ಇದು ಎಲ್ಲೋರಾದ ಅದ್ಭುತ ಕಲೆ!

ProfileImg
07 Nov '23
4 min read


image

ಇದು ಶತ ಶತಮಾನಗಳ ಕಾಲ ಶಿಲೆಯಲ್ಲರಳಿದ ಶಿಲ್ಪ ಸೌಂದರ್ಯ.ಇದು ಆಧುನಿಕ ತಂತ್ರಜ್ಞಾನಕ್ಕೂ ಬಿಡಿಸಲಾಗದ ಒಗಟು. ನಮ್ಮ ಪೂರ್ವಜರ ನಿರ್ಮಾಣವಾದ ಕೌಶಲ್ಯವಿದು. ಪರಂಪರೆಯ ಊಹೆಗೂ ನಿಲುಕದಂತಿರುವ ವಾಸ್ತು ವೈಭವದ ಒಂದು ಭವ್ಯ ಐತಿಹಾಸಿಕ ಪರಂಪರೆಯ ಪಡೆಯುವಿಕೆ. ಅದೊಂದು ಅದ್ಭುತ ಸೃಷ್ಟಿಯ ಹಿಂದೆ ಅದೆಷ್ಟೋ ಜನರ ಶ್ರಮವಿದೆ. ಕೆಲಸಗಾರರ ಕಲ್ಪನೆ, ಅವತ್ತಿನ ಇಂಜಿನಿಯರ್ ಪ್ಲಾನಿಂಗ್ ಇದೆ.ಅದು ಯಾವುದು ಗೊತ್ತಾ? ಅದುವೇ ಮಹಾರಾಷ್ಟ್ರ ರಾಜ್ಯದ ಔರಂಗಬಾಜಿಯ ಎಲ್ಲೋರಾದ ಕೈಲಾಸನಾಥ ದೇವಾಲಯ. ದೇವಾಲಯದ ಬಗ್ಗೆ ಒಂದೆರಡು ಮಾತುಗಳಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲ. ಹಾಗಾಗಿ ಇದರ ಕುರಿತ ಸಮಗ್ರ ಲೇಖನ ಇಲ್ಲಿದೆ.  


ಈ ಕೈಲಾಸನಾಥ ದೇವಾಲಯ ನಿರ್ಮಾಣವಾಗಿದ್ದು 8ನೇ ಶತಮಾನದಲ್ಲಿ. ಕನ್ನಡ ನಾಡಿನ ವೀರ ಕುವರರಾದ ರಾಷ್ಟ್ರಕೂಟ ಅರಸರು ಇದನ್ನ ನಿರ್ಮಾಣ ಮಾಡಿದರು. ಸತತ ನೂರು ವರ್ಷಗಳ ಕಾಲ ಈ ದೇವಾಲಯ ಕಾರ್ಯ ನಡೆದಿತ್ತು. ಕಡೆಗಲ್ಲಿ ಬಂಡೆ ಕಲ್ಲುಗಳಲ್ಲಿ ಅದ್ಭುತ ಶಿಲ್ಪಕಲೆ ಅರಳಿ ನಿಂತಿತ್ತು. ಅಂದಹಾಗೆ ಎಲ್ಲೋರಾದಲ್ಲಿ ಕೇವಲ ಕೈಲಾಸನಾತ ದೇವಾಲಯ ಮಾತ್ರವಿಲ್ಲ, ಇಲ್ಲಿ 34 ವಿವಿಧ ಗುಹಾಂತರ ದೇವಾಲಯಗಳಿವೆ. ಒಂದು ದೊಡ್ಡ ಪರ್ವತವನ್ನು ಕೊರೆದು ಅದರ ಒಳಗೆ ದೇವಾಲಯವನ್ನು ನಿರ್ಮಿಸುವುದು ಎಂದರೆ ಅದು ಸುಲಭದ ಮಾತಲ್ಲ. ಇಂತಹ ಗುಹಾಂತರ ದೇವಾಲಯಗಳು ಬಾದಾಮಿಯಲ್ಲಿವೇ. ಆದರು ಅಲ್ಲಿನ ಕಲ್ಲಿಗೂ ಎಲ್ಲೋರಾದ ಕಲ್ಲಿಗೂ ಸಾಕಷ್ಟು ವ್ಯತ್ಯಾಸಗಳಿವೆ.  