ನಿದ್ದೆ ಎಂಬ ಮಾಯೆಯ ರಹಸ್ಯ ಗೊತ್ತೆ?

ನಿದ್ರೆಯ ಭಾರತೀಯ ತತ್ವಶಾಸ್ತ್ರದ ದೃಷ್ಟಿಕೋನ

ProfileImg
21 May '24
4 min read


image

ಕನಸೆಂದರೆ ಕಲ್ಪನೆಯ ಅರಮನೆ. ಎಚ್ಚರದ ಸ್ಥಿತಿಯಲ್ಲಿ ಕಾಣದ ವ್ಯಕ್ತಿಗಳು, ಅನುಭವಿಸದ ಭಾವನೆಗಳು ಕನಸಿನಲ್ಲಿ ನಮ್ಮದೇನೋ ಅನ್ನಿಸುವಷ್ಟು ಹತ್ತಿರವಾಗಿರುತ್ತದೆ. ಹಾಗಾಗಿ ಇದು ಪ್ರತಿಯೊಬ್ಬರಿಗೂ ಪ್ರಿಯವಾದ ಸಂಗತಿ. ನಾವು ಯಾಕೆ ಕನಸು ಕಾಣುತ್ತೇವೆ? ಅದನ್ನು ನೆನಪಿನಲ್ಲಿಡಲು ಯಾಕೆ ಕಷ್ಟಪಡುತ್ತೇವೆ? ಕನಸಿನ ಬಗ್ಗೆ ವಿಜ್ಞಾನ ಮತ್ತು ತತ್ವಶಾಸ್ತ್ರಗಳು ಏನು ಹೇಳುತ್ತವೆ ಎನ್ನುವ ಬಗ್ಗೆ ವಿಶ್ಲೇಷಣೆ ಇಲ್ಲಿದೆ.

ನಿದ್ದೆ ಮಾಡುವುದು ಸೋಮಾರಿತನದ ಪ್ರತೀಕವಾಗಿ ದ್ದರೂ, ಕನಸು ಕಾಣುವುದು ಕ್ರಿಯಾಶೀಲತೆ ಪುಟ್ಟ ಮಗುವೂ ಕನಸು ಕಾಣುತ್ತದೆ ಅನ್ನುವುದಕ್ಕೆ ನಿದ್ದೆಯಲ್ಲಿ ನಗುವುದೇ ಸಾಕ್ಷಿ. ಪ್ರಾಣಿ ಪಕ್ಷಿಗಳು ಕೂಡ ಕನಸು ಕಾಣುತ್ತವೆ. ಅಷ್ಟೇ ಯಾಕೆ ಜೇಡದಂತಹ ಹುಳವೂ ಕೂಡ ಕನಸು ಕಾಣುತ್ತವೆ ಎಂಬುದು ಸಂಶೋಧನೆಗಳಲ್ಲಿ ತಿಳಿದುಬಂದಿದೆ. ಕನಸು ಯಾಕೆ ಬೀಳುತ್ತದೆ. ಬಿದ್ದ ಕನಸು ನೆನಪಲ್ಲಿ ಉಳಿಯದಿರಲು ಏನು ಕಾರಣ ಎನ್ನುವ ಬಗ್ಗೆ ಹಲ ವಾರು ಜಿಜ್ಞಾಸೆಗಳೇ ಇವೆ. ವಿಜ್ಞಾನ ಲೋಕದಲ್ಲಿ ಕನಸಿನ ಬಗ್ಗೆ ಹಲವಾರು ಸಿದ್ಧಾಂತಗಳಿವೆ. ಒಂದು ಸಿದ್ಧಾಂತದ ಪ್ರಕಾರ ಕನಸು ಹುಟ್ಟುವುದಕ್ಕೆ ಕಾರಣ ನಾವು ಎಚ್ಚರ ವಿದ್ದಾಗ ಮಾಡುವ ಯಾವುದೇ ಕಾರ್ಯಗಳ ನೆನಪುಗಳ ಗೊಂಚಲನ್ನು ಸುಪ್ತ ಮನಸ್ಸು ನಿದ್ದೆಯ ಸಮಯದಲ್ಲಿ ವ್ಯವಸ್ಥಿತವಾಗಿ ಶೇಖರಿಸಿ ಇಡಲು ಮತ್ತು ಬೇಡದ ನೆನಪನ್ನು

