ಸ್ನೇಹಿತರೇ ನಮಸ್ತೆ……..
ಹರಿಝೋನ್ (ದಿಗಂತ) ಭೂಮಿಯ ಕಡೆಯ ಇಮ್ಯಾಜಿನರಿ ಲೈನ್, ಎಲ್ಲಿ ಸೂರ್ಯ ರಾಜನತೆ ಎದ್ದು ಬರುತ್ತಾನೋ ಅದೆ.
ಎಲ್ಲಿ ಭೂಮಿ ಮುಗಿಲು ಚುಂಬಿಸಿದಂತೆ ಕಾಣುವ ಜಾಗ.
ಎಷ್ಟು ವಿಸ್ಮಯ ಅಲ್ವ, ಸುನೀಲ ವಿಸ್ಮಯ
ಹೌದು ಅದು ಒಂದಾದಂತೆ ಕಂಡರೂ ಅಲ್ಲಿ ನಿರ್ದಿಷ್ಟ ಅಂತರ ಕಾಯ್ದುಕೊಂಡಿರುತ್ತದೆ. ಹೇಳಬೇಕು ಅಂದರೆ ಅದು ಒಂದು hope line ನಮ್ಮನ್ನ ನಾವು ಕಾಣುವ ಜಾಗ.
ಮರು ಭೂಮಿಯ ದೊಡ್ಡ ದೊಡ್ಡ ಮರಳ ಗುಡ್ಡದ ನಡುವೆ ಕಾಣುವ ಮಾಯಾಜಿಂಕೆಯ ಬೆನ್ನಟಿ ಓಯಸಿಸ್ ಸಿಕ್ಕಂತೆ,
ನಮ್ಮ ಆಶಯಗಳನ್ನು ನಾವು ಅಲ್ಲಿ ಕಂಡು ಅವುಗಳನ್ನ ಬೆನ್ನಟ್ಟಿ ನಮ್ಮ ಆಸೆ ಈಡೇರಿಸಿಕೊಳ್ಳಬೇಕು..!
ಅದು ಒಂಥರಾ ನಂಬಿಕೆ, ಇದೆ ಅಂದ್ರೆ ಇದೆ ಇಲ್ಲ ಅಂದ್ರೆ ಇಲ್ಲ. ನಮಗೆ ಒಳ್ಳೇದೇ ಆಗುತ್ತೆ ಅನ್ನೋ ನಂಬಿಕೆ ಇದ್ರೆ ಆಗ್ಲೇಬೇಕು.
ನಮ್ಮ subconscious ಮೈಂಡ್ ನ paradigm ನಲ್ಲಿ ಸೇವ್ ಆಗ್ಬೇಕು ನಮ್ಮ ಮುಂದಿನ ಜೀವನ ಅದು ಗೊತ್ತೋ ಗೊತಿಲ್ದೆ ನೋ ನಾವು ಅಲ್ಲಿಗೆ ತಲುಪ್ತಿವೆ.
ನಮಗೆ ಒಳ್ಳೇದೇ ಆಗ್ಲಿ ಅನ್ನೋ ಆಸೆ ಏಲ್ರಿಗೂ ಇರುತ್ತೆ ಅಲ್ವ. ಅದ್ನಷ್ಟೇ ಯೋಚ್ನೆ ಮಾಡಿದ್ರೆ ಆಯಿತು, ಅದು ನಮ್ಮ paradigm ನಲ್ಲಿ ಸೇವ್ ಆಗುತ್ತೆ, ಮತ್ತು ಅದನ್ನೆ ಆಕರ್ಷಿಸ್ತೀವಿ ಅಷ್ಟೇ.
ಬಿಡಿ ಈ ಸೈನ್ಸ್, ಕ್ವಾಂಟಮ್ ಫಿಸಿಕ್ಸ್ ಎಲ್ಲ ಬೇಡ ನೇರವಾಗಿ ಹೇಳ್ತಿನಿ…
ಆದಷ್ಟು ಧನಾತ್ಮಕವಾಗಿ ಇರ್ಬೇಕು. ಅದ್ಬಿಟ್ರೆ ಮಿಕ್ಕಿದ್ ಏನು ಅನ್ನೋದು ನೆನಪಿಗೆ ಬರ್ಬಾರ್ದು ಅಷ್ಟೇ.
ಅದೇನೆ ಇರಲಿ ಆ ಹೊರೈಜನ್ ನಲ್ಲಿ ಸೂರ್ಯ ಉದಯ ಆಗೋದು, ಮುಳುಗೋದು ನೋಡ್ತಾರೆ ಅಂದ್ರೆ ಅದ್ರಲ್ಲಿ ಏನೋ ವಿಶೇಷ ಇರ್ಬೇಕು ಅಲ್ವ. ಸುಮ್ ಸುಮ್ನೆ ಏನು ಮಾಡಿರಲ್ಲ ನಮ್ಮ ಪೂರ್ವಜರು.
ಅನ್ಯ ನಾಗರೀಕರು ಅಕ್ಷರ ಕಲಿಯೋ ಮೊದ್ಲು ಖಗೋಳ ವಿಜ್ಞಾನದಲ್ಲಿ ಪಾಂಡಿತ್ಯ ಹೊಂದಿದ ನಾಗರೀಕತೆ ನಮ್ದು..!