ಕಲ್ಲುಗಳು ಗಟ್ಟಿ ಬಂಡೆಗಳು ಅಂತಹ ಬಂಡೆಗಳನ್ನ ಕೊರೆದು ನಿರ್ಮಿಸಲಾಗಿರುವ 34 ಗುಹೆಗಳನ್ನ ನಾವಿಲ್ಲಿ ನೋಡಬಹುದು. ಇಲ್ಲಿರುವ 34 ಗುಹೆಗಳು ಮೂರು ಧರ್ಮಗಳ ಸಂಗಮವಾಗಿವೆ. ಆಯಾ ಧರ್ಮಗಳಿಗೆ ಸಂಬಂಧಿಸಿದಂತೆ ಕೆತ್ತನೆಗಳನ್ನ ಈ ಗುಹೆಗಳಲ್ಲಿ ಕಾಣಬಹುದು. ಒಂದರಿಂದ 12ರ ವರೆಗಿನ ಗುಹೆಗಳು ಬೌದ್ಧ ಧರ್ಮದ ಸಂಬಂಧಕ್ಕೆ ಸೇರಿದರೆ. 13 ರಿಂದ 29 ರವರೆಗಿನ ಗುಹೆಗಳು ಹಿಂದೂ ಧರ್ಮದ ಆಗಿವೆ. ಹಾಗೆ 30 ರಿಂದ 34ರ ವರೆಗಿನ ಗುಹೆಗಳು ಜೈನ ಧರ್ಮವನ್ನು ಪ್ರತಿನಿಧಿಸುತ್ತಿವೆ. ಅಂದರೆ ವಿವಿಧ ಕಾಲಘಟ್ಟದಲ್ಲಿ ಯಾವ ಯಾವ ಧರ್ಮಗಳು ಉಚ್ಚರಾಯ ಸ್ಥಾನದಲ್ಲಿದ್ದವು ಆ ಧರ್ಮಕ್ಕೆ ಸಂಬಂಧಿಸಿದಂತೆ ಗುಹೆಗಳು ನಿರ್ಮಾಣವಾಗಿವೆ ಎಂದು ಹೇಳಲಾಗುತ್ತದೆ. ಹೀಗಾಗಿನೇ ಈ ಅದ್ಭುತ ಸೃಷ್ಟಿಗೆ ಐದಾರು ಶತಮಾನಗಳು ಬೇಕಾದವು ಅನ್ನುವುದು ಸಂಶೋಧಕರ ಅಭಿಪ್ರಾಯ. ಆ 34 ಗುಹೆಗಳಲ್ಲಿ ಅತ್ಯಂತ ಪ್ರಮುಖವಾಗಿರುವುದು ಹಾಗೂ ಜಗತ್ತೇ ದಿಗ್ಬೇರಗಾಗಿ ನೋಡುತ್ತಿರುವುದು ಈ ಕೈಲಾಸನಾಥ ದೇವಾಲಯವನ್ನು.ಅಂದಹಾಗೆ ಈ ಅದ್ಭುತ ಕಲಾ ಕೃತಿಯನ್ನು ಒಂದಿಡಿ ಕಲ್ಲನ್ನ ಕಡಿದು ನಿರ್ಮಿಸಲಾಗಿದೆ. ಎಂಟನೇ ಶತಮಾನದಲ್ಲಿ ಕೇವಲ ಮಾನವ ಮಾತ್ರರಿಂದ ಅವತ್ತಿಗೆ ಲಭ್ಯವಿದ್ದ ಉಪಕರಣಗಳಿಂದ ಈ ದೇವಾಲಯವನ್ನು ಕಡಿದು ನಿರ್ಮಾಣ ಮಾಡಲಾಯಿತು. ಅಷ್ಟಾದರೂ ಇದರ ಸೌಂದರ್ಯ ಯಾವುದೇ ಆಧುನಿಕ ನಿರ್ಮಾಣಗಳಿಗಿಂತ ಕಡಿಮೆ ಇಲ್ಲ. ಹಾಗಾಗಿನೇ ಈ ಕೈಲಾಸನಾಥ ದೇವಾಲಯದ ನಿರ್ಮಾಣದ ಬಗ್ಗೆ ಪಶ್ಚಿಮಾತ್ಯರು ಹಲವಾರು ಅನುಮಾನಗಳನ್ನು ವ್ಯಕ್ತಪಡಿಸುತ್ತಿರುವುದು. ಅದಕ್ಕೆ ಕಾರಣವಾಗಿರುವ ಸಾಕಷ್ಟು ಅಂಶಗಳು ನಮ್ಮ ಮುಂದಿವೆ. 
