ಮನೆ ಮದ್ದಿಗೂ ಅಡ್ಡ ಪರಿಣಾಮ ಇರುತ್ತದೆಯೇ ?
"ಪ್ರಾಚೀನವಾದುದೆಲ್ಲವೂ ಶ್ರೇಷ್ಠವಲ್ಲ" ಕಾಳಿದಾಸನ ಮಾತನ್ನು ನೆನಪಿಸುವ ನನ್ನ
ಅನುಭವ ಕಥನ ಇಲ್ಲಿದೆ
2019-20 ರಲ್ಲಿ ನಾವೆಲ್ಲ ಕೊರೋನ ಭಯದಿಂದ ತತ್ತರಿಸಿದ್ದೆವು
ಅವರಿಗೆಷಕೋವಿಡ್ ಪಾಸಿಟಿವ್ ಇವರಿಗೆ ಪಾಸಿಟಿವ್,ಅಲ್ಲಿ ಸಾವು ಇಲ್ಲಿ ಸಾವು ಎಲ್ಲೂ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ
ಈ ಸುದ್ದಿಗಳನ್ನು ಕೇಳಿ ಕೊರೋನ ಬಂದವರಿಗಿಂತ ನಾನೇ ಹೆದರಿದ್ದೆ
ಜೊತೆಗೆ ಕ್ವಾರಂಟೈನ್ ನ ಭಯ
ಅದಕ್ಕಾಗಿ ಡಾ ಗಿರಿಧರ್ ಕಜೆ ಸೇರಿದಂತೆ ಅವರಿವರು ಹೇಳಿದ ಎಲ್ಲ ಮನೆ ಮದ್ದು ಕಷಾಯಗಳ ಮಾಡಿ ಕುಡಿದಿದ್ದೆ.ದಿನಾಲೂ ತುಳಸಿ ಅಮೃತ ಬಳ್ಳಿ ಕಾಳು ಮೆಣಸು ಹಾಕಿ ಕಷಾಯ ಮಾಡಿ ಕುಡಿಯುತ್ತಿದ್ದೆ.ಪತಂಜಲಿ ಸೇರಿದಂತೆ ಯಾವ್ಯಾವುದೋ ಆಯುರ್ವೇದದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾದ ಔಷಧಿಗಳನ್ನು ಸೇವಿಸಿದೆ.ಡಾ.ಗಿರಿಧರ ಕಜೆ ಅನ್ವೇಷಣೆಯ ಸಾಥ್ಮ್ಯ,ಭೌಮ್ಯ ಎಂಬ ಎರಡು ಆಯುರ್ವೇದ ಟ್ಯಾಬ್ಲೆಟ್ ಗಳನ್ನೂ ಅವರ ಸಲಹೆಯಂತೆ ಸೇವಿಸಿದೆ
ಇಷ್ಟೆಲ್ಲಾ ಆದರೂ ನನಗೆ ಕೋವಿಡ್ ಸೋಂಕು ತಗುಲಿತು
ವಿಪರೀತ ಜ್ವರ ತಲೆನೋವು ನಿಶ್ಶಕ್ತಿ ಯಿಂದ ವಿಕ್ರಮ ಹಾಸ್ಪಿಟಲ್ ಗೆ ಹೋಗಿ ಪರೀಕ್ಷೆ ಮಾಡಿದಾಗ ಡಿ ಡೈಮರ್ ಟೆಸ್ಟ್ ನಲ್ಲಿ ರಕ್ತ ಹೆಪ್ಪುಗಟ್ಟುತ್ತಿರುವುದು ತಿಳಿಯಿತು
ಹೃದಯಾಘಾತವೋ ಬ್ರೈನ್ ಹೆಮರೇಜ್ ಆಗುವ ಸಾಧ್ಯತೆ ಇದ್ದ ಕಾರಣ ದಾಖಲಾಗಿ ಚಿಕಿತ್ಸೆ ಪಡೆದೆ.ಗುಣಮುಖಳಾಗಿ ಮನೆಗೆ ಬಂದೆ
ಇದಾಗಿ ಸ್ವಲ್ಪ ಸಮಯದಲ್ಲಿ ಕೋವಾಕ್ಸಿನ್ ಅನ್ನೂ ತಗೊಂಡೆ
ಇಷ್ಟೆಲ್ಲಾ ಆಗಿಯೂ ಮತ್ತೆ ಎರಡು ಬಾರಿ ಕೋವಿಡ್ ಸೋಂಕು ತಗುಲಿ ಚಿಕಿತ್ಸೆ ಪಡೆಯಬೇಕಾಗಿ ಬಂತು
ಅಂತೂ ಕೋವಿಡ್ ದೂರವಾಯಿತು,ನಾನು ಬಚಾವಾದೆ ಎಂದು ಕೊಂಡೆ
ಆಗ ಕಾಣಿಸಿಕೊಂಡದ್ದು ಮೈ ಕೈ ನೋವು
ಒಂದಿನ ಎಡಗಾಲು ನೋವು ಮರುದಿನ ಬಲಗಾಲು ನೋವು ಮತ್ತೊಂದಿನ ಕೈ ನೋವು..
