ಮದುವೆಯಾಗಿ ಮನೆಗೆ
ಬಂದ ದಿನದಿಂದಲೂ
ಹೊತ್ತು ಹೊತ್ತಿಗೆ ತುತ್ತು
ಬೇಯಿಸಿ ಬಡಿಸಿದವಳು
ಮನೆಯ ಜೊತೆ ಜೊತೆಗೆ
ಮಕ್ಕಳ ಭಾರ ಹೊತ್ತವಳು
ಬದುಕಿನಲ್ಲಿ ಬಿದ್ದೆನೆಂದಾಗ
ನಾನಿದ್ದೇನೆ ಎಂದವಳು
ಒಬ್ಬೊಬ್ಬರೆ ಬಿಟ್ಟು ಹೋದಾಗಲೂ
ಧೈರ್ಯ ತುಂಬಿ ಬದುಕಿಸಿದವಳು
ದೇಹ ಎರಡಾದರೂ ಜೀವ ಒಂದೇ
ಎನ್ನುವಂತೆ ಜೊತೆಗೆ ಇರುವವಳು
ದಣಿದು ಮಲಗಿದ್ದಾಳೆ ಸದ್ದು
ಮಾಡಬೇಡಿ ಎದ್ದು ಬಿಡುವಳು
ಜಿ. ಹರೀಶ್ ಬೇದ್ರೆ
0 Followers
0 Following