ಸಿ ಹೀರುವೆ

ProfileImg
25 Apr '24
2 min read


image

ಸ್ನೇಹಿತರೇ ನಮಸ್ತೆ.

ಈ ಅಂಕಣದ ಶೀರ್ಷಿಕೆ ಏನೋ ಒಂತರ ವಿಚಿತ್ರವಾಗಿದೆ ಅನಿಸುತ್ತಿದೆಯ?

ಹೌದು ಇದರ ಮೂಲಕ ನಾನು ನೆನಪು ಮಾಡ್ತಾ ಇದ್ದೇನೆ ನಾವು ಲೋಕದಲ್ಲಿ ಸಿಹಿ ಹೀರುವ ಇರುವೆಗಳು ಎಂದು

             ಸಿಹಿ+ಹೀರು+ಇರುವೆ=  ಸಿಹೀರುವೆ

ಮೊದಲೇ ಹೇಳಿದಂತೆ ನಾವು ಸಿಹಿ ಹೀರುವ ಇರುವೆಗಳೇ, ನಾವು ಮುತ್ತಿರುವುದು ಬೆಲ್ಲದಂತೆ ಸಿಹಿಯಾಗಿರುವ ತಾಯಿ ಭೂಮಿಯನ್ನ, ಹಾಗೆ ಯೋಚಿಸಿ ನೋಡಿ,, ಸಿಹಿ ಇಲ್ಲದೆ ಇರುವೆ ಮುತ್ತುವುದೇ..? ಸಾಧ್ಯವೇ ಇಲ್ಲ ಅಲ್ಲವೇ..!

ಹಾಗೆ ನಾವು ಮುತ್ತಿರುವ ಭೂಮಿಯಲ್ಲಿ ನಿಜವಾಗಿವು ಬೆಲ್ಲಕ್ಕಿಂತಲೂ ಹೆಚ್ಚಿನ ಸಿಹಿ ಇದೆ,  ಇರುವೆಗಳಂತೆ ಸಿಹಿ ಹೀರುವ ನಾವು ಅದರಂತೆಯೇ ಕಾಯಕ ಮಾಡುವುದು ಕರ್ತವ್ಯ ಅಲ್ಲವೇ.?

ಹೀಗೆ ಆಲೋಚಿಸುತ್ತಿರುವಾಗ ನನ್ನ ಅರಿವಿಗೆ ಬಂದ ಅಂಶಗಳು,

ನಾವು ತಿನ್ನುವ ಹಣ್ಣಿನ ಸಿಹಿ, ನಾವು ಹೀರುವ ಕಬ್ಬಿನ ಹಾಲಿನ ರಸ, ನಾವು ಕುಡಿಯುವ ತುಂಗೆಯ ಸಿರಿ, ಯಾರಿಂದ ಸಿಗುತ್ತಿದೆ ಅದಕ್ಕೆ ಸಿಹಿ ತುಂಬುತ್ತಿರುವವರು ಯಾರು?

ಸಿಹಿಯನ್ನು ಹಣ್ಣಿಗೆ, ಹಾಲಿನ ರಸವನ್ನು ಕಬ್ಬಿಗೆ, ಹಾರಿದ ಧಾಹಕ್ಕೆ ತುಂಗೆಗೆ ಕೃತಜ್ಞರಾಗೋದೇನೋ ಸರಿ ಆದರೆ, ಅದಕ್ಕೆ ಮೂಲ ಕತೃ ಯಾರು? ಅವರಿಗೆ ನಾವೇನಾದ್ರು ಮಾಡಿ ಋಣ ತೀರಿಸಬೇಕು ಅಲ್ಲವೇ, ಅದಕ್ಕಾಗಿ ತಾಯಿಭೂಮಿಗೆ ಈ ಅಂಕಣ ಸಮರ್ಪಣೆ.🙏

ಸರಿ ಇವಾಗ ಸಿಹಿಯ ವಿಷಯಕ್ಕೆ ಬರೋಣ.…

ಹಣ್ಣಿಗೆ, ಕಬ್ಬಿನ ಹಾಲಿಗೆ, ಸಿಹಿಯನ್ನು ತಳಿ ಕೊಡೋದೇನೋ ನಿಜ. ಆದರೆ ಆ ಜೀವ ಸಿಹಿ ರಸವನ್ನ ತನ್ನ ಬೇರಿನ ಮೂಲಕ ಹೀರೋದು ನಮ್ಮ ತಾಯಿ ಭೂಮಿ ಇಂದಲೇ..🥰ಹೀಗಲಾದರೂ ನಂಬೋಣಾವೆ ನಮ್ಮ ಭೂಮಿ ಬೆಲ್ಲ ಅಂತ🥰

