ಆನೇಕಲ್ ವಕೀಲರ ಕ್ರಿಕೇಟ್AAPL ರಾಜಕೀಯ ಜಂಗಿ ಕುಸ್ತಿಯ ಜಿದ್ದಾಟ
ಪುರುಷೋತ್ತಮ ಎ ಚಿಕ್ಕಹಾಗಡೆ
ವಕೀಲರು, 7204761668
ಇದೇ ತಿಂಗಳು 17 ರಿಂದ ಶುರುವಾಗುವ ಆನೇಕಲ್ಲಿನ ವಕೀಲರ ಕ್ರಿಕೇಟ್ ಟೂರ್ನಿಮೆಂಟ್ AAPL ಅಬ್ಬರದಿಂದ ಶುರುವಾಗುತ್ತಿರುವುದು ಸಂತಸದ ಸುದ್ದಿ, ಶುರುವಾಗುವುದು ಅಬ್ಬರವಾದರು
ಕಟೌಟ್ ಗಳ ಮೂಲಕ ಆನೇಕಲ್ ತಾಲೂಕಿನ ಜನ ಮಾತನಾಡಿಕೊಳ್ಳುವಂತೆ ಮಾಡುತ್ತಾರೆ, ಬಣ್ಣ ಬಣ್ಣದ ಟೀಂ ಟೀ ಶರ್ಟ್ ಗಳ ಮೂಲಕ, ತಮ್ಮ ತಂಡದ ಹೆಸರಿನ ಜೊತೆ ತಮಗೆ ಇಷ್ಟವಾಗುವ ನಂಬರಿನ ಮೂಲಕ ಹೆಸರನ್ನು ಹಾಕಿಸಿಕೊಂಡು ಮೈದಾನದಲ್ಲಿ ಆಟವಾಡಲು ತಯಾರು ನಡೆಯುತ್ತಿದೆ, ನ್ಯಾಯಾಲಯದಲ್ಲಿ ಮಾತಿನ ಮೂಲಕ ಬ್ಯಾಟ್ ಬೀಸುತ್ತಿದ್ದ ವಕೀಲರು ಮೈದಾನದಲ್ಲಿ ನಿಜವಾದ ಬ್ಯಾಟ್ ಬೀಸಬೇಕಾಗುತ್ತೆ, ದಿನವಿಡೀ ಹಣದ ಹಿಂದೆ ನಡೆಯುತ್ತಿದ ವಕೀಲರು, ಕೇಸು, ಪೈಲು, ಟೈಪಿಂಗು ಅನ್ನೋ ಒತ್ತಡದಿಂದ, ಕೆಲವು ದಿನ ಬ್ರೇಕ್ ನೀಡಿ ಮೈ ದುಡಿಸಲು ಮುಂದಾಗಿದ್ದಾರೆ,
IPL ಮಾದರಿಯ ಮೂಲಕ ಆಟಗಾರರನ್ನು ಖರೀದಿಸಿದ 6 ತಂಡಗಳು ಬ್ಯಾಟ್ ಬೀಸಲು ತಯಾರಾಗಿ ನಿಂತಿವೆ, ರವಿಪ್ರಕಾಶ್ ಒಂದು ತಂಡ, ಉದಯ್ ಮತ್ತು ಗುರುಮೂರ್ತಿ ಒಂದು ತಂಡ, ವೈ ಪ್ರಕಾಶ್-ಎಂ ವೆಂಕಿ ತಂಡ, ಎಂ ಆರ್ ವಿ ಮತ್ತು ಬಿ ಇ ಎಲ್ ತಂಡ ಮತ್ತು ಕೆವಿಆರ್ ಮತ್ತು ಎಎಂಎಸ್ ತಂಡ ರೆಡಿಯಾಗಿ ನಿಂತಿದೆ ಪ್ರತಿ ದಿನ ಬೆವರು ಹರಿಸುತ್ತಿದೆ, ವಕೀಲರು ಪ್ರತಿ ದಿನ ಒತ್ತಡದಿಂದ ಕೆಲಸ ಮಾಡುತ್ತಿರುತ್ತಾರೆ, ಕ್ರಿಮಿನಲ್ ವಲಯದಲ್ಲಿ ಕೆಲಸ ಮಾಡುವ ವಕೀಲರಿಗೆ ಮಾನಸಿಕವಾಗಿ ನೆಮ್ಮದಿ ಇರುವುದಿಲ್ಲ, ಸಿವಿಲ್ ವಲಯದಲ್ಲಿ ಕೆಲಸ ಮಾಡುವವರಿಗೆ ಆರ್ಡರ್ ಸಿಗಬೇಕಿದ್ದಾಗ ಒತ್ತಡ ಇರುತ್ತದೆ, ನಾವು ಹೇಗೆ ತೆಗೆದುಕೊಳ್ಳುತ್ತೇವೊ ಹಾಗೇ ವಕೀಲರ ವೃತ್ತಿ ಇರುತ್ತದೆ, ಏನೇ ಇದ್ದರೂ ವಕೀಲರಿಗೆ ಸಾಂಸ್ಕೃತಿಕವಾಗಿ ಮತ್ತು ಆಟಗಳ ಮೂಲಕ ಮಾನಸಿಕ ವಿಶ್ರಾಂತಿ ಬೇಕಾಗಿರುತ್ತದೆ,
ಎರಡು ವರ್ಷದ ಹಿಂದೆ ಆನೇಕಲ್ ನಲ್ಲಿ ವಕೀಲರ ಸಂಘದಲ್ಲಿ ಯಾವುದೇ ಚುನಾವಣೆ ಇರಲಿಲ್ಲ, ಹಾಗ ಯುವ ವಕೀಲರು ಆರಂಬಿಸಿದ ಕ್ರೇಜು ಕ್ರಿಕೇಟ್ ಆಟ,
AAPL ಕ್ರಿಕೇಟ್ ಆಟ ಬರಿ ಆಟವಾಗಿ ಉಳಿಯಲ್ಲ ತಂಡಗಳ ಪ್ರತೀಷ್ಠೆಯಾಗಿ ತೆಗೆದುಕೊಂಡಿದ್ದಾರೆ, ಹೆಸರಿಗಾಗಿ ಕೂಡ ತೆಗೆದುಕೊಂಡಿದ್ದಾರೆ, ಬಹಳ ಮುಖ್ಯವಾಗಿ ವಕೀಲರ ಸಂಘದ ಚುನಾವಣೆಯ ಕಣವಾಗಿ ರೂಪಗೊಳ್ಳುವುದು ಸ್ಪಷ್ಟವಾಗಿ ಕಾಣಿಸುತ್ತದೆ, ನನಗೆ ಬಂದ ಮಾಹಿತಿ ಪ್ರಕಾರ ತಾಲ್ಲೂಕಿನ ಹೋಬಳಿಯ ಸರ್ಕಲ್ ನಲ್ಲಿ ಕೂಡ ಕಟೌಟ್ ಹಾಕಲು ತಯಾರಿ ನಡೆಯುತ್ತಿದೆ ಎಂದರೆ ತಂಡದ ಮಾಲೀಕರ ಮತ್ತು ಆಟಗಾರರ ಹಾದಿ ಯಾವ ಮಟ್ಟಕ್ಕೆ ಕ್ರೇಜು ಬೆಳೆದಿದೆ ಎಂಬುದು ಅರಿವಾಗುತ್ತದೆ,
AAPL ಸುಖಕರವಾಗಿ ನಡೆಯಲಿ, ಯಾರು ಯಾವ ಲಾಭಕ್ಕಾಗಿ ಬಳಸಿಕೊಂಡರು ಆಟಕಾರರು ತಮ್ಮ ನೈಜ ಆಟವಾಡಿ ಚಪ್ಪಾಳೆ ಗಿಟ್ಟಿಸುವುದು ಖಂಡಿತ, ಓಡುವ ಮನಸನ್ನು ಲಾಕ್ಡೌನ್ ತಡೆದು ನಿಲ್ಲಿಸಿ ಮಾನವೀಯ ಮೌಲ್ಯಗಳನ್ನು ಕಲಿಸಿತ್ತು, ಈ ನಿಟ್ಟಿನಲ್ಲಿ ಹಣ, ಪ್ರತೀಷ್ಟೆಯಿಂದೆ ಹೋಗುವ ವಕೀಲರಲ್ಲಿ AAPL ಆಟದಿಂದ ಪರಸ್ಪರ ಪ್ರೀತಿ ವಿಶ್ವಾಸ ಮೂಡಲಿ, ಒಬ್ಬರಿಗೊಬ್ಬರು ಗೌರವ ಕೊಡುವಂತವರಾಗಲಿ,
ದನ್ಯವಾಧಗಳು,
I am Advocate, activist, writer, former.
0 Followers
0 Following