ಕಿಂಗ್ ಕೊಹ್ಲಿ ಸಂಪತ್ತು ಎಷ್ಟು ಗೊತ್ತಾ?

ProfileImg
29 May '24
2 min read


image

ತನ್ನ ಅಪ್ರತಿಮ ಆಟದಿಂದ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದಿರುವ ವಿರಾಟ್ ಕೊಹ್ಲಿ ಅವರು ವಾರ್ಷಿಕವಾಗಿ ಎಷ್ಟು  ಸಂಬಳ ಪಡೆಯುತ್ತಾರೆ ಎನ್ನುವ ಕುತೂಹಲ ಹಲವರಿಗೆ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ.

ದೆಹಲಿಯಲ್ಲಿ ಜನಿಸಿದ ವಿರಾಟ್ ಕೋಹ್ಲಿ ಅವರು 2008ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು. ಉತ್ತುಂಗ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ ಅವರು ಭಾರತವನ್ನು ಹಲವಾರು ಪಂದ್ಯಗಳಲ್ಲಿ ಗೆಲ್ಲಿಸಿದ್ದಾರೆ. ಭಾರತದ ಅವಿಭಾಜ್ಯ ಆಟಗಾರ ಆಗಿರುವ ವಿರಾಟ್ ಕೊಹ್ಲಿ ಭಾರತದ ಶ್ರೀಮಂತ ಕ್ರಿಕೆಟಿಗ ಕೂಡಾ ಹೌದು!

ಕೊಹ್ಲಿ ಪಡೆಯುವ ಸಂಬಳ ಎಷ್ಟು?

ಬಿಸಿಸಿಐ ವತಿಯಿಂದ ಕ್ರಿಕೆಟಿಗರಿಗೆ ಗ್ರೇಡ್ ಆಧಾರದಲ್ಲಿ ವಾರ್ಷಿಕ ಸಂಬಳ ನೀಡಲಾಗುತ್ತದೆ. ಕೊಹ್ಲಿ ಅವರು A+ ಆಟಗಾರ ಆಗಿದ್ದು, ಅವರಿಗೆ ವಾರ್ಷಿಕವಾಗಿ ಏಳು ಕೋಟಿ ರೂಪಾಯಿಯನ್ನು ಸಂಬಳ ಆಗಿ ಬಿಸಿಸಿಐ ನೀಡುತ್ತಿದೆ. ಕೊಹ್ಲಿ ಜೊತೆಗೆ ಈ ಪಟ್ಟಿಯಲ್ಲಿ ರೋಹಿತ್ ಶರ್ಮ ಹಾಗೂ ಜಸ್ಪ್ರೀತ್ ಭೂಮ್ರಾ ಇದ್ದಾರೆ.


ಭಾರತ ತಂಡದ A ಗ್ರೇಡ್ ಆಟಗಾರರು ವಾರ್ಷಿಕವಾಗಿ 5 ಕೋಟಿ ರೂಪಾಯಿ ಪಡೆಯುತ್ತಾರೆ. ಗ್ರೇಡ್ ಬಿ ಆಟಗಾರರಿಗೆ ವಾರ್ಷಿಕವಾಗಿ ಮೂರು ಕೋಟಿ ರೂಪಾಯಿ ನೀಡಲಾಗುತ್ತದೆ. ಗ್ರೇಡ್ ಸಿ ಆಟಗಾರರಿಗೆ ವಾರ್ಷಿಕವಾಗಿ ಒಂದು ಕೋಟಿ ರೂಪಾಯಿಯನ್ನು ಬಿಸಿಸಿಐ ಸಂಬಳವಾಗಿ ನೀಡುತ್ತಿದೆ. 

ಕೊಹ್ಲಿ ಅವರು  ಪಂದ್ಯ ಒಂದಕ್ಕೆ ಟೆಸ್ಟ್ - 15 ಲಕ್ಷ ರೂಪಾಯಿ, ಏಕ ದಿನ - 6 ಲಕ್ಷ ರೂಪಾಯಿ, ಟಿ20 - 3 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ.


