ಅನ್ನದಾತ



image

ಅನ್ನವ ನೀಡುವ ಅನ್ನದಾತನಿವನು
ನೇಗಿಲಯೋಗಿಯು ಇವನು
ಭೂತಾಯಿಯ ನೆಲದಲಿ ಬೆಳೆ
ಬೆಳೆಯುವನಿವನು
ಅನ್ನದಾತನಿವನು.

ಭೂತಾಯಿಯ ಮೇಲೆ ಹಸಿರು
ಕಾವ್ಯ ಬರೆದವವನು
ಸಕಲ ಜೀವರಾಶಿಗಳಿಗೆ
ಅನ್ನ ಕೊಡುವ ದೈವ ಇವನು
ಅನ್ನದಾತನಿವನು.

ಸೂರ್ಯಚಂದ್ರರಿಗೆ ಇಷ್ಟವಿರುವ
ಆಪ್ತನಿವನು ಬೆಳಿಗ್ಗೆ ಸಂಜೆ ಭಕ್ತಿಯಿಂದ ಕೈಮುಗಿದು ಗೌರವನೀಡುವ ಕಾಯಕ ಯೋಗಿ ಇವ ಅನ್ನದಾತನಿವನು.

ನಾವೆಲ್ಲರೂ ದಿನನಿತ್ಯ
ಊಟಮಾಡುವ ಅನ್ನದಲಿ
ಇವನ ಹೆಸರಿಗೆ ಕಷ್ಟಪಟ್ಟ
ಬೆವರಿನ ಹನಿಗಳಿವೆ
ಅದರಲ್ಲೇ ನಮ್ಮ ಉಸಿರಿದೆ
ಅನ್ನದಾತನಿವನು.

Category:Poetry



ProfileImg

Written by ಗಿರಿಜಾ ಎಸ್ ದೇಶಪಾಂಡೆ

Verified