ಅಳಿಸಿಹಾಕಲು ಪ್ರಾರಂಭ ಮಾಡುತ್ತದೆ. ಇದರ ಚಟುವಟಿಕೆಯಲ್ಲಿ ಮೆದುಳಿನಲ್ಲಿ ಹೊರಡುವ ಎಲೆಕ್ಟಿಕಲ್ ಪ್ರಚೋದನೆ ಗಳನ್ನು ನಮ್ಮ ಮೆದುಳಿನ ಕಾರ್ಟೆಕ್ಸ್‌ಗಳು ಆ ಪ್ರಚೋದನೆಗಳಿಗೆ ತಕ್ಕಂತೆ ಚಿತ್ರಗಳನ್ನು ಮೂಡಿಸಿ ಅದಕ್ಕೆ ತಕ್ಕುದಾದ ಕತೆಯನ್ನು ಹೆಣೆಯುತ್ತದೆ. ಹಾಗಾಗಿಯೇ ನಮ್ಮ ಕನಸುಗಳು ತುಂಬಾ ವಿಚಿತ್ರವಾಗಿ, ಒಂದು ಘಟನೆಗೂ ಮತ್ತು ಇನ್ನೊಂದು ಘಟನೆಗೂ ಸಂಬಂಧವೇ ಇಲ್ಲದಂತೆ ಇರುತ್ತದೆ.

ಮೆದುಳಿನ ಜಾಗರೂಕ ಸ್ಥಿತಿ

ಒಂದು ಸಂಶೋಧನೆಯ ಪ್ರಕಾರ ಮನುಷ್ಯ ಎಚ್ಚರವಿದ್ದಾಗ ಮಾಡುವ ಕಾರ್ಯಗಳ ಆಧಾರದ ಮೇಲೆ ನಡೆಯುವ ಮೆದುಳಿನ ಎಲೆಕ್ಸಿಕಲ್ ಪ್ರಚೋದನೆಯನ್ನು ರಾತ್ರಿ ಮಲಗಿದ್ದಾಗ ಮೆದುಳು ಅನುಕರಣೆ ಮಾಡು ತ್ತದೆ ಎಂದು ತಿಳಿದುಬಂದಿದೆ. ಇನ್ನೊಂದು ಸಿದ್ದಾಂತದ ಪ್ರಕಾರ ಎಚ್ಚರದ ಸ್ಥಿತಿಯಲ್ಲಿ ನಮ್ಮನ್ನು ಯಾವುದೇ ಅಪಾಯದಿಂದ ಎಚ್ಚರಿಕೆಯಿಂದಿರಲು ಅಣಿಗೊಳಿಸುವುದಕ್ಕಾಗಿ ನಮ್ಮ ಸುಪ್ತ ಮನಸ್ಸು ಕನಸು ಗಳನ್ನು ಸೃಷ್ಟಿ ಮಾಡುತ್ತದೆ. ನಾವು ಕಾಡು ಮಾನವರಾಗಿದ್ದಾಗಿನಿಂದಲೂ ನಮ್ಮನ್ನು ರಕ್ಷಿಸುತ್ತಾ ಬಂದಿದ್ದು ಈ ಕನಸುಗಳೇ ಎಂದು ಈ ವಾದ ಹೇಳುತ್ತದೆ.

