ನಿಮಗೂ ಇಂತಹ ಅನುಭವ ಆಗಿದೆಯೇ?
ಸ್ವಲ್ಪ ಹೊತ್ತಿನ ಮೊದಲು ಪರಿಚಿತರೊಬ್ಬರ( ಮಹಿಳೆಯ) ಫೋನ್ ಬಂತು..ನಿಮ್ಮ ಮನೆಯಿಂದ ನ್ಯೂ ತಿಪ್ಪ ಸಂದ್ರ ರಸ್ತೆಯಲ್ಲಿ ಇರುವ . ಎಂಡಿಪಿ ಕಾಫಿ ಹೌಸ್ ಗೆ ಎಷ್ಟು ದೂರ ಇದೆ ಎಂದು ಕೇಳಿದರು.ಗೊತ್ತಿಲ್ಲ ಎಂದೆ ಮತ್ತೆ ಬೆಳಗ್ಗೆ ಸ್ಪಾನಿಷ್ ಗಾದೆಗಳು ಪುಸ್ತಕ ಬಿಡುಗಡೆ ಗೆ ಹೋಗಿ ಬಂದೆ ಎಂದು ಫೇಸ್ ಬುಕ್ ನಲ್ಲಿ ಹಾಕಿದ್ದೀರಿ ಎಂದರು ಹೌದು ಕ್ಯಾಬ್ ನಲ್ಲಿ ಹೋಗಿ ಬಂದೆ ಆದರೆ ದೂರ ಎಷ್ಟೆಂದು ಗಮನಿಸಿಲ್ಲ ಎಂದೆ.ಕ್ಯಾಬ್ ನಲ್ಲಿ ಹೋಗಿ ಬರಲು ಎಷ್ಟು ಖರ್ಚಾಯಿತು ಎಂದು ಕೇಳಿದರು ಎಂಟುನೂರೈವತ್ತು ರೂಗಳಷ್ಟು ಆಯಿತು.exact ಗೊತ್ತಿಲ್ಲ ಎಂದು ಹೇಳಿದೆ.ಕ್ಯಾಬ್ ಗೆ ಎಷ್ಟು ಕೊಟ್ಟಿದ್ದೀರೆಂದು ಗೊತ್ತಿಲ್ಕವೇ ಎಂದು ವ್ಯಂಗ್ಯ ಮಾಡಿದರು..ನಾನು ಓಲಾ ಮನಿ ಬಳಸುತ್ತೇನೆ ಹಾಗಾಗಿ exact ಆಗಿ ಎಷ್ಟೆಂದು ಗಮನಿಸಿಲ್ಲ ಎಂದು ಹೇಳಿದೆ.
ಹೋ ಹಾಗಾ ! ಅಷ್ಟು ಖರ್ಚು ಮಾಡಿಕೊಂಡು ಹೋಗುವ ಅಗತ್ಯ ಇತ್ತಾ ಕೇಳಿದರು.ಈಗ ನಿಜಕ್ಕೂ ನನಗೆ ಸಿಟ್ಟು ಬಂತು. ಅಗತ್ಯ ಇದೆಯೋ ಇಲ್ಲವೋ ನನಗೆ ಬಿಟ್ಟ ವಿಚಾರ ದುಡ್ಡು ನನ್ನದು ನನಗಿಷ್ಟ ಕಡೆ ಹೋಗಿ ಬರುತ್ತೇನೆ ಅದರ ತನಿಖೆ ಬೇರೆಯವರಿಗೆ ಅನಗತ್ಯ ವಿಚಾರ ಎಂದು ಒಂಚೂರು ಖಾರವಾಗಿಯೇ ಹೇಳಿದೆ.. ಹಾಗಲ್ಲ ನಿಮ್ಮನ್ನು ಜನ ಆಡಿಕೊಳ್ಳಬಾರದಲ್ಲ ಅದಕ್ಕೆ ಹೇಳಿದೆ ಅಷ್ಟೇ ಎಂದು ಬಹಳ ಒಳ್ಳೆಯವರ ಹಾಗೆ ನುಡಿದರು.ನನಗೆ "ಉಚಿತಾನುಚಿತತೆಯ ಬಗ್ಗೆ ಸ್ಪಷ್ಟ ಅರಿವಿದೆ ನಿಮ್ಮ ಕಾಳಜಿಯ ಅಗತ್ಯವಿಲ್ಲ" ಎಂದು ಹೇಳಿ ಫೋನ್ ಕಟ್ ಮಾಡಿದೆ.ಅಲ್ಲಾ ಕೆಲವು ಜನರಿಗೇಕೆ ಅಧಿಕ ಪ್ರಸಂಗ ಎಂದು ಗೊತ್ತಾಗುವುದಿಲ್ಲ ನನಗೆ..ನಾವೆಲ್ಲಿಗೆ ಬೇಕಾದರೂ ಹೋಗಿ ಬರ್ತೇವೆ ,ನಮಗೆ ಯಾರು ಹಿತೈಷಿಗಳು, ಯಾರು ಹಿತಶತ್ರುಗಳು ಎಂಬುದರ ಅರಿವು ನಮಗಿದೆ .. ಇದು ತನಕ ಒಂದೇ ಒಂದು ಬಾರಿ ಕೂಡ ಪ್ರಸಾದ್ ( ನನ್ನ ಹಸ್ಬೆಂಡ್) ಎಲ್ಲಿಗೆ ಹೋದೆ ಯಾಕೆ ಹೋದೆ ಎಂದು ಆಕ್ಷೇಪಿಸಿಲ್ಲ ನನ್ನ ಮೊಬೈಲ್ ಗೆ ಓಲಾ ಮನಿ ತುಂಬುವವರು ಕೂಡ ಪ್ರಸಾದ್ , ಹಾಗಿರುವಾಗ ಇವರುಗಳಿಗೇಕೆ ಅಧಿಕ ಪ್ರಸಂಗ ? ನಮ್ಮನ್ನು ನಮ್ಮಷ್ಟಕ್ಕೆ ಬದುಕಲು ಬಿಡದೆ ಅಧಿಕ ಪ್ರಸಂಗ ಮಾಡುವವರ ಬಗ್ಗೆ ನನಗೆ ನಿಜಕ್ಕೂ ಸಿಟ್ಟು ಮಾತ್ರವಲ್ಲ ಜುಗುಪ್ಸೆ ಉಂಟಾಗುತ್ತದೆ ,ನಿಮಗೆಲ್ಲರಿಗೂ ಇಂತಹ ಅನುಭವ ಆಗುತ್ತಾ ಅಥವಾ ನನಗೆ ಮಾತ್ರವಾ ?
ಡಾ.ಲಕ್ಷ್ಮಿ ಜಿ ಪ್ರಸಾದ
(ಸೂಚನೆ ನಾಲ್ಕೈದು. ವರ್ಷಗಳ ಹಿಂದಿನ ಅನುಭವ ಕಥನ ಇದು)