ಮಳೆಗಾಲದಲ್ಲಿ ಅನಾರೋಗ್ಯದಿಂದ ದೂರ ಇರಲು ಹೀಗೆ ಮಾಡಿ..

ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಇಲ್ಲಿವೆ ಸಲಹೆಗಳು..

ProfileImg
05 Sep '23
4 min read


image

ಹವಾಮಾನ ಬದಲಾವಣೆಯಿಂದ ಅನಾರೋಗ್ಯ ಎದುರಾಗುವುದು ಸಾಮಾನ್ಯ. ಅದರಲ್ಲೂ ಮಳೆಗಾಲದಲ್ಲಿ ಅನಾರೋಗ್ಯ ಎದುರಾಗುವುದು ಹೆಚ್ಚು, ಆದರೆ, ಅದರಿಂದ ದೂರ ಉಳಿಯಬೇಕೆಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅತ್ಯಗತ್ಯ. ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಬಹಳ ಮುಖ್ಯವಾಗುತ್ತದೆ.

ರೋಗನಿರೋಧಕ ಶಕ್ತಿಯು ನಮ್ಮ ದೇಹವನ್ನು ಸಾಂಕ್ರಾಮಿಕ ಜೀವಿಗಳಿಂದ ರಕ್ಷಿಸುತ್ತದೆ. ರೋಗನಿರೋಧಕ ಶಕ್ತಿಯ ಹೊರತು ನಮ್ಮ ದೇಹಕ್ಕೆ ಹಲವಾರು ರೀತಿಯ ಬ್ಯಾಕ್ಟೀರಿಯಗಳು, ವೈರಸ್ಗಳು ಮತ್ತು ಇತರ ರೋಗಕಾರಕಗಳು ನಮ್ಮ ದೇಹವನ್ನು ಆಕ್ರಮಣ ಮಾಡುತ್ತವೆ. ಅಂದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯು ಉತ್ತಮ ಮಟ್ಟದಲ್ಲಿ ಇದ್ದರೆ, ಪದೇಪದೇ ಕಾಯಿಲೆಗೆ ಬೀಳುವ ಸಂದರ್ಭ ಎದುರಾಗುವುದಿಲ್ಲ. ಆದ್ದರಿಂದ ಒಬ್ಬ ವ್ಯಕ್ತಿಯು ಆರೋಗ್ಯಯುತವಾಗಿ ಇರಬೇಕೆಂದರೆ ಆ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿಯ ಮಟ್ಟ ಹೆಚ್ಚಿನ ಪ್ರಮಾಣದಲ್ಲಿ ಇರಬೇಕಾಗುತ್ತದೆ.

ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಆಗಾಗ್ಗೆ ಜ್ವರ, ಕೆಮ್ಮು ಮತ್ತು ಶೀತ, ಅತಿಯಾದ ಆಯಾಸ, ಗಾಯಗಳು ಒಣಗದೆ ಇರುವುದು, ಸೋಮಾರಿತನ, ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ.

ಈ ಲಕ್ಷಣಗಳು ಇರುವವರು ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಇಲ್ಲದಿದ್ದರೆ, ಅವುಗಳೊಂದಿಗೆ ಅನೇಕ ರೋಗಗಳು ಶುರುವಾಗುವ ಅಪಾಯವಿರುತ್ತದೆ. ಹೀಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅತ್ಯಗತ್ಯವಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಬಹಳ ಮುಖ್ಯವಾಗುತ್ತದೆ.

ದೇಹದ ಎಲ್ಲಾ ಜೀವಕೋಶಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಪೌಷ್ಟಿಕಾಂಶದ ಅಗತ್ಯ ಹೆಚ್ಚಾಗಿರುತ್ತದೆ. ದೇಹಕ್ಕೆ ಸೋಂಕು ತಗುಲಿದ ಸಂದರ್ಭದಲ್ಲಿ ಈ ಪೌಷ್ಟಿಕಾಂಶ ದೇಹಕ್ಕೆ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಅತ್ಯಗತ್ಯವಾಗಿರುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮೊದಲು ನಮ್ಮ ಆಹಾರದ ಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಜಂಕ್ ಫುಡ್ ಗಳನ್ನು ತೊರೆದು, ಸೊಪ್ಪು, ತರಕಾರಿ, ಹಣ್ಣುಗಳ ಸೇವನೆ ಮಾಡಬೇಕು.