ಮಾಟ ಮಾಡಿದಾಗ ಗಿಣಿಯ ಕಾಲು ಮುರಿದಾಗ ಮಾಡಿಸಿಕೊಂಡವನಿಗೆ ಕಾಲು ನೋವಾಗಿ ಬೊಬ್ಬೆ ಹೊಡೆಯುತ್ತಾರೆ,ಗಿಣಿಕೈ ಮುರಿದಾಗ ಈತನ ಕೈ ಕತ್ತು ಮುರಿದಾಗ ಈತನ ಕತ್ತು ನೋವಾಗುತ್ತದೆ ಎಂದೆಲ್ಲ ಕೇಳಿರ್ತೀವಲ್ಲ.. ಹಾಗೆಯೇ ನನ್ನ ನೋವು ಒಂದೊಂದು ಕಡೆ ಕಾಣಿಸುತ್ತಿತ್ತು
ನನ್ನ ಅಮ್ಮನಿಗೆ ಮಾತ್ರವಲ್ಲ ಆ ನೋವು ತಾಳಲಾರದೇ ಇದ್ದಾಗ ನನಗೂ ಕೂಡ ಯಾರಾದರೂ ಮಾಟ ಮಾಡಿರಬಹುದೇನೋ ಎಂದು ಅನಿಸಿತ್ತು.
ಈ ನಡುವೆ ಒಂದು ದಿನ ಕಾಲೇಜಿನಿಂದ ಬಂದಾಗ ವಿಪರೀತ ಎಡ ತೋಳು ನೋವು
ಡೋಲೋ ಅಲ್ಟ್ರಾ ಸೆಟ್ ಸೇರಿದಂತೆ ಯಾವ ನೋವು ನಿವಾರಕಕ್ಕೂ ಕಡಿಮೆ ಆಗಲಿಲ್ಲ.ಆಗ ಫಾರ್ಟಿಸ್ ಹಾಸ್ಪಿಟಲ್ ಗೆ ಹೋಗಿ ಆರ್ಥೋ ಡಾಕ್ಟರ್ ಡಾ ಅನಿಲ್ ಅವರ ಭೇಟಿ ಆದೆ.
ಅವರು x ray ಮಾಡಿ ನೋಡಿ ಇದು ಮಸಲ್ ಪೈನ್ ಎಂದು ಔಷಧಿ ನೀಡಿದರು
ಕೆಲವು ದಿನ ಕಡಿಮೆ ಆದ ಹಾಗೆ ಅನಿಸಿತು
ಮತ್ತೆ ಪುನಃ ಜೋರಾಯಿತು
ಮತ್ತೆ ಡಾ.ಅನಂತ ಪದ್ಮನಾಭರಲ್ಲಿ ಹೋದೆ.ಅವರು ಕೊಟ್ಟ ಮದ್ದು ಕೆಲ ದಿನಗಳ ಕಾಲ ಕೆಲಸ ಮಾಡಿಯಾದರೂ ಮತ್ತೆ ಹೆಚ್ಚಾಗಿ ಕಾಲು ನೆಲದಲ್ಲಿ ಊರಲು ಆಗದಷ್ಟು ನೋವು ಶುರು ಆಯಿತು
ಕಾಲು ಊರಿರರೆ ಕಾಲು ಮಡಿಚಿಕೊಳ್ಳುವ ಸಮಸ್ಯೆ ಕಾಣಿಸಿತು
ಆಗ ಡಾ.ಅನಿಲ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದೆ
ಇನ್ನೋರ್ವ ಆರ್ಥೋ ಡಾಕ್ಟರ್ ಕುಶಾಲ್ ಅವರ ಬಳಿ ಹೋದೆ.ಅವರು ಕಾಲಿನ ACL tear ಆಗಿರಬಹುದು ಎಂದು ಸಂಶಯಿಸಿ ಕಾಲಿನ ಎಂ ಆರ್ ಐ ಸ್ಕಾನಿಂಗ್ ಮಾಡಿಸಲು ಹೇಳಿದರು..
