ಬಾಯಿ ಇಲ್ಲದವರಿಗೆ ಬದುಕಲು ಸಾಧ್ಯವಿಲ್ಲ.
ಏನಿಲ್ಲ. ವಿಷಯ ಬಹಳ ಸಣ್ಣದು..
ಇತ್ತೀಚೆಗೆ ಪ್ರಸಾದ್ 20 ಲಕ್ಷ ಲೈಫ್ ಕವರ್ ಇರುವ ಇನ್ಷೂರೆನ್ಸ್ ಪಾಲಿಸಿ ಪಡೆಯಲು ಅರ್ಜಿ ಸಲ್ಲಿಸಿದ್ದರು..
ಈ ಹಿಂದೆ ಮೂವತ್ತು ಲಕ್ಷದ್ದು ಮಾಡಿಸಿದ್ದು ಜೊತೆಗೆ 55 ವರ್ಷ ಆಗಿದ್ದ ಕಾರಣ
ನಿರೀಕ್ಷೆಯಂತೆ ಮೆಡಿಕಲ್ಸ್ ಟೆಸ್ಟ್ ಗೆ ಹಾಜರಾಗಲು ಹೇಳಿದರು.
ಅವರಿಗೆ ಬಿಪಿ ಶುಗರ್ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ.ಹಾಗಾಗಿ .ಒಂದು ಫ್ರೀ ಮೆಡಿಕಲ್ ಚೆಕ್ ಅಪ್ ಆಯಿತು ಅಂತ ಎಲ್ ಐ ಸಿ ಸೂಚಿಸಿದ ಸಮೀಪದ ಡಯಗ್ನೋಸಿಸ್ ಸೆಂಟರ್ ಗೆ ಹೋದರು.
ಅಲ್ಲಿ ಮೆಡಿಕಲ್ ಟೆಸ್ಟ್ ಗಳಿಗೆ 2500₹ ಬಿಲ್ ಆಯಿತು.ಇದನ್ನು ಪ್ರಸಾದ್ ಅಲ್ಲಿ ಅವರು ಸೂಚಿಸಿದ ಟೇಬಲ್ ಮೇಲೆ ಇರಿಸಿದ್ದ ಪೇಟಿಎಂ ಕಾರ್ಡ್ ಅನ್ನು ಸ್ಕಾನ್ ಮಾಡಿ ದುಡ್ಡು ಪಾವತಿಸಿದರು.ಕನ್ಫರ್ಮ್ ಮಾಡಿ ಬಿಲ್ ಕೊಟ್ಟರು.( ನಾವು ಪಾವತಿಸಿದ ದುಡ್ಡನ್ನು ನಂತರ ಎಲ್ ಐ ಸಿ ಹಿಂತಿರುಗಿಸುತ್ತದೆ )
ಆದರೆ ವಾರ ಕಳೆದರೂ ರಿಪೋರ್ಟ್ಸ ಬಂದಿಲ್ಲ ಎಂದು ಗೊತ್ತಾಗಿ ಎಲ್ ಐ ಸಿಯ ಮೇಲಧಿಕಾರಿಗಳಿಗೆ ತಿಳಿಸಿದೆ.
ಅವರು ಡಯಗ್ನೊಸಿಸ್ ಸೆಂಟರ್ ನ ಮಾಲಕನಲ್ಲಿ ಕೇಳಿದಾಗ ಪ್ರಸಾದ್ ಪಾವತಿಸಿದ್ದು ಬೇರೆಯವರಿಗೆ ಹೋಗಿದೆ,ನಮಗೆ ಬಂದಿಲ್ಲ.ಆ ವ್ಯಕ್ತಿ ಕೇಳಿದರೆ ಕೊಡುತ್ತಿಲ್ಲ.ನಮಗೆ ಪೇಮೆಂಟ್ ಆದರೆ ನಾವು ರಿಪೋರ್ಟ್ಸ್ ಕೊಡುದು " ಎಂದರು.
ಆಗ ನಾನು ದಿನೇಶ್ ಪ್ರಭುಗಳಲ್ಲಿ "ನೀವು ಮತ್ತೆ ಸುರಕ್ಷಿತವಾಗಿ 2500₹ ಪಾವತಿಸಿ ರಿಪೋರ್ಟ್ಸ್ ತರಿಸಿಕೊಳ್ಳಿ , ಈ ವಿಷಯವನ್ನು ನಾನು ಫಾಲೋ ಅಪ್ ಮಾಡ್ತೇನೆ ನಮ್ಮದುಡ್ಡನ್ನು ನಾವು ಹಿಂದೆ ಪಡೆದುಕೊಳ್ತೇವೆ" ಎಂದೆ.
ಹಾಗೆ ಅವರು ಮತ್ತೆ ಪುನಃ 2500 ₹ ಪಾವತಿಸಿದರು . ರಿಪೋರ್ಟ್ಸ್ ಬಂತು.ನಿರೀಕ್ಷೆಯಂತೆಯೇ ಎಲ್ಲವೂ ನಾರ್ಮಲ್ ಇತ್ತು.ಪಾಲಿಸಿಯೂ ಆಯಿತು
ಆ ಸಮಯದಲ್ಲಿ ಪ್ರಸಾದ್ ಅವರ ಪೇಟಿ ಎಂ್ ನಿಂದ ಯಾವ ಖಾತೆಗೆ ದುಡ್ಡು ಹೋಗಿದೆ ಎಂದು ತಿಳಿದು ಆ ವ್ಯಕ್ತಿಗೆ ಫೋನ್ ಮಾಡಿ ತಪ್ಪಿ ಬಂದಿದೆ.ಹಿಂದೆ ಕೊಡಿ ಎಂದಿದ್ದರು ಚೆಕ್ ಮಾಡ್ತೇನೆ ಎಂದು ಆ ವ್ಯಕ್ತಿ ಹೇಳಿದ್ದರು.ನಂತರ ಆ ವ್ಯಕ್ತಿ ಎಷ್ಟು ಸಲ ಕರೆ ಮಾಡಿದರೂ ಎತ್ತಲಿಲ್ಲ.
