❤️❤️ಅಮ್ಮಾ ❤️❤️
ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮಾ
ಅಮೃತ ಸುಧೆಯ ಹರಿಸಿದ ಅಮ್ಮಾ
ಪ್ರೀತಿಯ ಮಳೆಯನು ಸುರಿಸಿದ ಅಮ್ಮಾ
ನನಗಾಗಿ ಭುವಿಗೆ ಬಂದೆಯಾ ಅಮ್ಮಾ
ಅಮ್ಮಾ ನನ್ನಮ್ಮಾ ಆಆಆಆ...........
ಇಳೆಗೆ ಬಂದೆನು ಕಂದನು ನಾನು
ಒಮ್ಮೆ ಎನ್ನನ್ನು ಅಪ್ಪಿಕೋ ನೀನು
ಜನ್ಮವ ನಿತ್ತ ದೈವವು ನೀನು
ನಿನ್ನನು ಎಂದಿಗೂ ಬಿಟ್ಟಿರೆ ನಾನು
ಅಮ್ಮಾ ನನ್ನಮ್ಮಾ ಆಆಆಆ...........
ಅಮ್ಮಾ ನನ್ನಮ್ಮಾ ಆಆಆಆ...........
ಅಮ್ಮಾ ಅಮ್ಮಾ ಎನ್ನುವೆನಮ್ಮ
ಮಡಿಲಲಿ ಸ್ವರ್ಗವ ಕಾಣುವೆ ನಮ್ಮಾ
ನೀ ಕೈ ಬಿಟ್ಟರೆ ಬದುಕು ಇಲ್ಲಮ್ಮಾ
ಎತ್ತಿಕೋ ಬಾರಮ್ಮಾ ಅಮ್ಮಾ
ಅಮ್ಮಾ ನನ್ನಮ್ಮಾ ಆಆಆಆ...........
ಅಮ್ಮಾ ನನ್ನಮ್ಮಾ ಆಆಆಆ...........
ನಿನ್ನನು ಮೀರಿದ ದೈವವೂ ಇಲ್ಲಾ
ಈ ನನ್ನ ಜಗದೊಳು ನೀನೆ ಎಲ್ಲಾ
ಕಂಗಳ ತುಂಬಾ ನೀ ತುಂಬಿಹೆಯಲ್ಲಾ
ಉಸಿರು ಹೆಸರನು ಕೊಟ್ಟಿಹೆಯಲ್ಲಾ
ಅಮ್ಮಾ ನನ್ನಮ್ಮಾ ಆಆಆಆ...........
ಅಮ್ಮಾ ನನ್ನಮ್ಮಾ ಆಆಆಆ...........
ನಿನ್ನನ್ನು ಬಣ್ಣಿಸೆ ಪದಗಳು ಇಲ್ಲಾ
ಹೊಗಳಲು ನಾನು ಸಾಟಿಯೇ ಅಲ್ಲ
ಹಸಿದಾಗ ಅಮೃತವ ಕೊಟ್ಟಿಹೆಯಲ್ಲಾ
ಅತ್ತಾಗ ಮುತ್ತನಿತ್ತು ರಮಿಸಿದೆಯಲ್ಲ
ಅಮ್ಮಾ ನನ್ನಮ್ಮಾ ಆಆಆಆ...........
ಅಮ್ಮಾ ನನ್ನಮ್ಮಾ ಆಆಆಆ...........
ಪ್ರಕೃತಿಯ ಪ್ರತಿರೂಪ ನೀನಲ್ಲವೇನು
ಅಮ್ಮಾ ಎನಲೋ ಅವ್ವಎನಲೋ ಹೇಳು ದೈವವೇ ಏನೆನ್ನಲಿ ನಾನು
ನವಮಾಸ ಎನ್ನನ ಹೊತ್ತಿದ್ದೆ ನೀನು
ಗರ್ಭದೊಳು ನಿನ್ನನ್ನು ಒದೆದಿದ್ದೆ ನಾನು
ಅಮ್ಮಾ ನನ್ನಮ್ಮಾ ಆಆಆಆ...........
ಅಮ್ಮಾ ನನ್ನಮ್ಮಾ ಆಆಆಆ..........
ನಿನ್ನಯ ಋಣವ ತೀರಿಸಲಾರೆನು
ಮನ್ನಿಸು ತಪ್ಪನ್ನು ಮಾಡಿದ್ದರೆ ನಾನು
ಕನಸಿನಲ್ಲೂ ಕಾಯುವೆ ನನ್ನನ ನೀನು
ಅಂತರಂಗ ಶುದ್ಧಳು ಅಮ್ಮಾ ನೀನು
ಅಮ್ಮಾ ನನ್ನಮ್ಮಾ ಆಆಆಆ...........
ಅಮ್ಮಾ ನನ್ನಮ್ಮಾ ಆಆಆಆ...........
✍️ ವಿಜಯ ಲಕ್ಷ್ಮಿ ನಾಡಿಗ್ ಮಂಜುನಾಥ್ ಕಡೂರು
0 Followers
0 Following