ಎಂ ಆರ್ ಐ ಸ್ಕಾನಿಂಗ್ ನಲ್ಲಿ ಕಾಲಿನ ACL tear ಆಗಿದ್ದು ಕನ್ಫರ್ಮ್ ಆಯಿತು ಆಗ ಕಾಲಿಗೆ ಲಾಂಗ್ ನೀ ಬೆಲ್ಟ್ ಧರಿಸಲು ಹೇಳಿ ಎರಡುವಾರ ಬೆಡ್ ರೆಸ್ಟ್. ಮಾಡಲು ತಿಳಿಸಿದರು
ಎರಡು ವಾರ ಆದಾಗ ACL tear ಆದದ್ದು ಮತ್ತೆ ಸ್ವಲೂ ಬೆಸೆದು ಕಾಲು ಮಡಿಚಿಕೊಳ್ಳುವ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರ ಆಯಿತು
ಆದರೆ ನೋವಿನ ಸಮಸ್ಯೆ ಪರಿಹಾರ ಆಗಲಿಲ್ಲ .ದೇಹದ ಎಲ್ಲಾ ಜಾಯಿಂಟ್ ಗಳು ಮಾತ್ರವಲ್ಲ .ಎಲ್ಲ ಮಸಲ್ ಗಳಲ್ಲಿ ಕೂಡ ತೀವ್ರ ಸ್ವರೂಪದ ನೋವು
ನನಗೆ ಬೆನ್ನು ಹೆಗಲಿಗೆ ಸೊಳ್ಳೆ ಏನಾದರೂ ಕಚ್ಚಿ ತುರಿಕೆ ಆದರೆ ತುರಿಸಲು ಕೈ ಹಿಂದೆ ಹೋಗುತ್ತಿರಲಿಲ್ಲ,ನಾನು ಹಸುಗಳು ಮಾಡುವಂತೆ ಬೆನ್ನನ್ನು ಗೋಡೆಗೆ ಉಜ್ಜಿ ಶಮನಗೊಳಿಸುತ್ತಿದ್ದೆ..ಈಗ ಇದನ್ನು ನೆನೆದಾಗ ನನಗೆ ನಗು ಬರುತ್ತದೆ ಆದರೆ ನನ್ನ ಪರಿಸ್ಥಿತಿ ದೇವರಿಗೆ ಪ್ರೀತಿ
16/01/2023 ರಂದು ನಮ್ಮ ಕಾಲೇಜು ಡೇ.ನಿರೂಪಣೆ ನನ್ನದು.ಹಾಗಾಗಿ ಕಾರ್ಯಕ್ರಮದ ಪಟ್ಟಿ ಇರುವ ಫೈಲ್ ಒಂದನ್ನು ಎಡಗೈಯಲ್ಲಿ ಒಂದೆರಡು ಗಂಟೆ ಹಿಡಿದುಕೊಂಡಿದ್ದು ನೆಪವಾಗಿ ಮನೆಗೆ ಬರುವಷ್ಟರಲ್ಲಿ ಕೈ ಅಲುಗಾಡಿಸಲು ಆಗದಷ್ಟು ನೋವು.ಈ
ನೋವಿನಿಂದ ನಿದ್ರೆ ಇಲ್ಲದೆ ಇನ್ನಿತರ ಸಮಸುಗಳೂ ಉಲ್ಭಣಿಸಿದವು.
