ಚುನಾವಣೆ

ಜನರ ಜವಾಬ್ದಾರಿ.

ProfileImg
17 May '24
1 min read


image

ಯಾಕೋ ಈ ಚುನಾವಣೆಯ ಬಗ್ಗೆ, ರಾಜ್ಯದ, ದೇಶದ ರಾಜಕೀಯ ವ್ಯವಸ್ಥೆ, ಜನತಾ ಜನಾರ್ದನನ, ಹಾಗೂ ಮಾಧ್ಯಮಗಳ ಬಗ್ಗೆ ಮಾತನಾಡಲೇ ಬೇಕೆನಿಸುತ್ತಿದೆ. ಚುನಾವಣೆಯಲ್ಲಿ ನಡೆದ ಅಕ್ರಮಗಳು ಜನತಾ ಜನಾರ್ದನ ಆಮಿಷಕ್ಕೆ ಒಳಗಾಗಿರುವುದು ಹಾಗೂ ಎಷ್ಟೋ ಜನ ಮತದಾನದಿಂದ ದೂರ ಉಳಿದದ್ದು ನೈತಿಕತೆಯೇ? ಇನ್ನು ರಾಜಕೀಯ ಪಕ್ಷಗಳು ಈಗ ನಡೆದಕೊಳ್ಳುತ್ತಿರುವ ರೀತಿ. ಚುನಾವಣೆ ಹಿಂದಿನ ದಿನದವರೆಗೂ ಅವರ ಪಕ್ಷದ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸಿಕೊಂಡವರು,ಒಬ್ಬರನ್ನೊಬ್ಬರು ಅತಿ ಅನಾಗರೀಕವಾಗಿ ಮೂದಲಿಸಿ, ಅಪವಿತ್ರ ಮೈತ್ರಿಯನ್ನ ಸಮರ್ಥನೆ ಮಾಡಿಕೊಳ್ಳಲು ನಿಂತಿರುವುದು ನೈತಿಕತೆಯೇ? ವಾಮಮಾರ್ಗವಾಗಿ ಅಧಿಕಾರ ಹಿಡಿಯುವ ಮನಸ್ಥಿತಿ ನೈತಿಕತೆಯೇ?. ಬೆಳಗಿನ ಉಪಾಹಾರ ಒಂದು ಪಕ್ಷದ ಜೊತೆ ಮದ್ಯಾನ್ಹದ ಊಟ ಇನ್ನೊಂದು ಪಕ್ಷದ ಜೊತೆ ಎನ್ನುವುದು ನೈತಿಕತೆಯೇ?. ಇನ್ನು ಮಾದ್ಯಮದ ಜನ ತಮ್ಮ ಕರ್ತವ್ಯವನ್ನು ನೈತಿಕತೆಯ ಚೌಕಟ್ಟಿನಲ್ಲಿ ನಿರ್ವಹಣೆ ಮಾಡುತ್ತಿದ್ದಾರೆಯೇ?. ಅತ್ತ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪಕ್ಷಗಳ ಜಗಳದಲ್ಲಿ ಅಮಾಯಕ ಜೀವಗಳ ಬಲಿ ನೈತಿಕತೆಯೇ.? ಇನ್ನು ಮಾಧ್ಯಮಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಿದರೂ ಕೆಲವು ಮಾಧ್ಯಮಗಳು ಕೆಲವೊಂದು ರಾಜಕೀಯ ಪಕ್ಷಗಳ ಅಧಿಕೃತ ವಕ್ತಾರರಂತೆ ನಡೆದುಕೊಳ್ಳುವುದನ್ನು ಕಂಡಾಗ ಅಸಹ್ಯ ಅನಿಸುತ್ತದೆ.   

     ಮಾತೆತ್ತಿದರೇ ಯಾವಾಗ ಯಾರ ಪರವಾಗಿಯೋ ವಿರೋಧವಾಗಿಯೋ ಏರುದನಿಯಲ್ಲಿ ಮಾತನಾಡುವ ಸ್ವಘೋಷಿತ ವಿಚಾರವಾದಿಗಳದು ನೈತಿಕತೆಯೇ? ಮತದಾರನೇ ಭ್ರಷ್ಟಾಚಾರಿಯಾಗಿಬಿಟ್ಟರೇ, ರಾಜಕಾರಣಿಗಳು ಕಾನೂನನ್ನು ಮುರಿದರೇ ದೇಶದ ಭವಿಷ್ಯ ನೆನೆದರೆ ಭಯಾನಕ ಅನಿಸುತ್ತದೆ.ಹಾಗಾಗಿ ನೈತಿಕತೆ ಎಲ್ಲಿ ಉಳಿದಿದೆ. ಎಲ್ಲರೂ ನೈತಿಕತೆ ಬಗ್ಗೆ ಮಾತನಾಡುವವರೇ, ಬರೆಯುವವರೇ, ಈ ಪ್ರಶ್ನೆಗೆ ಉತ್ತರ ಸಿಕ್ಕೀತೇ. ಆಚರಣೆಗೆ ಬಾರದ ಯಾವ ವ್ಯವಸ್ಥೆಯೂ ಅನುಪಯುಕ್ತ. ಜಗತ್ತಿನ ಅತಿ ದೊಡ್ಡದಾದ ಪ್ರಜಾಪ್ರಭುತ್ವದ ವ್ಯವಸ್ಥೆಯ ಸುಧಾರಣೆ ನಮ್ಮೆಲ್ಲರ ಹೊಣೆ ಅಲ್ಲವೇ ಅಂತರಾತ್ಮನ ಸಖನೇ. 

Category:News



ProfileImg

Written by lingannaiah balekai

0 Followers

0 Following