ಸಂಸಾರದಲ್ಲಿ ಸಂಸ್ಕಾರಕ್ಕೆ ಒತ್ತು ನೀಡಬೇಕೇ? 

ಒತ್ತಿನ ಮಹತ್ತ್ವ..!! 

ProfileImg
27 Jul '24
1 min read


image

     ಅಪ್ಪ, ಅಮ್ಮ, ಮಕ್ಕಳ ಪುಟ್ಟ ಕುಟುಂಬ. ಈಗಿನ ಕಾಲದಲ್ಲಿ ಪತಿ, ಪತ್ನಿಯರು ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಪುಟ್ಟ ಶಿಶುಗಳನ್ನು ನೋಡಲು ಸಮಯವಿಲ್ಲ. ಅವರನ್ನು ಮನೆಯ ಕೆಲಸದವಳಲ್ಲಿ ಬಿಡುತ್ತಾರೆ. ಅದು ಹಾಗೆಯೇ ಬೆಳೆಯುತ್ತದೆ. ಹೀಗಾದಾಗ, ಮಕ್ಕಳಲ್ಲಿ ಸಂಸ್ಕಾರ ಬೆಳೆಯಲು ಸಾಧ್ಯವೇ..? 

    ಅವರೂ ಬೆಳೆದು ತಮ್ಮ ಕಾಲಮೇಲೆ ನಿಂಬ ಕನಸು ಕಾಣುತ್ತಾರೆ. ಆಗ ಹೆತ್ತವರ ಮಾತನ್ನು ಅವರು ಕೇಳದೆ, ಬೆಲೆ ಬಾರದೆ, ಶೂನ್ಯವಾಗಿ ಸಸಾರವಾಗಿ, ತಿರಸ್ಕರಿಸಲು ಅದು ನೆಲೆಯನ್ನು ಕಳೆದುಕೊಳ್ಳುತ್ತದೆ. 

     ಸಂಖ್ಯೆಯ ಮೊದಲ ಶೂನ್ಯಕ್ಕೆ ಬೆಲೆಯಿಲ್ಲ. ಆದರೆ ನಂತರದ ಶೂನ್ಯಕ್ಕೆ ಅಮೂಲ್ಯವಾದ ಬೆಲೆಯಿದೆ. "ಸಂಸಾರ"ದಲ್ಲಿ ಆ ಶೂನ್ಯಕ್ಕೆ ಬೆಲೆ ಬರುವುದು ಶೂನ್ಯವೆಂಬ ಪರಿಪೂರ್ಣತೆಯ ಪೌರ್ಣಮಿಯ ಚಂದಿರನಂತೆ ಬೆಳಕು ಹೊರಹೊಮ್ಮಿದಾಗ... ಒಟ್ಟಾಗಿ, ಹಿರಿಯರ ಮಾತಿನ ಆಳವಾದ ಸಾರವನ್ನು ಅರಿತಾಗ..... (ಸಂ-ಸಾರ) 

     ಸಂಸಾರದಲ್ಲಿ ಸಂಸ್ಕಾರಕ್ಕೆ ಒತ್ತು ನೀಡಿದಾಗಲೇ ಬಾಳು ಸುಂದರ. ಮಕ್ಕಳು ಬೆಳೆಯುವ ಸಮಯಕ್ಕೆ ಅವರಿಗೆ ಉತ್ತಮ ಸಂಸ್ಕಾರವನ್ನು ನೀಡುವ ಮೂಲಕ ಸಂಸಾರವನ್ನು ನಡೆಸಿಕೊಂಡು ಹೋಗಲು ಸಾಧ್ಯ.  ಹಿರಿಯರ ಮಾತು ಬೆಲೆಯ ಕಳೆದುಕೊಂಡರೆ ಮಕ್ಕಳು ಕೆಟ್ಟ ದಾರಿಯನ್ನು ಹಿಡಿಯಬಹುದು. 

      ಗಿಡವಾಗಿ ಬಗ್ಗದ್ದು. ಮರವಾಗಿ ಬಗ್ಗೀತೇ..? ಗಿಡವಾಗಿರುವಾಗಲೇ ಅದನ್ನು ಕಿತ್ತೆಸೆಯಬೇಕು. ಇಲ್ಲದಿದ್ದರೆ ಇಡೀ ಮರಕ್ಕೇ ಹಬ್ಬಿ ಮರವೇ ನಾಶವಾಗಬಹುದು. 

     ಹೆತ್ತವರ ಮಾತುಗಳು ಇಂದಿನ ಮಕ್ಕಳಿಗೆ ಊಟದ ಖಾರದ ಪದಾರ್ಥಗಳೇ ಆಗಬಹುದು. ಆದರೂ....ಅಮ್ಮನ ಮೇಲಿನ ಪ್ರೀತಿಗಾಗಿ ಅಮ್ಮ ಮಾಡಿದ ಪದಾರ್ಥವನ್ನು ಉಣ್ಣುವುದಿಲ್ಲವೇ..? 

    ಹಾಗೆಯೇ, ಮಾತುಗಳನ್ನು ಸಹಿಸಿಕೊಳ್ಳಲು ಎಷ್ಟೇ ಕಷ್ಟವಾದರೂ.... ಇಷ್ಟದಲ್ಲಿ ಸ್ವೀಕರಿಸಬೇಕು. ಮನಸ್ಸಿನ ಈ ಭಾರವು ಮುಂದೆ ಅವರ ಬಾಳಿನಲ್ಲಿ  ಭವಿಷ್ಯತ್ತಿನಲ್ಲಿ ಭದ್ರ ಬುನಾದಿಯಾಗಿ ಹೊಸ ದ್ವಾರವನ್ನೇ ತೆರೆಯಬಲ್ಲುದು....!! 

  ಸಂಸಾರದಲ್ಲಿ ಮಕ್ಕಳಿಗೆ ಹೆಚ್ಚಿನ ಒತ್ತನ್ನು ನೀಡಿ, ಉತ್ತಮ ಸಂಸ್ಕಾರವನ್ನು ಕೊಟ್ಟಾಗ... ಗಟ್ಟಿಯಾದ ಅಡಿಪಾಯವನ್ನು ಹಾಕಿದಾಗ ಅವರೊಬ್ಬ ಭಾರತದ ಉತ್ತಮ ಪ್ರಜೆಯಾಗಿ ಬೆಳೆಯಬಲ್ಲರು..!! (ಸಂಸಾರ - ಸಂಸ್ಕಾರ) 

✍ ಮುರಳಿಕೃಷ್ಣ ಕಜೆಹಿತ್ತಿಲು

 

Category:Parenting and Family



ProfileImg

Written by Murali Krishna

DTP Worker, Vittal, Mangalore