ಮತ್ತೆ ವಿಕ್ರಂ ಹಾಸ್ಪಿಟಲ್ ( ಈಗ ಮಣಿಪಾಲ್ ಆಗಿದೆ) ಗೆ ದಾಖಲಾದೆ.
ನನ್ನ ನೋವಿನ ಬಗ್ಗೆ ಪರೀಕ್ಷೆ ಮಾಡಿದ ಡಾ.ಜಯಚಂರ್ರನ್
ಏನೇನೋ ಟೆಸ್ಟ್ ಗಳನ್ನು ಮಾಡಿಸಿದರು.ಅದರಲ್ಲಿ rheumatoid arthritis factor ಇರುವುದು ಕನ್ಫರ್ಮ್ ಆಯಿತು
ಅಂತೂ ನೋವಿಗೆ ಕಾರಣ ತಿಳಿಯಿತು.ನಾನು arthritis ಎಂದರೆ ಮೂಳೆ ಸವೆತ ಎಂದು ತಿಳಿದಿದ್ದೆ
ಆದರೆ Rheumatoid arthritis ಎನ್ನುವುದು auto immuno ಸಮಸ್ಯೆ
ನಮ್ಮ ದೇಹದಲ್ಲಿ ರೋಗಾಣುಗಳನ್ನು ಎದುರಿಸಿ ಹಿಮ್ಮೆಟ್ಟಿಸುವ ರಕ್ಷಣಾ ವ್ಯವಸ್ಥೆ ಇರುತ್ತದೆ.ಈ ರೋಗ ನಿರೋಧಕ ಶಕ್ತಿ ಹೆಚ್ಚಾದಾಗ ಇಲ್ಲದೇ ಇರುವ ರೋಗಾಣು ವಿರುದ್ಧ ಹೋರಾಡಲು ಸಜ್ದಾಗಿ ನಿಂತು ನಮ್ಮ ಜೀವ ಕೋಶಗಳನ್ನೆ ಹಾಳುಮಾಡುತ್ತದೆ
ಗಂಟು ಗಂಟುಗಳಲ್ಲಿ ನೋವು ಊತ ಶುರುವಾಗುತ್ತದೆ
ಇದಕ್ಕೆ ಇಮ್ಯುನಿಟಿ /ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವುದೊಂದೇ ಪರಿಹಾರ
ಇದರ ಚಿಕಿತ್ಸೆಗಾಗಿ ಡಾ.ಜಯ ಚಂದ್ರನ್ ಅವರ ಸಲಹೆಯಂತೆ ರುಮ್ಯಾಟಾಲಜಿಸ್ಟ್ ಡಾ.ಪ್ರಶಾಂತ್ ಅವರನ್ನು ಭೇಟಿಯಾಗಿ ಚಿಕಿತ್ಸೆ ಪಡೆದೆ
Rhumatoid arthrits ಗೆ ಸ್ಟಿರಾಯ್ಡ ಬೇಸ್ಡ್ ಔಷಧ ಕೊಡುತ್ತಾರೆ
ಸ್ಟಿರಾಯ್ಡ ಬಹಳಬಹಳ ಕೆಟ್ಟದೆಂದು ಹೇಳುದು ಕೇಳಿದ್ದೆ
ಹಾಗಾಗಿ ಸ್ವಲೂ ಸಮಯ ತಗೊಂಡು ನೋವು ಕಡಿಮೆ ಆದಾಗ ನಿಲ್ಲಿಸಿದೆ
ಮತ್ತೆ ನೋವು ತೀವ್ರಗೊಂಡು ಮತ್ತೆ ಡಾ.ಪ್ರಶಾಂತ್ ಬಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿರುವೆ
ಈ ನಡುವೆ ನಮ್ಮ ಸಂಬಂಧಿಕರೂ ಆಗಿರುವ ಖ್ಯಾತ ವೈದ್ಯರಾದ ಡಾ.ರಾಮ ಪ್ರಕಾಶ್ ಅವರನ್ನು ಭೇಟಿ ಮಾಡಿ ಸಲಹೆ ಪಡೆದೆ.ಅವರ ಸಲಹೆಯಂತೆ ಡಾ.ಸಜ್ಜನ್ ಶೆಣೈ ಅವರನ್ನು ಭೇಟಿಯಾದೆ.ನಾನು ಪಡೆಯುತ್ತಿರುವ ಚಿಕಿತ್ಸೆ ಸರಿಯಾಗಿದೆ.ಎಂದು ಅವರೂ ತಿಳಿಸಿದರು
ಆರಂಭದಲ್ಲಿ 40mg ಸ್ಟಿರಾಯ್ಡ ಬೇಸ್ಡ್ ಟ್ಯಾಬ್ಲೆಟ್ ತಗಳ್ಳಬೇಕಾಗಿತ್ತು.
