ಭಗವದ್ಗೀತೆಯಲ್ಲಿ ಬರುವ ಶಂಖಗಳು

ProfileImg
25 Apr '24
3 min read


image

ಭಗವದ್ಗೀತೆಯ ಒಂದನೆಯ ಅಧ್ಯಾಯ ಅರ್ಜುನವಿಷಾದ ಯೋಗದಲ್ಲಿ ಬರುವ ಶಂಖಗಳ ವಿವರ ಈ ಕೆಳಗಿನಂತಿವೆ. 

ಪಾಂಚಜನ್ಯ - ಶ್ರೀಕೃಷ್ಣನ ಶಂಖ. ಪಂಚಜನ ಎಂಬ ಅಸುರ, ಚಕ್ರವನ ಎಂಬ ಪರ್ವತದಲ್ಲಿ, ಈ ಶಂಖದಲ್ಲಿ ಅಡಗಿದ್ದನು. ಶ್ರೀಕೃಷ್ಣನ ಗುರುಗಳಾದ ಸಾಂದೀಪನಿಯ ಮಗನನ್ನು ಈ ಅಸುರ ಬಚ್ಚಿಟ್ಟಿದ್ದನು. ಗುರುಗಳ ಬೇಡಿಕೆಯಂತೆ ಗುರುದಕ್ಷಿಣೆ ಕೊಡಲು ಶ್ರೀಕೃಷ್ಣ ಈ ಅಸುರನ ಸಂಹಾರ ಮಾಡಿ ಗುರುಗಳ ಮಗನನ್ನು ರಕ್ಷಿಸಿದನು. ಅಸುರ ಅಡಗಿದ್ದ ಶಂಖವನ್ನು ಶ್ರೀಕೃಷ್ಣ ಬಳಸಲು, "ಪಾಂಚಜನ್ಯ" ಎಂದು ಹೆಸರಾಯಿತು. ಇನ್ನೊಂದು ಕತೆಯಲ್ಲಿ, ಅಸುರ ಪಂಚಜನ ತಿಮಿಂಗಿಲದ ರೂಪದಲ್ಲಿ ಇದ್ದು, ಅವನ ಸಂಹಾರದ ನಂತರ ಅವನ ಹೊಟ್ಟೆಯಲ್ಲಿ ಗುರುಗಳ ಮಗ ಸಿಕ್ಕಿದನು ಮತ್ತು ಶಂಖ ಕೂಡ ದೊರಕಿತು ಎಂದು ಗೊತ್ತಾಗುತ್ತದೆ.

ಸಮುದ್ರ ಮಥನ ಕಾಲದಲ್ಲಿ ಈ ಶಂಖ ಉದ್ಭವಿಸಿತ್ತು ಎಂದು ಕೂಡ ಕಂಡುಬರುತ್ತದೆ. ಇದರ ನಾದ ಇತರರು ತಾಳಲಾರದೆ, ವಿಷ್ಣು ಇದನ್ನು ತನ್ನದಾಗಿಸಿಕೊಂಡನು.

 

ದೇವದತ್ತ - ಅರ್ಜುನನ ಶಂಖ. ಈ ಶಂಖ ಮೂಲತಃ ವರುಣನ ಶಂಖವಾಗಿದ್ದು, ನಂತರದಲ್ಲಿ ಅಸುರರ ವಾಸ್ತುಶಿಲ್ಪಿ ಮಯನ ಮುಖಾಂತರ ಅರ್ಜುನನಿಗೆ ದೊರಕಿತು. ಖಾಂಡವ ದಹನದ ಸಮಯದಲ್ಲಿ ಮಯನನ್ನು ಅಗ್ನಿದೇವನಿಂದ ರಕ್ಷಿಸಿದ ಕಾರಣ ಅರ್ಜುನನಿಗೆ ದೊರಕಿದ ಶಂಖ. ದೇವನಾದ ವರುಣನಿಂದ ದೊರತಿರುವ ಕಾರಣ ದೇವದತ್ತ ಎಂದು ಹೆಸರು.

