ಏಏಏಥರ್ ಏಥರ್!!
ಇದು ಶಬುದವಿಲ್ಲದೆ
ನೆಲದ ಮೇಲಾರುವ
ಮೆಟ್ರೋ ರೈಲಿನ ವೇಗದ ತುಂಡು
ಟ್ರಾಫಿಕ್ ನಡುವೆ
ಹುಲಿ ಚಿರತೆ ತೋಳಗಳ ಕೈಗೆ ಸಿಗದೆ
ಚಂಗನೆ ನೆಗೆವ ಶಶಕ
ಗೆಜ್ಜೆಯಿಲ್ಲದ ಮೋಹಿನಿ
ಗಾಳಿಯಾಗಿ ಸರಿದಾಳು
ಎಡ ಬಲ ನೋಡಿ ತಿರುಗಿ ಹುಷಾರು
ಸರ್ರನೆ ಜಾರುವಾ
ಸರಕ್ಕನೆ ನಿಂತು ಪುರ್ರನೇ ನುಸುಳುವ
ಮೋಹಕ ಶೈಲಿಯ ವಿದ್ಯುತ್ ಹಕ್ಕಿ
ಸ್ಟಾಂಡು ಎತ್ತದಿರೆ ಸಾಗದು
ನಿಂತಾಗ ಮುಂದೆ ಹಿಂದೆ ಸರಿಯದು
ಲೈಟ್ ಆರಿಸಿ ಎನ್ನುವ ಹುಡುಗರಿಗೆ ಮಣಿಯದು
ಸುಂಡಿಲಿಯ ಕನಲು
ಮೊಬೈಲ್ ನಲ್ಲೂ ಹರಿವ ಹೊನಲು
ಮನದನ್ನೆಗೆ ಸುಳ್ಳಾಡುವಂತೆಯೇ ಇಲ್ಲ
ಗಾಳಿಯೊಡನೆಯ ತಂಗಾಳಿ
ಆರ್ಭಟವಿಲ್ಲ ಪೆಟ್ರೋಲ್ ಇಲ್ಲ
ಕಿವಿ ಕಣ್ಣು ಕಿಸೆಗಳ ನೆಚ್ಚನೆಯ ನೇಹಿತ
ಏಏಏಥರ್ ಏಥರ್
ಹೆಂಗಸರು ವಿದ್ಯಾರ್ಥಿಗಳು ಮಧ್ಯಮ ವರ್ಗದವರ
ಅಚ್ಚುಮೆಚ್ಚಿನ ಕಾಮಿಕ್ ಲೂಥರ್!
ಎನ್. ರವಿಶಂಕರ್
0 Followers
0 Following