ಆ ದಿನ ನಾಡು ಕತ್ತಲಾಗಿ ಕಾಡು ಬೆಳಕಾಗುವ ಸಮಯ, ಹುಣ್ಣಿಮೆಯ ಚಂದ್ರ ಮೋಡದ ಮರೆಯಿಂದ ಗಿಡಗಳ ಕೊಂಬೆಗಳನ್ನ ದಾಟಿ ಹಾಗೆ ಮೇಲಕ್ಕೆ ಏರಿ ಬರ್ತಾ ಇದ್ದ. ಅದು ವರ್ಷದ ಕೊನೆಯ ತಿಂಗಳಾಗಿತ್ತು, ಸಮಯ ಸರಿಸುಮಾರು ಒಂದು ಗಂಟೆ ಫೋನಿನ ತೆಕ್ಕೆಯೊಳಗೆ ಅದರಲ್ಲೂ instagram ಇನ ರಿಯಲ್ಸನೊಳಗೆ ಆ ಸಮಯದ ಅರಿವೆ ಇರಲಿಲ್ಲ. ತಂಪಾಗಿ ಬೀಸುತ್ತಿದ್ದ ಗಾಳಿ ನನ್ನ ಮನವನ್ನು ಕದಡಿತ್ತು. ನಮ್ಮೂರ ಬೀದಿಯಯ ದೀಪ ಸಣ್ಣದಾಗಿ ಉರಿಯುತ್ತಿತ್ತು, ಆ ಸಮಯದಲ್ಲಿ ಕಾಡಿನ ಕಡೆಯಿಂದ ಜೋರಾದ ಕೂಗು ಒಂದು ಕೇಳಿ ಬರುತ್ತೆ, ಒಬ್ಬಂಟಿಯಾಗಿದ್ದ ನನಗೆ ಆ ಕೂಗು ಭಯಭೀತನನ್ನಾಗಿಸುತ್ತೆ. ಸಲ್ಪ ಸಮಯದ ನಂತರ ಆ ಭಯ ಹೋಗಿ ನನ್ನ ಕಣ್ಣುಗಳು ನಿದ್ರೆಗೆ ಜಾರುತ್ತವೆ.
ಮಾರನೇ ದಿನ ಸೂರ್ಯ ತನ್ನ ತಾಯಿಯ ಮಡಿಲಿಂದ ಎದ್ದು ಜಗವನ್ನ ಬೆಳಗುವುದಕ್ಕೆ ಕೆಂಪಾಗಿ ಪೂರ್ವದಿಂದ ಉದಯಿಸುತ್ತಾನೆ. ಮಲಗಿದ್ದು ತಡವಾದ್ದರಿಂದ ಬೆಳಿಗ್ಗೆ ಹೇಳುವುದು ಕೂಡ ತಡವಾಗಿತ್ತು ಆದರೆ ಆ ರಾತ್ರಿಯ ಕೂಗು ಅಷ್ಟೊಂದು ಭಯಾನಕ ಕಥೆಯೊಂದನ್ನು ಸೃಷ್ಟಿ ಮಾಡುತ್ತೆ ಅನ್ನೋದು ನನಗೆ ಗೊತ್ತಿರಲಿಲ್ಲ, ನಾನು ಏಳುವ ಮುಂಚೆನೆ ಅಲ್ಲಿ ಎಲ್ಲಾ ಪೊಲೀಸರು ನೆರೆದಿದ್ದರೂ ಕಾಡಿನ ಮಧ್ಯದಿಂದ ಜನರ ಕೂಗು, ನನಗೆ ಕೇಳಿ ಬರ್ತಾ ಇತ್ತು. ಹಾಸಿಗೆಯ ಮೇಲೆ ಮಲಗಿದ್ದ ನಾನು ಚಳಿಗಾಲವಾದ್ದರಿಂದ ಚಳಿಯಲ್ಲಿ ನಡುಗುತ್ತಾ ಬಾಗಿಲ ಬಳಿ ಬಂದೆ.