ಇವಷ್ಟೇ ಅಲ್ಲದೆ, ಶುಂಠಿ, ಲವಂಗ, ಕರಿಮೆಣಸು, ದಾಲ್ಚಿನ್ನಿ ಮತ್ತು ಅರಿಶಿನವನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದಲೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಮೊಟ್ಟೆಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಮೀನು ಮತ್ತು ಚಿಕನ್ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಈ ಮೂರೂ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತವೆ.

ಪ್ರತಿದಿನ ಬೆಳಿಗ್ಗೆ ಅರಿಶಿನವನ್ನು ಸೇವಿಸಿ ಹಾಗೂ ಆಹಾರವನ್ನು ಸೇವಿಸುವುದಕ್ಕೂ ಮೊದಲು ಕನಿಷ್ಟ ಒಂದು ಗಂಟೆಯವರೆಗಾದರೂ ಹೊಟ್ಟೆಯಲ್ಲಿರುವಂತೆ ನೋಡಿಕೊಳ್ಳಿ. ಇದು ನಿಮಗೆ ಅದ್ಭುತಗಳನ್ನೇ ಮಾಡಬಹುದು. ಸಾವಯವ ಅರಿಶಿನ ಬಳಸುವುದು ಸೂಕ್ತ.

ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು, ನಿಂಬೆಹಣ್ಣು, ದ್ರಾಕ್ಷಿ ಹಣ್ಣುಗಳನ್ನು ಸೇವನೆ ಮಾಡಬೇಕು. ಹುಳಿ ಮತ್ತು ಸಿಹಿ ಮಿಶ್ರಣದ ಈ ಹಣ್ಣುಗಳು ನಮ್ಮ ದೇಹದಲ್ಲಿ ಸೋಂಕುಗಳ ವಿರುದ್ಧ ಹೋರಾಡುವ ಗುಣವನ್ನು ಪಡೆದುಕೊಂಡಿರುತ್ತದೆ. ಇದರ ಸೇವನೆಯಿಂದ ನಮಗೆ ಕೆಮ್ಮು, ಕಫ, ಶೀತ, ನೆಗಡಿ ಆದಂತಹ ಸಂದರ್ಭದಲ್ಲಿ ಅಥವಾ ಮಳೆಗಾಲ ಜೊತೆಗೆ ಚಳಿಗಾಲದ ಸಮಯದಲ್ಲಿ ನಮ್ಮ ದೇಹದ ತಾಪಮಾನವನ್ನು ಹೆಚ್ಚು ಮಾಡಿ ಸೋಂಕುಗಳಿಗೆ ದೇಹದಲ್ಲಿ ಜಾಗ ಇಲ್ಲದಂತೆ ಮಾಡುತ್ತದೆ.

ಇದರ ಜೊತೆಗೆ ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಿ ಜೊತೆಗೆ ಬಿಳಿ ರಕ್ತಕಣಗಳ ಸಂಖ್ಯೆಯನ್ನು ಅಭಿವೃದ್ಧಿಪಡಿಸಿ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಮೊಳಕೆ ಕಾಳುಗಳು, ಬಾದಾಮಿ, ವಾಲ್ನಟ್ಸ್, ಗೋಡಂಬಿ, ಕುಂಬಳಕಾಯಿ ಬೀಜಗಳು, ಚಿಯಾ ಬೀಜಗಳು, ಅಗಸೆ ಬೀಜಗಳ ಸೇವನೆ ಮೂಲಕವೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಹೂಕೋಸು, ಎಲೆಕೋಸು ಜಾತಿಗೆ ಸೇರಿದ ಬ್ರೊಕೋಲಿ ರೋಗನಿರೋಧಕ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಪ್ರಮುಖವಾಗಿ ಕೆಲಸ ಮಾಡಲಿದೆ. ಮುಖ್ಯವಾಗಿ ಇದರಲ್ಲಿ ವಿಟಮಿನ್ ಎ ಅಂಶ, ವಿಟಮಿನ್ ಸಿ, ವಿಟಮಿನ್ ಇ ಮತ್ತು ಅನೇಕ ಬಗೆಯ ದೇಹಕ್ಕೆ ಉಪಯುಕ್ತವಾದ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ಇದರಲ್ಲಿ ಹೇರಳವಾಗಿರುತ್ತದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನೂ ಇದು ಹೆಚ್ಚಿಸುತ್ತದೆ. ಇದರೊಂದಿಗೆ, ಹಸಿರು ತರಕಾರಿಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದಕ್ಕಾಗಿ, ಶತಾವರಿ ಮತ್ತು ಸಲಾಡ್ ಅನ್ನು ನಿಯಮಿತವಾಗಿ ಸೇವಿಸಬೇಕು.

