ಜೀವನದಲ್ಲಿ ಮತ್ತೆ ಮದುವೆಯೇ ಬೇಡವೆಂದು ಕುಳಿತಿದ್ದ ವಾರುಣಿ ಗೆ ಈಗೀಗ ಆರ್ಯನಲ್ಲಿ ಅನುರಕ್ತಳಾಗಿದ್ದಳು.
ಆರ್ಯ ವಾರುಣಿ ಇಬ್ಬರು ಬೆಂಗಳೂರುಲ್ಲಿ ಪ್ರತಿಷ್ಠಿತ ಸಾಫ್ಟ್ವೇರ್ ಕಂಪೆನಿಯಲ್ಲಿ ಉದ್ಯೋಗಿಗಳು .
ವಾರುಣಿ ಗೆ ಓದು ಮುಗಿಯುವ ಮುನ್ನವೇ ಪಕ್ಕದ ಊರಿನ ಮಹೇಶ್ ಜೊತೆ ಮದುವೆ ಆಗಿತ್ತು.
ಜಮೀನುದಾರರು ಒಳ್ಳೆ ಕುಲಸ್ಥರು ಪಕ್ಕದ ಉರಿನಲ್ಲಿಯೇ ಮಗಳು ಇರುತ್ತಾಳೆ ಎಂದು ವಾರುಣಿ ಯ ಅಪ್ಪ ಶ್ರೀನಿವಾಸ ರಾಯರು ಮಹೇಶ್ ನಿಗೆ ಕೊಟ್ಟು ಮದುವೆಮಾಡಿದ್ದರು.
ಮೊದಲು ಚೆನ್ನಾಗಿಯೇ ಇದ್ದ ಮಹೇಶ್ ,ಪ್ರೀತಿ ಪ್ರೇಮ ತೋರಿಸುತ್ತ ,ಚಿನ್ನ ಮುದ್ದು ಎನ್ನುತ್ತಾ ವಾರುಣಿ ಯನ್ನು
ನಂಬಿಸಿದ್ದ . ಮದುವೆ ಆಗಿ ಆರು ತಿಂಗಳನಂತರ ವಾರುಣಿಗೆ
ಇವನ ಒಂದೊಂದೇ ಆಟ ಗೊತ್ತಾಗುತ್ತ ಹೋಯಿತು.
ಅನುಮಾನದ ಪಿಶಾಚಿ ,ಹೆಂಡತಿ ಕುಳಿತರು ನಿಂತರು ತಪ್ಪು.
ರಾತ್ರಿ ಆದರೆ ಸ್ನೇಹಿತರಜೊತೆಸೇರಿ ಕುಡಿದು ಬರ್ತಾ ಇದ್ದ ,
ಮನೆಗೆ ಬರದ ದಿನ ಅವನು ತೋಟದ ಮನೆಯಲ್ಲಿ ಯಾವುದೋ ಹುಡುಗಿ ಜೊತೆ ಇದ್ದಾನೆ ಎಂದೇ ಅರ್ಥ.
ಸಹಿಸಿ ಸಾಕಾದ ವಾರುಣಿ ತವರಿನ ದಾರಿ ಹಿಡಿದಿದ್ದಳು,
ತವರಿನಲ್ಲಿ ಬೆಂಬಲ ಸಿಗದೆ ನಿನ್ನದೇ ತಪ್ಪು ದೊಡ್ಡವರು
ಸಹಿಸಿಕೊಳ್ಳಬೇಕೆಂಬ ಆರೋಪ ಕೇಳಿ ಅದುರಿ ಹೋದಳು.
ಇವಳ ಕಷ್ಟ ಕೇಳಿದ ಬಾಲ್ಯ ಸ್ನೇಹಿತೆ ಪ್ರಮತಿ ಇವಳ ಬಾಳಿಗೆ
ದಾರಿ ದೀಪ ವಾದಳು.
