Do you have a passion for writing?Join Ayra as a Writertoday and start earning.

ಸ್ವಪ್ನ ಸುಂದರಿ

ಸ್ವಪ್ನದಲ್ಲೂ ಬರದವಳು

ProfileImg
05 Jan '24
4 min read


image

ನಾನು  ಮತ್ತೆ ಸೋಮ ಸಾಹುಕಾರನ ತೋಟದಲ್ಲಿ ಕೆಲ್ಸಾ ಮಾಡ್ತಾ ಇದ್ವಿ,  ತೋಟದ ಸಾಹುಕಾರ ತುಂಬಾ ಒಳ್ಳೆ ಮನುಷ್ಯ, ಊರಿನಲ್ಲಿ ನಡೆಯೋ ಎಲ್ಲ ಒಳ್ಳೆ ಕೆಲಸದಲ್ಲೂ ಇವರೇ ಮುಂದೆ ಇರ್ತಾ ಇದ್ದರು. ಸಹಾಯ ಅಂತಾ ಕೆಲ್ಕೊಂಡ ಬಂದವರನ್ನ ಇಲ್ಲಾ ಅಂತಾ ಹೇಳಿ ಕಳುಹಿಸಿದ್ದನ್ನ  ನನಾನಂತೂ  ನೋಡಿರಲಿಲ್ಲ   ಕೆಲವಮ್ಮೆ ತನ್ನದಲ್ಲದ ತೊಂದರೇನು ತನ್ನ ತೆಲೆ ಮೇಲೆ ಹೇರಿಕೊಳ್ಳೊ ಮನುಷ್ಯ.

ಇನ್ನು ಸೋಮ ಒಂತರಾ ಮನುಷ್ಯ , ಸಾಹುಕಾರನ ತೋಟದಲ್ಲಿ ಭಾಗಶಃ ಜೀವನವನ್ನ ಕಳೆದಿದ್ದ ಹೀಗಾಗಿ ಇವನ ಮೇಲೆ ಸಾಹುಕಾರರಿಗೆ ಸ್ವಲ್ಪ ನಂಬಿಕೆ ಜಾಸ್ತಿ  ಸೋಮ ಕೂಡ ಅದಕ್ಕೆ ತಕ್ಕ ಹಾಗೆ ಇದ್ದನು. ಮೂಲತಃ  ಸೋಮ ನಮ್ಮುರಿನವನಲ್ಲ , ಪಕ್ಕದ ಊರಿನವನು .ಇವನ ಬಗ್ಗೆ ಆ ಊರಿನ ನನ್ನ ಸ್ನೇಹಿತ ಒಬ್ಬ ಯಾರಿಗೂ ಹೇಳಬೇಡ ಅಂತಾ ಸೋಮನ ಕತೆ ಹೇಳಿದ್ದ, ಏನೆಂದರೆ.          “ ಇವನು ಎಣ್ಣೆ ಗಿರಾಕಿ ಮುಂಚೆ ಜಾಸ್ತಿ ಕುಡಿತಿದ್ನಂತೆ, ಹೀಗೆ ಒಂದ ದಿನಾ ಕಂಠ ಪೂರ್ತಿ ಕುಡ್ದು ರಾತ್ರಿ ತುಂಬಾ ತಡವಾಗಿ ಮನೆ ಕಡೆ ಹೊರಡತಾನೆ, ಕುಡಿದ ನಶೆಯಲ್ಲಿ  ತನ್ನ ಮನೆಗೆ ಹೋಗೋದು ಬಿಟ್ಟು ಅವನು ಪಕ್ಕದ ಮನೆಗೆ ಹೋಗಿಬಿಟ್ಟನಂತೆ ! But ಟ್ವಿಸ್ಟ್ ಏನಪ್ಪಾ ಅಂದ್ರೆ ಅವನ ಹೆಂಡ್ತಿ ಅಲ್ಲೇ ಇದ್ಲಂತೆ...!, ಹಿಂಗಾಗಿ ಅವತ್ತಿಂದ ಸಂಸಾರ ಎಲ್ಲಾ ಬಿಟ್ಟು ಈ ಕಡೆ ಬಂದಾ. ಹೆಂಡ್ತಿ ಬಿಟ್ಟಾ ಆದ್ರೆ ಎಣ್ಣೆ ಬಿಡಲಿಲ್ಲ!.” 