ಗಂಗಾ ಸ್ನಾನ ತುಂಗಾ ಪಾನ ಅಂತ ಸಾರ್ವಕಾಲಿಕ ನುಡಿಯೆ ಇದೆ. ಗಂಗೆಯ ಸ್ನಾನದಂತೆ ಪವಿತ್ರ ತುಂಗೆಯ ಪಾನ.

ಭಾರತದಲ್ಲಿ ಅತ್ಯಂತ ಸಿಹಿ ನೀರಿನ ಸರೋವರದಲ್ಲಿ ಒಂದು ನಮ್ಮ ತುಂಗೆ.🙏 ಆ ತುಂಗೆಯ ಮಡಿಲಲ್ಲಿ ಇರೋ ನಾವೇ ಧನ್ಯರಲ್ವ.

ಇದು ನನಗೆ ಒಂದು ಗರ್ವದ ವಿಷಯ ಮತ್ತು ಅಷ್ಟೇ ಗೌರವ ಅದಕ್ಕೆ ಸಿಹಿ ನೀಡಿದ್ದು ನಮ್ಮ ತಾಯಿ ಭೂಮಿ ಅಂತ. 

ಹೀಗಾ ಹೇಳಿ ಭೂಮಿ ಬೆಲ್ಲ ತಾನೇ..?

ನಮ್ಮ ರಾಜ್ಯದ ಅತ್ಯಂತ ಹೆಚ್ಚಿನ ಜಲಾನಯನ ಪ್ರದೇಶ ಹೊಂದಿರುವ ಕೃಷ್ಣೆ ಅವಳ ಸಹೋದರಿಯರಾದ ತುಂಗೆ,ಭದ್ರೆ ಇವರೆಲ್ಲರೂ ನಮ್ಮ ಜೀವನದಿಗಳು.

ನನ್ನ  ಅರಿವಿಗೆ ಪುಷ್ಠಿ ನೀಡುವಂತೆ ಆಗಿದ್ದು ಗೂಗಲ್ ಗುರುವಿನ ಅರ್ಥ್ ನ ಚಿತ್ರದಿಂದ ನಾವೆಲ್ಲಾ ಇರುವೆ ಬೆಲ್ಲಕ್ಕೆ ಮುತ್ತಿರುವುದನ್ನು ನೋಡಿದ್ದೇವೆ, ಅದರ ನಿಖರ replica ರೆಪ್ಲಿಕಾ ಎಂಬಂತೆ ಗೂಗಲ್ ಇಮೇಜ್ ನಲ್ಲಿ ಮಾನವ ಭೂಮಿ(ಬೆಲ್ಲ)ಕ್ಕೆ ಮುತ್ತಿದಂತೆ ಕಾಣುತ್ತಿರುವುದು.

ಹೌದಲ್ವಾ ನಾವೆಲ್ಲಾ ಸಿಹಿ ಹೀರುವ ಇರುವೆಗಳು.😅

ದೇವಾನು ದೇವತೆಗಳು ಸ್ವರ್ಗದಿಂದ ಭೂಮಿಗೆ ಬರಲು ಬಳಸಿದ ಲ್ಯಾಂಡಿಂಗ್ ಪೋಸ್ಟ್ airport ಮಾನಸ ಸರೋವರ, ಭೂಮಿಗೆ ಬಂದದ್ದು ಇಲ್ಲಿನ ಕಾಯಕ ನೆರವೇರಿಸೋಕೆ, ಆದರೆ ಇಲ್ಲಿನ ಕಬ್ಬಿನ ಹಾಲಿನ ರಸದ ಸ್ವಾದಕ್ಕೆ ಮೈಸೋತು ಸ್ವರ್ಗವನ್ನೇ ತ್ಯಜಿಸಿದರು ಎಂಬ ಉಲ್ಲೇಖ ನಾನು ಓದಿದ ಪುಸ್ತಕದಿಂದ ತಿಳಿಯಿತು.