ಪ್ರಮತಿ ,ವಾರುಣಿಯನ್ನು ಕರೆದುಕೊಂಡುಬಂದು ತನ್ನ ಜೊತೆ ಬೆಂಗಳೂರುಲ್ಲಿ ಪಿ ಜಿ ಯಲ್ಲಿ ಇರಿಸಿಕೊಂಡಳು. ಅವಳ ಓದಿಗೆ ಸಹಾಯ ಮಾಡುತ್ತ ಪಾರ್ಟ್ ಟೈಮ್ ಕೆಲ್ಸ ಮಾಡಲು
ಒಂದು ಪುಟ್ಟ ಕಂಪೆನಿಯಲ್ಲಿ ರಿಸೆಪ್ಟಿನಿಸ್ಟ್ ಕೆಲಸಕೊಡಿಸಿದಳು.
ಗೆಳತಿ ಸಹಾಯದಿಂದ ಸಂಜೆ ಕಾಲೇಜ್ನಲ್ಲಿ ಅರ್ಧಕ್ಕೆ ನಿಂತಿದ್ದ
ಬಿ ಎಸ್ ಸಿ ಕಂಪ್ಯೂಟರ್ಸೈನ್ಸ್ ಪದವಿ ಮುಗಿಸಿದಳು..
ಸಾಫ್ಟ್ವೇರ ಕಂಪೆನಿಯಲ್ಲಿ ಕೆಲಸ ಸಿಕ್ಕಿತು.ಈಗ ಪ್ರಮತಿ ಮತ್ತು ವಾರುಣಿ ಸೇರಿ ಒಂದು ಪುಟ್ಟ ಮನೆ ಮಾಡಿಕೊಂಡಿದ್ದರು.
ಇದೆ ಕಂಪೆನಿಯಲ್ಲಿ ಪರಿಚಯವಾಗಿದ್ದೆ ಆರ್ಯ .
ಆರ್ಯನದು ಬಹಳಆಕರ್ಷಕ ವ್ಯಕ್ತಿತ್ವ ,ಬುದ್ದಿವಂತ ಎಲ್ಲಕ್ಕೂ ಮಿಗಿಲಾಗಿ ಹೆಂಗರುಳು ಉಳ್ಳ ಹುಡುಗ . ಮೂವತ್ತೈದಾದರು
ಅವನಿಷ್ಟದ ಹೆಣ್ಣು ಸಿಗದೆ ಒಂಟಿ ಆಗಿದ್ದ.
ಮೊದಲ ದಿನವೇ ವಾರುಣಿಯನ್ನು ನೋಡಿ ಆಕರ್ಷಿತನಾಗಿದ್ದ.
ಆಮೇಲೆ ಹಿನ್ನೆಲೆ ತಿಳಿದರು ಯಾವುದೇ ಭಾವನೆಗಳಿಗೆ ಒಳಗಾಗದೆ ನಿಜಕ್ಕೂ ಪ್ರೀತಿಸತೊಡಗಿದ್ದ.
ಎಲ್ಲ ಗೊತ್ತಿದ್ದರೂ ಅವಳ ಮನಸ್ಸಿಗೆ ನೋವಾಗಾದಂತೆ ನೆಡೆದುಕೊಳ್ಳುತ್ತಿದ್ದ.
ವಾರುಣಿ ಯನ್ನು ನೋಡಿದ ಗಾಲೆಲ್ಲ ,ಅವನ ಮನಸ್ದು ಹೃದಯ
ಎರಡು ಕಂಪಿಸುತ್ತಿದ್ದವು .ಅವಳು ಆಚೀಚೆ ಸುಳಿದಾಗಲೆಲ್ಲ
ಇವನ ಹೃದಯಕ್ಕೆ ತಂಗಾಳಿ ಬೀಸುತ್ತಿತ್ತು .
ಅವಳ ಉಸಿರು ತಾಕಿದೊಡನೆ ,ಅವನ ಕಪೋಲಗಳಲ್ಲಿ ಕೆಂಪು ಬಣ್ಣವು ,ಆಧಾರದಲ್ಲಿ ಸಣ್ಣ ಮಿಂಚಿನನಗೆಯು ಬಂದು ಹೋಗುತ್ತಿತ್ತು.
