ಧೈರ್ಯಯೇ ಸಾಹಸೆ ಲಕ್ಷ್ಮೀ

ProfileImg
28 Jun '24
2 min read


image

ಧೈರ್ಯೆ ಸಾಹಸೆ ಲಕ್ಷ್ಮಿ 

            ಜಗತ್ತಲ್ಲಿ ಸ್ತ್ರೀ ಇಲ್ಲ ಅಂದಿದ್ದರೆ ಜಗತ್ತೇ ಇಲ್ಲ ಅದಕ್ಕೆ ಜಗತ್ ಜನನಿ ಅನ್ನುತ್ತಾರೆ, ಅನಾಧಿ ಕಾಲದಿಂದಲೂ ಹೆಣ್ಣನ್ನು ಅಬಲೆ, ಧರ್ಯ ಸಾಲದು ಗಂಡಸಷ್ಟು ಬಲಶಾಲಿ ಅಲ್ಲಾ ಅಂತ ಮೊದಲಿಂದಲೂ ಇದನ್ನೂ ಹೇಳಿಕೊಂಡು ಬಂದಿರುವುದು ಲೋಕರೂಡಿ.ಗಂಡಸನ್ನ ಬಲಶಾಲಿ, ಆಜಾನು ಬಾಹು, ಧೈರ್ಯ ಶಾಲಿ ಅಂತ ಗಂಡಸನ್ನ ಅಟ್ಟಕ್ಕೆರಿಸಿದ್ದಾರೆ, ಆ ಬಲಿಷ್ಠ, ಧೈರ್ಯಶಾಲಿ, ಸಾಹಾಸ್ವಂತ, ಇದೆಲ್ಲಾ ಗುಣಗಳಿರುವ ಗಂಡಸು ಬಂದಿದ್ದಾದರೂ ಎಲ್ಲಿಂದ ಒಂದು ಸ್ತ್ರೀ ಗರ್ಭದಿಂದ ತಾನೆ, ಗಂಡಸು ಅಂತ ಆಕಾಶದಿಂದ ಏನೂ ಕೆಳಗೆ ಬಿದ್ದಿಲ್ಲ ನಿಜಾ ತಾನೆ.

              ನಿಜವಾದ ಧೈರ್ಯ ಶಾಲಿ ಯಾರು ಅಂತ ಹೇಳುವುದಾದರೆ ಒಂದು ಪಕ್ಕಾ ಉದಾಹರಣೆ ಒಬ್ಬ ತಂದೆ ತನ್ನ ಮಗ ಧೈರ್ಯ, ಬಲಿಷ್ಠ, ಅಜಾನು ಬಾಹು ಇವೆಲ್ಲಾ ಅರ್ಹತೆಗಳುಳ್ಳ ಮಗನನ್ನು ಏಕೆ ಬೇರೆಯವರ ಮನೆಗೆ ಕಳಿಸುವುದಿಲ್ಲ, ಆದರೆ ಮುದ್ದಾಗಿ ಸಾಕಿ ಪ್ರೀತಿಯಿಂದ ನೋಡಿಕೊಂಡು, ಸಾಕಿ ಸಲಹಿ ಒಂದು ದಿನ ತಮ್ಮ ಮುದ್ದಿನ ಮಗಳನ್ನ ಮದುವೆ ಮಾಡಿ ಕಳಿಸುತ್ತಾರೆ, ಆದರೆ ಒಂದು ಹೆಣ್ಣು ತನ್ನ ಕುಟುಂಬದವರನ್ನೆಲ್ಲ ಬಿಟ್ಟು ಧೈರ್ಯವಾಗಿ ಮುನ್ನುಗ್ಗಿ ಹೋಗುವವಳು ಒಂದು ಹೆಣ್ಣು ತಾನೆ.

              ಇದು ಒಂದು ಈಗಿನ ಉದಾಹರಣೆ ಆದರೆ ಧೈವ ಪುರಾಣಗಳಲ್ಲಿ ಕೂಡ ರಾಕ್ಷಸ ಸಂಹಾರ ಇವಕ್ಕೆಲ್ಲ ಒಬ್ಬ ಸ್ತ್ರೀ ಯೇ ಸರಿ ಎಂದು ತ್ರಿಮೂರ್ತಿಗಳು ಕೂಡ ತಮ್ಮ ಮೂರು ಜನರ ಶಕ್ತಿಯನ್ನು ಆದಿಶಕ್ತಿಯ ಶರೀರದಲ್ಲಿ ಹೊಕ್ಕು ಒಬ್ಬ ಹೆಸರಾಂತ ರಾಕ್ಷಸ ಸಂಹಾರವಾಗಲು ನೇರವಾಗುತ್ತಾರೆ, ಈಗಿನ ಕಾಲದಲ್ಲಿ ಹೆಣ್ಣು ಗಂಡಸಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ, ಎಲ್ಲಾ ಕ್ಷೇತ್ರದಲ್ಲೂ ಹೆಣ್ಣು ಒಂದು ಕೈ ಮುಂದೇನೆ, ಮೊದಲಿಗೆ ಅಡುಗೆ ಮನೆ ಬಿಟ್ಟು ಆಚೆ ಬರದ ಹೆಣ್ಣು ಈ ದಿನ ಸೈಕಲ್ ಇಂದ ಹಿಡಿದು ರಾಕೇಟ್ ಓಡಿಸುವ ತನಕ ಕೂಡ ಏನೂ ಕಮ್ಮಿ ಇಲ್ಲ, ಅದಕ್ಕೆ ಹೇಳೋದು ಸ್ತ್ರೀ ಬುದ್ದಿ ಪ್ರಳಯಾಂತಕ ಆದ್ದರಿಂದಲೇ ಅನಾದಿ ಕಾಲದಿಂದಲೂ ಧೈರ್ಯೆ ಸಾಹಸೆ ಲಕ್ಷ್ಮೀ ಅಂತಾರೆ ಹೊರತು ದ್ಯರ್ಯೆ ಸಾಹಸೆ ವಿಷ್ಣು ಅಂತ ಯಾರು ಹೇಳಲ್ಲ.

             ಹೇಗಿದೆ ಸ್ನೇಹಿತರೆ ಹೆಣ್ಣಿನ ಬಗ್ಗೆ ಒಂದು ಲೇಖನ ನಿಮ್ಮ ಮನಸ್ಸಿಗೆ ಸರಿ ಎನಿಸಿದರೆ ಒಂದು ಮೆಚ್ಚುಗೆ ಕೊಡಿ, ಸರಿನಾ ಮುಂದಿನ ಒಂದು ಒಳ್ಳೆಯ ಲೇಖನದೊಂದಿಗೆ ಬರುತ್ತೇನೆ.

ಧನ್ಯವಾದಗಳು 

ವಾಸುದೇವರಾವ್ (ವಾಸುಕಿ )




ProfileImg

Written by Vasudeva rao HN

0 Followers

0 Following