ಭಾರತೀಯ ತತ್ವಶಾಸ್ತ್ರದ ದೃಷ್ಟಿಕೋನ

ಅದೈತ ವೇದಾಂತದ ಪ್ರಕಾರ ಯಾವುದೇ ಜೀವಿ ಮುಖ್ಯವಾಗಿ ಮನುಷ್ಯ ಮೂರು ತರಹದ ಸ್ಥಿತಿಯನ್ನೊಳಗೊಂಡಿರುತ್ತಾನೆ. ಮೊದಲನೆಯದು ಜಾಗೃತ ಸ್ಥಿತಿ, ಇಲ್ಲಿ ಆತ/ಆಕೆ ಜಾಗೃತ ಪ್ರಪಂಚದಲ್ಲಿ ಎಚ್ಚರಗೊಂಡಿರು ತ್ತಾರೆ. ಅವನ/ಅವಳ ದೇಹ, ಪ್ರಾಣ, ಮನಸ್ಸು, ಬುದ್ದಿ ಎಲ್ಲವೂ ಕೆಲಸ ಮಾಡುತ್ತಿರುತ್ತದೆ. ಎರಡನೆಯದು, ಸ್ವಪ್ನ ಸ್ಥಿತಿ, ಇಲ್ಲಿ ಆತ/ಆಕೆ ಸ್ವಪ್ನ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಅಲ್ಲಿಯೂ ಘಟನೆಗಳು ನಡೆಯುತ್ತಿರು ತ್ತವೆ, ನಡೆಯುತ್ತಿರುವುದು ನಿಜವೆನಿಸುತ್ತಿರುತ್ತದೆ. ಆದರೆ ಅವುಗಳ್ಯಾ ವುವೂ ಜಾಗೃತ ಪ್ರಪಂಚಕ್ಕೆ ಮರಳಿದಾಗ ಇರುವುದಿಲ್ಲ ಮತ್ತು ಜಾಗೃತ ಪ್ರಪಂಚದಲ್ಲಿ ಅಲ್ಲಿನ ಘಟನೆಗಳು ಸ್ಪಷ್ಟವಿರುವುದಿಲ್ಲ. ಮೂರನೆಯದು ಸುಷುಪ್ತಿ ಸ್ಥಿತಿ, ಈ ಸ್ಥಿತಿಯಲ್ಲಿ ನಾವು ಮಲಗಿದ್ದಾಗ ನಮಗೆ ದೇಶ- ಕಾಲದ ಅರಿವೇ ಇರುವುದಿಲ್ಲ, ಅಂದರೆ ನಾವು ಎಲ್ಲಿದ್ದೇವೆ ಮತ್ತು ಯಾವ ಕಾಲದಲ್ಲಿ ಇದ್ದೇವೆ ಎಂಬ ಜ್ಞಾನವೇ ಇರುವುದಿಲ್ಲ. ಈ ತರಹದ ನಿದ್ರೆ ಎಲ್ಲರಿಗೂ ಬರುತ್ತದೆ. ಆದರೆ ಎದ್ದ ಮೇಲೆ ಒಂದು ತರಹದ ತೃಪ್ತಿ

ಕನಸಿನ ವೈಜ್ಞಾನಿಕ ದೃಷ್ಟಿಕೋನ

ವೈಜ್ಞಾನಿಕವಾದ ಕನಸಿನ ಅಧ್ಯಯನಕ್ಕೆ ಒಳ್ಳೆಯರೊಬೊಜಿ ಎಂದು ಕರೆಯುತ್ತಾರೆ. ಈ ಅಧ್ಯಯನ ಮುಖ್ಯವಾಗಿ ಕನಸು ಮತ್ತು ಮೆದುಳಿನ ಕ್ರಿಯೆಯ ಬಗ್ಗೆ ವಿಜ್ಞಾನಿಗಳ ಈಗಿನ ತಿಳುವಳಿಕೆಯ ಸಹಸಂಬಂಧದ ಬಗ್ಗೆ ತಿಳಿಸುತ್ತದೆ. ಹಾಗೆಯೇ ನಮ್ಮ ಮೆದುಳು ಕನಸನ್ನು ಕಾಣುವ ಸಮಯದಲ್ಲಿ ಹೇಗೆ ಕೆಲಸ ಮಾಡುತ್ತದೆ? ಕನಸು, ಮೆದುಳಿನ ಸ್ಮರಣಾ ಶಕ್ತಿ ಮತ್ತು ಮಾನಸಿಕ ಕಾಯಿಲೆಗಳು ಇವೆಲ್ಲದರ ನಡುವಿನ ಸಂಬಂಧವೇನು? ಹೀಗೆ ಈ ಪ್ರಶ್ನೆಗಳ ಉತ್ತರದ ಹುಡುಕಾಟದ ಪ್ರಯತ್ನಗಳು ನಡೆಯುತ್ತಲೇ ಇವೆ. ಈ ವೈಜ್ಞಾನಿಕ ಅಧ್ಯಯನಗಳು ಪ್ರಾರಂಭವಾಗಿದ್ದು ಮನುಷ್ಯನ ಇತಿಹಾಸದಲ್ಲೇ ಇತ್ತೀಚೆಗೆ. ಕಾರಣವೇನೆಂದರೆ ನಾವು ಕನಸನ್ನು ಯಾವುದೇ ಉಪಕರಣದಿಂದ ಹಿಡಿದಿಡಲಾಗುವುದಿಲ್ಲ. ಬೇರೆಯ ವರ ಕನಸು ನಮಗೆ ಗೋಚರಿಸುವುದೂ ಇಲ್ಲ. ಕನಸು ಕಂಡಾಗ ಹೀಗೆಯೇ ಆಯಿತು ಎಂದು ಯಥಾವತ್ತಾಗಿ ಹೇಳುವುದೂ ಸಾಧ್ಯವಿಲ್ಲ.