ನಮ್ಮ ಅಜ್ಜ ಬಾಗಿಲಲ್ಲಿ ನಿಂತುಕೊಂಡು ತುದಿ ಮುಗಮೇಲಿನ ಚಾಳಸಿಯಿಂದ ಆ ಕಾಡಿನ ಕಡೆ ದಿಟ್ಟಿಸಿ ನೋಡುತ್ತಿದ್ದರು, ಊರಿನ ನಾಲ್ಕೈದು ಹಿರಿಯರು ಸೇರಿ ಆ ಕಾಡಿನ ಕಡೆ ಏನೋ ಸಂಶಯದ ಸೂಚನೆಯನ್ನು ತೋರಿಸುತ್ತಾ ಹೋಗುತ್ತಿದ್ದರು, ಅದನ್ನು ನೋಡಿದ ನನ್ನಲ್ಲಿ ಸಾವಿರ ಪ್ರಶ್ನೆಗಳು ಓಡೋದಕ್ಕೆ ಶುರು ಮಾಡಿದವು.
ನಾನು ಸಾವಕಾಶವಾಗಿ ಅವರನ್ನೇ ಹಿಂಬಾಲಿಸೋಕೆ ಶುರು ಮಾಡಿದೆ ಕಾಡಿನ ದಾರಿ ಸುತ್ತಲೂ ದಟ್ಟವಾಗಿ ಬೆಳೆದ ಮರಗಳು ಸೂರ್ಯನ ಬೆಳಕನ್ನು ಕೂಡ ಒಳಗಿನ ಸುಳ್ಳಲು ಬಿಡುತ್ತಿರಲಿಲ್ಲ ಹೊರಗಿನ ಬೆಳಕಿನ ಪ್ರಪಂಚಕ್ಕೆ ಈ ಕತ್ತಲೆಯ ಕೋಪದ ಬಗ್ಗೆ ಗೊತ್ತು ಇರಲಿಲ್ಲ ಸ್ವಲ್ಪ ದೂರ ಹೋದ ನಂತರ ಪೊಲೀಸರು ಮತ್ತು ಜನರ ಗುಂಪೊಂದು ನಿಂತ ಹಾಗೆ ಕಾಣಿಸಿತು ನನ್ನ ಹೃದಯ ಬಡಿತ ಜೋರಾಯಿತು ಅಲ್ಲಿ ಏನೋ ನಡೆದಿದೆ ಆದರೆ ಅದು ಏನು ಅನ್ನೋ ಪ್ರಶ್ನೆಗಳು ನನ್ನ ಮನಸ್ಸಲ್ಲಿ ಓದಕ್ಕೆ ಶುರು ಮಾಡಿದವು ಭಯದಲ್ಲೇ ನಾನು ಹತ್ತಿರ ಹೋಗುತ್ತಾ ಹೋಗುತ್ತಾ ಹೋದೆ ಯಾರು ಕೆಳಗೆ ಮಲಗಿದ ಹಾಗೆ ಕಾಣುತ್ತಿದೆ ಸರಿಯಾಗಿ ಮುಖ ಗೋಚರವಾಗುತ್ತಿಲ್ಲ ಯಾರದು ನಾನು ಹತ್ತಿರ ಹೋಗುತ್ತಿರುವ ಹಾಗೆ ಎಲ್ಲರೂ ಕೂಡ ಒಬ್ಬೊಬ್ಬರಾಗಿ ಮಾಯವಾಗುವುದಕ್ಕೆ ಶುರು ಮಾಡಿದ್ದಾರೆ ನನ್ನಲ್ಲಿ ಭಯ ಜಾಸ್ತಿ ಆಗೋಕೆ ಶುರುವಾಯಿತು ಹತ್ತಿರ ಹೋಗುತ್ತಾ ಹೋಗುತ್ತಾ ಅಲ್ಲಿ ನಾನೊಬ್ಬನೇ ನಿಂತಿದ್ದೆ ನನ್ನ ಮನಸಲ್ಲಿ ಭಯ ಇನ್ನೂ ಜಾಸ್ತಿಯಾಯಿತು.