ಸಿಗುತ್ತದೆ ವಿಶೇಷ ಬಹುಮಾನಗಳು:

ಬಿಸಿಸಿಐ ವಿಶೇಷ ಸಾಧನೆಗಾಗಿ ವಿಶೇಷ ಬಹುಮಾನ ಕೂಡಾ ನೀಡುತ್ತಿದೆ. ಟೆಸ್ಟ್ ಅಥವಾ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದಾಗ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ.
ಟೆಸ್ಟ್ನಲ್ಲಿ ದ್ವಿ ಶತಕ ಬಾರಿಸಿದಾಗ 7 ಲಕ್ಷ ರೂಪಾಯಿ ಬಹುಮಾನ, ಟೆಸ್ಟ್, ಏಕದಿನ ಹಾಗೂ ಟಿ ಟ್ವೆಂಟಿಯಲ್ಲಿ ಐದು ವಿಕೆಟ್ ಪಡೆದಾಗ 5 ಲಕ್ಷ ಬಹುಮಾನ, ಟೆಸ್ಟ್ನಲ್ಲಿ 10 ವಿಕೆಟ್ ಪಡೆದ ಸಾಧನೆ  ಮಾಡಿದಾಗ 7 ಲಕ್ಷ ರೂಪಾಯಿಯನ್ನು ಬಹುಮಾನವಾಗಿ ನೀಡಲಾಗುತ್ತದೆ.


ಅಪ್ರತಿಮ ಪ್ರದರ್ಶನ ನೀಡುವ ಮೂಲಕ ಕೊಹ್ಲಿ ಅವರು ಹಲವು ಕೋಟಿ ರೂಪಾಯಿಗಳ ಬಹುಮಾನವನ್ನು ವಾರ್ಷಿಕವಾಗಿ ಪಡೆಯುತ್ತಿದ್ದಾರೆ.

 

ಜಾಹೀರಾತು ಆದಾಯ ಬಲು ದೊಡ್ಡದು: 
2022ರಲ್ಲಿ ಕೋಹ್ಲಿ ಅವರು ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸುವಲ್ಲಿ ವಿಫಲರಾದರು. ಆದರೆ ಜಾಹೀರಾತು ಮೂಲಕ ಅವರು ಕೋಟ್ಯಂತರ ರೂಪಾಯಿಯನ್ನು ಪಡೆದಿದ್ದಾರೆ.


ಕೊಹ್ಲಿ ಅವರು ಜಾಹೀರಾತು ಮೂಲಕ ಹಣ ಪಡೆಯುವ ವಿಶ್ವದ ಅಗ್ರ 61ನೇ ಆಟಗಾರ ಎಂದು 2022 sportico ಪಟ್ಟಿ ಯಲ್ಲಿ ಹೇಳಲಾಗಿದೆ. ಅದರ ಪ್ರಕಾರ ಕೊಹ್ಲಿ ಅವರು 33.9 ಮಿಲಿಯನ್ ಡಾಲರ್ ಅಥವಾ 261.03 ಕೋಟಿ ರೂಪಾಯಿಗಳನ್ನು ಜಾಹೀರಾತುಗಳ ಮೂಲಕ ಪಡೆದಿದ್ದಾರೆ.


ಕೊಹ್ಲಿ ಅವರು 30ಕ್ಕೂ ಹೆಚ್ಚು ಬ್ರಾಂಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವುಗಳಲ್ಲಿ ಪೂಮಾ ಸ್ಪೋರ್ಟ್ಸ್ ವೇರ್, ಎಂ ಆರ್ ಎಫ್ ಟೈಯರ್ಸ್, ವಿವೋ ಸ್ಮಾರ್ಟ್ ಫೋನ್, ಆಡಿ , Myntra ಪ್ರಮುಖ ಆಗಿವೆ.


ಉತ್ತಮ ಪ್ರದರ್ಶನ ತೋರುತ್ತಿರುವ ವಿರಾಟ್ ಕೊಹ್ಲಿ ಅವರು ರನ್ ಗಳಿಕೆಯಲ್ಲಿ ಮುನ್ನುಗುತ್ತಿದ್ದಾರೆ. ಭಾರತ ತಂಡಕ್ಕೆ ಇನ್ನು ಹಲವು ವರ್ಷಗಳ ಕಾಲ ಆಡುವ ಸಾಮರ್ಥ್ಯ ಇರುವ ಅವರು, ರನ್ ಗಳಿಕೆಯ ಜೊತೆಗೆ ತಮ್ಮ ಆದಾಯದ ಗಳಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದು ಖಚಿತ ಆಗಿದೆ.

-ಅರುಣ್ ಕಿಲ್ಲೂರು

Category:SportsProfileImg

Written by Arun Killuru

Author,Journalist,Photographer