ ಇದೆಯೇ ಎಂಬ ಬಗ್ಗೆ  ಏನು ತಿಳಿದು ಬಂದಿಲ್ಲ.
ನೈದಾಲ ಪಾಂಡಿ (ಬೆಳ್ಳಾರೆ ರಾಜ ಕುಮಾರ ರನಂತೆ)ಯಂತೆ ದೇವಮ್ಮಾಜಿಯ ಗಂಡ ಚೆನ್ನಬಸವ ಕೂಡಾ ಮಾಡುವೆ ಸಮಯದಲ್ಲಿ  ಲಿನ್ಗಾಯತನಾದವನು .ಇವರಿಬ್ಬರು ಕೂಡಾ ಕೊದಗರಸ ಹುಡುಗಿಯನ್ನು ವಿವಾಹವಾಗುವ ಸಲುವಾಗಿಯೇ ಲಿಂಗಾಯತರಾಗಿ  ಪರಿವರ್ತಿತರಾದವರು ಆದ್ದರಿಂದ ಚೆನ್ನ ಬಸವನೆ ನೈದಾಲ ಪಾಂಡಿ  ಭೂತವಾಗಿ  ಆರಾಧಿಸಲ್ಪಡುತ್ತಿರುವ ಸಾಧ್ಯತೆ ಇದೆ  . ನೈದಾಲ ಪಾಂಡಿ ಭೂತದ ವೇಷ ಭೂಷಣಗಳು ಅರಸು ದೈವವನ್ನು ಹೋಲುತ್ತವೆ . 

ತಲೆಯ ಪಗಡಿ ರಾಜರ ಕಿರೀಟವನ್ನು ಹೋಲುತ್ತದೆ .ದೊಡ್ಡ ಮೀಸೆ ಯೊಂದಿಗಿನ ಅರಸನ ಗಾಂಭೀರ್ಯದ ಅಭಿವ್ಯಕ್ತಿ  ಈತೆ ರಾಜನಿರಬಹುದೆಮ್ಬುದನ್ನು ಸೂಚಿಸುತ್ತವೆ.

 

 ಈ ದೈವದ ಪಾತ್ರಿ (ಪೂಜಾರಿ ) ಹಾಗೂ ಈ ಭೂತ ಯುದ್ಧದ ಭೀಕರತೆ ಸದ್ದುಗದ್ದಲ ಸುಸ್ತು ಆಯಾಸ ಏದುಸಿರು ಗಳನ್ನೂ ಪ್ರದರ್ಶಿಸುತ್ತಾರೆ . ನೇಮಕ್ಕೆ ಮೊದಲು ಒಂದು ಅಣಕು  ಮಾತು ಕಥೆ ವೀಳ್ಯ ನೀಡುವುದು ಮೊದಲಾದ ಆಚರಣೆಗಳು ಯುದ್ಧ ತಂತ್ರವನ್ನು ಚರ್ಚಿಸುತ್ತಿದುದನ್ನು  ಸಂಕೇತಿಸುತ್ತದೆ 

. ಈ ದೈವದ ಪಾತ್ರಿ (ಪೂಜಾರಿ) ಕೊಡಗು ಯುದ್ಧ ವೀರರ(ಯೋಧರ) ವೇಷ ಭೂಷಣಗಳನ್ನ್ನು ಧರಿಸಿರುವುದು ಕೂಡಾ ನೈದಾಲ ಪಾಂಡಿ ಯುದ್ಧ ವೀರನಾಗಿದ್ದುದನ್ನು ಸೂಚಿಸುತ್ತದೆ. 

 

 ಗಾಳಿ ಬೀಡಿನಲ್ಲಿರುವ ಪಾಂಡೀರ ವಂಶದ ಹಿರಿಯರು ತಿಳಿಸಿರುವ ಪ್ರಕಾರ ಇದು ಸುಮಾರು ೧೫೦-೧೮೦ ವರ್ಷಗಳ ಹಿಂದೆ ನಡೆದ ವಿಚಾರ ತುರುಕ ಪಡೆಯ ದಾಳಿ (ಹೈದರಾಲಿ ಅಥವಾ ಟಿಪ್ಪು ) ಕಾಲವು ಇದರ ಆಸುಪಾಸಿನಲ್ಲಿಯೇ ಇದೆ ಚೆನ್ನ ಬಸವನ ಕಾಲ ಕೂಡ ಇದಕ್ಕೆ ಸರಿ ಸುಮಾರು ಹೊಂದಾಣಿಕೆ ಆಗುತ್ತದೆ . ಆದ್ದರಿಂದ ಚೆನ್ನ ಬಸವನೇ ಬೆಳ್ಳಾರೆ ಯನ್ನು ಆಳುತ್ತಿದ್ದ ಕಜನೆಯ ಅರಸನಾಗಿದ್ದು ದುರಂತವನ್ನಪ್ಪಿ ದೈವತ್ವವನ್ನು ಪಡೆದು ನೈದಾಲ ಪಾಂಡಿ ಎಂಬ ಹೆಸರಿನ ದೈವವಾಗಿ ಆರಾಧನೆ ಪಡೆಯುತ್ತಾನೆ ಎಂದು ಹೇಳಬಹುದು 
 

ತುಳುವರ ಭೂತಾರಾಧನೆ ಕೇವಲ ಆರಾಧನಾ ಪದ್ಧತಿ ಮಾತ್ರ ವಲ್ಲ‌ ಇದರಲ್ಲಿ ತುಳುನಾಡಿನ ಇತಿಹಾಸ, ಸಂಸ್ಕೃತಿ ಗಳೂ ಅಡಕವಾಗಿವೆ
 


 

  ಈ  ಬಗ್ಗೆ ಸಮಗ್ರ ಅಧ್ಯಯನ ನಡೆದರೆ ಬೆಳ್ಳಾರೆಯ ಇತಿಹಾಸಕ್ಕೊಂದು ಭದ್ರ ಬುನಾದಿ ಸಿಗಬಹುದು

ಡಾ.ಲಕ್ಷ್ಮಿ ಜಿ ಪ್ರಸಾದ 

ಕನ್ನಡ ಉಪನ್ಯಾಸಕರು 

ಸರ್ಕಾರಿ ಪದವಿ ಪೂರ್ವ ಕಾಲೇಜು.

ಬೆಂಗಳೂರು 

Category:Spirituality



ProfileImg

Written by Dr Lakshmi G Prasad

Verified