ನಮ್ಮಲ್ಲಿ ಹುಟ್ಟುತ್ತದೆ. ಅದೈತa ವೇದಾಂತ ಈ ಮೂರೂ ಸ್ಥಿತಿಯನ್ನು ಮಾಯೆ ಎಂದು ಕರೆಯುತ್ತದೆ. ಈ ಮೂರರಲ್ಲಿ ಯಾವುದು ನಿಜ ಎಂದರೆ ಯಾವುದೂ ನಿಜವಲ್ಲ ಎನ್ನುತ್ತದೆ. ಇದನೆಲ್ಲ ಅನುಭವಿಸಿದ ನಾನು ಅಥವಾ ಆತ್ಮ ಮಾತ್ರ ನಿಜವೆನ್ನುತ್ತದೆ. ಈ ಆತ್ಮಕ್ಕೆ ತುರ್ಯ ಎಂದು ಕರೆಯುತ್ತಾರೆ. ತುರ್ಯ ಎಂದರೆ ನಾಲ್ಕನೆಯದು ಎಂಬ ಅರ್ಥವಿದೆ.

ಯಾಕೆ ಹುಟ್ಟುತ್ತೆ?

ನಿದ್ದೆ ಮಾಡುವುದು ಸೋಮಾರಿತನದ ಪ್ರತೀಕವಾಗಿ ದ್ದರೂ, ಕನಸು ಕಾಣುವುದು ಕ್ರಿಯಾಶೀಲತೆ ಪುಟ್ಟ ಮಗುವೂ ಕನಸು ಕಾಣುತ್ತದೆ ಅನ್ನುವುದಕ್ಕೆ ನಿದ್ದೆಯಲ್ಲಿ ನಗುವುದೇ ಸಾಕ್ಷಿ. ಪ್ರಾಣಿ ಪಕ್ಷಿಗಳು ಕೂಡ ಕನಸು ಕಾಣುತ್ತವೆ. ಅಷ್ಟೇ ಯಾಕೆ ಜೇಡದಂತಹ ಹುಳವೂ ಕೂಡ ಕನಸು ಕಾಣುತ್ತವೆ ಎಂಬುದು ಸಂಶೋಧನೆಗಳಲ್ಲಿ ತಿಳಿದುಬಂದಿದೆ. ಕನಸು ಯಾಕೆ ಬೀಳುತ್ತದೆ. ಬಿದ್ದ ಕನಸು ನೆನಪಲ್ಲಿ ಉಳಿಯದಿರಲು ಏನು ಕಾರಣ ಎನ್ನುವ ಬಗ್ಗೆ ಹಲ ವಾರು ಜಿಜ್ಞಾಸೆಗಳೇ ಇವೆ. ವಿಜ್ಞಾನ ಲೋಕದಲ್ಲಿ ಕನಸಿನ ಬಗ್ಗೆ ಹಲವಾರು ಸಿದ್ಧಾಂತಗಳಿವೆ. ಒಂದು ಸಿದ್ಧಾಂತದ ಪ್ರಕಾರ ಕನಸು ಹುಟ್ಟುವುದಕ್ಕೆ ಕಾರಣ ನಾವು ಎಚ್ಚರ ವಿದ್ದಾಗ ಮಾಡುವ ಯಾವುದೇ ಕಾರ್ಯಗಳ ನೆನಪುಗಳ ಗೊಂಚಲನ್ನು ಸುಪ್ತ ಮನಸ್ಸು ನಿದ್ದೆಯ ಸಮಯದಲ್ಲಿ ವ್ಯವಸ್ಥಿತವಾಗಿ ಶೇಖರಿಸಿ ಇಡಲು ಮತ್ತು ಬೇಡದ ನೆನಪನ್ನು