ಸ್ನೇಹವನ್ನು ಎಂದು ಗೆರೆ ದಾಟದೆ ಸೂಕ್ಷ್ಮವಾಗಿ ವಿಷಯ ತಿಳಿಸಿದ್ದ.
ವಾರುಣಿ ಯು ಅವನಲ್ಲಿನ ಸ್ನೇಹ ಕಂಡು ತನ್ನ ಮನದ ಮಾತುಗಳನ್ನು ನೋವುಗಳನ್ನು ಹಂಚಿಕೊಂಡಿದ್ದಳು.
ಈ ಮಾತು ಕಥೆಗಳು ಮುಂದೆ ಇಬ್ಬರಲ್ಲೂ ಕಾಣದ ಒಂದು ಬಂಧನವನ್ನು ಏರ್ಪಡಿಸಿತ್ತು.
ಇಬ್ಬರು ನೋಡಿದಾಗಲೆಲ್ಕ್ ಏನು ಹೇಳಲಾಗದೆ ಕಣ್ಣಿನ ಮೂಲಕ
ಸ್ನೇಹ ಪ್ರೀತಿ ಪ್ರೇಮ ವಿನಿಮಯಮಾಡಿಕೊಳ್ಳುತ್ತ ಇದ್ದರು.
ಅವಳಿಗೂ ಇತ್ತೀಚೆಗೆ ಕುಳಿತಲ್ಲಿ ನಿಂತಾಲ್ಲೂ ಆರ್ಯನೆ ಕಾಣು ತ್ತಿದ್ದ. ಇದನ್ನು ಗಮನಿಸಿದ ಪ್ರಮತಿ ,ಛೇಡಿಸಿದ್ದಳು ಏನಮ್ಮ
ಮರು ಮದುವೆ ಬೇಡವೆಂದೇ ,ಆರ್ಯನಲ್ಲಿ ಅದೇನು ಕಂಡೆ ,ನಿನ್ನ ಮುಖ ವೇ ಹೇಳುತ್ತಿದೆ ,ನಿನ್ನ ಕಣ್ಣಿನ ಹೊಳಪು
ಹೆಚ್ಚಿದೆ ,ಕೆನ್ನೆ ಜೇನು ಕಚ್ಚಿದಂತೆ ಆಗಿದೆ ,ಓಹೋ ವಿಷಯ ಮುಚ್ಚಿಡದೆ ಒಪ್ಪಿಕೊ ,ಆರ್ಯನಿಗೂ ಹೇಳು ,ಮದುವೆ ಆಗಿ ಚೆಂದ ಇರು ಎಂದು ತೃಪ್ತಿಯಿಂದ ಹಾರೈಸಿದಳು.
ಅಂತೂ ಇಂತೂ ಇಬ್ಬರು ಒಪ್ಪಿ ಒಂದು ದಿನ ಶುಭ ಮುಹೂರ್ತದಲ್ಲಿ ಸರಳವಾಗಿ ಹಿರಿಯರ ಸ್ನೇಹಿತರ ಸಹೋದ್ಯೋಗಿಗಳ ಸಮ್ಮುಖದಲ್ಲಿ ,ಒಂದು ಅನಾಥಾಲಯದಲ್ಲಿ
ವಿವಾಹ ಆದರು.
ಅಲ್ಲಿನ ಮಕ್ಕಳಿಗೆ ಸಿಹಿ ತಿಂಡಿ ಹಂಚಿ ಊಟ ಹಾಕಿಸಿ ಅವರು ಊಟ ಮಾಡಿ ಆರ್ಯ ನ ಚಿಕ್ಕ ಅರಮನೆಗೆ ವಾರುಣಿ ಮನೆ ಮನ ತುಂಬಿ ಬಂದಳು.
