ಶಿಕ್ಷಕರಲ್ಲಿ ಸಮರ್ಪಣ ಮನೋಭಾವನೆ ಮುಖ್ಯ:ಅಯ್ಯನಗೌಡ

ಸರಕಾರಿ ಶಾಲಾ ಮಕ್ಕಳಿಗೆ ಹದಿನೈದು ಸಾವಿರ ರೂಪಾಯಿ ಮೌಲ್ಯದ ಕಲಿಕೋಪಕರಣಗಳ ವಿತರಣೆ

ProfileImg
14 Jun '24
1 min read


image

ಸಿಂಧನೂರು ತಾಲೂಕಿನ ದುಗ್ಗಮ್ಮನಗುಂಡ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದುಗ್ಗಮ್ಮನಗುಂಡ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಗುಡದೂರ ವಲಯದ ಸಂಯೋಜಕ ಅಯ್ಯನಗೌಡ ಅವರು ಶಿಕ್ಷಕರಲ್ಲಿ ಸಮರ್ಪಣ ಮನೋಭಾವನೆ ಬಹಳ ಮುಖ್ಯ. ತಮ್ಮ ವೃತ್ತಿ ಜೀವನದಲ್ಲಿ ವಿದ್ಯಾರ್ಥಿಗಳ ಮೇಲಿನ ಕಾಳಜಿ ಹಾಗೂ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಸರಕಾರಿ ಶಾಲೆಗಳ ಬೆಳವಣಿಗೆಗೆ ಸಮುದಾಯದ ಸಹಾಯ ಸಹಕಾರ ಅತಿಮುಖ್ಯ ಮತ್ತು ಶಿಕ್ಷಕರಲ್ಲಿ ಸಮರ್ಪಣಾ ಭಾವ ಮುಖ್ಯವಾಗಿ ಇರಬೇಕು.ಸಮಾಜದಲ್ಲಿ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಪಾಲಕರ ಕರ್ತವ್ಯ ಹೆಚ್ಚಾಗಿರುತ್ತದೆ.

ವಿದ್ಯಾರ್ಥಿಗಳಿಗೆ ವಿನೂತನ ಪ್ರಯೋಗದ ಮೂಲಕ ಮತ್ತು ಕಲಿಕೆಯಲ್ಲಿ ಆಸಕ್ತಿ ಬರುವ ನಿಟ್ಟಿನಲ್ಲಿ ಶಿಕ್ಷಣ ನೀಡುವುದಕ್ಕೆ ಸರ್ಕಾರ ನಾನಾ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿರುವ ಈ ಸಮಯದಲ್ಲಿ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳವಂತೆ ಶಿಕ್ಷಕರು ಸೇವೆ ಮಾಡಬೇಕು. 

ಶಂಕರ ದೇವರು ಹಿರೇಮಠ ಅವರು ಶಿಕ್ಷಕ ವೃತ್ತಿ ಯಲ್ಲಿ ಹದಿನೇಳು ವರ್ಷಗಳ ಸೇವೆ ಸಲ್ಲಿಸಿದ ಸವಿ ನೆನಪಿನಲ್ಲಿ ಶಾಲಾ ಮಕ್ಕಳಿಗೆ ಹದಿನೈದು ಸಾವಿರ ರೂಪಾಯಿ ಮೌಲ್ಯದ ಕಲಿಕೋಪಕರಣಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಆಂಗ್ಲ ಭಾಷೆಯಲ್ಲಿ ವಿದ್ಯಾರ್ಥಿಗಳು ಪ್ರೌಢಿಮೆ ಸಾಧಿಸಲಿ ಎಂಬ ಆಶಯದೊಂದಿಗೆ ಹದಿನೈದು ಸಾವಿರ ರೂಪಾಯಿ ಮೌಲ್ಯದ ಇಂಗ್ಲಿಷ್ ಭಾಷೆಯ ಪುಸ್ತಕಗಳನ್ನು ನೀಡಿದೆ ಎಂದು ಶಿಕ್ಷಕ ಶಂಕರ ದೇವರು ಹಿರೇಮಠ ಅವರು ತಿಳಿಸಿದರು.

ಈ ಸಮಯದಲ್ಲಿ ದೇವಿ ಕ್ಯಾಂಪ್ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಗಿರೀಶ್ ವಿ, ಅತಿಥಿ ಶಿಕ್ಷಕರಾದ ಪ್ರದೀಪ್ ಕುಮಾರ್,ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ರೇಣುಕಮ್ಮ, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಲಕ್ಷ್ಮಣ , ಮುಖ್ಯ ಅಡುಗೆಯವರಾದ ರೇಣುಕಾ,ಗ್ರಾಮಸ್ಥರು ಹಾಗೂ ಪಾಲಕರು ಉಪಸ್ಥಿತರಿದ್ದರು.

Category:Education



ProfileImg

Written by Avinash deshpande

Article Writer, Self Employee

0 Followers

0 Following