ಮಹಾಬಿಲ್ವ ಪತ್ರೆ ಎಲೆಗಳು ಸಾಮಾನ್ಯವಾಗಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಂಡುಬರುತ್ತದೆ. ಪ್ರತಿದಿನ ಬೆಳಿಗ್ಗೆ ಮೂರರಿಂದ ಐದು ಎಲೆಗಳನ್ನು ತಿಂದರೆ ಅದು ನಿಮ್ಮ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ.

ಸಾಂಪ್ರದಾಯಿಕ ಕೊಡುಗೆಗಳಾಗಿ ಬಂದಿರುವ ಜೀವ ಲೇಹ್ಯಂ ಅಥವಾ ಚ್ಯವನಪ್ರಾಶ್ ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.  ಮನೆಯಲ್ಲಿ ಅರವತ್ತಕ್ಕಿಂತ ಹೆಚ್ಚು ವಯಸ್ಸಿನವರಿದ್ದರೆ, ಅವರು ಲೇಹ್ಯವನ್ನು ಸೇವಿಸುವುದು ಒಳ್ಳೆಯದು.

ನೆಲ್ಲಿಕಾಯಿಯನ್ನು ಜೇನುತುಪ್ಪ ಹಾಗೂ ಕಾಳುಮೆಣಸಿನ ಜೊತೆ ರಾತ್ರಿಯಿಡಿ ನೆನಸಿಡಿ. ಇದನ್ನು ದಿನಕ್ಕೆ ಮೂರು ಬಾರಿ ಮೂರು ಚಮಚಗಳಷ್ಟು ಸೇವಿಸಿ. ಖಾಲಿ ಹೊಟ್ಟೆಯಲ್ಲಿ, ಸೇವಿಸಿದರೆ ಉತ್ತಮ. ಇದರಿಂದ  ಎಂಟು ವಾರಗಳಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯಲ್ಲಿ ಗಮನಾರ್ಹ ಹೆಚ್ಚಳವಾಗುತ್ತದೆ.

ಒಂದು ಸುಲಭ ವಿಧಾನವೆಂದರೆ ದೈಹಿಕವಾಗಿ ಚುರುಕಾಗಿರುವುದು.  ಕೆಲವು ವಾರಗಳನ್ನು ದೇಹಾರೋಗ್ಯಕ್ಕೆ ಬಳಸಿಕೊಳ್ಳುವುದು ಉತ್ತಮ. ಬೇರೇನೂ ಗೊತ್ತಿಲ್ಲವೆಂದರೆ ಪ್ರತಿದಿನ ಬೇರೆ ಬೇರೆ ಸಮಯಗಳಲ್ಲಿ ಜಾಗ್ ಮಾಡಿ – ಒಂದು ಸಲಕ್ಕೆ ಹದಿನೈದು ನಿಮಿಷಗಳಂತೆ, ದಿನಕ್ಕೆ ಐದು –ಆರು ಬಾರಿ ಮಾಡುವುದು. ದೇಹ ಆಗ ಎಲ್ಲವನ್ನೂ ಚೆನ್ನಾಗಿ ನಿರ್ವಹಿಸುವ ಪ್ರಯತ್ನ ಮಾಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸುವವರು ಮಸಾಲೆಯುಕ್ತ ಆಹಾರ, ಎಣ್ಣೆಯುಕ್ತ ಆಹಾರ, ಕರಿದ ಆಹಾರವನ್ನು ಸೇವಿಸದಿರುವುದು ಉತ್ತಮ. ಇದರ ಬದಲಿಗೆ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದು ಉತ್ತಮ.

