Do you have a passion for writing?Join Ayra as a Writertoday and start earning.

ಮೃತ ಸಮುದ್ರ: ಈ ಸಮುದ್ರಕ್ಕಿಳಿದವರು ಮುಳುಗಲ್ಲ ಯಾಕೆ?

ProfileImg
15 Oct '23
6 min read


image

ಸಮುದ್ರ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರಿಗು ಜೀವನದಲ್ಲಿ ಒಮ್ಮೆಯಾದರೂ ಸಮುದ್ರ ತೀರಕ್ಕೆ ಹೋಗಬೇಕು, ಸಮುದ್ರ ತೀರದ ಬಂಗಾರದ ಬಣ್ಣದ ಮರಳಿನಲ್ಲಿ ಹೊರಳಾಡಬೇಕು, ಸಮುದ್ರ ತೆರಗಳಿದೆ ಮೈಒಡ್ಡಿ ಹಾಗೇ ಮಲಗಿಬಿಡಬೇಕು ಎಂಬ ಆಸೆ ಹೊಂದಿರುತ್ತಾರೆ. ಆದರೆ, ಬಹುತೇಕ ಜನರಿಗೆ ಸಮುದ್ರವೆಂದರೆ ಒಂದು ರೀತಿಯ ಭಯ. ಎಲ್ಲಿ ಸಮುದ್ರದ ದೈತ್ಯಾಕಾರದ ತೆರೆಗಳುನಮ್ಮನ್ನು ಬರಸೆಳೆದು ತನ್ನೊಳಗೆ ಎಳೆದುಕೊಂಡು ಬಿಡುತ್ತವೆಯೋ, ನೀರೋಳಗೆ ಯಾವ ಅಪರಿಚೀತ ಪ್ರಾಣಿಗಳಿರುತ್ತವೆಯೋ ಎಂದ ಭಯವೂ ಇರುತ್ತದೆ. ಆದರೆ ಈ ಒಂದು ಸಮುದ್ರದಲ್ಲಿ ಅದ್ಯಾವ ಭಯವೊ ಇಲ್ಲ. ಇಲ್ಲಿ ನೀವು ನೀರಿಗಿಳಿದರೆ ಈಜ ಬೇಕಿಲ್ಲ, ಹಾಗಂತ ನೀವು ನೀರಿನಲ್ಲಿ ಮುಳುಗುವುದೂ ಇಲ್ಲ. ಈ ನೀರಿನಲ್ಲಿ ಯಾವ ಜಲಚರಗಳೂ ವಾಸಿಸುವುದಿಲ್ಲ. ಹೌದು, ಇಂಥಹದ್ದೊಂದು ವಿಶೇಷ ಸಮುದ್ರವನ್ನು ಮೃತ ಸಮುದ್ರ ಎಂದು ಕರೆಯಲಾಗುತ್ತದೆ. 'ಡೆಡ್ ಸೀ', 'ಸಾಲ್ಟ್ ಸೀ' ಮತ್ತು 'ಸೀ ಆಫ್ ಲಾಟ್' ಎಂಬ ಹೆಸರಿನಿಂದಲೂ ಇದನ್ನು ಕರೆಯಲಾಗುತ್ತದೆ. 

ಹೌದಾ..! ಏನಿದು ಡೆಡ್ ಸೀ ? ಎಲ್ಲಿದೆ ಈ ಸಮುದ್ರ ? ನೋಡಲು ಹೇಗಿರಬಹುದು ? ಮೃತ ಸಮುದ್ರದ ನೀರಿನಲ್ಲಿ ಜನರು ಯಾಕೆ ಮುಳುಗುವುದಿಲ್ಲ ? ಎಂಬ ಹತ್ತು ಹಲವು ಪ್ರಶ್ನೆಗಳು ನಿಮ್ಮ ತಲೆಯೊಳಗೆ ಗದ್ದಲ ಎಬ್ಬಿಸಿರಬಹುದು. ಈ ಎಲ್ಲ ಪ್ರಶ್ನೆಗಳಿಗೆ, ಗೊಂದಲಗಳಿಗೆ ಈ ಲೇಖನದಲ್ಲಿ ಉತ್ತರವಿದೆ.

ಎಲ್ಲಿದೆ ಈ ಮೃತ ಸಮುದ್ರ?

