ಹಿಂದಿನ ಕಂತಿನಿಂದ…
ನಮ್ಮದು ಏರ್ ಫ್ರಾನ್ಸ್ ಪ್ಲೈಟ್. ಅದರಲ್ಲಿ ಪ್ರತಿಯೊಬ್ಬರಿಗೆ ಇಪ್ಪತ್ತಮೂರು ಕೆಜಿ ಭಾರದ ಎರಡು ಸೂಟ್ಕೇಸ್ ತೆಗೆದುಕೊಳ್ಳಲು ಅವಕಾಶವಿದೆ. ಕಾಬಿನ್ ಬ್ಯಾಗ್ ನಲ್ಲಿ ಏಳು ಕೆಜಿ ಭಾರ ಹಾಕಲು ಅವಕಾಶ. ಹೊರಡುವ ಹಿಂದಿನ ದಿನವೂ ನಮ್ಮ ಸೂಟ್ಕೇಸ್ ಗಳಿಗೆ ತುಂಬಿಸಿ ಆಗಿರಲಿಲ್ಲ. ನಮಗೆ ಖರೀದಿಯೇ ಮುಗಿದಿರಲಿಲ್ಲ. ಮೊಮ್ಮಗಳಿಗೆ ಕೊಡಲು ಉಡುಪು ಬಳೆ, ಬಿಂದಿ , ಪುಸ್ತಕ ಮುಂತಾದವುಗಳನ್ನು ಕೊಂಡುಕೊಳ್ಳಬೇಕಿತ್ತು. ಡ್ರೆಸ್ ಖರೀದಿಗೆ ದಿನವಿಡೀ ಸಾಲದು. ಅಂತೂ ಎರಡು ದಿನ ಹೋಗಿ ಮಗಳಿಗೂ ಅಳಿಯನಿಗೂ ಡ್ರೆಸ್ ಕೊಂಡುಕೊಂಡೆವು.
ಇನ್ನೂ ಕೌಂಟರಿನಲ್ಲಿ ಸಿಗುವಂತಹ ಬೆಕಸೂಲ್ಸ್, ವರ್ಟಿನ್ , ಕ್ರೋಸಿನ್ ಮುಂತಾದ ಮಾತ್ರೆಗಳನ್ನು ಕೊಂಡುಕೊಂಡೆವು.ಮಗಳ ಲಿಸ್ಟ್ ನಲ್ಲಿ ಕಾಳು ಮೆಣಸು, ಏಲಕ್ಕಿ ಮುಂತಾದವುಗಳಿದ್ದವು. ಊರಿಗೆ ಹೋಗಿದ್ದಾಗ ಅವುಗಳನ್ನು ಅಲ್ಲಿಂದಲೇ ತಂದಿಟ್ಟುಕೊಂಡಿದ್ದೆ.ಉಪ್ಪಿನಕಾಯಿ ,ಹಪ್ಪಳ ಮುಂತಾದವುಗಳೂ ಸೇರಿಕೊಂಡವು.
ಇನ್ನೊಂದು ಮುಖ್ಯವಾದ ವಸ್ತು ಎಂದರೆ ಜೇನುತುಪ್ಪ. ಊರಿಗೆ ಹೋಗಿದ್ದಾಗ ಐದು ಕೆಜಿ ಜೇನು ಪರಿಚಯದವರಿಂದ ತಂದಿದ್ದೆ. ಮತ್ತೆ ಎರಡು ಕೆಜಿ ಅಜವಾನ್ ಜೇನುತುಪ್ಪವಿತ್ತು. ಅದನ್ನು ಕೆಲವು ತಿಂಗಳ ಹಿಂದೆ ಕೊರಿಯರ್ನಲ್ಲಿ ಅಮೆರಿಕಕ್ಕೆ ಕಳುಹಿಸಲು ತಯಾರು ಮಾಡಿದ್ದೆವು .ಆದರೆ ಕೊರಿಯರ್ನವರು ಜೇನುತುಪ್ಪ ತೆಗೆದುಕೊಳ್ಳುವುದಿಲ್ಲ. ಯಾಕೋ ತಿಳಿಯದು. ಆ ಜೇನುತುಪ್ಪವೂ ಸೇರಿಕೊಂಡಿತು.