ಆಗ ನಾನು ನನ್ನ ನಂಬರಿಂದ ಕರೆ ಮಾಡಿದೆ ,ವಿಷಯ ಹೇಳುತ್ತಲೇ ಕಟ್ ಮಾಡಿದರು..ಮತ್ತೆ ಎತ್ತಲಿಲ್ಲ.ಹಾಗಾಗಿ ವಿಷಯ ತಿಳಿಸಿ ನನ್ನ ನಂಬರಿಂದ ಮೆಸೇಜ್ ಮಾಡಿ ಹಿಂತಿರುಗಿಸಲು ಕೇಳಿದೆ.ಮೆಸೇಜ್ ರಿಸೀವ್ ಆಯಿತು.ನಂತರ ಸುದ್ದಿ ಇಲ್ಲ..ಮತ್ತೆ ಒಂದು ವಾರ ಬಿಟ್ಟು ಫೋನ್ ಮಾಡಿದರೆ ಎತ್ತಲಿಲ್ಲ.ಮೆಸೇಜ್ ಮಾಡಿದರೆ ಹೋಗಲಿಲ್ಲ.ಮೆಸೇಜ್ ಬಾರದಂತೆ ಬ್ಲಾಕ್ ಮಾಡಿದ್ದರು.
ನಂತರ ನಾನು ನನ್ನ ಪುಸ್ತಕ ಪ್ರಕಟಣೆಯ ಸಿದ್ಧತೆಯಲ್ಲಿ ಮುಳುಗಿ ಈ ವಿಚಾರ ಮರೆತೆ
ಇವತ್ತು ನೆಂಪಾಯಿತು.ಆತನಿಗೆ ಕರೆ ಮಾಡಿದೆ..ಎತ್ತಲಿಲ್ಲ
.ಸಿಟ್ಟು ಬಂತು.ಒಂದೊಮ್ಮೆ ಆತನ ಆರ್ಥಿಕ ಪರಿಸ್ಥಿತಿ ವಿಷಮಿಸಿದ್ದು".ತನಗೆ ಕಷ್ಟ ಇದೆ.ದುಡ್ಡು ಖರ್ಚಾಗಿದೆ"ಎಂದಿದ್ದರೆ ಬಿಟ್ಟು ಬಿಡುತ್ತಿದ್ದೆ.
ಸ್ಕಾನ್ ಮಾಡಿ ಪಾವತಿಸುವಾಗ ಬೇರೆ ನಂಬರಿಗೆ ಹೋಗಲು ಸಾಧ್ಯವೇ ಇಲ್ಲ.ಆದರೂ ನಮಗೆ ಬಂದಿಲ್ಲ.ಯಾರಿಗೆ ಹೋಗಿದೆ ಆ ವ್ಯಕ್ತಿ ಕೊಡುತ್ತಾ ಇಲ್ಲ ಎಂದು ಡಯಗ್ನಿಸಿಸ್ ಸೆಂಟರ್ ನ ಮಾಲಕ ಹೇಳಿದಾಗಲೇ ನಮಗೆ ಸಂಶಯವಾಗಿತ್ತು.
ಈತ ನಮ್ಮ ಫೋನ್ ನಂಬರ್ ಅನ್ನೇ ಬ್ಲಾಕ್ ಮಾಡಿದಾಗ ಡಯಗ್ನೊಸಿಸ್ ಸೆಂಟರ್ ಮಾಲಿಕ ಈತ ಸೇರಿಕೊಂಡು ಗ್ರಾಹಕರಿಗೆ ಮೋಸ ಮಾಡಿದ್ದು ಸ್ಪಷ್ಟವಾಯಿತು ನನಗೆ.ಮೊದಲು ಆಕಸ್ಮಿಕ ವಾಗಿ ಬೇರೆಯವರಿಗೆ ಹೋಗಿದೆ ಎಂದು ಭಾವಿಸಿದ್ದೆ.
ನನ್ನ ಇನ್ನೊಂದು ನಂಬರಿನಿಂದ ಅವರಿಗೆ ತಕ್ಷಣವೇ ನಮ್ಮದುಡ್ಡು ಹಿಂತಿರುಗಿಸಿ ಇಲ್ಲವಾದರೆ ನಿಮ್ಮ ಮೇಲೆ ಡಯಗ್ನೊಸಿಸ್ ಸೆಂಟರ್ ಮಾಲಕನ ಮೇಲೆ ,ಪೇಟಿಎಂ ಮೇಲೆ ಪೋಲೀಸರಿಗೆ ದೂರು ಕೊಡ್ತೇನೆ ಎಂದು ಮೆಸೇಜ್ ಮಾಡಿದೆ.ಮೆಸೇಜ್ ರಿಸೀವ್ ಆಯಿತು.
ಐದು ನಿಮಿಷದ ಒಳಗೆ ನನ್ನ ಖಾತೆಗೆ 2500₹ ಹಾಕಿದರು
ಡಾ.ಲಕ್ಷೀ ಜಿ ಪ್ರಸಾದ
( ಎರಡು ವರ್ಷಗಳ ಹಿಂದಿನ ಅನುಭವ ಕಥನ)
0 Followers
0 Following