ಡೆಡ್ ಸೀ ಅಥವಾ ಮೃತ ಸಮುದ್ರವು ಮಧ್ಯ ಪ್ರಾಚ್ಯ ರಾಷ್ಟ್ರಗಳಾದ ಇಸ್ರೇಲ್‍ ದೇಶದ ಪಶ್ಚಿಮ ಭಾಗಕ್ಕೆ ಮತ್ತು ಜೋರ್ಡಾನ್‍ ದೇಶದ ಪೂರ್ವ ತೀರದ ನಡುವೆ ಹರಡಿಕೊಂಡಿದೆ. ಜೋರ್ಡಾನ್ ರಿಫ್ಟ್ ಕಣಿವೆಯಲ್ಲಿರುವ ಮೃತ ಸಮುದ್ರಕ್ಕೆ ಜೋರ್ಡಾನ್ ನದಿ ಮುಖ್ಯ ಉಪನದಿ. ಇದೊಂದು ನೈಋತ್ಯ ಏಷ್ಯಾ ಖಂಡದಲ್ಲಿರುವ ಉಪ್ಪು ಸರೋವರವಾಗಿದೆ. ಇದನ್ನು ಮೃತ ಸಮುದ್ರ, ಉಪ್ಪು ಸಮುದ್ರ ಮತ್ತು ಸೀ ಆಫ್ ಲಾಟ್ ಎಂಬ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಇದು ಸುಮಾರು ಲಕ್ಷ ವರ್ಷಗಳಷ್ಟು ಹಳೆಯ ಸರೋವರ ಎಂದು ವಿಜ್ಞಾನಿಗಳು ಹೇಳುತ್ತಾರೆ. 

ಮೃತ ಸಮುದ್ರದ ಆಳ, ಅಗಲಎಷ್ಟು ಗೊತ್ತಾ?

2019 ರಲ್ಲಿ ಬಿಡುಗಡೆಯಾದ ಮಾಹಿತಿಯೊಂದರ ಪ್ರಕಾರ ಮೃತ ಸಮುದ್ರವು, ಸಮುದ್ರ ಮಟ್ಟಕ್ಕಿಂತ 1,412 ಅಡಿಗಳಷ್ಟು (430.5 ಮೀಟರ್) ಕೆಳಗಿದೆ. 997 ಅಡಿಗಳಷ್ಟು (304 ಮೀಟರ್) ಆಳವಾಗಿದೆ. ಹೀಗಾಗಿ ವಿಶ್ವದ ಅತ್ಯಂತ ಆಳವಾದ ಹೈಪರ್ಸಲೈನ್ ಸರೋವರ ಎಂಬ ಖ್ಯಾತಿಗೆ ಉಪ್ಪು ಸರೋವರ ಪಾತ್ರವಾಗಿದೆ. ಗರಿಷ್ಠ ಉದ್ದ 50  ಕಿಲೋಮೀಟರ್ ಅಥವಾ 31 ಮೈಲಿ ಉದ್ದವಿದೆ (ಉತ್ತರ ಜಲಾನಯನ ಪ್ರದೇಶ ಮಾತ್ರ). 15 ಕಿಲೋ ಮೀಟರ್ ಅಥವಾ 9.3 ಮೈಲಿಯಷ್ಟು ಗರಿಷ್ಠ ಅಗಲ ಹೊಂದಿದೆ. ಇನ್ನು ಮೇಲ್ಮೈ ವಿಸ್ತೀರ್ಣ 234 ಚದರ ಮೈಲಿಯಷ್ಟಿದೆ. 

ಮೃತ ಸಮುದ್ರ ಯಾಕೆ ಬೇರೆಡೆಗೆ ಹರಿಯುವುದಿಲ್ಲ?

ಮೂಲಗಳ ಪ್ರಕಾರ ಉಪ್ಪು ನೀರಿನ ಈ ಸರೋವರವು ಹಲವು ಮಿಲಿಯನ್ ವರ್ಷಗಳ ಹಿಂದೆ ಮೆಡಿಟರೇನಿಯನ್ ಸಮುದ್ರದೊಂದಿಗೆ ಸಂಪರ್ಕ ಹೊಂದಿತ್ತು. 

ಕಾಲಾನಂತರ ಆಫ್ರಿಕನ್ ಮತ್ತು ಅರೇಬಿಯನ್ ಟೆಕ್ಟೋನಿಕ್ ಶಿಲಾ ಪದರಗಳು ಅತ್ತಿತ್ತ ಸರಿಯುವ ಘರ್ಷಣೆಯಿಂದಾಗಿ ಉಪ್ಪು ಸರೋವರಕ್ಕೆ ಮೆಡಿಟೇರೇನಿಯನ್ ಸಮುದ್ರದ ಸಂಪರ್ಕ ಕಡಿದುಹೋಯಿತು. ಹೀಗಾಗಿ ಡೆಡ್ ಸೀ ಭೂಮಿಯ ಮೇಲೆ ನಿಂತ ನೀರಿನ ನೆಲೆಯಾಗಿ ಬದಲಾಯಿತು. ಬೇರೆಲ್ಲೂ ಹರಿಯದೆ ಜೋರ್ಡಾನ್ ಮತ್ತು ಇಸ್ರೇಲ್ ನಡುವಿನ ಮರುಭೂಮಿಯಲ್ಲಿ ನೆಲೆ ನಿಂತು ಮೃತ ಸಮುದ್ರವಾಗಿ ಬದಲಾಯಿತು ಎಂದು ಇತಿಹಾಸಕಾರರು ಹೇಳುತ್ತಾರೆ. 