 

ಪೌಂಡ್ರ - ಭೀಮನ ಶಂಖ. ಶತ್ರುಗಳಿಗೆ ನಡುಕ ಹುಟ್ಟಿಸುಂವತಹಾ ನಾದ ಹೊರಡಿಸುವ ಶಂಖ.

ಅನಂತವಿಜಯ - ಯುಧಿಷ್ಠಿರನ ಶಂಖ. ನಿರಂತರ ಜಯ ಎಂದು ಅರ್ಥ

ಸುಘೋಷ - ನಕುಲನ ಶಂಖ. ಸುಂದರವಾದ ನಾದ/ ಘೋಷ ಮಾಡುವ ಶಂಖ.

ಮಣಿಪುಷ್ಪಕ - ಸಹದೇವನ ಶಂಖ. ಸುಂದರವಾದ ಮಣಿ ಮತ್ತು ವಜ್ರಗಳಿಂದ ಅಲಂಕರಿಸಲ್ಪಟ್ಟ ಶಂಖ.

ಈ ಕೆಳಗಿನವು ಭಗವದ್ಗೀತೆಯಲ್ಲಿ ಇಲ್ಲದ ವಿವರಗಳು. ಇತರ ಮೂಲಗಳಿಂದ ಸಂಗ್ರಹಿಸಿರುವ ಶಂಖಗಳ ಹೆಸರುಗಳು ಮತ್ತು ಅವುಗಳು ಯಾರ ಬಳಿ ಇದ್ದವು ಎಂಬ ವಿವರ. 

ಹಿರಣ್ಯ ಗರ್ಭ - ಕರ್ಣನ ಶಂಖ.

ಶಶಾಂಖ - ಭೀಷ್ಮನ ಶಂಖ.

ವಿದಾರಕ - ದುರ್ಯೋಧನನ ಶಂಖ.