ಮಗಳ ಅತ್ತೆ ಮಾವ ಅಡಿಗೆಯವರನ್ನು ಬರಮಾಡಿ ಮೈಸೂರ್ ಪಾಕ್ ,ಕಾಜು ಬರ್ಫಿ, ಬಾದಾಮ್ ಬರ್ಫಿ, ಸೆವೆನ್ ಕಪ್ ,ಮಿಕ್ಷರ್ ಎಲ್ಲಾ ಮಾಡಿಸಿದ್ದರು. ಅವರೂ ಮೊಮ್ಮಗಳಿಗೆ ಡ್ರೆಸ್ ತಂದಿದ್ದರು.ಅದನ್ನೆಲ್ಲಾ ಸೂಟ್ಕೇಸ್ ನಲ್ಲಿ ಹಾಕಿ ನಮ್ಮಮನೆಗೆ ತಂದುಕೊಟ್ಟರು.
ನಾನೂ ಕಾಯಿ ಬರ್ಫಿ ಮಾಡಿದ್ದೆ.ಕಾಯಿ ಹೋಳಿಗೆ ,ಬೇಳೆ ಹೋಳಿಗೆ ತಯಾರಾಯಿತು. ಮಗಳ ನಾದಿನಿ ಕೇರಳದಿಂದ ಬರುವಾಗ ಸಕ್ಕರೆ ಪೆರಟಿ , ಹಲಸಿನಕಾಯಿ ಚಿಪ್ಸ್, ಬಾಳೆಕಾಯಿ ಚಿಪ್ಸ್. ತಂದಿದ್ದಳು..ಹೀಗೆ ಸಾಂಬಾರ್ ಪೌಡರುಗಳು..ಮುಂತಾದವುಗಳ ರಾಶಿ ಬಿದ್ದಿತು.
ಇಷ್ಟೆಲ್ಲವನ್ನು ಸೂಟ್ಕೇಸುಗಳಲ್ಲಿ ತುಂಬಿ ಎಲ್ಲವುಗಳ ತೂಕ ಮಾಡಿದೆವು . ಹೆಚ್ಚಿದ್ದನ್ನು ಕಡಿಮೆ ತೂಕದ ಸೂಟ್ಕೇಸಿಗೆ ಹಾಕಿ ಸರಿ ಮಾಡಿದೆವು. ಹಾಳಾಗುವಂತಹ ಸಾಮಾನುಗಳನ್ನು ಬ್ಲಿಸ್ಟರ್ ಪ್ಲಾಸ್ಟಿಕ್ ನಲ್ಲಿ ಪ್ಯಾಕ್ ಮಾಡಿದೆವು. ಅಳಿಯನಿಗೆ ಕಂಚಿನ ಉರುಳಿ ಬೇಕಾಗಿತ್ತು. ಅದನ್ನು ಊರಿಗೆ ಹೋದಾಗ ತಂದಿದ್ದೆ. ಇನ್ನೊಂದು ಅಪ್ಪಂ ಮಾಡುವಂತಹ ಮಣ್ಣಿನ ತವಾ(ಓಡು) ..ಅದನ್ನು 'ಓಡುಪಾಳೆ'ಯ ಓಡು ಅಂತಾರೆ .ಅದನ್ನೂ ಒಡೆಯದಂತೆ ಪ್ಯಾಕ್ ಮಾಡಿದ್ದಾಯಿತು. ಇದನ್ನು ಉಪಯೋಗಿಸಲು ತಯಾರು ಮಾಡಿದ್ದು ಮಗಳ ಅತ್ತೆಯ ತಾಯಿಮನೆಯವರಲ್ಲಿ ಸಹಾಯಕ್ಕಾಗಿ ದ್ದ ಫಿಲಿಪ್ಸ್.ಆತನನ್ನು ಪಿಲಿಪ ಅಂತಲೇ ಕರೆಯುತ್ತಿದ್ದರು. ನಾನು ಊರಿಗೆ ಹೋದಾಗ ಆತ ಅದಕ್ಕೆ ಗೇರು ಬೀಜದ ಎಣ್ಣೆ ಹಾಕಿ ಹೊತ್ತಿಸಿ ಕಪ್ಪು ಮಾಡಿ ತಯಾರುಮಾಡಿ ಕೊಟ್ಟಿದ್ದ.ಅದನ್ನು ಕ್ಯಾಬಿನ್ ಬ್ಯಾಗಿನಲ್ಲಿ ಹಾಕಲು ಇಟ್ಟೆವು. ಅಂತೂ ಎಲ್ಲಾ ಸೂಟ್ಕೇಸುಗಳೂ ರೆಡಿಯಾದುವು.