ಮೃತ ಸಮುದ್ರದ ನೀರು ತೀರಾ ಉಪ್ಪಾಗಿರುವುದೇಕೆ?

ಮೃತ ಸಮುದ್ರಕ್ಕೆ ಸುತ್ತಮುತ್ತಲಿನ ಭೂಪ್ರದೇಶ ಮತ್ತು ಜೋರ್ಡಾನ ನದಿಯಿಂದ ತಾಜಾ ಸಿಹಿ ನೀರು ಹರಿದುಬರುತ್ತದೆ. ಜೋರ್ಡಾನ್ ಹೊರತುಪಡಿಸಿ ಬೈಬಲಿಕಲ್ ಅರ್ನಾನ್, ಮುಜಿಬ್ ನದಿಗಳು ಮೃತಸಮುದ್ರಕ್ಕೆ ದೊಡ್ಡ ನೀರಿನ ಮೂಲಗಳಾಗಿವೆ. ಹೀಗೆ ವಿವಿಧ ಮೂಲಗಳಿಂದ ಸರೋವರಕ್ಕೆ ಬಂದ ನೀರು ಬೇರೆಲ್ಲೂ ಹರಿಯಲು ಅವಕಾಶವಿಲ್ಲ. ಹೀಗಾಗಿ ಮರಳುಗಾಡಿನಲ್ಲಿ ಆವಿಯಾಗುವಂತಹ ನೀರು ತನ್ನಲ್ಲಿದ್ದ ಉಪ್ಪಿನ ಅಂಶವನ್ನು ಇದ್ದಲ್ಲಿಯೇ ಉಳಿಸಿಬಿಡುತ್ತದೆ. ಹೀಗಾಗಿಯೇ ಈ ಸರೋವರದ ನೀರಿನಲ್ಲಿ ಅತ್ಯಂತ ಅಧಿಕ ಪ್ರಮಾಣದ ಉಪ್ಪಿನ ಅಂಶ ಇದೆ. ಮೃತ ಸಮುದ್ರದ ಪ್ರತಿ ಒಂದು ಕೆ.ಜಿ. ನೀರಿನಲ್ಲಿ 300 ರಿಂದ 342 ಗ್ರಾಂನಷ್ಟು ಉಪ್ಪಿನಂಶ ಇದೆ. ಅಂದರೆ ಶೇಕಡಾ 30 ರಿಂದ 34.2 ರಷ್ಟು ಪ್ರಮಾಣದಲ್ಲಿ ಲವಣಾಂಶವನ್ನು ಈ ಸರೋವರದ ನೀರು ಹೊಂದಿರುತ್ತದೆ. ಇದು ವಿಶ್ವದ ಅತ್ಯಂತ ಹೆಚ್ಚು ಉಪ್ಪು ನೀರಿನ ಮೂಲಗಳಲ್ಲಿ ಒಂದಾಗಿದೆ. ಸಾಗರಗಳ ನೀರಿಗಿಂತ 9.6 ಪಟ್ಟುಹೆಚ್ಚು ಉಪ್ಪಿನ ಅಂಶ ಈ ನೀರಿನಲ್ಲಿದೆ ಎಂದು ಸಂಶೋಧನಗೆಳಿಂದ ತಿಳಿದುಬಂದಿವೆ. 

ಮೃತ ಸಮುದ್ರದ ನೀರಿನ ರಾಸಾಯನಿಕ ಸಂಯೋಜನೆ:

  1. ಮೆಗ್ನೀಸಿಯಮ್ ಕ್ಲೋರೈಡ್ (MgCl2) 30-34%
  2. ಪೊಟ್ಯಾಸಿಯಮ್ ಕ್ಲೋರೈಡ್ (KCl) 22-28%
  3. ಸೋಡಿಯಂ ಕ್ಲೋರೈಡ್ (NaCl) 4-8%
  4. ಕ್ಯಾಲ್ಸಿಯಂ ಕ್ಲೋರೈಡ್ (CaCl2) 0.3-0.7%
  5. ಮೆಗ್ನೀಸಿಯಮ್ ಬ್ರೋಮೈಡ್ (MgBr) 0.2-0.4%
  6. ಸಲ್ಫೇಟ್‌ಗಳು 0.1-0.2%
  7. ಸ್ಫಟಿಕೀಕರಣದ ನೀರು 26-32%
  8. ಕರಗದ ಘಟಕಗಳು (ಕಬ್ಬಿಣ, ಫ್ಲೋರಿನ್) 0.2%

ಇದನ್ನು ಮೃತ ಸಮುದ್ರ ಅನ್ನೋದು ಯಾಕೆ?

