ದುಬೈ ಮೆಟ್ರೋ

ಅನುಭವ....

ProfileImg
27 May '24
1 min read


image

ಇಂದು ಬೆಳಗ್ಗೆ ಎಂದಿನಂತೆ ನಾ ಪುಸ್ತಕ ಓದುತ್ತಾ ಕುಳಿತಿರುವಾಗ ನನ್ನ ಸ್ನೇಹಿತೆ ಕರೆ ಮಾಡಿದ್ರೂ. ಅವರು ಅವರಿಗೆ ಬೆಳಗ್ಗೆ ಮೆಟ್ರೋದಲ್ಲಿ ಆದ ಘಟನೆಯನ್ನು , ಒಂದು ರೀತಿಯ ಭಯವೂ- (ಜೀವನ ಎಷ್ಟು ಕ್ಷಣಿಕ ಅಂತ) ನಾವು ಇಂತ ಜಾಗದಲ್ಲಿ ಇರುವುದಕ್ಕೆ ಹೆಮ್ಮಯು ಅನ್ನೋ ಮಿಶ್ರ ಭಾವದಲ್ಲಿ ಹೇಳಿದ್ರು. 

ಬೆಳಗ್ಗೆ ಅವರು ದುಬೈ ಮೆಟ್ರೋದಲ್ಲಿ ದಿನ ಪ್ರಯಣಿಸುತ್ತಾರೆ. ದಿನ ಮೆಟ್ರೋ ಬೆಳಗ್ಗೆ  ರಶ್ ಇರುವುದು ಸಾಮಾನ್ಯ. ಈ ರಶ್ ನಡುವೆ ಒಂದು ಹುಡುಗಿ ನನ್ನ ಸ್ನೇಹಿತೆಯ ಪಕ್ಕ ನಿಂತವಳು ಎರಡು ಸಲ ಜೋರಾಗಿ ಕೆಮ್ಮಿದಳು. 

ಕೆಮ್ಮು ಈಗ ಸರ್ವ ಸಾಮಾನ್ಯ. ಕೋವಿಡ್ ಸಮಯದಲ್ಲಿ ಆದ್ರೆ ಎರಡೇ ಕೆಮ್ಮಿಗೆ ಜನ 100-200 ಮೀ ದೂರ ಓಡುತ್ತಿದ್ದರು. ಅದು ಆಗಿ ಎರಡು ನಿಮಿಷಕ್ಕೆ ಆ ಹುಡುಗಿ ಒಂದೇ ಸಮನೆ ಇವರನ್ನು ದೂಡಿ ದಬ್ಬಲು ಶುರು ಮಾಡಿದಳು. ಇವರಿಗೆ ತಲೆ ಬುಡ ಗೊತ್ತಾಗಿಲ್ಲ. ಇವರು ಗಟ್ಟಿಯಾಗಿ ನಿಂತರು. ಅದಾಗಿ ಎರಡು ನಿಮಿಷಕ್ಕೆ ಅವಳು ಇವರ ಮೇಲೆ ಒರಗಿದಳು, ಕುಸಿದಳು. ಹತ್ರ ಇದ್ದವರೆಲ್ಲ ಸರಿದು ಜಾಗ ಮಾಡಿ ನೆಲದ ಮೇಲೆ ಒರಗಿ ಕೊಳ್ಳಲು ಅವಕಾಶ ಮಾಡಿಕೊಟ್ಟರು. 

ಇವರು ಬಹಳ ಜಾಣೆ , ಸಮಯ ಸ್ಪೂರ್ತಿಯಿಂದ ಅಲ್ಲೇ ಇರುವ ಮೆಟ್ರೋ ಆಪರೇಟರ್ ನಂಬರ್ ಒತ್ತಿ ಆಪರೇಟರ್ ಹತ್ತಿರ ಮಾತನಾಡಿ ನಮ್ಮ ಮೆಟ್ರೋ ದಲ್ಲಿ ಹೀಗೆ ಆಗಿದೆ ಅಂದ್ರು ಅಂತೆ. ಆಚೆ ಕಡೆಯಿಂದ information received ಅಂದು call cut ಆಯ್ತು. ಮತ್ತೆ ಒಂದೇ ನಿಮಿಷಕ್ಕೆ ಮುಂದಿನ ಸ್ಟೇಷನ್ ಬಂದಾಗ  ಫುಲ್ ಸರ್ವ ಸಿದ್ಧತೆಯೊಂದಿಗೆ ಆಕೆಯ ವೈದ್ಯಕೀಯ ಪ್ರಥಮ ಚಿಕಿತ್ಸೆಗೆ ತಂಡ ರೆಡಿ ಆಗಿ ಅದೇ ಬೋಗಿಯೋಳಗೆ ಬಂದು who is sick ಅಂತ ಕೇಳಿ ಆಕೆಯನ್ನು ಟ್ರೈನ್ ನಿಂದ ಹೊರಗೆ ಹೊತ್ತು ಹೋದರು. 

ಅಬ್ಬಾ ಎಂತಹ ಸುಸಜ್ಜಿತ ವ್ಯವಸ್ಥೆ ಅಂತ ಅನ್ನಿಸಿತು. ಜೀವಕ್ಕೆ ಎಷ್ಟು ಬೆಲೆ ಕೊಡುತ್ತಾರೆ. ಇಷ್ಟಕ್ಕೂ ನಾ ಯಾವ್ ಲೈನ್ ಹೇಳಿಲ್ಲ ಯಾವ್ ಸ್ಟೇಷನ್ ಹೇಳಿಲ್ಲ ಅವರು ಕೇಳಿಲ್ಲ. 

 

# salute Dubai Metro 

Category:TravelProfileImg

Written by Srinidhi