ನಾವು ಹೋಗಬೇಕಾಗಿದ್ದ ಜಾಗ ರಾಚೆಸ್ಟರ್ ಹಿಲ್ಸ್. ಅದು ಉತ್ತರ ಅಮೇರಿಕದ ಮಿಶಿಗನ್ ರಾಜ್ಯದಲ್ಲಿದೆ. ಚಳಿ ಪ್ರದೇಶ. ಈಗ ಬೇಸಿಗೆ ಪ್ರಾರಂಭವಾದ ಕಾರಣ ಅಲ್ಲಿರುವ ಭಾರತೀಯರ ಹೆತ್ತವರು ನಮ್ಮಂತೆ ಈ ಸಮಯದಲ್ಲಿ ಮಕ್ಕಳ ಮನೆಗೆ ಹೋಗುತ್ತಾರೆ,ಹಾಗೆ ನಮ್ಮ ಜೊತೆಗೆ ಇನ್ನೊಂದು ದಂಪತಿ ಇದ್ದರು. ನಾಯಕ್ ದಂಪತಿಗಳು.ಅವರೂ ತಮ್ಮ ಮಗಳ ಮನೆಗೆ ಹೋಗುವವರೇ. ವಿದೇಶಕ್ಕೆ ಹೋಗಿ ಅಭ್ಯಾಸ ಇದ್ದರೂ ವಯಸ್ಸಾದುದರಿಂದ ಜೊತೆಯಾಗಿ ಹೋದರೆ ಏನೋ ಧೈರ್ಯ ಅಂತ ನಮ್ಮ ಫ್ಲೈಟಿಗೇ ಟಿಕೆಟ್ ಮಾಡಿಸಿದ್ದರು.ಅವರು ನಮ್ಮ ಬೀಗರ ಮನೆಯ ಹತ್ತಿರ ಇರುವವರು. ಅವರ ಮುಖಾಂತರವೇ ಪರಿಚಯ ಮೊಬೈಲಿನಲ್ಲಿ..
ಅವರು ನಮ್ಮಿಂದ ಮೊದಲೇ ಕೆಂಪೇಗೌಡ ವಿಮಾನ ನಿಲ್ದಾಣ ತಲುಪಿದ್ದರು.ನಮ್ಮ ಮನೆಯಿಂದ ವಿಮಾನ ನಿಲ್ದಾಣ ಕೇವಲ ೨೨ ಕಿಮೀ ದೂರದಲ್ಲಿದೆ. ಹಾಗಾಗಿ ಸ್ವಲ್ಪ ತಡವಾಗಿಯೇ ಮನೆಯಿಂದ ಹೊರಟೆವು.
ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಮೂರು ಗಂಟೆ ಮೊದಲೇ ತಲುಪಬೇಕು. ಆದರೆ ಚೆಕ್ ಇನ್ ಮೊದಲೇ ಮಗ ಮಾಡಿದ್ದ. ಮತ್ತೆ ಆತಂಕ ತರುವ ಯಾವ ವಿಷಯವೂ ಇರಲಿಲ್ಲ..ಕೋವಿಡ್ ಚಿಂತೆಯೂ ಇರಲಿಲ್ಲ.
ಮುಂದೆ..ವಿಮಾನ ನಿಲ್ದಾಣದಲ್ಲಿ...