ಅದರಲ್ಲಿ ಮೊದಲನೆಯದಾಗಿ ಕಾಡುವುದು ಕೈಲಾಸನಾಥ ದೇವಾಲಯದ ನಿರ್ಮಾಣ.ಇದು ಈ ವಿಶಾಲ ಶಿಲೆಯ ಭಾಗವಾಗಿದ್ದು, ನೂರು ವರ್ಷಗಳ ಕಾಲ ಇದನ್ನು ಕಡಿದು ನಿರ್ಮಾಣಿಸಲಾಗಿದೆ. ಹೀಗೆ ಬೃಹತ್ ಬಂಡೆಯನ್ನು ಕೊರೆಯುವಾಗ ಒಂದು ಲಕ್ಷಾಂತರ ಟನ್ ವೇಸ್ಟೇಜ್ ಗಳನ್ನು ಅವತ್ತಿನ ಜನ ಎಲ್ಲಿಗೆ ಸಾಗಿಸಿದರು ಅನ್ನುವುದು ಇವತ್ತಿಗೂ ನಿಗೂಢವಾಗಿ ಉಳಿದಿರುವಂತಹ ಪ್ರಶ್ನೆ. ಯಾಕೆ ಅಂದರೆ ಆ ವೇಸ್ಟೇಜ್ ಕಲ್ಲುಗಳು ಎಲ್ಲೋರಾದ ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲೂ ಕಾಣಿಸುತ್ತಿಲ್ಲ. ಸಾಕಷ್ಟು ಸಂಶೋಧನೆಗಳು ನಡೆದರು ಕೂಡ ಅವು ಇವತ್ತಿಗೂ ಪತ್ತೆಯಾಗಿಲ್ಲ. ಎರಡನೆಯದಾಗಿ ಈ ದೇವಾಲಯವನ್ನ ಗಮನಿಸಿದರೆ ಒಂದು ಕಲ್ಲನ್ನ ಇದೇ ರೀತಿಯಲ್ಲಿ ಕೊರಿಯಬೇಕು ಎಂಬುದನ್ನು ಪ್ಲಾನ್ ಮಾಡಿದರಲ್ಲ ಅದು ನಿಜಕ್ಕೂ ನಮ್ಮನ್ನ ನಿಬ್ಬರಗಾಗಿಸುತ್ತದೆ. ಯಾಕೆ ಅಂದರೆ ಈ ದೇವಾಲಯಕ್ಕೆ ಎಲ್ಲೂ ಹೊರಗಿನ ಕಲ್ಲುಗಳನ್ನು ತಂದು ಜೋಡಿಸಿಲ್ಲ. ಹಾಗಾಗಿ ಈ ದೇವಾಲಯವನ್ನು ನಿರ್ಮಿಸುವಾಗ ಅವತ್ತಿನ ಶಿಲ್ಪಿಗಳು ಎಲ್ಲೂ ಕೂಡ ಯಾಮಾರದೆ ಇದನ್ನ ಕಡೆದಿದ್ದಾರೆ. ಒಂದು ವೇಳೆ ಏನಾದರೂ ನಿರ್ಮಾಣ ಸಮಸ್ಯೆ ಉಂಟಾಗಿದ್ದರೆ ಅದು ಹಾಗೆ ಮುಕ್ಕಾಗಿ ಉಳಿದುಬಿಡುತ್ತಿತ್ತು. ಆದರೆ ಅಂತಹ ಯಾವ ಮುಕ್ಕುಗಳು ಅಲ್ಲಿ ಕಾಣಿಸಿಕೊಳ್ಳುವುದಿಲ್ಲ.ಇನ್ನು ಕೈಲಾಸನಾಥ ದೇವಾಲಯ ಬಹು ಅಂತಸ್ತು ಉಳ್ಳ ದೇವಾಲಯ.ಇದನ್ನು ನಿರ್ಮಿಸುವುದರಲ್ಲಿ ಭಾರತೀಯರು ಪರಿನೀತಿಯನ್ನು ಪಡೆದಿದ್ದರೂ ಎನ್ನುವುದನ್ನು ಇದರಿಂದ ಸ್ಪಷ್ಟವಾಗುತ್ತದೆ. ಇಂತಹ ಬಹು ಅಂತಸ್ತಿನ ನಿರ್ಮಾಣವನ್ನ ನಾವು ಬಾದಾಮಿ, ಅಜಂತ,ಎಲ್ಲೋರಗಳಲ್ಲಿ ಕಾಣಬಹುದಾಗಿದೆ. ಅದರ ಜೊತೆಗೆ ಕೈಲಾಸನಾಥ ದೇವಾಲಯದ ಹಿಂದೆ ಬಂದರೆ ನಮಗೆ ಅಲ್ಲೊಂದು ಅಚ್ಚರಿ ಕಾಣುತ್ತದೆ. ಆ ದೇವಾಲಯದ ಹಿಂಭಾಗದಲ್ಲಿ ಸುಮಾರು 20 ಅಡಿಗಳಷ್ಟು ಮುಂದಕ್ಕೆ ನೂರಾರು ಟನ್ ಭಾರವಿರುವ ಬಂಡೆ ಯಾವುದೇ ಆಧಾರವಿಲ್ಲದೆ ನಿಂತುಕೊಂಡಿದೆ. ನಿಜಕ್ಕೂ ಇದು ಎಂತವರನ್ನು ಅಚ್ಚರಿಗೊಳಿಸುತ್ತದೆ. ಇಲ್ಲಿರುವ ಪ್ರತಿಯೊಂದು ನಿರ್ಮಾಣವು ಒಂದೊಂದು ವೈಶಿಷ್ಟ್ಯತೆಯನ್ನು ಹೊಂದಿದೆ.

