ಜಾತಿ ಪದ್ಧತಿ

ಜಾತಿ.... ಜಾತಿ.... ಜಾತಿ



image

ಜಾತಿ,,,,, ಜಾತಿ,,,, ಜಾತಿ,,, 

ನಮ್ಮಲ್ಲಿ ಜಾತಿ ವ್ಯವಸ್ಥೆ ಸರಿಪಡಿಸುವುದು ಅಷ್ಟು ಸುಲಭವಲ್ಲ, ಈ ದೇಶದಲ್ಲಿ  ಚಾತುರ್ವರ್ಣ ವ್ಯವಸ್ಥೆ ಈ ದೇಶದ ಜನರ ರೋಮ ರೋಮಗಳಲ್ಲಿ ನರ ನಾಡಿಗಳಲ್ಲಿ ತುಂಬಿ ಹೋಗಿದೆ. ಉಚ್ಚ, ನೀಚ ಎನ್ನುವ ಭಾವನೆ ರಕ್ತದಲ್ಲೇ ಬೆರೆತು ಹೋಗಿದೆ . ಈ ಭಾವನೆ ಬರಲು ಹಲವು ಕಾರಣಗಳು ಇವೆ. 

ನಮ್ಮ ಜಾತಿಯೇ ಮೇಲೂ, ನಾವೇ ಶ್ರೇಷ್ಠ, ನಮ್ಮ ದೇವರೇ ಪವಿತ್ರ, ನಮ್ಮ ದೇವರಿಗೆ ಮೈಲಿಗೆ ಇಷ್ಟವಿಲ್ಲ ಅಂದರೂ ಪರವಾಗಿಲ್ಲ  ನಮ್ಮ ದೇವರಿಗೆ ನೀಚ ಜಾತಿಯವಾರು ಪೂಜೆ ಮಾಡಬಾರದು ಎನ್ನುವುದು ಅತೀ ಬುದ್ದಿವಂತರ ವಾದ,  ನಮ್ಮ ದೇವರ ದರ್ಶನ ಮಾಡಿದರೆ ನಮಗೆ ಕುತ್ತು, ಅಪಾಯ, ಹೀಗೆ ಹಲವಾರು ಅವೈಜ್ನಾನಿಕ ಕಾರಣಗಳನ್ನು ನೀಡುತ್ತಾರೆ,ಯಾವ ದೇವರು ಎದ್ದು ಬಂದು ಈ ಜಾತಿಯವರು ಮಾತ್ರ ನನಗೆ ಪೂಜೆ ಮಾಡಬೇಕು ಇತರರು ಮಾಡಬಾರದು ಅಂತ ಹೇಳಿಲ್ಲ ಈ ಮನುಷ್ಯರೇ ತಮ್ಮಿಷ್ಠ ಬಂದಂತೆ  ಕಾನೂನು ರೂಪಿಸಿಕೊಂಡಿರುತ್ತಾರೆ,  ಒಂದೊಂದು  ಜಾತಿ ಒಂದೊಂದು ದೇವರನ್ನು ಪೂಜಿಸುವುದು ಸಹಜ ಆದರೆ ನಮ್ಮ ದೇವರೇ ಶ್ರೇಷ್ಠ ಅಂತ ಹೇಳುವುದು ಹಾಗೆ ಹಾಗೆ ಕಟ್ಟುಪಾಡುಗಳನ್ನು ಪಾಲಿಸುವುದು ಎಷ್ಟರಮಟ್ಟಿಗೆ ಸರಿ?

ನಮ್ಮ ಹಿಂದೂ ಸಮಾಜದಲ್ಲಿ ಇರುವಷ್ಟು ಮಠಗಳು ಬೇರೆ ಯಾವ ಧರ್ಮದಲ್ಲೂ ಇಲ್ಲ ಇದ್ದರೂ ಸಿದ್ಧಾಂತಗಳು ಒಂದೇ ಇರುತ್ತವೆ ಆದರೆ ನಮ್ಮ ಮಠಗಳ ಸ್ವಾಮೀಜಿಗಳು ಅಖಂಡ ಹಿಂದೂ ಪರಿವಾರ ಅನುವುದನ್ನು ಮರೆದು ತಮ್ಮ ತಮ್ಮ ಜನಾಂಗಕ್ಕೆ ತೊಂದರೆ ಆದಾಗ ಮಾತ್ರ ಬೀದಿಗಿಳಿದು ಹೋರಾಟ ಮಾಡುತ್ತಾರೆ, 