ಅಂದ್ರೆ ಹೊರೈಜನ್ ನ ಇಮ್ಯಾಜಿನರಿ ಲೈನ್ ನೋಡ್ತಾ ನೋಡ್ತಾ ನಮ್ಮ ಏಕಾಗ್ರತೆ ಹೆಚ್ಚಾಗುತ್ತೆ.
ನಮ್ಮ ಕಣ್ಣುಗಳು 9೦೦ ಎಕ್ಕರೆ ಗಳಷ್ಟು ವಿಸ್ತಾರವಾಗಿ ನೋಡೋ ಕ್ಷಮತೆ ಹೊಂದಿದೆ. ಈ ಹೊರೈಜನ್ ನ ನೋಡೋವಾಗ ಅದಕ್ಕೆ ಸಾಕಷ್ಟು ವಿಶ್ರಾಂತಿ ಸಿಗುತ್ತೆ..
Subconsciously ನಮ್ಮ paradigm ಕೆಲಸ ಶುರು ಮಾಡುತ್ತೆ, ಒಳ್ಳೆಯದ್ ಇದ್ರೆ ಅದ್ರ ಪ್ರಕಾರ ಕೆಲಸ ಆಗುತ್ತೆ
ಬೇರೆಯದ್ ಇದ್ರೆ ಕೂಡ ಅದ್ರ ಪ್ರಕಾರನೆ ಕೆಲಸ ಆಗುತ್ತೆ.
ಅಂದರೆ ನಮ್ಮ ಮನದ ಆಶಯಕ್ಕೆ ತಕ್ಕ ಹೂಸ idea, ಬೇರೆ ಬೇರೆ ಮಾರ್ಗಗಳನ್ನು ಸೂಚಿಸುತ್ತದೆ, ಅದೇನು ಮಾಯಾಜಾಲ ಅಲ್ಲ.
ಸರಿ ಕೊನೆಗೆ conclusionಗೆ ಬರ್ತೀನಿ.
ಕಲ್ಪನೆಯೇ ಆಗಮಿ ವಸ್ತು ವಿಷಯಗಳ ಪೂರ್ವ ನಿದರ್ಶನ,
ನಿಂತ ನೆಲದಿಂದಲೇ ಬರಿಗಾಲಿನ ಸಹೋದರರಿಬ್ಬರೂ ವಿಶ್ವದ ಶ್ರೀಮಂತ ಸಾಮ್ರಾಜ್ಯ ಕಟ್ಟಿದ್ದು, ನಾವು ಅ ಸಾಮ್ರಾಜ್ಯದ ನಾಗರೀಕರು, ಅದೆ ಹಕ್ಕ ಬುಕ್ಕರು ಸ್ಥಾಪಿಸಿದ ವಿಶ್ವ ವಿಖ್ಯಾತ ವಿಜಯನಗರ ಸಾಮ್ರಾಜ್ಯ, ಶ್ರೀಕೃಷ್ಣದೇವರಾಯರು ನಮ್ಮ ಬದುಕಿಗೆ ತುಂಬ ಪ್ರೇರಣೆ ನೀಡಿದ್ದಾರೆ.
ನೆಲದ ಮೇಲೆ ಓಡುವ ವಾಹನಕ್ಕಾಗಿ ತಲೆ ಕೆಡಿಸಿಕೊಂಡಾಗ ರೈಟ್ ಸಹೋದರರು ಬಾನ್ನೆತರದಿಂದ ಇಳಿದರು, ಅವರಿಗೆ ವಿಮಾನದ ಕಲ್ಪನೆ ಬಂದಿದ್ದು ಹೇಗೆ,, ಈ ರೀತಿಯ ಅನೇಕ ವಿಚಾರಗಳಿಂದ ಉತ್ತರ ಹುಡುಕಲು ಹೋದ ಇವನಿಗೆ ಸಿಕ್ಕಿದ್ದು ಇದೆ.
ಯಾವುದೇ ವ್ಯಕ್ತಿ ತನಗೆ ಬೇಕಾದ ಅಂಶಗಳನ್ನು ಮೊದಲು ಮನದಲ್ಲಿ ಸೃಷ್ಟಿಸಿಕೊಳ್ಳುತ್ತಾನೆ, ನಂತರ ಭೌತಿಕವಾಗಿ ಸೃಷ್ಟಿಸುತ್ತಾನೆ,
ನಾವ್ ಏನ್ ಆಗ್ಬೇಕು ಅನ್ನೋದು ನಮ ಕೈಲೆ ಇರುತ್ತೆ. ಅದರ ಇಮ್ಯಾಜಿನೇಶನ್ ನಮ್ಮ ತಲೆಲಿ ಹೊಡ್ತ ಇರ್ಬೇಕು ಅದ್ನ ಬೆನ್ನಟಿ ಆ ಕುದರೆನ ಇಡಿಬೇಕು, ಆಗ ಈ ಹೊಸ ದಿಗಂತದಲ್ಲಿ ನಾವು ರಾಜರಂತೆ ಕಂಗೊಳಿಸೋದು ಶತಸಿದ್ಧ.
ಲೇಖನ ಇಷ್ಟ ಆಗಿದೆ ಅಂತ ಭಾವಿಸುತ್ತೇನೆ.
ಧನ್ಯವಾದಗಳು
-ಮಂಜುನಾಥ್ ಕೆ ಆರ್