ವಾರುಣಿಗೆ ಅದು ಮತ್ತೆ ವಸಂತದ ಅನುಭವಆದರೆ ಆರ್ಯನಿಗೆ ಮೊದಲ ರಾತ್ರಿ.. ಪ್ರೀತಿಯಿಂದ ವಾರುಣಿಯನ್ನು ಅಪ್ಪಿದ ಆರ್ಯ
ನಿನ್ನೊಳಗಿನ ಹೃದಯದಲ್ಲಿ ನನ್ನ ಹೃದಯ ಬಂಧಿಸು ವಾರುಣಿ ಎಂದವನು ಅವಳ ಒಪ್ಪಿಗೆಯ ಮೇರೆಗೆ ಮೆಲ್ಲನೆ ವಾರುಣಿ ಯ
ತನು ಮನವನ್ನು ಅವರಿಸಿಕೊಂಡಿದ್ದ.
ಭೂಮಿ ಸೂರ್ಯನಕಿರಣಗಳಿಗೆ ಬೆಂದು ಹೋಗಿತ್ತು ,ಎಷ್ಟೋ ದಿನಗಳಿಂದ ಮೋಡ ಗಟ್ಟಿದ್ದ ಆಕಾಶ, ನಿಧಾನವಾಗಿ ಸಣ್ಣ ಸಣ್ಣ
ಹನಿ ಗಳ ಮೂಲಕ ಭೂಮಿಯನ್ನು ತಂಪೆರೆಯ ತೊಡಗಿತು.
ಬೆಳಗಿನಜಾವದ ಚಳಿಗೆ ಮುದುಡಿ ಮಲಗಿದ್ದ ವಾರುಣಿ ಎಚ್ಚರ ಗೊಂಡಾಗ ಆರ್ಯ ಅವಳ ತೋಳನ್ನು ಆಸರೆ ಪಡೆದು ನಿದ್ದೆ ಮಾಡುತ್ತಿದ್ದ.ಆರ್ಯನ ತಲೆ ಸವರುತ್ತಾ ನಿಧಾನವಾಗಿ ಎಚ್ಚಸರಿಸಿದ ವಾರುಣಿ ಆರ್ಯನಲ್ಲಿ ಶುಭೋದಯ
ಆರ್ಯ ,ನನ್ನ ಬಾಳಲಿ
ನಾನು ಕಳೆದುಕೊಂಡೀದ್ದ ,ಪ್ರೀತಿ ಸ್ನೇಹ ,ವಿಶ್ವಾಸ ,ಜೀವನದಲ್ಲಿ
ಮತ್ತೆ ಮತ್ತೆ ಬದುಕನ್ನು ಪ್ರೀತಿಸುತ್ತೇನೆ ಎಂಬ ಭರವಸೆ ನೀಡಿದ್ದು
ನೀವು ಆರ್ಯಾ,ಲವ್ ಯು ಸೋ ಮಚ್ ,ಆರ್ಯಾ ನಿಜಕ್ಕೂ
ನನ್ನ ಬಾಳಲ್ಲಿ ನಿಮ್ಮಿಂದಲೇ ಅರುಣೋದಯ ...ನನೆಂದು ನಿಮ್ಮ ಹೃದಯದರಸಿ ಎನ್ನುತ್ತ ಅವನ ಮಡಿಲಲ್ಲಿ ತಲೆ ಇಟ್ಟವಳಿಗೆ ಕಣ್ಣಿನಲ್ಲಿ ಆನಂದ ಬಾಷ್ಪ ಹರಿಯುತ್ತಿತ್ತು.
ಎಚ್ ಎಸ್ ಭವಾನಿ ಉಪಾಧ್ಯ.
ಬೆಂಗಳೂರು.
ನಾನು ಲೇಖಕಿ.ಬರೆಯುವುದು ನನಗೆ ಅತ್ಯಂತ ಇಷ್ಟ. ಓದು ಬರಹ ನನ್ನ ಬದುಕಿನ ಭಾಗ.6363008419