ಅಳಿಸಿಹಾಕಲು ಪ್ರಾರಂಭ ಮಾಡುತ್ತದೆ. ಇದರ ಚಟುವಟಿಕೆಯಲ್ಲಿ ಮೆದುಳಿನಲ್ಲಿ ಹೊರಡುವ ಎಲೆಕ್ಟಿಕಲ್ ಪ್ರಚೋದನೆ ಗಳನ್ನು ನಮ್ಮ ಮೆದುಳಿನ ಕಾರ್ಟೆಕ್ಸ್‌ಗಳು ಆ ಪ್ರಚೋದನೆಗಳಿಗೆ ತಕ್ಕಂತೆ ಚಿತ್ರಗಳನ್ನು ಮೂಡಿಸಿ ಅದಕ್ಕೆ ತಕ್ಕುದಾದ ಕತೆಯನ್ನು ಹೆಣೆಯುತ್ತದೆ. ಹಾಗಾಗಿಯೇ ನಮ್ಮ ಕನಸುಗಳು ತುಂಬಾ ವಿಚಿತ್ರವಾಗಿ, ಒಂದು ಘಟನೆಗೂ ಮತ್ತು ಇನ್ನೊಂದು ಘಟನೆಗೂ ಸಂಬಂಧವೇ ಇಲ್ಲದಂತೆ ಇರುತ್ತದೆ.

ಮೆದುಳಿನ ಜಾಗರೂಕ ಸ್ಥಿತಿ

ಒಂದು ಸಂಶೋಧನೆಯ ಪ್ರಕಾರ ಮನುಷ್ಯ ಎಚ್ಚರವಿದ್ದಾಗ ಮಾಡುವ ಕಾರ್ಯಗಳ ಆಧಾರದ ಮೇಲೆ ನಡೆಯುವ ಮೆದುಳಿನ ಎಲೆಕ್ಸಿಕಲ್ ಪ್ರಚೋದನೆಯನ್ನು ರಾತ್ರಿ ಮಲಗಿದ್ದಾಗ ಮೆದುಳು ಅನುಕರಣೆ ಮಾಡು ತ್ತದೆ ಎಂದು ತಿಳಿದುಬಂದಿದೆ. ಇನ್ನೊಂದು ಸಿದ್ದಾಂತದ ಪ್ರಕಾರ ಎಚ್ಚರದ ಸ್ಥಿತಿಯಲ್ಲಿ ನಮ್ಮನ್ನು ಯಾವುದೇ ಅಪಾಯದಿಂದ ಎಚ್ಚರಿಕೆಯಿಂದಿರಲು ಅಣಿಗೊಳಿಸುವುದಕ್ಕಾಗಿ ನಮ್ಮ ಸುಪ್ತ ಮನಸ್ಸು ಕನಸು ಗಳನ್ನು ಸೃಷ್ಟಿ