ಸ್ವಲ್ಪ ದಿನದ ಹಿಂದೆ ನಮ್ಮ ಊರಿಗೆ ಒಬ್ಬಳು ಸುಂದರಿ ಬಂದು ವಾಸಿ ಆಗಿದ್ಲು ಅವಳ ನಿಜವಾದ ಹೆಸರು ಪ್ರಾಯಶಃ ಯಾರಿಗು ಗೊತ್ತಿಲ್ಲ, ನೋಡೋಕೆ ತುಂಬ ಚೆನ್ನಾಗಿದ್ದಳು, ರೂ ಅವಳು, ಇವಾಗ ಅವಳನ್ನ ವರ್ಣಿಸಬೇಕಂದ್ರೆ ನಂಗೋ ಬರವಣಿಗೆಯಲ್ಲಿ ಅನುಭವ ಕಮ್ಮಿ , ಅವಳ ಅಂದವನ್ನು ಹೋಗಳುವಷ್ಟು  ಪದಕೋಶ ನನ್ನಲ್ಲಿ ಇಲ್ಲ ಅಂತ ಹೆೇಳಬಹುದು. ಒಂತರಾ ಅವಳು ಸ್ವಪ್ನ ಸುಂದರಿ ಅನ್ನಬಹುದು ಅಥವಾ ಸ್ವಪ್ನದಲ್ಲು ಬರಲಾರದ ಸುಂದರಿ ಎನ್ನಬಹುದು. 

ಒಂದ ದಿನ ಊರಿನ ಹೆಣ್ಮಕ್ಕಳೇಲ್ಲ ನಮ್ಮ ಸಾವಕಾರನ ಬಳಿ ಬಂದರು, ಅವರ ಮುಖದಲ್ಲಿ ಕೆಂಡದಂತೆ ಕೋಪ ಎದ್ದು ಕಾಣುತಿತ್ತು, ಏನೋ ಗಂಭೀರವಾದ ವಿಷಯ ಇದೆ ಎಂದು ಅರ್ಥೈಸಿಕೊಳ್ಳಲು ನಾನೇನು ಜಾಸ್ತಿ ಟೈಮ್ ತುಗೊಳಿಲ್ಲ.  ಅವರೆಲ್ಲ ಬಂದು ದೂರು ನೀಡೋ ವರೆಗೂ ನಂಗೂ ಗೊತ್ತಿರಲಿಲ್ಲ ನಾ ನೋಡಿದ್ದ ರೂಪಸಿ , ಆ ಸುಂದರಿ ಒಬ್ಬ ವ್ಯಶ್ಯ ಅಂತಾ!.  ಅವಳೇಕೆ ಆ ಕೆಲ್ಸಕ್ಕೆ ಬಂದಳೋ ಅನ್ನೋ ವಿಚಾರ ನಂಗೆ ಕಾಡಿದ್ದಂತು ಸುಳ್ಳಲ್ಲ.  ಆ ಕೆಲಸದ ಮೇಲೆ ತುಂಬಾ ಕೆಟ್ಟ ಅಭಿಪ್ರಾಯ ಇದ್ದ ನನಗೆ ಅವಳು ಆ ಕೆಲಸ ಮಾಡುತ್ತಿದ್ದನು ನೋಡಿ ಯಾಕೋ ಗೊತ್ತಿಲ್ಲ ಆ ಕೆಲಸದ ಮೇಲೆ ಒಂದಿಷ್ಟು ಗೌರವ ಬಂದಿದ್ದಂತು ನಿಜ!.                                          ಬೇರೆಯವರಿಗೆ ಸುಖ ಅಂಚೋ ಅವಳ ಕೆಲಸದ ಹಿಂದಿನ ದುಃಖ ಎಂತದೋ ನನಗೆ ತಿಳಿಯದು.ಅಂತಹ ವ್ಯಶ್ಯ ಊರಲ್ಲಿ ಇರೋ ವಿಷಯ ತಿಳಿದು ನಮ್ಮ ಸವಕಾರನಿಗೆ ಎಲ್ಲಿಲ್ಲದ ಕೋಪ ಬಂತು, ಅದೇ ಕೋಪದಿಂದ ಅವಳಿಗೆ ಸರಿಯಾಗಿ ಪಾಠ ಕಲಿಸುತ್ತೇನೆ ಎಂದು ಹೇಳಿ ಅವಳನ್ನು ಕರೆತರಲು ಸೋಮನಿಗೆ ತಿಳಿಸಿದರು. ಆದರೆ ಸೋಮ ದನಕ್ಕೆ ಮೈ ತೊಳೆಯಬೇಕೆಂಬ ಸಬೂಬು ಹೇಳಿ ತಪ್ಪಿಸಿಕೊಂಡಾಗಲೆ  ಅವಳನ್ನು ಕರೆತರುವ ಸುವರ್ಣಾವಕಾಶ ನನಗೆ ದೊರಕಿತ್ತು.