ಹಿಂದೂ ಸಂಘಟನೆಗಳು ಇದಕ್ಕೆ ಹೊರತಾಗಿಲ್ಲ, ಉಚ್ಚ ಜಾತಿಯವರಿಗೆ ತೊಂದರೆ ಆದಾಗ ಮಾತ್ರ ಹಿಂದೂ ಮಂತ್ರ ಜಪಿಸುತ್ತಾರೆ ಅದೇ ಕೆಳಜಾತಿಯವನಿಗೆ ತೊಂದರೆ ಆದಾಗ ಅದು ಅವರ ಜನಾಂಗದ ಸಮಸ್ಯೆ ಅಂತ ಕಣ್ಣು ಮುಚ್ಚಿ ಕುಳಿತಿರುತ್ತಾರೆಯೇ ವಿನಃ ಕನಿಷ್ಠ ವಿರೋದವನ್ನು ವ್ಯಕ್ತಪಡಿಸುವುದಿಲ್ಲ,  

ಇಂದಿನ ಆಧುನಿಕ ಯುಗದಲ್ಲೂ ಎಷ್ಟು ಜನ ತಮ್ಮ ಮಕ್ಕಳು ಅಂತರ್ಜಾತಿ ವಿವಾಹ ಮಾಡಿಕೊಂಡರೆ ಒಪ್ಪುತ್ತಾರೆ? ಕೇವಲ ಬ್ರಾಹ್ಮಣ ಮಾತ್ರರಲ್ಲ. ಶೂದ್ರತಿಶೂದ್ರರಲ್ಲೂ ಕೂಡ ಅಂತರ್ಜಾತಿ ವಿವಾಹ ಒಪ್ಪುವುದಿಲ್ಲ ಹಾಗೆಯೇ ಈ ಜಾತಿ ವ್ಯವಸ್ಥೆ ಎಷ್ಟು ಕೆಟ್ಟದ್ದೋ ಅಷ್ಟೇ ಸಂಕೀರ್ಣ ಕೂಡ. ಯಾಕೆಂದರೆ ಎಲ್ಲ ಶೂದ್ರರೂ ದಲಿತರಲ್ಲ, ಎಲ್ಲ ದಲಿತರೂ ಅಸ್ಪೃಶ್ಯರಲ್ಲ.

ಹಾಗಾಗಿ ಈ ಜಾತಿ ವ್ಯವಸ್ಥೆ ಬಗ್ಗೆ ಸಂಶೋಧನೆ ಮಾಡುತ್ತಾ ಹೋದಂತೆ ಒಂದೋ ನಾಸ್ತಿಕರಾಗುತ್ತಾರೆ ಇಲ್ಲ ಮತಾಂತರ ಆಗುತ್ತಾರೆ. ಈ ಜಾತಿ ವ್ಯವಸ್ಥೆ ಎಲ್ಲ ನಮ್ಮ ಪುರಾಣ ಶಾಸ್ತ್ರಗಳಲ್ಲಿ ಇಲ್ಲ ಅಂತನೆ ಭಾವಿಸಿದ್ದರೆ ಅದು ನಿಮ್ಮ ತಪ್ಪು ಗ್ರಹಿಕೆ. ಯಾಕೆಂದರೆ ನಮ್ಮ ಹಲವು ಗ್ರಂಥಗಳಲ್ಲಿ ಜಾತಿ ವ್ಯವಸ್ಥೆ ಹಾಗೂ ಶೂದ್ರರನ್ನು ಅಲ್ಪರನ್ನಾಗಿಯೆ ಬಿಂಬಿಸಲಾಗಿದೆ.ಹಾಗೂ ಚಾತುರ್ವರ್ಣಗಳಿಂದ ದೂರ ಇರುವುವರನ್ನು ಪಂಚಮರೆಂದು ಆ ಜನಾಂಗವನ್ನು ಮತ್ತಷ್ಟು ಕೀಳಾಗಿ ನೋಡುವುದು ಸರ್ವೇ ಸಾಮಾನ್ಯವಾಗಿದೆ. 

