ವನಸಿರಿ ಫೌಂಡೇಶನ್ ವತಿಯಿಂದ ಉಚಿತ ಸಸಿಗಳ ವಿತರಣೆ:ಅಮರೇಗೌಡ ಮಲ್ಲಾಪುರ

ಪರಿಸರ ದಿನದಂದು ಸರಕಾರಿ ಶಾಲೆಗಳಲ್ಲಿ ಸಸಿಗಳನ್ನು ನೆಟ್ಟು ಹಸಿರೀಕರಣ ಮಾಡಲು ಮನವಿ..

ProfileImg
02 Jun '24
1 min read


image

ವಿಶ್ವ ಪರಿಸರ ದಿನ ಎಂದರೇ ಶಾಲೆಗಳಲ್ಲಿ ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸುವ ಕಾರ್ಯವು ವಿಶೇಷವಾಗಿ ನಡೆಯುತಿತ್ತು. ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಫಲಕಗಳನ್ನು ನೀಡಿ "ಕಾಡು ಬೆಳೆಸಿ ನಾಡು ಉಳಿಸಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಇತ್ಯಾದಿ ಘೋಷವಾಕ್ಯಗಳನ್ನು ಕೂಗಿಸುತ್ತಾ, ಶಾಲೆಗಳಲ್ಲಿ ಮೆರವಣಿಗೆ ನಡೆಸಿ ಪ್ರಕೃತಿಯೊಂದಿಗೆ ಒಡನಾಟವನ್ನು ನೆನಪಿಸುವಂತೆ ಪರಿಸರ ದಿನ ಆಚರಿಸುವ ಕಾಲ ಒಂದಿತ್ತು ಅದೀಗ ಅಪರೂಪ ಎನ್ನುವಂತೆ ಭಾಸವಾಗುತ್ತಿದೆ ಎನ್ನಬಹುದು..

ಬಹುತೇಕರು ಪರಿಸರ ದಿನಾಚರಣೆಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನೋಡಿ,ಪೇಜ್ ಸ್ಕ್ರಾಲ್ ಮಾಡುವವರಿದ್ದಾರೆ. ಆದರೆ  ಪರಿಸರದಲ್ಲಿ ಹಸಿರೀಕರಣ ಮಾಡಲು ಮುಂದಾಗಿರುವ ಸಿಂಧನೂರಿನ ವನಸಿರಿ ಫೌಂಡೇಶನ್, ನಗರದ ಗ್ರಾಮೀಣ ಪೋಲಿಸ್ ಠಾಣೆಯ ಹಿಂದುಗಡೆ ವನಸಿರಿ ಫೌಂಡೇಶನ್ ನಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರದ ಹತ್ತಿರ ಸರಕಾರಿ ಶಾಲೆಗಳನ್ನು ಹಸಿರುಕರಣಗೊಳಿಸಲು  10 ಸಾವಿರ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮವನ್ನು ಜೂನ್ 3 ಮತ್ತು ಜೂನ್ 4 ರಂದು ಹಮ್ಮಿಕೊಳ್ಳಲಾಗಿದೆ. 

ನಗರದ ವನಸಿರಿ ಫೌಂಡೇಶನ್ ಕಾರ್ಯಾಲಯದಲ್ಲಿ ರವಿವಾರ ಮಾತನಾಡಿದ, ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ವನಸಿರಿ ತಂಡ ಕೆಲವು ವರ್ಷಗಳಿಂದ ಸರಕಾರಿ ಶಾಲೆಗಳ ಹಸಿರುಕರಣ ಮಾಡಲು ಶ್ರಮಿಸುತ್ತಿದೆ. ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಬಿಸಿಲಿನ ತಾಪಮಾನ ಹೊಂದಿದ್ದು ಇದನ್ನು ತಗ್ಗಿಸುವ ಸಲುವಾಗಿ ಪ್ರತಿವರ್ಷ ಸುಮಾರು 1ಲಕ್ಷ ಗಿಡಗಳನ್ನು ನೆಡುವ ಗುರಿಯನ್ನು ಹೊಂದಲಾಗಿದೆ.

ಅದರಲ್ಲೂ ಸರಕಾರಿ ಶಾಲೆಗಳನ್ನೇ ಹಸಿರುಕರಣ ಮಾಡಲು ಮೊದಲ ಆದ್ಯತೆ ನೀಡುತ್ತಿದ್ದೇವೆ ಇದೇ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎಲ್ಲಾ ಸರಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಗಿಡಮರಗಳನ್ನು ಬೆಳಸಬೇಕು ಎಂಬ ಸದುದ್ದೇಶದಿಂದ ನಮ್ಮ ವನಸಿರಿ ತಂಡದಿಂದ ಈ ಬಾರಿ 10ಸಾವಿರ ಸಸಿಗಳನ್ನು ಸರಕಾರಿ ಶಾಲೆಗಳಲ್ಲೇ ನೆಡಬೇಕೆಂಬುದು ನಮ್ಮ ದ್ಯೇಯವಾಗಿದೆ.

ಇದೇ ಜೂನ್ 3 ಮತ್ತು 4 ರಂದು ಸಿಂಧನೂರು ನಗರದ ಅಮರ ಶ್ರೀ ಆಲದ ಮರದ ಹತ್ತಿರ ಸುಮಾರು10 ಸಾವಿರ ಸಸಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದೇವೆ ಇದರ ಸದುಪಯೋಗವನ್ನು ಎಲ್ಲ ಸರಕಾರಿ ಶಾಲೆಗಳ ಶಿಕ್ಷಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

Category:NatureProfileImg

Written by Avinash deshpande

Article Writer, Self Employee