ಮೃತ ಸಮುದ್ರದ ನೀರಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಲವಣಾಂಶವನ್ನು ಹೊಂದಿದೆ. ಹೆಚ್ಚು ಉಪ್ಪಿನಾಂಶ ಹೊಂದಿರುವ ಕಾರಣದಿಂದಲೇ ಈ ಸಮುದ್ರದಲ್ಲಿ ಯಾವ ಜೀವಿಯೂ ಬದುಕುವುದಿಲ್ಲ. ಜಲಚರ ಜೀವಿಗಳು ಮಾತ್ರವಲ್ಲ, ಹುಲ್ಲು, ಗಿಡ ಗಂಟಿಗಳು, ಸಮುದ್ರ ತಳದಲ್ಲಿ ಬೆಳೆಯುವಂತ ಯಾವೊಂದು ಪಾಚಿಗಳೂ ಕೂಡ ಇಲ್ಲಿ ಬೆಳೆಯೋದಿಲ್ಲ. ಈ ಸಮುದ್ರದಲ್ಲಿ ಯಾವುದೇ ಜೀವಿಗಳು ಬದುಕಲು ಸಾಧ್ಯವಿಲ್ಲವಾದ್ದರಿಂದ ಸಮುದ್ರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ನೀರಿನಲ್ಲಿರುವ ವಿಷಕಾರಿ ಪ್ರಾಣಿಗಳು ಹಾಗೂ ವಿಷಜಂತುಗಳು ಕಚ್ಚುತ್ತವೆ ಎಂಬ ಭಯವೂ ಇಲ್ಲ. ಈ ಕಾರಣದಿಂದಲೂ ಪ್ರವಾಸಿಗರು ಇಲ್ಲಿ ನಿರ್ಭಯವಾಗಿ ಸಮಯ ಕಳೆಯಬಹುದು. ಅಲ್ಲದೇ ಡೆಡ್ ಸೀ ನೀರಿನಲ್ಲಿ ಪೊಟ್ಯಾಶ್, ಬ್ರೊಮೈಡ್, ಜಿಂಕ್, ಸಲ್ಫರ್, ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂನಂತಹ ಖನಿಜಾಂಶಗಳು ಹೇರಳವಾಗಿವೆ. ಆದ್ದರಿಂದಲೇ ಇದರಿಂದ ಉಂಟಾಗುವ ಉಪ್ಪನ್ನು ಕೂಡ ಬಳಕೆ ಮಾಡಲು ಸಾಧ್ಯವಿಲ್ಲ.

ಮೃತ ಸಮುದ್ರದಲ್ಲಿ ಯಾರೂ ಮುಳುಗುವುದಿಲ್ಲ..

ಈ ಸಮುದ್ರದಲ್ಲಿ ನೀರಿನ ಸಾಂದ್ರತೆ ತುಂಬಾ ಹೆಚ್ಚಿಗೆ ಇದ್ದು ಇದರಲ್ಲಿ ನೀರಿನಹರಿವು ಕೆಳಗಿನಿಂದ ಮೇಲ್ಮುಖವಾಗಿದೆ. ಮೃತ ಸಮುದ್ರದ ನೀರು 1.24 ಕೆಜಿ/ಲೀಟರ್ ಸಾಂದ್ರತೆಯನ್ನು ಹೊಂದಿದೆ, ಹೀಗಾಗಿ ಈ ನೀರು ನಮ್ಮನ್ನು ತೇಲುವಂತೆ ಮಾಡುತ್ತದೆ. ಹೀಗಾಗಿ ಸರೋವರಕ್ಕೆ ಇಳಿಯುವ ಯಾರೊಬ್ಬರೂ ಮುಳುಗುವುದಿಲ್ಲ. ಈಜು ಬಾರದವರೂ ಕೂಡ ಈ ಸಮುದ್ರದಲ್ಲಿ ಇಳಿಯಬಹುದು, ಹಾಯಾಗಿ ಮಲಗಬಹುದು. ನೀರಲ್ಲಿ ಮಲಗಿ ಆರಾಮಾಗಿ ಪುಸ್ತಕ, ಪತ್ರಿಕೆಗಳನ್ನು ಓದಬಹುದು, ಬಗೆ ಬಗೆಯ ಸೆಲ್ಫೀ ಕೂಡ ಕ್ಲಿಕ್ ಮಾಡಿಕೊಳ್ಳಬಹುದು. 

ಈ ಸರೋವರಕ್ಕೆ ಬರುತ್ತಾರೆ ಲಕ್ಷಾಂತರ ಪ್ರವಾಸಿಗರು.. 