✍️ಪರಮೇಶ್ವರಿ ಭಟ್.ಅದರಲ್ಲಿ ಪ್ರತಿಯೊಬ್ಬರಿಗೆ ಇಪ್ಪತ್ತಮೂರು ಕೆಜಿ ಭಾರದ ಎರಡು ಸೂಟ್ಕೇಸ್ ತೆಗೆದುಕೊಳ್ಳಲು ಅವಕಾಶವಿದೆ. ಕಾಬಿನ್ ಬ್ಯಾಗ್ ನಲ್ಲಿ ಏಳು ಕೆಜಿ ಭಾರ ಹಾಕಲು ಅವಕಾಶ. ಹೊರಡುವ ಹಿಂದಿನ ದಿನವೂ ನಮ್ಮ ಸೂಟ್ಕೇಸ್ ಗಳಿಗೆ ತುಂಬಿಸಿ ಆಗಿರಲಿಲ್ಲ. ನಮಗೆ ಖರೀದಿಯೇ ಮುಗಿದಿರಲಿಲ್ಲ. ಮೊಮ್ಮಗಳಿಗೆ ಕೊಡಲು ಉಡುಪು ಬಳೆ, ಬಿಂದಿ , ಪುಸ್ತಕ ಮುಂತಾದವುಗಳನ್ನು ಕೊಂಡುಕೊಳ್ಳಬೇಕಿತ್ತು. ಡ್ರೆಸ್ ಖರೀದಿಗೆ ದಿನವಿಡೀ ಸಾಲದು. ಅಂತೂ ಎರಡು ದಿನ ಹೋಗಿ ಮಗಳಿಗೂ ಅಳಿಯನಿಗೂ ಡ್ರೆಸ್ ಕೊಂಡುಕೊಂಡೆವು.
ಇನ್ನೂ ಕೌಂಟರಿನಲ್ಲಿ ಸಿಗುವಂತಹ ಬೆಕಸೂಲ್ಸ್, ವರ್ಟಿನ್ , ಕ್ರೋಸಿನ್ ಮುಂತಾದ ಮಾತ್ರೆಗಳನ್ನು ಕೊಂಡುಕೊಂಡೆವು.ಮಗಳ ಲಿಸ್ಟ್ ನಲ್ಲಿ ಕಾಳು ಮೆಣಸು, ಏಲಕ್ಕಿ ಮುಂತಾದವುಗಳಿದ್ದವು. ಊರಿಗೆ ಹೋಗಿದ್ದಾಗ ಅವುಗಳನ್ನು ಅಲ್ಲಿಂದಲೇ ತಂದಿಟ್ಟುಕೊಂಡಿದ್ದೆ.ಉಪ್ಪಿನಕಾಯಿ ,ಹಪ್ಪಳ ಮುಂತಾದವುಗಳೂ ಸೇರಿಕೊಂಡವು.
ಇನ್ನೊಂದು ಮುಖ್ಯವಾದ ವಸ್ತು ಎಂದರೆ ಜೇನುತುಪ್ಪ. ಊರಿಗೆ ಹೋಗಿದ್ದಾಗ ಐದು ಕೆಜಿ ಜೇನು ಪರಿಚಯದವರಿಂದ ತಂದಿದ್ದೆ. ಮತ್ತೆ ಎರಡು ಕೆಜಿ ಅಜವಾನ್ ಜೇನುತುಪ್ಪವಿತ್ತು. ಅದನ್ನು ಕೆಲವು ತಿಂಗಳ ಹಿಂದೆ ಕೊರಿಯರ್ನಲ್ಲಿ ಅಮೆರಿಕಕ್ಕೆ ಕಳುಹಿಸಲು ತಯಾರು ಮಾಡಿದ್ದೆವು .ಆದರೆ ಕೊರಿಯರ್ನವರು ಜೇನುತುಪ್ಪ ತೆಗೆದುಕೊಳ್ಳುವುದಿಲ್ಲ. ಯಾಕೋ ತಿಳಿಯದು. ಆ ಜೇನುತುಪ್ಪವೂ ಸೇರಿಕೊಂಡಿತು.