ವಿಟಮಿನ್ ಸಿ ಅಂಶದ ಪ್ರಮಾಣ ಮಾವಿನಹಣ್ಣು ಮತ್ತು ಸ್ಟ್ರಾಬೆರಿ ಹಣ್ಣುಗಳಲ್ಲಿ ಹೆಚ್ಚು ಸಿಗುವುದರಿಂದ ಜೊತೆಗೆ ಆಂಟಿಆಕ್ಸಿಡೆಂಟ್ ಅಂಶಗಳು ಸಹ ಇದರಲ್ಲಿ ಇರುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಯಲ್ಲಿ ಮ್ಯಾಂಗನೀಸ್, ಫೋಲೆಟ್, ಪೊಟ್ಯಾಶಿಯಂ ಮತ್ತು ಇನ್ನಿತರ ಅಗತ್ಯವಾದ ಪೌಷ್ಟಿಕ ಸತ್ವಗಳು ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಕ್ರಮೇಣವಾಗಿ ಹೆಚ್ಚಾಗುತ್ತದೆ.
ಅಗತ್ಯವಾದ ವಿಟಮಿನ್ ಅಂಶಗಳು ಮತ್ತು ಪೌಷ್ಟಿಕ ಸತ್ವಗಳನ್ನು ಜೊತೆಗೆ ಪೊಟ್ಯಾಷಿಯಂ, ವಿಟಮಿನ್ ಡಿ, ವಿಟಮಿನ್ ಕೆ, ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶಗಳು ಎಲ್ಲರೂ ಸೇವನೆ ಮಾಡಲು ಬಯಸುವ ಹಸಿರೆಲೆ ತರಕಾರಿಗಳಲ್ಲಿ ಹೇರಳವಾಗಿ ಸಿಗುತ್ತದೆ.

ಸಾಕಷ್ಟು ನಿದ್ರೆ ಅತ್ಯಗತ್ಯ
ಅಸಮರ್ಪಕ ಮತ್ತು ಕಳಪೆ ನಿದ್ರೆಯು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಉತ್ತಮ ರೋಗನಿರೋಧಕ ಶಕ್ತಿಗೆ ನಿಮ್ಮ ನಿದ್ರೆ ಬಹಳ ಮುಖ್ಯ. ಅನಾರೋಗ್ಯದಿಂದ ಬಳಲುತ್ತಿರುವಾಗ, ಹೆಚ್ಚು ನಿದ್ರೆ ಮಾಡುವುದು ಉತ್ತಮ. ಅದೇ ರೀತಿಯಲ್ಲಿ, ಗುಣಮಟ್ಟದ ನಿದ್ರೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ವಯಸ್ಕರು ದಿನಕ್ಕೆ 7 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಬೇಕು. ಮಕ್ಕಳಿಗೆ, 8 ರಿಂದ 10 ಗಂಟೆಗಳ ನಿದ್ರೆ ಬಹಳ ಮುಖ್ಯ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನಿದ್ರೆ ಸಿಕ್ಕಾಗ ಮಾತ್ರ ಉತ್ತಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

