ಇಂದೇಕೊ ಈ ಪ್ರಯಾಣ ತುಂಬಾ ಪ್ರಯಾಸವೆನಿಸುತ್ತಿದೆ, ಬಸ್ಸು ಎಂದಿನ ಗತಿಗಿಂತ ಕಡಿಮೆ ವೇಗದಲ್ಲಿ ಸಾಗುತ್ತಿರೋತರ ಅನಿಸುತ್ತಿದೆಯೆಲ್ಲ? ಮನಸ್ಸು ಕೂಡಾ ಉದ್ವೇಗ, ಚಡಪಡಿಕೆ ಮೊದಲ ಬಾರಿ ಪ್ರಿಯತಮನ ಭೇಟಿ ಮಾಡಲು ಹೋಗುತ್ತಿರುವೆನಲ್ಲ ಅದಕ್ಕಿಭಾವ. ಅವನೆ ನನ್ನೆಲ್ಲಾ ಸರ್ವಸ್ವ, ಉಸಿರು ಎಲ್ಲವೂ. ನಂದು ಮಾತು ಜಾಸ್ತಿ, ಅವನದೊ ಮಾತು ಕಡಿಮೆ ಮೌನ ಜಾಸ್ತಿ. ಅದೇಗೆ ಒಂದಾದೆವೊ ನಾ ಕಣೆ. ಹಾಗೆ ಅವನ ಮೌನ ನನ್ನ ತುಂಬಾ ಬಾದಿಸುತ್ತೆ. ಆದರು ಅವನು ತನ್ನ ಕಣ್ಣಲ್ಲೆ ಪ್ರೀತಿ, ಕಾಳಜಿ, ಒಲವು ತೋರಿಸೊ ನನ್ನ ಹೃದಯ ಕದ್ದ ಚೋರ. ಅವನ ಬಗ್ಗೆ ಹೇಳೊಕೆ ಈ ಜನ್ಮ ಪೂರ್ತಿ ಬೇಕಾಗಬಹುದು ಅನಿಸತ್ತೆ. ಅವನು ಮತ್ತು ನಾನು ಮಾತನಾಡಿದ್ದು ಪದವಿ ಮುಗಿಯೊ ಹೊತ್ತಿಗೆ ಅದು ಕೂಡ ಆಟೋಗ್ರಾಪ್ ಬರೆದು ಕೊಡು ಎಂದಾಗ. ಆಮೇಲೆ ಅವನೊಟ್ಟಿಗೆ ಮಾತನಾಡುತ್ತ ತುಂಬಾ ಹತ್ತಿರರಾದೆವು. ಆಟೋಗ್ರಾಪ್ ನಲ್ಲಿ ನಾ ಬರೆದದ್ದು ಓದಿದ ಮೇಲೆ ಅವ ನನ್ನ ಜೊತೆ ಮಾತನಾಡುವ ಶೈಲಿ, ನೋಡುವ ನೋಟದಲ್ಲಿ ಪ್ರೀತಿ ತುಂಬಿರುತ್ತಿತ್ತು ನಾ ಅದನ್ನ ಗಮನಿಸಿದ್ದೆ. ಅವನಪ್ಪರಿಗೆ ವರ್ಗ ವಾದ್ದರಿಂದ ಅವನು ಬೇರೆ ಊರಿಗೆ ಹೋದನು. ಅವತ್ತಿನಿಂದ ಇಲ್ಲಿಯವರೆಗೂ ಕೇವಲ ಮೊಬೈಲ್ ನಲ್ಲಿ ಮಾತು, ಚಾಟಿಂಗ್ ಮಾಡುತ್ತಾ ಟಚ್ ಅಲ್ಲಿ ಇದ್ದೇವು..
ಹೃದಯ ಬಡಿತದ ಶಬ್ದ ನಂಗೆ ಕೇಳುತ್ತಿದೆ ಕಣೋ. ನಿನ್ನ ನೋಡೊ ತವಕ, ನಿನ್ನ ಕಣ್ತುಂಬ ನೋಡ್ಕೊತಿನ್ ಕಣೋ.. ನನ್ನ ಭಾವೋದ್ವೇಗ ನಿನ್ನೆದೆ ಯಲ್ಲಿ ತಲೆಯಿಟ್ಟು ಮಲಗಿದಾಗಲೇ ಶಾಂತವಾಗೋದು ಕಣೋ .... ನಿನ್ನಪ್ಪುಗೆಯಲ್ಲಿ ಕಳೆದೋಹೋಗುವೆ ಕಣೋ ....
ಬಸ್ಟ್ಯಾಂಡ್ ಬಸ್ ಸ್ಟಾಂಡ್...
ಅಬ್ಬಾ !!!.. ಅಂತು ಅವನಿರೊ ಊರಿಗೆ ತಲುಪಿದೆ..
ಅವ ಹೇಳಿದ ಪ್ಲೇಸ್ ಗೆ ಇನ್ನು 10 ನಿಮಿಷ ಬೇಕು ಹೋಗಲು,
ಆಟೋದಲ್ಲಿ ಹೋಗೋಣ.....
ಆಟೋ ........
✍️ ರಾಘವೇಂದ್ರ ಪಟಗಾರ