ಈ ವಿಚಿತ್ರ ಹಾಗೂ ಅದ್ಭುತವಾದ ಸಮುದ್ರವನ್ನು ನೋಡಲು ಪ್ರಪಂಚದ ಮೂಲೆ ಮೊಲೆಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಾರೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ತಮಗೆ ಹೇಗೆ ಬೇಕೋ ಹಾಗೆ ಸ್ವಲ್ಪವೂ ಭಯವಿಲ್ಲದೇ ನೀರಿನ ಜೊತೆ ಆಟವಾಡುತ್ತಾರೆ. ಇದು ವಿಶ್ವದ ಮೊದಲ ಆರೋಗ್ಯ ರೆಸಾರ್ಟ್‌ಗಳಲ್ಲಿ ಒಂದಾಗಿದೆ.  ಈಜಿಪ್ಟಿನ ಮಮ್ಮಿಫಿಕೇಶನ್‌ಗಾಗಿ ಡಾಂಬರು, ರಸಗೊಬ್ಬರಗಳಿಗೆ ಪೊಟ್ಯಾಶ್‌ ಸೇರಿದಂತೆ ವಿವಿಧ ರೀತಿಯ ಉತ್ಪನ್ನಗಳಈ ಸರೋವರ ಪೂರೈಸುತ್ತದೆ.

ಈ ನೀರನಲ್ಲಿವೆ ಅನೇಕ ಔಷಧೀಯ ಗುಣಗಳು

ಡೆಡ್ ಸೀ ನೀರು ಹೆಚ್ಚಿನ ಲವಣಾಂಶ ಹೊಂದಿರುವುದರಿಂದಲೇ ಹೆಚ್ಚು ಪ್ರಖ್ಯಾತಿ ಪಡೆದಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಉಳಿದ ಎಲ್ಲ ಸಮುದ್ರದ ನೀರಿಗಿಂತ ಮೃತ ಸಮುದ್ರದ ನೀರು ಪ್ರತಿಶತ 33 ರಷ್ಟು ಹೆಚ್ಚಿನ ಉಪ್ಪಿನಂಶವನ್ನು ಹೊಂದಿದೆ. ಈ ನೀರಿನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಉಪ್ಪಿನ ಅಂಶವನ್ನು ಹೊಂದಿರುವ ಕಾರಣದಿಂದಲೇ ಇದು ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಹೀಗಾಗಿ ಮೃತ ಸಮುದ್ರದ ನೀರಿನಲ್ಲಿ ಸ್ನಾನ ಮಾಡುವುದರಿಂದ ಅನೇಕ ರೋಗಗಳು ದೂರವಾಗುತ್ತವೆ ಎನ್ನಲಾಗುತ್ತದೆ. ಈ ನೀರಲ್ಲಿ ಸ್ನಾನ ಮಾಡಲೆಂದೇ ಸಾವಿರಾರು ಜನರು ಇಲ್ಲಿಗೆ ಪ್ರವಾಸ ಹೊರಡುತ್ತಾರೆ. ಇದರ ನೀರನ್ನು ಕೂಡ ಅನೇಕ ಔಷಧಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಈ ಸರೋವರದ ಮಣ್ಣನ್ನು ಅನೇಕ ಸೌಂದರ್ಯ ವರ್ಧಕ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತದೆ.

ಮೃತ ಸಮುದ್ರದ ಮಣ್ಣು ಬಹಳ ಪ್ರಯೋಜನಕಾರಿ..

ಮೃತ ಸಮುದ್ರದ ಸಲ್ಫೈಡ್ ಮಣ್ಣನ್ನುಅದರ ಕೆಳಗಿನಿಂದ ಹೊರತೆಗೆಯಲಾಗುತ್ತದೆ. ಇವು ಗಮನಾರ್ಹವಾದ ಉರಿಯೂತದ ಮತ್ತು ಹಾರ್ಮೋನುಗಳ ಸಕ್ರಿಯ ಪರಿಣಾಮಗಳನ್ನು ಹೊಂದಿದ್ದು, ಹೆಚ್ಚಿನ ಖನಿಜೀಕರಣ (ಸುಮಾರು 300 ಗ್ರಾಂ/ಲೀ) ಮತ್ತು ದೊಡ್ಡ ಪ್ರಮಾಣದ ಬ್ರೋಮಿನ್ ಮತ್ತು ಅಯೋಡಿನ್‌ನಿಂದ ಗುಣಲಕ್ಷಣಗಳನ್ನು ಹೊಂದಿವೆ. ಮೃತ ಸಮುದ್ರದ ಮಣ್ಣು ತುಂಬಾ ಉತ್ತಮವಾಗಿದ್ದು, ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.