ಕಾಶಿರಾಜ - ಶಿಖಂಡಿ

ದೃಷ್ಟದ್ಯುಮ್ನ, ವಿರಾಟ - ಸ್ವಸ್ತಿಕ


ಶಂಖಗಳು ಸಮುದ್ರದಲ್ಲಿ ವಾಸಿಸುವ ಮೃದ್ವಂಗಿಗಳ ಕವಚ ಅಥವಾ ಚಿಪ್ಪು. ಇವುಗಳಲ್ಲಿ ವಾಮಾವರ್ತಿ ಮತ್ತು ದಕ್ಷಿಣಾವರ್ತಿ ಎಂಬ ವಿಧಗಳಿವೆ. ಇವುಗಳ ಸುರುಳಿ ಯಾವ ಕಡೆಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಈ ಸುರುಳಿ ಕೂಡ ಸುವರ್ಣಾನುಪಾತದ (golden ratio 1.618) ಪ್ರಕಾರ ಇರುತ್ತದೆ. ಹೆಚ್ಚಿನ ನಕ್ಷತ್ರಪುಂಜ ಅಥವಾ ಗೆಲಾಕ್ಸಿ ಕೂಡ ಇದೇ ಅನುಪಾತದಲ್ಲಿ ಕಂಡುಬರುತ್ತದೆ. ಶಂಖಗಳ ಉಪಯೋಗ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಕೂಡ ಇದೆ. ಶಂಖವನ್ನು ಊದುವುದರಿಂದ ಶ್ವಾಸಕೋಶದ ಆರೋಗ್ಯಕ್ಕೆ ಕೂಡ ಒಳ್ಳೆಯದು. ಶಂಖನಾದ ದೀರ್ಘವಾದ ಓಂಕಾರದ ರೀತಿಯಲ್ಲಿ ಕೇಳಿಸುತ್ತದೆ. ಪೂಜೆ ಮಾಡುವಾಗ ದೇವರ ಸ್ನಾನಕ್ಕೆ ಶಂಖದಲ್ಲಿ ತುಂಬಿಸಿಟ್ಟ ನೀರು ಬಳಕೆಯಾಗುತ್ತದೆ. ಶಂಖದಲ್ಲಿ ಲಕ್ಷ್ಮಿಯ ವಾಸ ಸ್ಥಾನ ಎಂದು ಹೇಳಲಾಗುತ್ತದೆ. ದೇವ ಸ್ಥಾನಗಳಲ್ಲಿ ಶಂಖದಿಂದ ತೀರ್ಥ ಕೊಡುವುದನ್ನು ನೋಡಬಹುದು. ಶಂಖದಿಂದ ಬಂದರೇ ತೀರ್ಥ ಎಂಬುದು ಒಂದು ಪ್ರಸಿದ್ಧ ಗಾದೆ ಮಾತು. - ಶ್ರೀಕೃಷ್ಣನ ಶಂಖ. ಪಂಚಜನ ಎಂಬ ಅಸುರ, ಚಕ್ರವನ ಎಂಬ ಪರ್ವತದಲ್ಲಿ, ಈ ಶಂಖದಲ್ಲಿ ಅಡಗಿದ್ದನು. ಶ್ರೀಕೃಷ್ಣನ ಗುರುಗಳಾದ ಸಾಂದೀಪನಿಯ ಮಗನನ್ನು ಈ ಅಸುರ ಬಚ್ಚಿಟ್ಟಿದ್ದನು. ಗುರುಗಳ ಬೇಡಿಕೆಯಂತೆ ಗುರುದಕ್ಷಿಣೆ ಕೊಡಲು ಶ್ರೀಕೃಷ್ಣ ಈ ಅಸುರನ ಸಂಹಾರ ಮಾಡಿ ಗುರುಗಳ ಮಗನನ್ನು ರಕ್ಷಿಸಿದನು. ಅಸುರ ಅಡಗಿದ್ದ ಶಂಖವನ್ನು ಶ್ರೀಕೃಷ್ಣ ಬಳಸಲು, "ಪಾಂಚಜನ್ಯ" ಎಂದು ಹೆಸರಾಯಿತು. ಇನ್ನೊಂದು ಕತೆಯಲ್ಲಿ, ಅಸುರ ಪಂಚಜನ ತಿಮಿಂಗಿಲದ ರೂಪದಲ್ಲಿ ಇದ್ದು, ಅವನ ಸಂಹಾರದ ನಂತರ ಅವನ ಹೊಟ್ಟೆಯಲ್ಲಿ ಗುರುಗಳ ಮಗ ಸಿಕ್ಕಿದನು ಮತ್ತು ಶಂಖ ಕೂಡ ದೊರಕಿತು ಎಂದು ಗೊತ್ತಾಗುತ್ತದೆ.

ಸಮುದ್ರ ಮಥನ ಕಾಲದಲ್ಲಿ ಈ ಶಂಖ ಉದ್ಭವಿಸಿತ್ತು ಎಂದು ಕೂಡ ಕಂಡುಬರುತ್ತದೆ. ಇದರ ನಾದ ಇತರರು ತಾಳಲಾರದೆ, ವಿಷ್ಣು ಇದನ್ನು ತನ್ನದಾಗಿಸಿಕೊಂಡನು.

 

ದೇವದತ್ತ - ಅರ್ಜುನನ ಶಂಖ. ಈ ಶಂಖ ಮೂಲತಃ ವರುಣನ ಶಂಖವಾಗಿದ್ದು, ನಂತರದಲ್ಲಿ ಅಸುರರ ವಾಸ್ತುಶಿಲ್ಪಿ ಮಯನ ಮುಖಾಂತರ ಅರ್ಜುನನಿಗೆ ದೊರಕಿತು. ಖಾಂಡವ ದಹನದ ಸಮಯದಲ್ಲಿ ಮಯನನ್ನು ಅಗ್ನಿದೇವನಿಂದ ರಕ್ಷಿಸಿದ ಕಾರಣ ಅರ್ಜುನನಿಗೆ ದೊರಕಿದ ಶಂಖ. ದೇವನಾದ ವರುಣನಿಂದ ದೊರತಿರುವ ಕಾರಣ ದೇವದತ್ತ ಎಂದು ಹೆಸರು.
 

ಪೌಂಡ್ರ - ಭೀಮನ ಶಂಖ. ಶತ್ರುಗಳಿಗೆ ನಡುಕ ಹುಟ್ಟಿಸುಂವತಹಾ ನಾದ ಹೊರಡಿಸುವ ಶಂಖ.