 ದೇವಾಲಯದ ಎರಡನೆಯ ಮಹಡಿಗೆ ಎರಡು ಕಡೆಗಳಿಂದ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದಾರೆ. ಅದೇ ಹಾದಿಯಲ್ಲಿ ದೇವಾಲಯದ ಮುಂದಿರುವ ಮಂಟಪಕ್ಕೆ ದಾರಿಯನ್ನು ಕಲ್ಪಿಸಲಾಗಿದೆ. ಇನ್ನು ದೇವಾಲಯದ ಸುತ್ತಲೂ ಬಂಡೆಗಳನ್ನು ಕೊರೆದು, ಅಲ್ಲೊಂದು ಗುಹೆಗಳನ್ನ ನಿರ್ಮಾಣ ಮಾಡಿದ್ದಾರೆ. ಅಲ್ಲಿ ಶಿವನಿಗೆ ಸಂಬಂಧಿಸಿದ ಶಿಲ್ಪಗಳನ್ನು ಕೆತ್ತಲಾಗಿದ್ದು, ಶತಮಾನಗಳು ಕಳೆದರೂ ಆ ಶಿಲ್ಪಗಳು ಇವತ್ತಿಗೂ ಜೀವಂತವಾಗಿರುವ ಹಾಗೆ ಕಾಣುತ್ತವೆ.ಇದೆಲ್ಲದರ ಜೊತೆಗೆ ಎಲ್ಲೋರಾದಲ್ಲಿರುವ ಕೈಲಾಸನಾಥನ ಸನ್ನಿಧಿ ಭಕ್ತರನ್ನ ಭಕ್ತಿ ಭಾವದಲ್ಲಿ ತೇಲುವಂತೆ ಮಾಡುತ್ತದೆ. ಆ ದೇವಾಲಯದ ಒಳಗೆ ಕೂತರೆ ಅದೆಂತಹದ್ದೋ ನೆಮ್ಮದಿ. ಅದು ನಮ್ಮ ಪುರಾತನ ದೇವಾಲಯಗಳು ವಿಶೇಷತೆಯು ಕೂಡ. ಇನ್ನೂ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಒಂದಷ್ಟು ಜಾಗಗಳು ಕೂಡ ಇವೆ. ಅಲ್ಲಿ ಸಣ್ಣದಾದ ಸುರಂಗಗಳಿರುವುದನ್ನ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಅವು ಮನುಷ್ಯ ನುಸುಳುವುದಕ್ಕೂ ಸಾಧ್ಯವಾಗದಷ್ಟು ಚಿಕ್ಕದಾಗಿದ್ದು ಹತ್ತಾರು ಅಡಿಗಳ ದೂರಕ್ಕೆ ಸಾಗಿರುವುದು. ಸಂಶೋಧಕರು ಈ ನಿರ್ಮಾಣಗಳನ್ನ ಮನುಷ್ಯನಿಗಿಂತಲೂ ಸಣ್ಣದಾದ ಆಕೃತಿಗಳ ನಿರ್ಮಾಣ ಮಾಡಿರಬೇಕು ಅನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆಯೇ ಹೊರತು ಅವತ್ತಿನ ಭಾರತೀಯ ಶಿಲ್ಪಕಾರರು ಯಂತ್ರಗಳನ್ನ ಬಳಸಿರಬಹುದು ಅನ್ನುವುದನ್ನ ಯಾವ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ಅಷ್ಟೇ ಅಲ್ಲದೆ ಈ ದೇವಾಲಯಗಳ ಈ ದೇವಾಲಯವು ಮನುಷ್ಯರು ನಿರ್ಮಿಸಿಯೇ ಇಲ್ಲ ಇದನ್ನ ನಿರ್ಮಿಸಿರುವುದು ಅನ್ಯಗ್ರಹ ಜೀವಿಗಳು ಅನ್ನುವ ವಾದವನ್ನು ಅವರು ತಿಳಿಸಿದ್ದಾರೆ. ಆದರೆ ಅದನ್ನ ಪ್ರೂವ್ ಮಾಡುವುದಕ್ಕೆ ಅವರಲ್ಲಿ ಯಾವುದೇ ರೀತಿಯ ಪುರಾವೆಗಳಿಲ್ಲ.