MM ಮಣ್ಣಿನ ಖನಿಜ ಪದಾರ್ಥಗಳು ಆಮ್ಲಜನಕದೊಂದಿಗೆ ದೇಹದ ಜೀವಕೋಶಗಳಿಗೆ ಪುಷ್ಟೀಕರಣ ಕೊಡುವುದರ ಜೊತೆಗೆ ಜೀವಾಣುಗಳ ದೇಹವನ್ನು ಶುದ್ಧೀಕರಿಸುತ್ತವೆ. ಚರ್ಮದಲ್ಲಿ ಅಗತ್ಯವಿರುವ ತೇವಾಂಶವನ್ನು ಉಳಿಸಿಕೊಳ್ಳಲು ಕಪ್ಪು ಮಣ್ಣಿನ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ. ಇದರ ಪರಿಣಾಮವಾಗಿ  ಬಳಕೆಯ ಕಾಸ್ಮೆಟಿಕ್ ಪರಿಣಾಮವು ಹೆಚ್ಚು ವರ್ಧಿಸುತ್ತದೆ. ಚರ್ಮವು ಹೆಚ್ಚು ಸ್ಥಿತಿಸ್ಥಾಪಕವಾಗುತ್ತದೆ, ಮುಖ ಸುಕ್ಕಾಗುವುದು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಹೀಲಿಂಗ್ ಕೆಸರು ಗಾಯದ ಅಂಗಾಂಶದ ತ್ವರಿತ ಗುಣಪಡಿಸುವಿಕೆಯನ್ನು ಉತ್ತೇಜಿಸುತ್ತದೆ.  ಚರ್ಮದ ಕಾಯಿಲೆಗಳು, ಸಂಧಿವಾತ, ಹಾಗೆಯೇ ದೇಹದ ಉಸಿರಾಟದ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ಕಪ್ಪು ಮಣ್ಣು ವಿಶೇಷವಾಗಿ ಉಪಯುಕ್ತವಾಗಿದೆ. ಮಸ್ಕ್ಯುಲೋಸ್ಕೆಲಿಟಲ್ ಸಿಸ್ಟಮ್ನ ರೋಗಗಳ ಚಿಕಿತ್ಸೆಯಲ್ಲಿ ಮಣ್ಣಿನ ಚಿಕಿತ್ಸೆಯ ವಿಧಾನಗಳನ್ನು ಸಹ ಸೂಚಿಸಲಾಗುತ್ತದೆ. 

ಮೃತ ಸಮುದ್ರದ ನೀರಿನಲ್ಲಿ ಮುಳುಗಿದ ನಂತರ, ಮಾನವ ದೇಹದಲ್ಲಿನ ಚಯಾಪಚಯವು ವೇಗಗೊಳ್ಳುತ್ತದೆ, ಎಲ್ಲಾ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ ಮತ್ತು ಖನಿಜಗಳ ಕೊರತೆಯಿರುವ ಚರ್ಮವು ನಯವಾದ ಮತ್ತು ನವಯೌವನ ಪಡೆಯುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಡೆಡ್ ಸೀ ಉಪ್ಪಿನ ಆಧಾರದ ಮೇಲೆ ತಯಾರಿಸಿದ ಸೌಂದರ್ಯವರ್ಧಕಗಳನ್ನು ಎ‍ಷ್ಟೋ ಕಂಪನಿಗಳು ಜಾಹೀರಾತು ಮಾಡಿದ್ದು, ಔಷಧಾಲಯಗಳು ಮತ್ತು ಅಂಗಡಿಗಳಲ್ಲಿ ಸ್ನಾನಕ್ಕಾಗಿ ಈ ಸಮುದ್ರದ ದಡದಲ್ಲಿ ಗಣಿಗಾರಿಕೆ ಮಾಡಿದ ಉಪ್ಪನ್ನು ಹೆಚ್ಚಾಗಿ ಬಳಸಿರುವುದನ್ನು ಕಾಣಬಹುದು. ಈ ಉಪ್ಪು ಮೃತಸಮುದ್ರದ ಖನಿಜಗಳನ್ನು ಹೊಂದಿದ್ದರೂ, ಸ್ನಾನದಲ್ಲಿ ಅಪೇಕ್ಷಿತ ಸಾಂದ್ರತೆಯನ್ನು ಸಾಧಿಸಲು, ಇದು ಸುಮಾರು 50-60 ಕಿಲೋಗ್ರಾಂಗಳಷ್ಟು ತೆಗೆದುಕೊಳ್ಳುತ್ತದೆ. 

ಬಹುಪಾಲು ಮೃತ ಸಮುದ್ರವು ಬಿಸಿ ಉಷ್ಣ ಬುಗ್ಗೆಗಳಿಂದ ನೀರನ್ನು "ತನ್ನ ಮೀಸಲುಗಳನ್ನು ಪುನಃ ತುಂಬಿಸುತ್ತದೆ" ಎಂಬ ಅಂಶವನ್ನು ನಮೂದಿಸುವುದು ಅಸಾಧ್ಯ.  ಇದು 300 ಮೀಟರ್ ಗಳಿಗಿಂತ ಹೆಚ್ಚು ಆಳದಲ್ಲಿ ಹೊಡೆಯುತ್ತದೆ. ಈ ಮೂಲಗಳಿಂದ, ಸಲ್ಫ ನೀರನ್ನು ಪ್ರವೇಶಿಸುತ್ತದೆ, ಇದು ಮಾನವ ದೇಹದಲ್ಲಿ ಚಯಾಪಚಯ ಪ್ರಕ್ರಿಯೆಗಳನ್ನು ವೇಗಗೊಳಿಸುತ್ತದೆ, ರಕ್ತದೊತ್ತಡವನ್ನು ಸ್ಥಿರಗೊಳಿಸುತ್ತದೆ ಮತ್ತು ಎಲ್ಲಾ ಜೀವಕೋಶಗಳಿಗೆ ಆಮ್ಲಜನಕದ ತ್ವರಿತ ವಿತರಣೆಗೆ ಕೊಡುಗೆ ನೀಡುತ್ತದೆ. 

