ಸುಮ್ನೆ ಬೇಜಾರ್ ಆಗತೀವಿ, ಎಷ್ಟು ಬೇಜಾರ್ ಆಗ್ತಿರುತ್ತೆ ಅಂದ್ರೆ ಟಿವಿ ನೋಡ್ತಿದ್ರು ಬೇಜಾರು, ಗೇಮ್ ಆಡ್ತಿದ್ರು ಬೇಜಾರು, ಯಾರ್ ಕಾಲ್ ಮಾಡಿದ್ರು ಅವರ ಜೊತೆ ಮಾತಾಡೋಕು ಬೇಜಾರು, ಬದುಕಿದ್ದೀವಿ ಆದ್ರೆ ಗೊಂದಲದ ಮಾಹೆ ನಮ್ಮನ್ನ ಸುತ್ತುವರದಿದೆ.
ನಮ್ಮವರು ಅನ್ನುವವರು ಎಲ್ಲಾ ಇದ್ದಾರೆ ಆದ್ರೆ ನಮ್ಮ ಮನಸ್ಸಿನ ಭಾವನೆಯನ್ನು ಅರ್ಥ ಮಾಡಿಕೊಳ್ಳುವಂತವರು ಯಾರು ಇಲ್ಲ ಅನ್ನೋ ಅಂಧಕಾರದ ಮಾಹೇಯಿಂದ ನಮ್ಮನ್ನ ಒಂಟಿತನ ಆವಾರಿಸಿದೆ. ಅದರಿಂದ ನಮಗೆ ಏನು ಮಾಡಿದ್ರು ಸಮಾಧಾನ ಅನಿಸದೆ… ಬದುಕ್ಕಿದ್ದಿವ-ಸತ್ತಿದಿವ ಅಂತ ಅರ್ಥ ಆಗದ ಪರಿಸ್ಥಿತಿಯಲ್ಲಿ ಇರೋದು.
ಮನಸಿನ ಒತ್ತಡವನ್ನು ದೇವರ ಮೇಲೆ ಬಿಡಿ ಕಾಯುವವನು ಅವನಿರುವಾಗ ನಾನು ಒಂಟಿ ಅಲ್ಲ ಅನ್ನೋ ಭಾವನೆ ನಮ್ಮಲ್ಲಿ ಹುಟ್ಟಲಿ..
ಆಕಾರದ ನಮ್ಮಶೃಷ್ಠಿಯಲ್ಲಿ ವಿಕಾರದ ಮನೋಭಾವನೆ..ಪ್ರತಿಯೊಂದು ಘಟನೆಗೂ ಕಾರಣ.. ಅನ್ನೋದು ಮೊದಲು ನಮ್ಮ ಅರಿವಿಗೆ ಬಂದ್ರೆ ಸಾಕು.
ಒಂಟಿತನ ನೆಮ್ಮದಿತನ್ನು ಕೊಡುತ್ತೆ, ಹಾಗೆ ನೆಮ್ಮದಿಯನ್ನು ಹಾಳು ಮಾಡುತ್ತೆ. ಹಸಿವಾದಾಗ ಎಷ್ಟು ಊಟ ಮಾಡಿದ್ರೆ ಹೊಟ್ಟೆ ತುಂಬಿದೆ ಅನಿಸುತ್ತೋ.. ಹಾಗೆ ನಾವೇಷ್ಟೇ ಜನರ ಪರಿಚಯ ಮಾಡಿಕೊಂಡರು ಅವಶ್ಯಕತೆಗೆ ಎಷ್ಟು ಅವರಿಂದ ತಿಳುವಳಿಕೆ ಬೇಕು ಅಷ್ಟೇ ತಗೊಂಡ್ರೆ ಸಾಕು..
ಸಂಬಂಧಿಕರೆಲ್ಲ ಮನಸ್ಸಿಗೆ ಹತ್ತಿರ ಆಗಲ್ಲ… ಮನಸಿಗೆಹತ್ತಿರ ಆದವರೆಲ್ಲ ನಮಗೆ ಒಳ್ಳೇದನ್ನೇ ಬಯಿಸ್ತಾರೆ ಅಂತ ಅಂದುಕೊಳ್ಳೋಕೆ ಆಗಲ್ಲ..
ಅಂದಕಾರದ ಮಾಹೆ ಯಿಂದ ನಾವ್ ಹೊರ ಬಂದಾಗ ಮಾತ್ರ ನೆಮ್ಮದಿ ಅನ್ನೋ ತೊಟ್ಟಿಲಲ್ಲಿ ನೆಮ್ಮದಿಯ ನಿದ್ರೆ ನಮ್ಮದಾಗಳು ಸಾಧ್ಯ….
ಪ್ರತಿಯೊಂದು ಜೀವಿಗೂ ಸಾವು ಅನ್ನೋ ಸಮಯ ವಿದೆ. ಹಾಗೆ ಸಮಯಕ್ಕೂ ಸಾವಿದೆ ಅದ್ಕೆ..ಈ ಸಮಯ ಮತ್ತೆ ನಮ್ಮದಾಗಲ್ಲ ನೆನಪಾಗಿ ಇರುತ್ತೆ. .. ಅನ್ನೋ ಸಾಮಾನ್ಯ್ ಜ್ಞಾನ ನಮ್ಮಲ್ಲಿ ಹೆಚ್ಚು ಬದಲಾವಣೆ ತರುತ್ತೆ ಅಲ್ವಾ. ..
🤝💐ಧನ್ಯವಾದಗಳು💐🤝
ಅಳಿದರು ಉಳಿಯುವ ಮನೋಭಾವನೆಯೊಂದಿಗೆ ಹುಟ್ಟಿದ ನಶೆಯ ಆಸೆಯ ಕಲಾವಿದ ಅಂತ ನನಗೆ ನನ್ನ ಪರಿಚಯ. ...✍️ಶಿರಸಿ ka31
0 Followers
0 Following