ಹೀಗಾಗಿನೇ ಎಲ್ಲೋರಾದ ಕೈಲಾಸನಾಥ ದೇವಾಲಯ ಭಾರತದ ಅದ್ಭುತಗಳಲ್ಲಿ ಒಂದಾಗಿ ನಿಂತಿರುವುದು. ಇಲ್ಲಿರುವ ಶಿಲ್ಪಕಲೆಗೆ ಬೆಲೆಯನ್ನು ಕಟ್ಟಲು ಸಾಧ್ಯವೇ ಇಲ್ಲ. ಈ ದೇವಾಲಯದ ಗೋಡೆಗಳ ಮೇಲೆ ಕೆತ್ತಲಾಗಿರುವ ಶಿವನ ವಿಗ್ರಹಗಳು ನಿಜಕ್ಕೂ ನೋಡುಗರನ್ನು ಆಶ್ಚರ್ಯ ಮಾಡುತ್ತವೆ. 
ದೇವಾಲಯದ ಗುಡಿಗಳ ಮೇಲೆ 8ನೇ ಶತಮಾನದಲ್ಲಿ ರಾಮಾಯಣ ಮತ್ತು ಮಹಾಭಾರತ ದಂತಹ ಕಥೆಗಳನ್ನ ಕೆತ್ತಲಾಗಿರುವುದು ವಿಶೇಷ. 

ಅದರ ಅರ್ಥ ಶತಮಾನಗಳ ಪೂರ್ವದಿಂದಲೂ ಭಾರತೀಯರು ಮಹಾಭಾರತ, ರಾಮಾಯಣಗಳ ಬಗ್ಗೆ ಶ್ರದ್ಧೆ ಇಟ್ಕೊಂಡಿದ್ದರು ಎಂದು ಇದರಿಂದ ಸ್ಪಷ್ಟವಾಗುತ್ತದೆ. ಇನ್ನು ಈ ದೇವಾಲಯವನ್ನು ನಿರ್ಮಿಸುವುದಕ್ಕೆ ಶುರು ಮಾಡಿದ್ದು ರಾಷ್ಟ್ರಕೂಟರ ಅರಸ ಒಂದನೇ ಕೃಷ್ಣ ಎಂದು ಹೇಳಲಾಗುತ್ತದೆ. ಈ ವಿಚಾರವನ್ನ ಖಚಿತಪಡಿಸುವುದು ಗುಜರಾತಿನ ಮನೋದರದಲ್ಲಿ ಸಿಕ್ಕಿರುವಂತಹ ಅಮೃತ ಶಾಸನ. ಇನ್ನು ಈ ದೇವಾಲಯದಲ್ಲಿ ಬದಾಮಿ ಚಾಲುಕ್ಯರು ಹಾಗೂ ಪಲ್ಲವರ ಶೈಲಿಯ ವಾಸ್ತುಶಾಸ್ತ್ರವನ್ನು ನಾವು ಕಾಣಬಹುದು. ಈ ದೇವಾಲಯ ಪಟ್ಟದ ಕಲ್ಲಿನಲ್ಲಿರುವ ಗುರುಪಾಕ್ಷ ದೇವಾಲಯದಿಂದ ಪ್ರೇರಿತವಾಗಿದೆ ಎಂತಲೂ ಹೇಳಲಾಗುತ್ತದೆ. ನಿಜಕ್ಕೂ ಕೈಲಾಸನಾಥ ದೇವಾಲಯ ಜಗತ್ತಿನ ಅದ್ಭುತಗಳಲ್ಲಿ ಒಂದಾಗಿದೆ ಎಂದು ಹೇಳಬಹುದು. ಅದು ಭಾರತದ ವಾಸ್ತುಶಿಲ್ಪ ಮತ್ತು ಇಲ್ಲಿನ ಶಿಲ್ಪಿಗಳ ಪರಿಮಿತಿಯನ್ನು ಜಗತ್ತಿನ ಮುಂದೆ ಇಟ್ಟಿರುವುದಂತೂ ಸತ್ಯ. ಗುಹೆಗಳ ಪ್ರವೇಶವನ್ನು