ಇಲ್ಲಿ ಸಿಗುವ ಚಿಕಿತ್ಸೆಗಳು..

ಹವಾಮಾನ ಚಿಕಿತ್ಸೆ- ತಾಪಮಾನ, ಆರ್ದ್ರತೆ, ಬಿಸಿಲು, ವಾಯುಮಂಡಲದ ಒತ್ತಡ ಮತ್ತು ವಿಶೇಷ ವಾತಾವರಣದ ಘಟಕಗಳಂತಹ ಸ್ಥಳೀಯ ಹವಾಮಾನ ಲಕ್ಷಣಗಳನ್ನು ಬಳಸಿಕೊಳ್ಳುವ ಚಿಕಿತ್ಸೆ. ಹೆಲಿಯೊಥೆರಪಿ- ಸೂರ್ಯನ ವಿಕಿರಣದ ಜೈವಿಕ ಪರಿಣಾಮಗಳನ್ನು ಬಳಸಿಕೊಳ್ಳುವ ಚಿಕಿತ್ಸೆ. ಥಲಸೋಥೆರಪಿ- ಮೃತ ಸಮುದ್ರದ ನೀರಿನಲ್ಲಿ ಸ್ನಾನ ಮಾಡುವುದನ್ನು ಬಳಸಿಕೊಳ್ಳುವ ಚಿಕಿತ್ಸೆ. ಇಂಥ ಅನೇಕ ಚಿಕಿತ್ಸೆಗಳನ್ನು ಇಲ್ಲಿ ಪಡೆಯಬಹುದಾಗಿದೆ. 

ಮೃತ ಸಮುದ್ರ ಪ್ರದೇಶದಲ್ಲಿ ಹವಾಮಾನ

ಇಲ್ಲಿನ ಹವಾಮಾನವು ಮರುಭೂಮಿಯಾಗಿದೆ. ಬಹುತೇಕ ವರ್ಷಪೂರ್ತಿ ಬಿಸಿಲಿನ ದಿನ ಇರುತ್ತದೆ.  ಅಂಕಿ-ಅಂಶಗಳ ಪ್ರಕಾರ ವರ್ಷಕ್ಕೆ 330 ದಿನಗಳು. ಸುಮಾರು 50 ಮಿಮೀ ಮಳೆ ಬೀಳುತ್ತದೆ. ವಾಯುಮಂಡಲದ ಒತ್ತಡ, ಸಮುದ್ರ ಮಟ್ಟಕ್ಕೆ ಸಂಬಂಧಿಸಿದಂತೆ ಪ್ರದೇಶದ ಕಡಿಮೆ ಸ್ಥಳದಿಂದಾಗಿ, ಹೆಚ್ಚು, ಸುಮಾರು 800 mm Hg ಮತ್ತು ತುಂಬಾ ಸ್ಥಿರವಾಗಿರುತ್ತದೆ. ಬೇಸಿಗೆಯಲ್ಲಿ ಸರಾಸರಿ ಗಾಳಿಯ ಉಷ್ಣತೆಯು ಸುಮಾರು 40+, ಚಳಿಗಾಲದಲ್ಲಿ - ಸುಮಾರು 20+. ಸಮುದ್ರದಲ್ಲಿನ ನೀರಿನ ತಾಪಮಾನವು ಬೇಸಿಗೆಯಲ್ಲಿ 40+ ಡಿಗ್ರಿಗಳಿಂದ ಚಳಿಗಾಲದಲ್ಲಿ 17+ ವರೆಗೆ ಇರುತ್ತದೆ.

