ಪ್ರಜಾಪ್ರಭುತ್ವ ಮಾಲಿಕೆ -೧

ಡೆಮೋಕ್ರಸಿ -ಬಹುಸ್ತರದ ಆಡಳಿತ -ಕೇಂದ್ರೀಕೃತ ಆಡಳಿತದಲ್ಲಿ ನಾವು -ನೀವು.

ProfileImg
22 Apr '24
1 min read


image

ಡೆಮೋಕ್ರಸಿಯನ್ನು ಕನ್ನಡದಲ್ಲಿ ಪ್ರಜೆಗಳಿಂದ ಪ್ರಭುತ್ವ ಎಂಬ ಹೆಸರಿನಲ್ಲಿ ಅನುವಾದ ಮಾಡಲಾಗಿದೆ.ಮತ್ತು ಪ್ರಜೆಗಳು ತಮ್ಮ ಪ್ರತಿನಿಧಿಗಳನ್ನು  ಆಯ್ಕೆ ಮಾಡಲು ಚುನಾವಣಾ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಈ ಚುನಾವಣೆ ವ್ಯವಸ್ಥೆಯು ಹಳೆಯ ಮಹಾಯುದ್ಧಗಳಂತೆಯೂ ಕ್ಷೇತ್ರಗಳನ್ನು ವಶಪಡಿಸಿಕೊಳ್ಳುವ ರೀತಿಯಲ್ಲಿಯೂ ವರದಿಗಳಾಗುತ್ತವೆ. ಅದೇ ನಾಯಕರನ್ನು ಮರು ಸೃಷ್ಟಿ ಸುವ ಪುರಾತನ ಅರಣ್ಯದಿಂದ ಬಂದ ಆಡಳಿತ ಮಾದರಿಗಳಾಗಿ ತೋರುತ್ತವೆ. ಈ ವ್ಯವಸ್ಥೆ ಯಲ್ಲಿ ಸ್ವತಃ ಸರ್ಕಾರಕ್ಕೆ ಭಯವಿದ್ದು  ಬ್ಯೂುರೋಕ್ರಸಿಯನ್ನೂ ಮಾಫಿಯಾವನ್ನು ಉಗ್ರ ಗಾಮಿತನವನ್ನೂ ತೊಡೆದು ಹಾಕುವ ಅರೆಮನಸ್ಸುಗಳಿವೆ. ಆದರೆ ಇದೆಲ್ಲದವುರದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಸಿಕ್ಕಿದ ನಂತರ ಮತ್ತು ಮುಂಚಿನ ಕ್ಷಣಗಳನ್ನು ಅಂದರೆ ಪೂರ್ವ ತದನಂತರದ ಘಟನೆಗಳನ್ನು ವಿಮರ್ಶೆ ಮಾಡಲು ಸುರು ಮಾಡಿ ಈಗಿನ ಯುವ ಮತದಾರರಿಗೆ ತಿಳಿಸಬೇಕು.ಹೊಸ ಕನಸುಗಳು ಉಂಟಾಗಿ ಸಮಾಜವು ನೆಮ್ಮದಿ ಹೊಂದಬೇಕು.ನನ್ನ ವಿಮರ್ಶೆಗಳೂ ಸಹಕಾರಿ ಯಾಗ ಬಹುದು. 

ಮೊದಲಿಗೆ ನಾವು ಚುನಾವಣೆಯನ್ನು ಒಂದು ಸ್ಪರ್ಧೆಯಾಗಿ ಪರಿಗಣಿಸಿರುವುದು.ಅವರು ಸ್ಪರ್ಧಿಸುತ್ತಿರುವಾಗ ನಾವು ಆಯ್ಕೆ ಮಾಡುವ ಪ್ರಶ್ನೆಯೇ ಬರದು.ಅವರ ಶತಪ್ರಯತ್ನಗಳಿಂದ ಗೆದ್ದು ಬಂದಾಗ ಆಮೇಲೆ ನಾವು  ಪ್ರಶ್ನಿಸಹೋಗುವುದೂ ಹಾಸ್ಯಾಸ್ಪದ. ಯುದ್ಧ ಮತ್ತು ಸೈನ್ಯದ ಹಾಗೆ ಎರಡು ಬಲಾಬಲಗಳನ್ನು ಸೃಷ್ಟಿಸುವವ ಮೂರ್ಖತನ ನಮ್ಮದೇ ಆಗಿದೆ. ನಾವು ಏನು ಪಕ್ಷಗಳನ್ನು ಸೃಷ್ಟಿಸುತ್ತೇವೆಯೋ ಅದು ನಮ್ಮ ಹಿಂದಿನ ಯುದ್ಧಾಕಾಂಕ್ಷೆಗಳೇ ಆಗಿವೆ. ಟ್ರಾಯ್ ಕದನ ಇರಬಹುದು ಕುರುಕ್ಷೇತ್ರವೇ ಇರಬಹುದು.ಯುದ್ಧಗಳಿಗೆ ಅವರಿವರ ಮಾತು ಕೇಳಿ ಭಾಗವಹಿಸಿದವರು ನಾವೇ! ಯುದ್ಧಗಳು ಅನಿವಾರ್ಯ ಇರಬಹುದು.ಆದರೆ ಸಿವಿಲ್ ವಾರ್ ಗಳು ಅನಿವಾರ್ಯವೇನೂ ಅಲ್ಲ. ಅಲ್ಲಿ ಮಾತು ಮತಗಳ ವಿನಿಮಯವೇ ಸಾಕು. ನಾವೀ ಪಕ್ಷಗಳ ಪೊಲಿಟಿಕ್ಸ್ ಅನ್ನು ಮರೆತು ನಮಗೆ ಸ್ವಾತಂತ್ರ್ಯ ನೀಡಲು ತಾವೂ ಜೊತೆಯಾಗಿ ಬಂದವರ ಮನಸ್ಸಿನೊಳಗೆ ಹೋಗಿ ನೋಡಲು ಸುರುವಿಟ್ಟುಕೊಳ್ಳೋಣ

ಸುರೇಶ್ ಮಹರ್ಷಿ 

Category:Education



ProfileImg

Written by Suresh Maharshi