ಜೀವನ ಜೀವನ
ದ್ವಂದ್ವಗಳಿಂದ ಕೂಡಿದ ಈ ಜೀವನ ll
ಯಾರಿಗೆ ಬೇಕೋ ಈ ಸಂಸಾರದ ಜಂಜಾಟ
ಜೀವನವೆಲ್ಲ ಬೇಕು ಬೇಡಗಳ ತೊಳಲಾಟ
ಮರಳಲಿ ಮಾಡಿ ಆಡುವ ಗೋಪುರದಾಟ ,
ಗಾಳಿ ಬಂದಾಗ ತೂರುತಾ
ಮನಸ್ಸು ಬಂದಾಗ ಮತ್ತೆ ಆ ಗೋಪುರವಾ ಕಟ್ಟುತಾ
ಆಡುವ ಈ ಜೀವನಾದಾಟ
ಯಾರಿಗೆ ಬೇಕೋ ಈ ಜೀವನ
ಯಾರಿಗೆ ಬೇಕೋ ಈ ಸಂಸಾರದ ಜಂಜಾಟ
ಬಾಳಲಿ ಸಾರವೆ ಇರದ ಈ ಜೀವನ
ಬದುಕಲಿ ಅರ್ಥವೇ ಇರದ ಈ ಜೀವನ
ಪ್ರಾಣಿ ಬಾಳಿಗು ಕಡೆಯಾದ ನಮ್ಮಯ ಈ ಜೀವನ
ಯಾರಿಗೆ ಬೇಕೋ ಈ ಜೀವನ
ಈಸಬೇಕು ಇದ್ದು ಜೈಸಬೇಕು
ಎಂಬ ಮಾತುಗಳೆಲ್ಲ
ಹೇಳಲು ಕೇಳಲು ಅಷ್ಟೇ ಅವುಗಳೆಲ್ಲ
ಜೀವನದಿ ಅನುಸರಿಸಲು ಅವುಗಳಲ್ಲ
ವೇದಾಂತಿಗಳು ಹೇಳುವರು ಎಲ್ಲರ ಬಾಳಲ್ಲೆಂದು
ಕತ್ತಲಾದ ಮೇಲೆ ಬೆಳಕು ಬಂದೇ ತೀರುವುದೆಂದು
ಆದರೆ ಈ ಜೀವನದಿ ಆ ಬೆಳಕು ಬರುವುದೆಂದು ?
ಯಾರಿಗೆ ಬೇಕೋ ಈ ಸಂಸಾರದ ಜಂಜಾಟ
ಎತ್ತು ಏರಿಗೆಳೆದರೆ ಕೋಣ ನೀರಿಗಿಳಿದಂತೆ
ನಮ್ಮಯ ಜೀವನ ನಮ್ಮೆಲ್ಲರ ಈ ಜೀವನ
Writer