ಸರಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳ ಸಹಕಾರ ಅಗತ್ಯ: ಗಿರೀಶ್.ವಿ

ಸುಂದರ ಭಾರತ ಪ್ರತಿಷ್ಠಾನದ ನೀಡ್ ಬೇಸ್ ಇಂಡಿಯಾದಿಂದ ಉಚಿತವಾಗಿ ನೋಟ್ ಬುಕ್‌ ಗಳ ವಿತರಣೆ

ProfileImg
04 Jul '24
1 min read


image

ಸಿಂಧನೂರು ತಾಲೂಕಿನ ದುಗ್ಗಮ್ಮನಗುಂಡ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಸುಂದರ ಭಾರತ ಪ್ರತಿಷ್ಠಾನದ ನೀಡ್ ಬೇಸ್ ಇಂಡಿಯಾದಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್‌ ಗಳನ್ನು ವಿತರಣೆ ಮಾಡಲಾಯಿತು . ಈ ಕಾರ್ಯಕ್ರಮದಲ್ಲಿ ಮಾತನಾಡಿದ ದೇವಿ ಕ್ಯಾಂಪ್ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಗಿರೀಶ್ ವಿ ಅವರು ಸರಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳ ಸಹಕಾರ ತುಂಬಾ ಅಗತ್ಯ . ಸುಂದರ ಭಾರತ ಪ್ರತಿಷ್ಠಾನ ಒಳ್ಳೆಯ ಕಾರ್ಯವನ್ನು ಮಾಡುತ್ತಿದೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.

ಸುಂದರ ಭಾರತ ಪ್ರತಿಷ್ಠಾನ ನೀಡ್ ಬೇಸ್ ಇಂಡಿಯಾ ಸರ್ಕಾರಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತಹ ಹಲವಾರು ಕಾರ್ಯಗಳನ್ನು ಮಾಡುವ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಶ್ರಮಿಸುತ್ತಿದೆ ಎಂದು ಮುಖ್ಯ ಗುರುಗಳಾದ ಶಂಕರ ದೇವರು ಹಿರೇಮಠ ಅವರು ಅಭಿಪ್ರಾಯಪಟ್ಟರು.

ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯ ಚಿಂತನೆ ಮಾಡಿದಾಗ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯವಾಗುತ್ತದೆ.ಆದ್ದರಿಂದ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮುದಾಯದ ಪಾತ್ರ ದೊಡ್ಡದಾಗಿರುತ್ತದೆ.

ಆದ್ದರಿಂದ ನಮ್ಮ ಸುತ್ತಲಿನ ಸರಕಾರಿ ಶಾಲೆಗಳ ಬಗ್ಗೆ ಕಾಳಜಿ ವಹಿಸಿ, ಶೆಕ್ಷಣಿಕ ಅಭ್ಯಾಸಕ್ಕೆ ಬೇಕಾದ ಕಲಿಕೋಪಕರಣ ಕೊರತೆ ಇಲ್ಲದಂತೆ ಮಾಡಲು ಸಮುದಾಯವು ಸಹಾಯ ಸಹಕಾರ ಒದಗಿಸಲು ಸಂಕಲ್ಪ ಮಾಡಿದಾಗ ನಮ್ಮ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಹಕಾರಿ ಆಗಿರುತ್ತದೆ 

ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಗುಡದಪ್ಪ,ಮಾಜಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಲಕ್ಷ್ಮಣ, ಅಂಗನವಾಡಿ ಶಿಕ್ಷಕಿಯರಾದ ಭಾಗ್ಯಶ್ರೀ, ಅಡುಗೆ ಸಿಬ್ಬಂದಿ ರೇಣುಕಾ,ಹನುಮಮ್ಮ, ಶಿಕ್ಷಕರಾದ ಪ್ರದೀಪ್ ಕುಮಾರ್ ಮತ್ತು ಪಾಲಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಈ ಸಮಾರಂಭದಲ್ಲಿ ಮೋನಮ್ಮ ಸ್ವಾಗತಿಸಿದಳು.ಪ್ರದೀಪ್ ಕುಮಾರ್ ಅವರು ನಿರೂಪಿಸಿದರು.ಭಾಗಶ್ರೀ ಅವರು ವಂದಿಸಿದರು

Category:Education



ProfileImg

Written by Avinash deshpande

Article Writer, Self Employee

0 Followers

0 Following