ಬೇರೆ ಧರ್ಮದವರು ಅವರ ಧರ್ಮದ ಯಾವುದೇ ವ್ಯಕ್ತಿಗೆ ಸಮಸ್ಯೆ ಆದಾಗ ನಮ್ಮದೇ ಸಮಸ್ಯಾ ಅಂತ ಎಲ್ಲಾರು ಸೇರಿ ಸಹಾಯ ಮಾಡುತ್ತಾರೆ ಹಾಹು ಅಪಾಯದಿಂದ ಪಾರು ಮಾಡುತ್ತಾರೆ, ಆದರೆ ಹಿಂದೂ ಧರ್ಮದಲ್ಲಿ ಮಾತ್ರ ಧರ್ಮ ಅನ್ನುವುದಕ್ಕಿಂತ ಜಾತಿ ಎನ್ನುವುದನ್ನೇ ಹೆಚ್ಚಾಗಿ ಪಾಲಿಸುತ್ತಾರೆ, ಒಬ್ಬ ಹಿಂದೂ ಕುಟುಂಬ ಸಮಸ್ಯೆಗಳಲಿ ಸಿಲುಕಿದೆ ಅಂದರೆ ಸಹಾಯ ಮಾಡುವುದಕ್ಕಿಂತ ಮುಂಚೆ ಆ ಕುಟುಂಬ ಯಾವ ಜಾತಿ?, ಜನಾಂಗ,? ಎನ್ನುವುದರ ಮೇಲೆ ಅವನಿಗೆ ಸಹಾಯ ಅವಲಂಬಿತವಾಗುತ್ತದೆ. 

ಇದಕ್ಕೆಲ್ಲ ಕಾರಣ ಏನೇ ಇರಬಹುದು ಆದರೆ ಪ್ರಮುಖವಾದ ಕಾರಣ ರಾಜಕಾರಣ, ರಾಜಕೀಯ ಧುರೀಣರು, ಅವರಿಗೆ ಅದೊಂದೇ ಪ್ರಬಲ ಅಸ್ತ್ರ, ಇಂದಿನ ನಮ್ಮ ರಾಜಕೀಯ ವ್ಯವಸ್ಥೆ ಅಭಿವೃದ್ಧಿ, ಮೂಲಸೌಕರ್ಯ, ವ್ಯವಸಾಯ, ಉತ್ಪಾದನೆ ಬದಿಗಿರಿಸಿ ಧರ್ಮ,ಜಾತಿ, ಜನಾಂಗ ವ್ಯವಸ್ಥೆಯನ್ನು ಮುನ್ನೆಲೆಗೆ ತಂದು ತಮ್ಮ ತಮ್ಮ ರಾಜಕೀಯ ತೆವಲು ತೀರಿಸಿಕೊಳ್ಳುತ್ತಿದ್ದಾರೆ, ಒಬ್ಬೊಬ್ಬ ರಾಜಕಾರಣಿಯ ಹಿಂದೆ ಒಂದು ಜನಾಂಗ ಹಾಗೂ ಜಾತಿ ಇದೆ ಹಾಗೂ ಅವರೇ ಅದನ್ನು ಲಾಲಿಸಿ ಪೋಷಿಸುತ್ತಿದ್ದಾರೆ, 

ಹಿಂದೆ ನಮ್ಮ ರಾಜಕಾರಣಿಗಳು ಘೋಷಣೆಗಳು ಸಮಗ್ರ ಅಬಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದರೂ ಚುನಾವಣೆಯ ಸಂಧರ್ಭದಲ್ಲಿ ಜಾತಿಯ ಹೆಸರು ಬರುತ್ತಿರಲಿಲ್ಲ  ಯಾರಾದರೂ ಜಾತಿಯ ಬಗ್ಗೆ ಮಾತನಾಡಿದರೆ ನಿಷ್ಠುರವಾಗಿ ನಿರಾಕರಿಸುತ್ತಿದ್ದರು, 