ಭೂಮಿಯ ಸ್ಪರ್ಶದಿಂದ ತಮ್ಮ ದೈವತ್ವ ವನ್ನು ಮರೆತು ಮಾನವರಾದರು. ಅಂದರೆ ನಮ್ಮೆಲ್ಲ ಪೂರ್ವಜರು ಸ್ವರ್ಗದಿಂದಲೇ ಬಂದವರು, ಅವರು ತಾಯಿ ಭೂಮಿಯ ಸಿಹಿಯ ಹೀರಿಯೇ ವಿಕಸನ ಹೊಂದಿದವರು ಅಂತ ಆಯಿತು.

ಹಾಗಾಗಿ ಅವಳ ಸಿಹಿಯ ಹೀರಿದ ನಮೆಲ್ಲರಲ್ಲೂ ದೈವತ್ವ ಇದೆ ಆದರೆ ಮರೆತಿದ್ದೇವೆ ಅಷ್ಟೇ..!

ಇಷ್ಟೆಲ್ಲಾ ನೀಡಿದ ತಾಯಿಗೆ ಸ್ವಲ್ಪ ಆದರು ಕೃತಜ್ಞರಾಗಿರಬೇಕು.

ನಾವು ತಿಂದ ಹಣ್ಣು ಆ ಗಿಡದ ಮುಂದಿನ ಸಂತಾನಕ್ಕೆ ಕೂಡಿಟ್ಟ ಪೌಷ್ಟಿಕಾಂಶ, ಪ್ರತಿ ಹಣ್ಣಿನ ಸ್ವಾದ ಹೀರುವಾಗಲು ಭೂಮಿ ಮತ್ತು ಆ ಹಣ್ಣು ನೀಡಿದ ಗಿಡವನ್ನು ಸ್ಮರಿಸೋದು ನಾವು ನೀಡುವ ಶುಲ್ಕವಾಗಿದೆ. 

ಆ ಗಿಡ ತನ್ನ ಕಾಯಕ ನೆರೆವೇರಿಸಿದೆ ಅಂತೆಯೇ ನಮ್ಮ ಪೂರ್ವಜರ ಕಾಯಕದಿಂದಲೇ ನಮ್ಮ ಇಂದಿನ ಅಸ್ತಿತ್ವ ಮತ್ತು ನಾವು ನೋಡುತ್ತಿರುವ ಪ್ರಕೃತಿ.

ನಮ್ಮ ಕಾಯಕವು ನಮ್ಮ ಸಂತಾನ, ಪರಿಸರ, ಪ್ರಕೃತಿಯನ್ನು ಮುಂದಿನ ಪೀಳಿಗೆಯವರೆಗೂ ಉಳಿಸುವುದೇ ವಿನಃ, ಹಣ, ಆಸ್ತಿ, ಇಂಜಿನಿಯರ್, ಡಾಕ್ಟರ್ ಆಗುವುದಲ್ಲ. 

ಹಾಗೆಯೇ ಈ ಭೂಮಿಯ ಸಿಹಿ ಮುಂದಿನ ನಮ್ಮ ಪೀಳಿಗೆಯವರು ಸವಿಯಲು ನಾವು ಅನುವು ಮಾಡಿಕೊಡ ಬೇಕಿರುವುದು ನಮ್ಮ ಕರ್ತವ್ಯ. ನಾವು ಮತ್ತು ನಮ್ಮ ಕಾಯಕದ ಬಗ್ಗೆ ಇನ್ನೊಂದು ಅಂಕಣದಲ್ಲಿ ಸಮಯ ಸಿಕ್ಕಾಗ ಬರೆಯುವೆ.

ಅದೇನೆ ಇದ್ದರು ಭೂಮಿಯ ಆಳದಲ್ಲಿ ಬೆಲ್ಲದಪಾಕ ಕುದಿಯುತ್ತಿರುವುದು, ಅದು ಬೇರಿನ ಮೂಲಕ ಮೇಲೆ ಬರುತ್ತಿರುವುದು ನನ್ನ ಒಳಮನದ ಅರಿವು.

ಮತ್ತೊಂದು ಅರಿವಿನೊಂದಿಗೆ ಸಿಗೋಣ

                                ಧನ್ಯವಾದ

 

 

Category:Nature



ProfileImg

Written by Manjunath KR