ನಾನು ನಿಮಗೆ ಹೇಳಲು ಹೊರಟಿರುವುದು ಇತ್ತೀಚೆಗೆ ಜನರು ತಮ್ಮ ಸಂತೋಷವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಾನು ಮೈಸೂರಿಗೆ ಹೋಗುವ ಸರ್ಕಾರಿ ಸಾರಿಗೆ ಬಸ್ ಹತ್ತುವಾಗ ನನ್ನ ಪಕ್ಕದಲ್ಲಿ ಒಬ್ಬ ವ್ಯಕ್ತಿಯನ್ನು ನೋಡಿದೆ. ಸಾರ್, ಸಿಟ್ ನಲ್ಲಿ ಕುಳಿತು ಕೊಳ್ಳಿ ಎಂದು ಹೇಳಿದ.ಕೆಲಸದಲ್ಲಿ ಇರುವುದಕ್ಕೆ ಬೆಲೆ ಇದೆ ಸಾರ್, ನೀವು ಏನೇ ಹೇಳಿದರೂ ಜನರು ನಿಮ್ಮೊಂದಿಗೆ ಮಾತನಾಡುವ ರೀತಿ, ಅವರು ನಿಮ್ಮನ್ನು ಗೌರವಿಸುವ ರೀತಿ, ಕೆಲಸ ಎಷ್ಟು ಮುಖ್ಯ ಎಂದು ನನಗೆ ತಿಳಿಯುತ್ತದೆ. ನಾನು ಅವರ ಮಾತುಗಳನ್ನು ಕೇಳಿ,ನೀವು ತಪ್ಪು ತಿಳಿದಿದ್ದೀರಿ ಎಂದು ಹೇಳದೆ,ಜನರು ಹಣ, ಸ್ಥಾನಮಾನ, ಉದ್ಯೋಗವನ್ನು ನೋಡುತ್ತಾರೆ ಮತ್ತು ವ್ಯಕ್ತಿಯು ತುಂಬಾ ಶ್ರೀಮಂತ ಎಂದು ಭಾವಿಸುತ್ತಾರೆ. ಆದರೆ ಮನುಷ್ಯನಿಗೆ ಬೇಕಾಗಿರುವುದು ಸುಖ-ಶಾಂತಿ ಎಂದು ನಾನು ಹೇಳಿದ್ದು, ಅದಕ್ಕೆ ಸಾರ್, 10 ಎಕರೆ ಜಮೀನು ಇದೆ, ನನ್ನ ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದೇನೆ, ಜವಾಬ್ದಾರಿ ಕಳೆದುಕೊಂಡಿದ್ದೇನೆ.
ನಾನು ಹೇಳಿದೆ,ಸಾರ್, ನಿಮ್ಮ ಜವಾಬ್ದಾರಿ ಮುಗಿದ ಮೇಲೆ ರಿಲ್ಯಾಕ್ಸ್ ಆಗಬೇಕು, ಏನ್ ಯೋಚನೆ ಮಾಡ್ಬೇಕು ಅಂತ. ಮುಂದಿನದು ಹೇಗೆ ಎಂದು ನಿಮಗೆ ತಿಳಿದಿಲ್ಲ. ನಿಮ್ಮ ಅನುಭವದಲ್ಲಿ, 30 ವರ್ಷಗಳಲ್ಲಿ ನೀವು ನಿಮ್ಮ ಹೇಗೆ ಬದುಕಿದ್ದೀರಿ, ಏನು ಕಥೆ, ಆಹ್ "ಮೊದಲು ಜೀವನವನ್ನುನೀವು ಸಂತೋಷವನ್ನು ಹುಡುಕಬಾರದು, ಅದನ್ನು ನಾವೇ ಸೃಷ್ಟಿಸಬೇಕು. ನಮಗೆ ಸಂತೋಷವನ್ನು ನೀಡುವ ಸ್ಥಳಕ್ಕೆ ಹೋಗಬೇಕು. ನಾವು ಏನು ಮಾಡಬೇಕು ನಿಮ್ಮ ಸುತ್ತಲಿನ ಜನರು ಹೇಗೆ ಸಂತೋಷಪಡುತ್ತಾರೆ ಎಂಬುದನ್ನು ಗಮನಿಸಿ ಸರ್, ನಾವು ಸಂತೋಷವನ್ನು ಕಣ್ಣೆದುರಿಗೆ ಇದ್ರು ನಾವು ಅದರಿಂದ ಸಂತೋಷ ಪಡಲ್ಲ ಅದೇ ನಾವು ಮಾಡುವ ತಪ್ಪು.
ಜೀವನದಲ್ಲಿ ಮಕ್ಕಳ ಜೋತೆ ಇರಿ.ಪ್ರಕೃತಿಯನ್ನು ಆನಂದಿಸಿ. ಪುಸ್ತಕ ಓದಿ,ಜನರ ಸ್ನೇಹವನ್ನು ಬೆಳೆಸಿಕೊಳ್ಳಿ, ಮದುವೆ ಸಮಾರಂಭದಲ್ಲಿ ಭಾಗವಹಿಸಿ. ನಿಮಗೂ ಖುಷಿಯಾಗುತ್ತೆ ಸಾರ್,ದೇವರು ಚನ್ನಾಗಿ ಇಟ್ಟಿದ್ದಾನೆ ಎಂದು ಖುಷಿ ಪಡಿ,ಓಕೆ ಸರ್ ಚೆನ್ನಾಗಿ ಮಾತನಾಡುತ್ತಿರಾ ಎಂದು ಹೇಳಿ ಮುಂದಿನ ಸ್ಟೇಷನ್ ನಲ್ಲಿ ಇಳಿದರು,ನಾನು ಮತ್ತೆ ಯೋಚಿಸತೊಡಗಿದೆ. ಜನರು ಕಾಣದ ಸುಖಕ್ಕಿಂತ ತಮ್ಮಲ್ಲಿರುವ ಸಣ್ಣ ಸುಖವನ್ನೇಕೆ ಕಳೆದುಕೊಳ್ಳುತ್ತಾರೋ ಎಂಬ ಚಿಂತೆ........ ಜನರು ಬೇರೆಯವರ ಜೀವನ ವನ್ನು ಹೋಲಿಕೆ ಮಾಡುತ್ತಾರೆ, ತಮ್ಮ ಜೀವನ ಸೂಪರ್ ಅಂತ ಅವರು ಖುಷಿ ಪಡಲ್ಲ ಅಂತ ಯೋಚನೆ ಇಂದ ಮುಂದೆ ಸ್ಟಾಪ್ ಬಂದು ಬಸ್ಸಿನಿಂದ ಇಳಿದೆ.
0 Followers
0 Following