ಪ್ರಸಿದ್ದ ರಾಜಕಾರಣಿ ಶಾಂತವೇರಿ ಗೋಪಾಲ ಗೌಡರು ಒಮ್ಮೆ ಚುನಾವಣೆಯ ಪ್ರಚಾರದಲಿದ್ದ ಸಂಧರ್ಭದಲ್ಲಿ ಕೆಲವು ವ್ಯಕ್ತಿಗಳು ಅವರ ಬಳಿ ಬಂದು ನಾವೆಲ್ಲ ಒಕ್ಕಲಿಗರು ಸೇರಿ ನಿಮ್ಮನ್ನು ಗೆಲ್ಲಿಸುತ್ತೇವೆ ಎಲ್ಲಾ ಒಕ್ಕಲಿಗರು ನಿಮಗೆ ಮತ ಚಲಾಯಿಸುವಂತೆ ಪ್ರಚಾರ ಮಾಡುತ್ತೇವೆ ಅಂತ ಹೇಳಿದಾಗ ಗೌಡರು “ ನನ್ನ ಜಾತಿಯನ್ನು ನೋಡಿ ನನ್ನ ಜಾತಿಯವರೆಲ್ಲ ನಂಗೆ ಮತ ಚಲ್ಲಾಯಿಸುವಂತಿದ್ದಾರೆ ನನಗೆ ನಿಮ್ಮ ಮತ ಬೇಡ, ನೀವ್ಯಾರು ನಂಗೆ ಮತ ಚಲಾಯಿಸಬೇಡಿ ಅಂತ ಖಡಾಖಂಡಿತವಾಗಿ ಹೇಳಿ ಅಲ್ಲಿಂದ ನಿರ್ಗಮಿಸಿದರು,…

ಹಾಗೆಯೇ ನಮ್ಮ ಕನ್ನಡದ ಕಣ್ಮಣಿ ಡಾ. ರಾಜಕುಮಾರ್ ರವರು ಮೈಸೂರಿನಲ್ಲಿ ತಮ್ಮ ಸಿನಿಮಾದ ಶತದಿನೋತ್ಸವದ ಸಂದರ್ಭರಲ್ಲಿ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ರಸ್ತೆ ಬದಿಯಲ್ಲಿ ಶುಭಾಷಯ ಕೋರಿ ನಿಲ್ಲಿಸಿದ್ದ ಬ್ಯಾನರ್ ನಲ್ಲಿ  “ ಇಂತಿ ಈಡಿಗ ಯುವಕ ಸಂಘ” ಅಂತ ಬರೆದಿದ್ದನ್ನು ಗಮನಿಸಿ ಸಂಬಂದಿಸಿದವರನ್ನು ಕರೆದು ವಿನಯದಿಂದ “ ನೀವು ಬರೆದಿರುವ ಆ ಬ್ಯಾನರ್ ನಲ್ಲಿ ಈಗೀಗ ಜನಾಂಗ ಅನ್ನುವದನ್ನು ತೆಗೆದು ಬಿಡಿ ತೆಗಿಯಲು ಸಾಧ್ಯವಿಲ್ಲವೆಂದರೆ ಆ ಬಾನ್ಯರನ್ನೆ ತೆಗೆದುಬಿಡಿ ಅಂತ ವಿನಂತಿಸಿದ್ದರು, 

ಎಷ್ಟೋ ಮಹನೀಯರು ಈ ಅನಿಷ್ಟ ಪದ್ದತಿಯ ನಿರ್ಮೂಲನಗೆ ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದರೂ ನಿರೀಕ್ಷಿತ ಮಟ್ಟದಲ್ಲಿ ಸಫಲವಾಗಿಲ್ಲ  ಎನ್ನುವುದು ಖೇದಕರ ಸಂಗತಿ,     