ಮಗಳ ಅತ್ತೆ ಮಾವ ಅಡಿಗೆಯವರನ್ನು ಬರಮಾಡಿ ಮೈಸೂರ್ ಪಾಕ್ ,ಕಾಜು ಬರ್ಫಿ, ಬಾದಾಮ್ ಬರ್ಫಿ, ಸೆವೆನ್ ಕಪ್ ,ಮಿಕ್ಷರ್ ಎಲ್ಲಾ ಮಾಡಿಸಿದ್ದರು. ಅವರೂ ಮೊಮ್ಮಗಳಿಗೆ ಡ್ರೆಸ್ ತಂದಿದ್ದರು.ಅದನ್ನೆಲ್ಲಾ ಸೂಟ್ಕೇಸ್ ನಲ್ಲಿ ಹಾಕಿ ನಮ್ಮಮನೆಗೆ ತಂದುಕೊಟ್ಟರು.
ನಾನೂ ಕಾಯಿ ಬರ್ಫಿ ಮಾಡಿದ್ದೆ.ಕಾಯಿ ಹೋಳಿಗೆ ,ಬೇಳೆ ಹೋಳಿಗೆ ತಯಾರಾಯಿತು. ಮಗಳ ನಾದಿನಿ ಕೇರಳದಿಂದ ಬರುವಾಗ ಸಕ್ಕರೆ ಪೆರಟಿ , ಹಲಸಿನಕಾಯಿ ಚಿಪ್ಸ್, ಬಾಳೆಕಾಯಿ ಚಿಪ್ಸ್. ತಂದಿದ್ದಳು..ಹೀಗೆ ಸಾಂಬಾರ್ ಪೌಡರುಗಳು..ಮುಂತಾದವುಗಳ ರಾಶಿ ಬಿದ್ದಿತು.
ಇಷ್ಟೆಲ್ಲವನ್ನು ಸೂಟ್ಕೇಸುಗಳಲ್ಲಿ ತುಂಬಿ ಎಲ್ಲವುಗಳ ತೂಕ ಮಾಡಿದೆವು . ಹೆಚ್ಚಿದ್ದನ್ನು ಕಡಿಮೆ ತೂಕದ ಸೂಟ್ಕೇಸಿಗೆ ಹಾಕಿ ಸರಿ ಮಾಡಿದೆವು. ಹಾಳಾಗುವಂತಹ ಸಾಮಾನುಗಳನ್ನು ಬ್ಲಿಸ್ಟರ್ ಪ್ಲಾಸ್ಟಿಕ್ ನಲ್ಲಿ ಪ್ಯಾಕ್ ಮಾಡಿದೆವು. ಅಳಿಯನಿಗೆ ಕಂಚಿನ ಉರುಳಿ ಬೇಕಾಗಿತ್ತು. ಅದನ್ನು ಊರಿಗೆ ಹೋದಾಗ ತಂದಿದ್ದೆ. ಇನ್ನೊಂದು ಅಪ್ಪಂ ಮಾಡುವಂತಹ ಮಣ್ಣಿನ ತವಾ(ಓಡು) ..ಅದನ್ನು 'ಓಡುಪಾಳೆ'ಯ ಓಡು ಅಂತಾರೆ .ಅದನ್ನೂ ಒಡೆಯದಂತೆ ಪ್ಯಾಕ್ ಮಾಡಿದ್ದಾಯಿತು. ಇದನ್ನು ಉಪಯೋಗಿಸಲು ತಯಾರು ಮಾಡಿದ್ದು ಮಗಳ ಅತ್ತೆಯ ತಾಯಿಮನೆಯವರಲ್ಲಿ ಸಹಾಯಕ್ಕಾಗಿದ್ದ ಫಿಲಿಪ್ಸ್.ಆತನನ್ನು ಪಿಲಿಪ ಅಂತಲೇ ಕರೆಯುತ್ತಿದ್ದರು. ನಾನು ಊರಿಗೆ ಹೋದಾಗ ಆತ ಅದಕ್ಕೆ ಗೇರು ಬೀಜದ ಎಣ್ಣೆ ಹಾಕಿ ಹೊತ್ತಿಸಿ ಕಪ್ಪು ಮಾಡಿ ತಯಾರುಮಾಡಿ ಕೊಟ್ಟಿದ್ದ.ಅದನ್ನು ಕ್ಯಾಬಿನ್ ಬ್ಯಾಗಿನಲ್ಲಿ ಹಾಕಲು ಇಟ್ಟೆವು. ಅಂತೂ ಎಲ್ಲಾ ಸೂಟ್ಕೇಸುಗಳೂ ರೆಡಿಯಾದುವು.