ಅಯಾನೀಕೃತ ಖನಿಜ ಆವಿ, ಡೆಡ್ ಸೀ ಪ್ರದೇಶದಲ್ಲಿನ ವಾತಾವರಣದ ದಟ್ಟವಾದ ಮತ್ತು ಹೆಚ್ಚಿನ ಅನಿಲ ಪದರವು ನೈಸರ್ಗಿಕ ಆಪ್ಟಿಕಲ್ ಫಿಲ್ಟರ್ ಅನ್ನು ರೂಪಿಸುತ್ತದೆ. ಇದು ಸೌರ ನೇರಳಾತೀತ ವಿಕಿರಣದ ಹಾರ್ಡ್ ಘಟಕವನ್ನು ಹೀರಿಕೊಳ್ಳುತ್ತದೆ. ಇಲ್ಲಿ ಆರೋಗ್ಯ ಸುಧಾರಿಸುವ ಸನ್ ಬಾತಿಂಗ್ ತೆಗೆದುಕೊಳ್ಳಲು ಅನನ್ಯ ಅವಕಾಶಗಳಿದ್ದು, ವೈದ್ಯರು ಸಾಮಾನ್ಯವಾಗಿ ದಿನಕ್ಕೆ 6 ರಿಂದ 8 ಗಂಟೆಗಳ ಕಾಲ ಹೊರಾಂಗಣದಲ್ಲಿ ಸೂರ್ಯನ ಸ್ನಾನವನ್ನು ಶಿಫಾರಸು ಮಾಡುತ್ತಾರೆ.

ಮೃತ ಸಮುದ್ರ ಪ್ರದೇಶದ ಐತಿಹಾಸಿಕ ಮತ್ತು ನೈಸರ್ಗಿಕ ಆಕರ್ಷಣೆಗಳು

ಮೃತ ಸಮುದ್ರವು ನಾಗರಿಕತೆಗಳಲ್ಲಿ ಅತ್ಯಂತ ಶ್ರೀಮಂತವಾಗಿದೆ. ಲಿಖಿತ ಮೂಲಗಳಿಂದ ತಿಳಿದು ಬಂದ ಅಂಶ ಏನೆಂದರೆ "ಡೆಡ್ ಸೀ ಸ್ಕ್ರಾಲ್ಸ್" ಮೃತ ಸಮುದ್ರದ ಉತ್ತರದಲ್ಲಿ  ಕಂಡುಬಂದ ಸ್ಥಳವಾಗಿದೆ. ಬಂಡೆಯ ಮೇಲೆ ನೆಲೆಗೊಂಡಿರುವ ಮಸಾಡಾ ಕೋಟೆ ಇಲ್ಲಿದ್ದು, ಇದು ಕಿಂಗ್ ಹೆರೋಡ್ ಹೆಸರು ಮತ್ತು ಅದರ ರಕ್ಷಕರ ವೀರರ ಕಾರ್ಯಕ್ಕೆ ಸಂಬಂಧಿಸಿದೆ. ಕೋಟೆಗೆ ಬಂಡೆಯ ಮೇಲ್ಭಾಗದಲ್ಲಿ ಕೇಬಲ್ ಕಾರನ್ನು ಹಾಕಲಾಗಿದ್ದು, ಸುಂದರವಾದ ಮಾರ್ಗವನ್ನು ಒಳಗೊಂಡಿದೆ. ಇದು ಬೆಳಕು ಮತ್ತು ಸಂಗೀತದ ಪರಿಣಾಮಗಳಿಂದ ಸಮೃದ್ಧವಾಗಿದ್ದು, ಕೋಟೆಯ ಇತಿಹಾಸದ ಬಗ್ಗೆ ಸಾರಿ ಹೇಳುತ್ತದೆ.

ಇಲ್ಲಿ, ಪ್ರತಿ ಕಲ್ಲು ಬೈಬಲ್ ನ  ಘಟನೆಗಳೊಂದಿಗೆ ಸಂಬಂಧಿಸಿದೆ. ಕ್ರಿಶ್ಚಿಯನ್ ನಂಬಿಕೆಯ ಮೂಲದ ಇತಿಹಾಸದೊಂದಿಗೆ, ಸಮುದ್ರದ ಉತ್ತರಕ್ಕೆ ಜೆರಿಕೊ, ನಗರಗಳಲ್ಲಿ ಅತ್ಯಂತ ಹಳೆಯದು. ಅದರಿಂದ ಸ್ವಲ್ಪ ದೂರದಲ್ಲಿ ಕಾರ್ ಎಲ್ ಯಾಹುದ್ ಇದೆ. ಅಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ, ಜಾನ್ ಬ್ಯಾಪ್ಟಿಸ್ಟ್ ಯೇಸುವಿನ ಬ್ಯಾಪ್ಟಿಸಮ್ ಮಾಡಿದರು. ಕಲ್ಲಿನ ಕಂಬಗಳನ್ನು ಹೋಲುವ ಖನಿಜ ರಚನೆಗಳು ಸಮುದ್ರ ತೀರದಲ್ಲಿ ಗೋಚರಿಸುತ್ತವೆ. ಅವುಗಳಲ್ಲಿ ಒಂದನ್ನು ಬೈಬಲ್‌ನಲ್ಲಿ ವಿವರಿಸಲಾಗಿದೆ ಮತ್ತು ಈಗ ಇದನ್ನು ಲಾಟ್‌ನ  ಕಂಬ ಎಂದು ಕರೆಯಲಾಗುತ್ತದೆ. ಇವು ಅಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. 

Category : Travel


ProfileImg

Written by Shiv