ಬಹು ಎತ್ತರದಿಂದ ನೋಡಿದಾಗ,ಆವರಣದಲ್ಲಿನ ಗುಹೆಗಳು ಒಂದರ ಪಕ್ಕ ಒಂದು ಇದ್ದಿದ್ದರಿಂದ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಆದರೆ ಕೈಲಾಸನಾಥ ದೇವಾಲಯವನ್ನು ಮಧ್ಯದಲ್ಲಿ ನಿರ್ಮಾಣ ಮಾಡಿರುವುದರಿಂದ ಅದು ವಿಶೇಷವಾಗಿ ಎದ್ದು ಕಾಣುತ್ತದೆ. ಹಾಗೆ ದೇವಾಲಯದ ಚಾವಣಿಯಲ್ಲಿ ನಾಲ್ಕು ದಿಕ್ಕಿಗೆ ಸಿಂಹಗಳ ಆಕಾರವಿರುವ ಶಿಲಾ ರೂಪಗಳಿದ್ದು ಅವುಗಳನ್ನ ಆಗಸದಿಂದ ಪಕ್ಷಿ ನೋಟದಲ್ಲಿ ಕಂಡಾಗ ಇಂಗ್ಲೀಷ್ ಎಕ್ಸ್ ಆಕಾರದಲ್ಲಿ ಗೋಚರಿಸುತ್ತದೆ. ಇಂತಹ ಸೂಕ್ಷ್ಮ ರೂಪವನ್ನು ನಿರ್ಮಿಸುವ ನಮ್ಮವರ ಕಾರ್ಯ ನಿಜ ಶ್ಲಾಗನೀಯ.
ಇಂತಹ ದೇವಾಲಯವನ್ನು ನಾಶ ಮಾಡುವುದಕ್ಕೆ ಔರಂಗಜೇಬ ಪ್ರಯತ್ನಪಟ್ಟಿದ್ದ. ಆದರೆ ಅವನ ಅಪಾರ ಸೇನೆಗೆ ಇಲ್ಲಿದ್ದ ಶಿಲಾ ವೈಭವವನ್ನು ಭಗ್ನ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಕೆಲವು ಶಿಲ್ಪಗಳಿಗೆ ಧಕ್ಕೆ ಉಂಟು ಮಾಡಿದ್ದನ್ನು ಬಿಟ್ಟರೆ ಅವರು ದೇವಾಲಯವನ್ನು ಸಂಪೂರ್ಣವಾಗಿ ನಾಶ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಇನ್ನು ಎಲ್ಲೋರಾದಲ್ಲಿ ಒಟ್ಟು 34 ಗುಹಾಂತರ ದೇವಾಲಯಗಳು ಇದ್ದು, ಅದರಲ್ಲಿ ಮೊದಲ 12 ಗುಹೆಗಳು ಅವು ಬೌದ್ಧ ಧರ್ಮಕ್ಕೆ ಅರ್ಪಿತವಾಗಿದೆ.17 ಎಂದು ಗುರುತಿಸಿಕೊಂಡಿದೆ. ಇಲ್ಲಿರುವ ಎಲ್ಲಾ ನಿರ್ಮಾಣಗಳಿಗಿಂತಲೂ ಕೈಲಾಸನಾಥ ದೇವಾಲಯ ನೋಡುಗರದ ಇನ್ನಿಲ್ಲದಂತೆ ತನ್ನ ದತ್ತ ಸೆಳೆಯುತ್ತಿದೆ. ಹೀಗಾಗಿಯೇ ಕೈಲಾಸನಾಥ ದೇವಾಲಯ ಭಾರತದ ಮುಕುಟ ಮನೆಯಾಗಿ ಗೋಚರಿಸುತ್ತಿರುವುದು.

Category:History



ProfileImg

Written by aishwarya chimmalagi

journalist