ಹಾಗಾದರೆ ನಮ್ಮ ಮುಖ್ಯವಾದ ಕನಸುಗಳು ಹುಟ್ಟಲು ಕಾರಣವೇನು ಎಂಬ ಪ್ರಶ್ನೆಗೆ, ಆದೈತ ವೇದಾಂತ ಹೇಳುವುದೇನೆಂದರೆ, ಹೇಗೆ ಜಾಗೃತ ಪ್ರಪಂಚದಲ್ಲಿ ದೇಹ, ಪ್ರಾಣ, ಮನಸ್ಸು, ಬುದ್ದಿಯ ದೆಸೆಯಿಂದ ಘಟನೆಗಳು ನಡೆವುದೋ ಅಂತೆಯೇ ಸ್ವಪ್ನ ಪ್ರಪಂಚದಲ್ಲೂ ಮನಸ್ಸು ಮತ್ತು ಬುದ್ದಿಯ ದೆಸೆಯಿಂದ ಕನಸುಗಳು ಹುಟ್ಟುತ್ತವೆ ಎಂದಷ್ಟೇ ಹೇಳುತ್ತದೆ. ಎಲ್ಲವೂ ನಮ್ಮ ಪಂಚಕೋಶಗಳ ಸೃಷ್ಟಿಯೇ ಆಗಿದೆ. ಪಂಚ ಕೋಶಗಳೆಂದರೆ ಅನ್ನಮಯಕೋಶ(ದೇಹ), ಪ್ರಾಣಮಯಕೋಶ (ಪ್ರಾಣ), ಮನೋಮಯಕೋಶ(ಮನಸ್ಸು), ವಿಜ್ಞಾನಮಯ ಕೋಶ (ಬುದ್ದಿ) ಮತ್ತು ಆನಂದಮಯಕೋಶ(ನಮಗೆ ಆಗುವ ಆನಂದ ಮತ್ತು ತೃಪ್ತಿಯ ಭಾವ) ಎಂಬ ಐದು ಕೋಶಗಳಿಂದಾದ ಶಾಶ್ವತವಲ್ಲದ ಮತ್ತು ತುರ್ಯದಿಂದ ಸ್ವಪ್ರಕಾಶಗೊಂಡ ಪೊರೆಗಳು ಎನ್ನಬಹುದು. ವಿಜ್ಞಾನ ಭೌತ ಅಂಶಗಳ ಮೇಲೆ ಕನಸನ್ನು ವಿಶ್ಲೇಷಿಸಿದರೆ, ಭಾರತೀಯ ತತ್ವಶಾಸ್ತ್ರ ಅಧ್ಯಾತ್ಮದ ನೆಲೆಗಟ್ಟಿನಿಂದ ಕನಸನ್ನು ನೋಡುತ್ತದೆ. ವಿಜ್ಞಾನ ಮೆದುಳಿನ ಬಗ್ಗೆ ತಿಳಿಯುವ ಸಲುವಾಗಿ ಕನಸಿನ ಬಗೆಗೆ ಅಭ್ಯಸಿಸಿದರೆ, ಭಾರತೀಯ ತತ್ವಶಾಸ್ತ್ರ ನನ್ನನ್ನು ತಿಳಿಯುವ ಮಾರ್ಗದಲ್ಲಿ ಒಂದು ಅಡ್ಡಿ ಎಂದು ಕನಸನ್ನು ಆಳವಾಗಿ ಅಭ್ಯಸಿಸಿಲ್ಲ ಮತ್ತು ಅದರ ಅವಶ್ಯಕತೆ ನಮ್ಮ

ದಾರ್ಶನಿಕರಿಗೆ ಇರಲಿಲ್ಲ, ಅಥವಾ ಅದರ ಬಗ್ಗೆ ತಿಳಿದು ಅದುಅಮುಖ್ಯ ವೆಂದು ಕಡೆಗಣಿಸಿರಲೂಬಹುದೇನೋ ಗೊತ್ತಿಲ್ಲ,

 

ReplyForward

Add reaction

 

Disclaimer: The views expressed in this article are solely those of the author and do not represent the views of Ayra or Ayra Technologies. The information provided has not been independently verified. It is not intended as medical advice. Readers should consult a healthcare professional or doctor before making any health or wellness decisions.
Category:Health and Wellness



ProfileImg

Written by Balu Kukke8277