ಸ್ವಲ್ಪ ಮುಂದೆ ನೋಡಿದಾಗ ಯಾರೋ ಬಿದ್ದಿರುವ ಹಾಗೆ ಕಾಣುತ್ತಿದೆ, ಅವರ ತಲೆಯ ರುಂಡವಿಲ್ಲ. ರಕ್ತ ನೀರು ಸುರಿದ ಹಾಗೆ ಹರಿತ ಇದೆ ಬೆಳಕು ನನ್ನಲ್ಲಿದ್ದ ಭಯವನ್ನ ಇನ್ನಷ್ಟು ಜಾಸ್ತಿ ಮಾಡ್ತಾ ಇದೆ. ಸ್ವಲ್ಪ ದೂರ ದಲ್ಲಿ ಒಂದು ಬರಡು ಬಾವಿ ಕಾಣುತ್ತಿದೆ ಭಾವಿಯ ಸುತ್ತಲೂ ಬಹುಕಾಲದಿಂದ ಬೆಳೆದ ಬಳ್ಳಿಗಳು ಆ ಬಾವಿಯನ್ನ ತಬ್ಬಿ ಅಪ್ಪಿಕೊಂಡಿರುವ ಹಾಗೆ ಕಾಣುತ್ತಿದೆ.
ಬಿದ್ದಿರುವ ಹೆನ್ನ ಯಾವುದೋ ಹೆಣ್ಣು ಮಗಳದ್ದು ಅಮಾನುಷವಾಗಿ ಯಾರೋ ಅವಳನ್ನ ಕೊಲೆಗೈದಿದ್ದರು ಆದರೆ ಅಲ್ಲಿ ಬಂದಿದ್ದ ಊರಿನ ಜನ ಪೊಲೀಸರು ಮಾಯವಾಗಿದ್ದು ಹೇಗೆ ನನ್ನಲ್ಲಿ ಸಾವಿರ ಪ್ರಶ್ನೆಗಳು ಹುಟ್ಟಿಕೊಂಡವು ಆದರೆ ಆ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ.
ಆ ದಿನದ ಸ್ವಲ್ಪವೇ ದೂರದಲ್ಲಿ ಆ ಹೆಣದ ರುಂಡ ಮುಖವನ್ನ ಗುರುತು ಸಿಗದ ಹಾಗೆ ಯಾರೋ ಚಚ್ಚಿಹಾಕಿದ್ದರು. ಅಲ್ಲಿಯ ಪಕ್ಕದಲ್ಲಿ ಕಾರಿನ ಟೈರ್ ಗಳ ಛಾಪೊಂದು ಇತ್ತು. ನಾನು ಆ ಹೆಣವನ್ನ ದಾಟಿ ಅರುಂಡದ ಮುಖ ನೋಡೋದಕ್ಕೆ ಹತ್ತಿರ ಹೋದೆ ನಾನು ಹತ್ತಿರಕ್ಕೆ ಹೋಗುತ್ತಿದ್ದಂತೆ ಅರುಂಡ ಮಾಯವಾಗಿ ಹೋಯಿತು ನನಗೆ ಆಶ್ಚರ್ಯ ಆಯ್ತು ಭಯದಲ್ಲಿ ಹಿಂದೆ ತಿರುಗಿ ನೋಡಿದೆ ಆ ಹೆಣದ ಬಾಡಿ ಕೂಡ ಅಲ್ಲಿ ಇರಲಿಲ್ಲ ನಾನು ನಿಶಬ್ದನಾದೆ ಸ್ವಲ್ಪ ಸೂರ್ಯನ ಬೆಳಕು ಗಿಡಗಳ ಎಲೆಗಳನ್ನು ದಾಟಿನ ಸುಳುತ್ತಿದೆ ಅನ್ನೋ ಅಷ್ಟರಲ್ಲಿ ಮತ್ತೆ ಮೋಡ ಕವಿದ ಕತ್ತಲಾಗುವುದಕ್ಕೆ ಶುರುವಾಯಿತು. ನಾನು ಭಯದಲ್ಲಿ ಜೋರಾಗಿ ಕೂಗುವುದಕ್ಕೆ ಶುರು ಮಾಡಿದೆ ಆದರೆ ನನ್ನ ಧ್ವನಿ ಆ ಕಾಡಿನ ಪರಿಧಿಯಿಂದ ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಯಾರು ನನ್ನ ಕಾಲನ್ನ ಹಿಡಿದ ಹಾಗೆ ಕೈಯನ್ನ ಕಟ್ಟಿದ ಹಾಗೆ ಬಾಸವಾಯಿತು ಒಂದು ಕ್ಷಣ ನಾನು ಸ್ತಬ್ಧನಾಗಿ ಹೋದೆ, ಪೂರ್ತಿಯಾಗಿ ಕತ್ತಲ ಆವರಿಸಿತ್ತು, ಕಡು ಕತ್ತಲಲ್ಲಿ ದಟ್ಟ ಕಾಡಿನ ನಡುವೆ ನಾನೊಬ್ಬನೇ ಭಯದಲ್ಲಿ ಹೃದಯ ಬಡಿತ ನನಗೆ ಕೇಳಿಸುತ್ತಿತ್ತು ಅಷ್ಟೊಂದು ನಿಶಬ್ದ ಕಣ್ಣು ಮುಂದೆ ಬರದು ಬಾವಿಯೋಂದಿದೆ. ಸಾವಕಾಶವಾಗಿ ಬಾವಿಯ ಬಳಿಗೆ ಹೋದೆ ಯಾವುದೋ ಹಳೆಯ ಬಾವಿ ನೀರಿನ ರುಚಿಯೇ ಗೊತ್ತಿಲ್ಲದ ಬಾವಿಯಾಗಿತ್ತು. ಒಳಗೆ ಬಳ್ಳಿಗಳು ತುಂಬಿದ್ದವು.
ಮನಸ್ಸಿನಲ್ಲಿ ಏನೋ ತೊಳಲಾಟ ಶುರುವಾಯಿತು, ಹಾಗೇನೆ ಸ್ವಲ್ಪ ಕಣ್ಣು ಮುಚ್ಚಿದ ನಾನು ಕಣ್ಣು ತೆರೆದಾಗ ಮತ್ತೆ ಕತ್ತಲು ನನ್ನ ಮುಂದೆ ಒಂದು ಬರಡು ಬಾವಿ ಇದೆ ಆ ಬಾವಿಯಿಂದ ಯಾರು ನನ್ನನ್ನ ಜೋರಾಗಿ ಕರೀತಾ ಇರುವ ಹಾಗೆ ಅಭಿನಾನು ಭಾವ ಧ್ವನಿ ಒಂದು ಕೇಳಿ ಬರ್ತಾ ಇದೆ, ಆ ಧ್ವನಿ ನಾನು ಎಲ್ಲೋ ಕೇಳಿದ ಧ್ವನಿಯ ಹಾಗೆ ಅನಿಸುತ್ತಿದೆ ಆದರೆ ಅವರು ಬಾವಿಯ ಒಳಗೆ ಹೇಗೆ ಅನ್ನೋ ಪ್ರಶ್ನೆ ತಲೆಯಲ್ಲಿ ಓಡುತ್ತಾ ಇದೆ, ಅದು ಯಾರು ನನ್ನವರೇ ನನ್ನನ್ನ ಕರೆದ ಹಾಗೆ ಕೇಳುತ್ತಿದೆ ಅನಿಸೋಕೆ ಶುರುವಾದಾಗ ಭಯ ಹೋಗಿ ಈಗ ಪ್ರೀತಿಯ ಭಾವ ಮೂಡಿದೆ ಆದರೆ ಅಲ್ಲಿರೋದು ಯಾರು