ನೋವು ಕಡಿಮೆಯಾದಂತೆ ಇದರ ಪ್ರಮಾಣವನ್ನು ವೈದ್ಯರು ಕಡಿಮೆ ಮಾಡಿದ್ದು ಈಗ ವಾರಕ್ಕೆ ಒಂದು ದಿನ 5mg ತಗೊಳ್ಳುತ್ತಿರುವೆ
ನೋವು ಸುಮಾರಾಗಿ ತಹಬದಿಗೆ ಬಂದಿದೆ
ನನ್ನ ಪರ್ಸನಲ್ ಕೆಲಸದ ಜೊತೆಗೆ ಕಾಲೇಜಿನ ಅಧ್ಯಪನ ಪರೀಕ್ಷೆ ಮೌಲ್ಯಮಾಪನ ಮಾಡುವಷ್ಟು ಹುಷಾರಾಗಿದ್ದೇನೆ
ಈ ನಡುವೆ ಆಯುರ್ವೇದ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ವಿಚಾರಿಸಿದಾಗ ಆಯುರ್ವೇದ ದಲ್ಲಿ ಕೂಡ Rheumatoid arthritis/ಸಂಧಿವಾತಕ್ಕೆ ಸ್ಟಿರಾಯ್ಡ ಬೇಸ್ಡ್ ಔಷಧವೇ ಇರುವುದು ಎಂದು ತಿಳಿಯಿತು
ಹಾಗಾಗಿ ಸಾಕಷ್ಟು ಪರೀಕ್ಷೆ ಗೆ ಒಳಪಟ್ಟ ಅಲೋಪತ ಔಷಧವೇ ಬೆಟರ್ ಅನಿಸಿ ಡಾ.ಪ್ರಶಾಂತ್ ಬಾಫ್ನ ಅವರಲ್ಲಿಯೇ ಚಿಕಿತ್ಸೆ ಮುಂದುವರಿಸಿ ಈಗ ಹುಷಾರಾಗಿರುವೆ
ಇದರ ಜೊತೆಗೆ ಇನ್ನೊಂದು ವಿಚಾರ ತಿಳಿಸುವೆ
3/52023ರಂದು ನನ್ನ ಜಾತಕದಂತೆ ಶುಕ್ರಾರ್ಕ ಸಂಧಿ ಇತ್ತು.ನನ್ನ ಜಾತಕ ದಲ್ಲಿ
ಶುಕ್ರ ಮತ್ತು ರವಿ ದ್ವಿ ದ್ವಾದಶದಲ್ಲಿ ದ್ವಾದಶದಲ್ಲಿ ಇದ್ದು ವ್ಮಮ ಸ್ಥಾನದಲ್ಲಿ ನೀಚ ಸ್ಥಾನ ಗತನಾದ ರವಿ ಗ್ರಹ ಇದೆ
ಶುಕ್ರ ದೆಸೆ ಮುಗಿದು ರವಿ ದೆಸೆ ಆರಂಭ ಆಗುವ ಸಂಧಿ ಕಾಲದಲ್ಲಿ ನನಗೆ ಸಂಧಿವಾತ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆ ಗಳು ಕಾಣಿಸಿದ್ದು ಕಾಕತಾಳೀಯವೋ ಸಂಧಿ ದೋಷವೋ ಗೊತ್ತಿಲ್ಲ..ಈ ಬಗ್ಗೆ ಇದಮಿತ್ಥಂ ಹೇಳುದು ಕಷ್ಟ
ಅದು ಮೂಢನಂಬಿಕೆಯಾ ನಿಜ ನಂಬಿಕೆಯೋ ಗೊತ್ತಿಲ್ಲ