ಆದರೆ ಈ ಬಡ್ಡಿಮಗ ಸೋಮ ತೊಳ್ದಿರೋ ದನದ ಮೈನಾ ಮತ್ತೆ ತೊಳಿಬೇಕು ಅನ್ನೋ ಕಾರಣ ಕೊಟ್ಟು ತಪ್ಪಿಸಿಕೊಂಡಾಗಲೆ ನನಗೆ ತಿಳಿದಿತ್ತು ಇವನು ಅವಳ ಕಾಯಂ ಕಸ್ಟಮರ್ ಅಂತಾ. ಸೋಮ ಯಾವ ವಿಚಾರಕ್ಕೆ ತನ್ನ ಹೆಂಡತಿನ ಬಿಟ್ಟು,ಸಂಸಾರ ತೊರೆದು ಬಂದಿದ್ನೋ ಆ ಕೆಲಸನ  ತಾನೇ ಮಾಡ್ತಾ ಇದ್ದ ನೈತಿಕವಾಗಿ ನೋಡಿದರೆ ಇವಾಗ ಅವನು ತನ್ನನ್ನೇ ತಾ ತೊರೆಯಬೇಕು. ಹೋಗ್ಲಿ ಬಿಡು ನನಗೇಕೆ ಅವನ ವಿಚಾರ ಅಂತಾ ಅನ್ಕೊಂಡು ಹೊರಟೆ.

ಅವಳ  ಮನೆ ಹತ್ತಿರ ಹೋಗುವ  ಹೊತ್ತಿಗ ಸೂರ್ಯ ಹೊರಟು ಚಂದ್ರ ಕೆಲಸಕ್ಕೆ ಬರೋ ಹೊತ್ತಾಗಿತ್ತು. ಹೋಗಿ ಬಾಗಿಲು ಬಡದೆ , ಹೊರಗೆ ಬಂದು ಬಾಗಿಲು ತೆರೆದು ನಿಂತಳವಳು; ಸಿರೆಯಲಿ ಅವಳು ಸಾವಿರ ಅಪ್ಸರೆಯರನ್ನು ನಾಚಿಸುವಂತಿದ್ದಳು.                                                                   ಬಾಗಿಲಲ್ಲೇ ನಿಂತು ಅವಳಿಗೆ ಸಾವಕಾರರು ಬರಲು ಹೇಳಿದ್ದಾರೆ ಎಂಬ ವಿಷಯ ತಿಳಿಸಿದೆ. ನೆಲ ನೋಡುತ್ತಿದ್ದ ಅವಳು ಕತ್ತನ್ನು ಸರಿ ಎಂಬಂತೆ ಅತ್ತ ಇತ್ತ ಅಲುಗಾಡಿಸಿದಳು. ಅಂತಹ ಚೆಲುವೆಯ ಮೇಲೆ ನಮ್ಮ ಸಾವಕಾರ ಯಾರದೋ ಮಾತು ಕೇಳಿ ಸಿಟ್ಟು ಮಾಡಿಕೊಂಡಿದ್ದು ನನಗೇನು ಸರಿ ಅನ್ನಿಸಲಿಲ್ಲ. ಆದರೆ ನಮ್ಮ ಸಾವಕಾರ ತುಂಬಾ ಒಳ್ಳೆವನು ಇಂತಾ ವಿಷಯಕ್ಕೆಲ್ಲ ವಿರೋದಿಸ್ತಾರೆ, ಪರ ಸ್ತ್ರೀಯರನ್ನು ಗೌರವದಿಂದ ಕಾಣುವ ಮನುಷ್ಯ ಎಂಬ ವಿಚಾರ ತಿಳಿದಿದ್ದ ನಾನು ಸಮಾಧಾನ ಮಾಡ್ಕೊಂಡೆ.