ನಾವು ಹೋಗಬೇಕಾಗಿದ್ದ ಜಾಗ ರಾಚೆಸ್ಟರ್ ಹಿಲ್ಸ್. ಅದು ಉತ್ತರ ಅಮೇರಿಕದ ಮಿಶಿಗನ್ ರಾಜ್ಯದಲ್ಲಿದೆ. ಚಳಿ ಪ್ರದೇಶ. ಈಗ ಬೇಸಿಗೆ ಪ್ರಾರಂಭವಾದ ಕಾರಣ ಅಲ್ಲಿರುವ ಭಾರತೀಯರ ಹೆತ್ತವರು ನಮ್ಮಂತೆ ಈ ಸಮಯದಲ್ಲಿ ಮಕ್ಕಳ ಮನೆಗೆ ಹೋಗುತ್ತಾರೆ,ಹಾಗೆ ನಮ್ಮ ಜೊತೆಗೆ ಇನ್ನೊಂದು ದಂಪತಿ ಇದ್ದರು. ನಾಯಕ್ ದಂಪತಿಗಳು.ಅವರೂ ತಮ್ಮ ಮಗಳ ಮನೆಗೆ ಹೋಗುವವರೇ. ವಿದೇಶಕ್ಕೆ ಹೋಗಿ ಅಭ್ಯಾಸ ಇದ್ದರೂ ವಯಸ್ಸಾದುದರಿಂದ ಜೊತೆಯಾಗಿ ಹೋದರೆ ಏನೋ ಧೈರ್ಯ ಅಂತ ನಮ್ಮ ಫ್ಲೈಟಿಗೇ ಟಿಕೆಟ್ ಮಾಡಿಸಿದ್ದರು.ಅವರು ನಮ್ಮ ಬೀಗರ ಮನೆಯ ಹತ್ತಿರ ಇರುವವರು. ಅವರ ಮುಖಾಂತರವೇ ಪರಿಚಯ ಮೊಬೈಲಿನಲ್ಲಿ..
ಅವರು ನಮ್ಮಿಂದ ಮೊದಲೇ ಕೆಂಪೇಗೌಡ ವಿಮಾನ ನಿಲ್ದಾಣ ತಲುಪಿದ್ದರು.ನಮ್ಮ ಮನೆಯಿಂದ ವಿಮಾನ ನಿಲ್ದಾಣ ಕೇವಲ ೨೨ ಕಿಮೀ ದೂರದಲ್ಲಿದೆ. ಹಾಗಾಗಿ ಸ್ವಲ್ಪ ತಡವಾಗಿಯೇ ಮನೆಯಿಂದ ಹೊರಟೆವು.
ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಮೂರು ಗಂಟೆ ಮೊದಲೇ ತಲುಪಬೇಕು. ಆದರೆ ಚೆಕ್ ಇನ್ ಮೊದಲೇ ಮಗ ಮಾಡಿದ್ದ. ಮತ್ತೆ ಆತಂಕ ತರುವ ಯಾವ ವಿಷಯವೂ ಇರಲಿಲ್ಲ..ಕೋವಿಡ್ ಚಿಂತೆಯೂ ಇರಲಿಲ್ಲ.
ಮುಂದೆ..ವಿಮಾನ ನಿಲ್ದಾಣದಲ್ಲಿ...
✍️ಪರಮೇಶ್ವರಿ ಭಟ್.