ಇದಕ್ಕೆ ಪರಿಹಾರವೇನು 

ಇದಕ್ಕೆ ಪರಿಹಾರ ಏನು ಎಂದರೆ ಹೊಸ ಶಾಸ್ತ್ರವನ್ನು ಪಾಲಿಸುವುದು. ಅದುವೇ ಮಾನವತೆಯ ಶಾಸ್ತ್ರ. ಹಸಿದ ಒಬ್ಬ ವ್ಯಕ್ತಿಯನ್ನು ಮನೆಗೆ ಕರೆದು ಊಟ ಕೊಡಲು ಸಾವಿರ ವರ್ಷಗಳ ಹಿಂದಿನ ಶಾಸ್ತ್ರ, ಸಂಪ್ರದಾಯ  ತೆಗೆದು ನೋಡವ ಅವಶ್ಯಕತೆಯಿಲ್ಲ. ಪ್ರೀತಿಸುವ ಎರಡು ಜೀವಗಳನ್ನು ಸೇರಿಸಲು ಯಾರ ಒಪ್ಪಿಗೆ ಪಡೆಯಬೇಕಾಗಿಲ್ಲ.

ಶ್ರೀ ಕೃಷ್ಣ ಗೀತೆಯಲ್ಲಿ ಹೀಗೆ ಹೇಳುತ್ತಾನೆ.

ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ (06-30)

“ಯಾರು ನನ್ನನ್ನು ಎಲ್ಲರಲ್ಲಿಯೂ ಮತ್ತು ಎಲ್ಲರನ್ನು ನನ್ನಲ್ಲಿ ಕಾಣುತ್ತಾನೋ ಅವನಿಗೆ ನಾನೆಂದೂ ಇಲ್ಲವಾಗುವುದಿಲ್ಲ.

 

ಹಾಗೆ ದೇವಿಯು ಸಪ್ತಶತಿಯಲ್ಲಿ ಹೀಗೆ ಹೇಳುತ್ತಾಳೆ

ಏಕೈವಾಹಂ ಜಗತ್ತತ್ರ ದ್ವಿತೀಯಾ ಕಾ ಮಮ ಪರಾ

ಈ ವಿಶ್ವದಲ್ಲಿ ಇರುವುದು ನಾನು ಮಾತ್ರ. ನನ್ನನ್ನು ಹೊರತುಪಡಿಸಿ ಇನ್ನಾರು ಇಲ್ಲ.

ಶ್ರೀಕೃಷ್ಣನೇ ಎಲ್ಲರಲ್ಲೂ ನಾನಿದ್ದೇನೆ ಎಂದು, ಶ್ರೀ ಮಾತೆಯೇ ನನ್ನ ಹೊರತು ಇನ್ನಾರು ಇಲ್ಲವೆಂದು ಸ್ಪಷ್ಟವಾಗಿ ಹೇಳಿರುವಾಗ ಎಲ್ಲರಲ್ಲೂ ಆ ಭಗವಾನ/ಭಗವತಿಯನ್ನೆ ಕಾಣಬೇಕು. ಮನುಷ್ಯನಾಗಲಿ ಮುನಿಯಾಗಲಿ ಭಗವಂತ/ಭಗವತಿಗಿಂತ ದೊಡ್ದವರು ಯಾರು ಇಲ್ಲ 

 

ಮುಂದಿನ ನಮ್ಮ ದೇಶದ ಸಮಾಜದ ಸಮುದಾಯದ ಭವಿಷ್ಯ ಏನೆಂಬುದು ಇಂದಿನ ಯುವ ಪೀಳಿಗೆ ಕೈಯಲ್ಲಿ ಇದೆ. ತಲತಲಾಂತರದಿಂದ ಬಂದ ಸಂಪ್ರದಾಯ ಪಾಲನೆ ಮಾಡಲು ಹೋಗಿ ಧರ್ಮ ಅವನತಿಗೆ ಕಾರಣವಾಗಬಾರದು ಆದರೆ ಅನಿಷ್ಟ ಪದ್ದತಿಯ ನಿರ್ಮೂಲನೆಗೆ ಶ್ರಮಿಸಬೇಕು,

 

ಕಾ.ವೆಂ. ಶ್ರೀನಿವಾಸ ಮೂರ್ತಿ 

ತಪ್ಪಿದ್ದರೆ ಕ್ಷಮಿಸಿ

Category:Philosophy



ProfileImg

Written by ಕಾ.ವೆಂ.ಶ್ರೀನಿವಾಸ ಮೂರ್ತಿ

0 Followers

0 Following