ಬರಿ ಪ್ರಶ್ನೆ?, ಆದರೆ ಆ ಪ್ರಶ್ನೆಗೆ ಉತ್ತರ ಆ ಬಾವಿಯ ಒಳಗಡೆನೆ ಇದೆ. ಹಾಗಾಗಿ ನಾನು ಆ ಪ್ರಶ್ನೆಗೆ ಉತ್ತರ ಹುಡುಕುವುದಕ್ಕೆ ನಾ ಬಾವಿಯ ಕಟ್ಟೆಯ ಮೇಲೆ ಹತ್ತಿದೆ ಬರಡು ಬಾವಿಯಿಂದ ನನ್ನನ್ನು ಕರೆಯುತ್ತಿರುವ ಧ್ವನಿಯ ಕಡೆ ದಾಪುಗಾಲು ಹಾಕಿ ಜಿಗಿದೆ ಬಿಟ್ಟೆ, ಒಂದು ಕ್ಷಣ ಕಪ್ಪು ಗೋಳದಿಂದ ತೇಲಿ ಹೋಗುತ್ತಿರುವ ಹಾಗೆ ಪಾಸವಾಯಿತು, ಸುತ್ತಲೂ ಆವರಿಸಿದ್ದ ಕತ್ತಲು ಅದು ನನ್ನನ್ನು ಬೆಳಗಿಸುತ್ತೋ ಅಥವಾ ಮುಳುಗಿಸುತ್ತ ನನಗೆ ಗೊತ್ತಿರಲಿಲ್ಲ ನಾನು ದುಃಖದ ಚಿಂತೆ ಇಲ್ಲದೆ ಸುಖದ ಮಾಯೆಯಲ್ಲಿ ತೇಲಾಡುತ್ತಿರುವ ಹಾಗೆ ಅನಿಸುತ್ತಿತ್ತು, ಹಾಗೆ ಕೆಲವು ಕಾಲ ತೇಲಿದ ನಂತರ ನನಗೆ ಏನೋ ಗೋಚರಿಸೋಕೆ ಶುರುವಾಯಿತು ಕಣ್ಣು ಮುಚ್ಚಿ ತೆಗೆದು ನೋಡಿದಾಗ ನನ್ನ ಅಜ್ಜ ಬಾಗಿಲಿಂದ ನನ್ನನ್ನ ಒದರುತಿದ್ದರು ಅಮ್ಮ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವ ಪಾತ್ರೆಗಳ ಸದ್ದು ಕೇಳಿಸುತ್ತಿತ್ತು ನಾನು ನಿದ್ದೆಗಣ್ಣಿನಲ್ಲಿ ಎದ್ದು ಬಾಗಿಲ ಬಳಿ ಹೋದೆ, ಅದು ನನ್ನ ಕನಸಾಗಿತ್ತು, ಆದರೆ ಈಗ ಅಜ್ಜ ತುದಿ ಮೂಗ ಮೇಲಿನ ಚಾಲಸಿಯಿಂದ ಆ ಕಾಡಿನ ಕಡೆಯ ದಿಟ್ಟಿಸಿ ನೋಡುತ್ತಿದ್ದಾರೆ ಪೊಲೀಸ್ ವ್ಯಾನ್ ಒಂದು ಮುಂದುಗಡೆ ಹೋಗ್ತಾ ಇದ್ದರೆ ಹಿಂದಿನಿಂದ ನಮ್ಮೂರ ಹಿರಿಯರು ಓಡಿ ಆ ದಟ್ಟ ಕಾಡಿನ ಕಡೆ ಹೋಗುತ್ತಿದ್ದಾರೆ. ಇಷ್ಟೆ ನಾನು ನನ್ನ ಕನಸು.
Kannada writer
0 Followers
0 Following