ಅನಂತವಿಜಯ - ಯುಧಿಷ್ಠಿರನ ಶಂಖ. ನಿರಂತರ ಜಯ ಎಂದು ಅರ್ಥ

ಸುಘೋಷ - ನಕುಲನ ಶಂಖ. ಸುಂದರವಾದ ನಾದ/ ಘೋಷ ಮಾಡುವ ಶಂಖ.

ಮಣಿಪುಷ್ಪಕ - ಸಹದೇವನ ಶಂಖ. ಸುಂದರವಾದ ಮಣಿ ಮತ್ತು ವಜ್ರಗಳಿಂದ ಅಲಂಕರಿಸಲ್ಪಟ್ಟ ಶಂಖ.

ಇತರ ಶಂಖಗಳ ಹೆಸರು

ಹಿರಣ್ಯ ಗರ್ಭ - ಕರ್ಣನ ಶಂಖ.

ಶಶಾಂಖ - ಭೀಷ್ಮನ ಶಂಖ.

ವಿದಾರಕ - ದುರ್ಯೋಧನನ ಶಂಖ.

ಕಾಶಿರಾಜ - ಶಿಖಂಡಿ

ದೃಷ್ಟದ್ಯುಮ್ನ, ವಿರಾಟ - ಸ್ವಸ್ತಿಕ

 

ಶಂಖಗಳು ಸಮುದ್ರದಲ್ಲಿ ವಾಸಿಸುವ ಮೃದ್ವಂಗಿಗಳ ಕವಚ ಅಥವಾ ಚಿಪ್ಪು. ಇವುಗಳಲ್ಲಿ ವಾಮಾವರ್ತಿ ಮತ್ತು ದಕ್ಷಿಣಾವರ್ತಿ ಎಂಬ ವಿಧಗಳಿವೆ. ಇವುಗಳ ಸುರುಳಿ ಯಾವ ಕಡೆಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಈ ಸುರುಳಿ ಕೂಡ ಸುವರ್ಣಾನುಪಾತದ (golden ratio 1.618) ಪ್ರಕಾರ ಇರುತ್ತದೆ. ಹೆಚ್ಚಿನ ನಕ್ಷತ್ರಪುಂಜ ಅಥವಾ ಗೆಲಾಕ್ಸಿ ಕೂಡ ಇದೇ ಅನುಪಾತದಲ್ಲಿ ಕಂಡುಬರುತ್ತದೆ. ಶಂಖಗಳ ಉಪಯೋಗ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಕೂಡ ಇದೆ. ಶಂಖವನ್ನು ಊದುವುದರಿಂದ ಶ್ವಾಸಕೋಶದ ಆರೋಗ್ಯಕ್ಕೆ ಕೂಡ ಒಳ್ಳೆಯದು. ಶಂಖನಾದ ದೀರ್ಘವಾದ ಓಂಕಾರದ ರೀತಿಯಲ್ಲಿ ಕೇಳಿಸುತ್ತದೆ. ಪೂಜೆ ಮಾಡುವಾಗ ದೇವರ ಸ್ನಾನಕ್ಕೆ ಶಂಖದಲ್ಲಿ ತುಂಬಿಸಿಟ್ಟ ನೀರು ಬಳಕೆಯಾಗುತ್ತದೆ. ಶಂಖದಲ್ಲಿ ಲಕ್ಷ್ಮಿಯ ವಾಸ ಸ್ಥಾನ ಎಂದು ಹೇಳಲಾಗುತ್ತದೆ. ದೇವ ಸ್ಥಾನಗಳಲ್ಲಿ ಶಂಖದಿಂದ ತೀರ್ಥ ಕೊಡುವುದನ್ನು ನೋಡಬಹುದು. ಶಂಖದಿಂದ ಬಂದರೇ ತೀರ್ಥ ಎಂಬುದು ಒಂದು ಪ್ರಸಿದ್ಧ ಗಾದೆ ಮಾತು.

Category:Spirituality



ProfileImg

Written by Sachin Mungila