ಅದೇನೇ ಇರಲಿ ಸಂಧಿ ಶಾಂತಿ ಮಾಡಿಸುವುದರಿಂದ ಒಳಿತೇ ಹೊರತು ಕೆಡುಕೇನಿದೆ ಎಂದು ಅದನ್ನು ಸಕಾಲದಲ್ಲಿ ಮಾಡಿಸಿದೆ/(ಈ ಬಗ್ಗೆ ಇನೂಬರೆಯಲಿದೆ ಸಮಯ ಸಿಕ್ಕಾಗ ಬರೆಯುವೆ )
ಜೊತೆಗೆ ರವಿಗೆ ಬಲ ಕೊಡುವ ಹರಳನ್ನು ಧರಿಸಿದೆ
ಇದರ ಫಲವೋ ನನ್ನ ಅದೃಷ್ಟವೋ ವೈದ್ಯರ ಕೈ ಗುಣವೋ ಔಷಧ ಪರಿಣಾಮ ಬೀರಿ ನನ್ನ ನೋವಿನ ಸಮಸ್ಯೆಯನ್ನು ಪರಿಹರಿಸಿದ್ದು ಸತ್ಯವಾದುದು
ಈ ಬಗ್ಗೆ ಮಾತನಾಡುವಾಗ ವೈದ್ಯರು ನೀವು immunity booster ಗಳನ್ನು ತಗೊಂಡಿದ್ದೀರಾ ಎಂದು ಕೇಳಿದ್ದರು
ಆಗ ಇಲ್ಲ ಎಂದು ಹೇಳಿದ್ದೆ
ಆದರೆ ನಂತರ ನಾನು ಕೊರೋನ ಬಾರದಂತೆ ತಗೊಂಡ ಕಷಾಯ ಆಯುರ್ವೇದ ಔಷಧಿಗಳೂ ummunity booster ಗಳೇ ಅಲ್ವ ಎಂದು ನೆನಪಾಯಿತು
ಬಹುಶಃ ಇವುಗಳ ಬಳಕೆಯಿಂದ ನನಗೆ ಆಟೋ ಇಮ್ಯುನೋ ಡಿಸೀಸ್ ಆಗಿರುವ Rheumatoid arthritis ಬಂತೋ ಏನೋ ಗೊತ್ತಿಲ್ಲ
ಡಾ.ಶ್ರೀಧರ್ ಅವರು ಮನೆ ಮದ್ದು ಕಷಾಯ ಆಯುರ್ವೇದ ಔಷಧಿಗಳಿಗೂ ಸೈಡ್ ಎಫೆಕ್ಟ್ ಇದೆ ಎಂದು ಬರೆದಿದ್ದರು . ಅದನ್ನು ಓದಿದಾಗ ನನಗೆ ಈ ವಿಚಾರ ನೆನಪಾಯಿತು
ಅನೇಕ ಜನರಂತೆ ನಾನು ಕೂಡಾ ಮನೆ ಮದ್ದು ಆಯುರ್ವೇದ ಔಷಧಿಗಳಲ್ಲಿ ಅಡ್ಡ ಪರಿಣಾಮಗಳಿಲ್ಲ ಎಂದು ತಪ್ಪಾಗಿ ಭಾವಿಸಿದ್ದೆ
ಎಲ್ಲ ಔಷಧಗಳಿಗೂ ಅಡ್ಡ ಪರಿಣಾಮಗಳಿರುತ್ತವೆ ಹಾಗಾಗಿ ನಾವು ಆಯಾಯ ಪದ್ದತಿಯ ಪರಿಣತ ವೈದ್ಯರ ಸಲಹೆ ಪಡೆದೇ ಚಿಕಿತ್ಸೆ ಪಡೆಯುವುದು ಒಳ್ಳೆಯದು
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜು
ಬೆಂಗಳೂರು
0 Followers
0 Following