ಸಸ್ಯ ಆಧಾರಿತ ಆಹಾರ ಸೇವಿಸಿ
ಹಣ್ಣುಗಳು, ತರಕಾರಿಗಳು, ಬೀಜಗಳು ಮತ್ತು ಬೀನ್ಸ್ ನಂತಹ ಆಹಾರಗಳು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ, ಇದು ದೇಹವು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ. ಹೃದಯ ಸಮಸ್ಯೆಗಳು, ಅಲ್ಝೈಮರ್ಸ್ ಮತ್ತು ಕ್ಯಾನ್ಸರ್ ನಂತಹ ರೋಗಗಳ ಪರಿಣಾಮಗಳನ್ನು ಕಡಿಮೆ ಮಾಡಲು ಸಸ್ಯ ಆಧಾರಿತ ಆಹಾರಗಳು ಸಹಾಯಕವಾಗಿವೆ. ಇದರಲ್ಲಿ ನಾರಿನಂಶ ಸಮೃದ್ಧವಾಗಿರೋದ್ರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಾಡರೇಟರ್ ವ್ಯಾಯಾಮ ಮಾಡಿ
ಯಾವಾಗಲೂ ದುರ್ಬಲತೆಯನ್ನು ಅನುಭವಿಸುವುದು ಅಥವಾ ಸೋಮಾರಿಯ ಹಾಗೇ ಮಲಗೋದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವ್ಯಾಯಾಮವು ಅತ್ಯುತ್ತಮ ಮಾರ್ಗವಾಗಿದೆ. ನೀವು ಭಾರವಾದ ವ್ಯಾಯಾಮಗಳನ್ನು ಮಾಡಲು ಸಾಧ್ಯವಾಗದಿದ್ದರೆ, ಮೋಡ್ರೆಟ್ ವ್ಯಾಯಾಮಗಳನ್ನು ಮಾಡಿ. ನೀವು ಸುಲಭವಾಗಿ ಮಾಡಬಹುದಾದ ವ್ಯಾಯಾಮಗಳನ್ನು ಆರಿಸಿ. ಅವುಗಳೆಂದರೆ ಚುರುಕಾದ ನಡಿಗೆ, ಸೈಕ್ಲಿಂಗ್, ಜಾಗಿಂಗ್, ಈಜು ಅಥವಾ ಜಾಗಿಂಗ್. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಈ ಆಹಾರಗಳಿಂದ ದೂರವಿರಿ
ಕಾರ್ಬೋನೇಟ್‌ ಅಂಶವಿರುವ ಪಾನೀಯಗಳು, ತಂಪು ಪಾನೀಯ, ಸ್ವ್ಕ್ಯಾಶ್‌ಗಳಿಂದ ದೂರವಿರಿ.
ರಸ್ತೆ ಬದಿ ಆಹಾರ, ಹಸಿ ಪದಾರ್ಥ, ಹಳಸಿದ ಆಹಾರ ಸೇವನೆಗೆ ಕಡಿವಾಣ ಹಾಕಿ.
ಕರಿದ ಹಾಗೂ ಡೀಪ್‌ ಫ್ರೈ ಮಾಡಿದ ಆಹಾರಗಳ ಸೇವನೆಗೆ ಕಡಿವಾಣ ಹಾಕಿ.
ಬೇಕರಿ ಉತ್ಪನ್ನಗಳು, ಮೈದಾ ಸೇರಿಸಿದ ಆಹಾರ, ಪಿಜ್ಜಾ, ಪಸ್ತಾ, ಬರ್ಗರ್‌ ಮತ್ತು ಫ್ರೈಸ್‌ಗಳಂತಹ ಆಹಾರಗಳ ಸೇವನೆಗೆ ಕಡಿವಾಣ ಹಾಕಿ.
ಚೀಸ್‌ ಮಯೋನಿಸ್‌ಗಳಿಂದ ದೂರವಿರಿ.
ಮದ್ಯಪಾನ ತ್ಯಜಿಸಿ.
ಧೂಮಪಾನದಿಂದ ದೂರವಿರಿ.

ದೇಹವೇ ದೇಗುಲ ಎನ್ನುವಂತೆ ದೇಹವನ್ನು ಸ್ವಾಸ್ತ್ಯವಾಗಿ ಇಟ್ಟುಕೊಳ್ಳುವುದು ನಮ್ಮ ಮುಖ್ಯ ಕಾರ್ಯವಾಗಿದೆ. ಅದಕ್ಕಾಗಿ ಅಗತ್ಯವಾದ ಒಳ್ಳೆಯ ಆಹಾರವನ್ನು ಸೇವಿಸಿ. ಸಮಯಕ್ಕೆ ಸರಿಯಾಗಿ ವ್ಯಾಯಾಮ ಮಾಡಿ. 

Disclaimer: The views expressed in this article are solely those of the author and do not represent the views of Ayra or Ayra Technologies. The information provided has not been independently verified. It is not intended as medical advice. Readers should consult a healthcare professional or doctor before making any health or wellness decisions.
Category:Health and Wellness



ProfileImg

Written by shruti mopagar