ನಾನು ಅವಳನ್ನ ಕರ್ಕೊಂಡು ಹೋಗ್ತಾ ಇದ್ದೆ, ಸಂಜೆ ಆಗ್ತಾ ಬಂತು ತಣ್ಣನೆ ತಂಗಾಳಿ  ಬೀಸುತ್ತಿತ್ತು,ಸುತ್ತಲಿನ ಹಸಿರು ಪ್ರಪಂಚ ಮನಕ್ಕೆ ಮುದ ನೀಡುತ್ತಿತ್ತು, ಪಕ್ಷಿಗಳು ಕಾಣದಿದ್ದರೂ ಅವುಗಳ ಇಂಪು ಕಿವಿಗೆ ಕೇಳುತ್ತಿತ್ತು, ಅಕ್ಕ ಪಕ್ಕದಲ್ಲಿ ಯಾವುದೇ ಹೂವಿನ ಗಿಡಗಳು ಕಾಣುತಿದ್ದಿಲ್ಲ ಆದರೆ ಅದೆಲ್ಲಿಂದಲೋ ಸುವಾಸನೆ ಬೀರುತ್ತಿತ್ತು, ಓಹೋ ಅದು ಅವಳು ಮುಡಿದ  ಮಲ್ಲಿಗೆಯ ವಾಸನೆ, ಅವಳು ಮುಡಿದಿದ್ದರಿಂದಲೋ ಏನೋ ಅವತ್ತು ಆ ಮಲ್ಲಿಗೆ ಅಷ್ಟೋಂದು ಚಂದ ಕಾಣುತಿತ್ತು. ಅವಳಿಂದ ನಾನು... ತೂ.. ಅಲ್ಲಾ ಅಲ್ಲಾ ನನ್ನಿಂದ ಅವಳು ಚೂರು ದೂರನೆ ನಡಿತಾ ಇದ್ದರು ಅದೇಕೋ ಅವಳ ಬೆರಳ ಸ್ಪರ್ಶ ನನ್ನ ಕೈಬೆರಳಿಗೆ  ಸೋಕಿದಂತಾಗುತಿತ್ತು, ಆ ಸಂಜೆ ಸಾಮಾನ್ಯವಾಗಿರಲಿಲ್ಲ. ತೋಟದಿಂದ ಅವಳ ಮನೆಗೆ ಹೋಗುವಾಗ ಇದ್ದಷ್ಟು ದೂರ, ಅವಳ ಮನೆಯಿಂದ ತೋಟಕ್ಕೆ ಬರುವಾಗ ಇರಲಿಲ್ಲ ಅನ್ನಿಸಿತು, ಆ ಸಂಜೆ ಅದೇಕೆ ನನ್ನಲ್ಲಿ ಅಷ್ಟೋಂದು ಬದಲಾವಣೆ ತರುತಿತ್ತೋ ಗೊತ್ತಿಲ್ಲಾ, ಇದೋ ನೋಡಿ ಈ ಬರವಣಿಗೆ ಮೂಲಕ ಅವಳನ್ನು ಕತೆಯಾಗಿಸ ಹೊರಟ ನಾನು ಅವಳನ್ನ ಕವಿತೆಯಾಗಿಸಿ ಬಿಟ್ಟೆ!.

ಕೊನೆಗೂ ಬಂದು  ಸಾವಕಾರರ ಬಳಿ ಅವಳನ್ನು ಬಿಟ್ಟೆ. ಅಲ್ಲೇ ತೋಟದಲ್ಲಿ ಬಾಕಿ ಇದ್ದ ಕೆಲಸ ಮುಗಿಸಿ ಬಂದ್ರೆ ಆಯ್ತು ಅಂತಾ ಹೇಳಿ ಕೆಲ್ಸ ನೋಡೋಕೆ ಅಂತ ಹೊರಟೆ. ಸಾವಕಾರ ಆ ಹುಡಗಿನ ಚೆನ್ನಾಗಿ ಬೇಯುತ್ತಾ ಊರಿನಿಂದಾ ಬಹಿಷ್ಕಾರ ಹಾಕೋದು ಅಂತೂ ನಂಗೆ ಗ್ಯಾರಂಟಿ ಆಗಿತ್ತು,ಅದರಿಂದ ನಂಗೇನೂ ನಷ್ಟ ಅಂತೂ ಇಲ್ಲ ಅಂತಾ ನನಗೆ ನಾನೇ ಸಮಾಧಾನ ಮಾಡ್ಕೊಂಡೆ, ಆದರೆ ಸೋಮನ ಬಗ್ಗೆಯೆ ಸ್ವಲ್ಪ ಅನುಕಂಪ ಇತ್ತು ಪಾಪ ಅವನು ಈ ಊರಲ್ಲೂ ಒಬ್ಬಂಟಿ ಆಗುತ್ತಾನೆ ಅಂತಾ. ಆಗಿದ್ದ ಆಗ್ಲಿ ಅಂತಾ ಒಂದು ಗಂಟೆ ನಂತರ ಕೆಲ್ಸಾ ಮುಗಿಸಿ ಮತ್ತೆ  ಸಾವಕಾರನ ಮನೆ ಕಡೆ ಹೋದೆ, ಪಾಪ ಅದೆಷ್ಟು ಬೆದು ಆ ಹುಡ್ಗಿಗೆ ಪಾಠ ಕಳ್ಸಿದ್ನೋ ಏನೋ ಆ ಮನುಷ್ಯ ,  ನಾ ಹೋಗೋ ಸಮಯಕ್ಕೆ ಸರಿಯಾಗಿ ಮನೆ ಬಾಗಿಲಿನಿಂದ ಹೊರ ಬಂದ ಅವಳು ಅದೇಕೋ ಸೆರಗು ಸರಿ ಮಾಡಿಕೊಳ್ಳುತ್ತಿದ್ದಳು!…….. 

ಆದರು ನಮ್ಮ ಸಾವಕಾರರು ಅಂತವರಲ್ಲ… ಅಲ್ಲಿ ತಪ್ಪು ಅವಳದ್ದೇ ಇರಬೇಕು!!

Category : Stories


ProfileImg

Written by Mahantesh