ಬಂಕರ್

ProfileImg
30 Jun '24
8 min read


image

ಆರ್ ಆರ್  ( ರಾಷ್ಟ್ರೀಯ ರೈಫಲ್ಸ್ ) ಟ್ರೂಪ್ ನಲ್ಲಿ ಕಮಾಂಡರ್ ಆಗಿದ್ದ ನನಗೆ, ಪೂಂಚ್ ಜಿಲ್ಲೆಯ ರಾವಲ್ ಕೋಟ್ ಪಾಯಿಂಟ್ ನ  ಕರ್ನಲ್  ನೇತ್ರ ರಾವ್ ರವರಿಂದ ಮೇಸೆಜ್ ಬಂತು. 'ಹೊಸ ಟಾಸ್ಕ್ ಅಪರೇಷನ್  ನಿಮಗಾಗಿ ಕಾದಿದೆ, ಬೇಗ ನಿಮ್ಮ ಬೆಟಾಲಿಯನ್ ಜೊತೆ ನಾಳೆ ಮುಂಜಾನೆ ಭೇಟಿ ಯಾಗುವುದೆಂದು'.

ಮುಂಜಾನೆ ರಜ ಪಡೆದು ಊರಿಗೆ ಹೊರಡಲು ಸಿದ್ದನಾಗುತ್ತಿದ್ದ ನಾನು ಮೇಸೆಜ್ ನೋಡಿದ ತಕ್ಷಣ ಹಾಗೆ ಲಗೇಜ್ ಬ್ಯಾಗ್ ಬಿಚ್ಚಿಟ್ಟು, ರಜೆ ಕ್ಯಾನ್ಸಲ್ ಮಾಡಿ, ನನ್ನ
ಬೆಟಾಲಿಯನ್ ಜೊತೆ ಕಾಶ್ಮೀರದ ಪೂಂಚ್ ಬಳಿಯ ರಾವಲ್ ಕೋಟ್ ನ  ಕರ್ನಲ್ ನೇತ್ರ  ಸೇನ ಶಿಬಿರಕ್ಕೆ ಹೊರಡಲು ಸಿದ್ದನಾದೆ.

ಸಿದ್ದ ನಾಗುತ್ತಾ ಯೋಚಿಸಿದೆ. ರಜೆ ಮಂಜೂರು ಮಾಡಿ ಮತ್ತೆ ಡ್ಯೊಟಿಗೆ ಬಾ ಅಂತಿದ್ದಾರೆಂದರೆ ಯಾವುದೊ ಪ್ರಮುಖವಾದ ಅಪರೇಷನ್ ಇರಬಹುದೆ ಎಂದುಕೊಂಡೆ.? ಗಡಿಯಲ್ಲಿದ್ದ ನಮಗೆ ಶತ್ರುಗಳ ಗುಂಡಿನ ಚಕಮಕಿಯಲ್ಲಿ ನಿತ್ಯ ಸಾವಿನ ಸಮೀಪ ಹೋಗಿ ಬರುವುದು ಸಾಮಾನ್ಯ ವಾಗಿದೆ. ಶತ್ರುಗಳ ಬಂದೂಕಿನಿಂದ ಹತ್ತು ಗುಂಡು ಬಂದರು..... ನಾವು ಒಂದರೆಡು ಗುಂಡುಗಳು ಗುರಿಯಿಟ್ಟು ಹೋಡೆದು  ಹುಷಾರಾಗಿ ಬಳಸಿ ಸರಕಾರಕ್ಕೆ ಲೆಕ್ಕ ಕೊಡಬೇಕಿತ್ತು.
ನಮ್ಮ ಸೇನ ವಾಹನದಿಂದ ಇಳಿಯುತ್ತಿದ್ದ ಹಾಗೆ, ನಮ್ಮ ಬೆಟಾಲಿಯನ್ ಕಮಾಂಡೋಗಳಿಗೆ " ಹಲೋ ಹೀರೊಗಳೆ ನಿಮಗೆ ಒಂದು ಗಂಟೆ ಸಮಯ ಫ್ರೆಷಪ್ ಗಿ...ಅಷ್ಟರಲ್ಲಿ ಸಿದ್ದರಾಗಿ......" ಎಂದು ಹೇಳುತ್ತ ನಮ್ಮ ಸೇನ ಬಾತ್ ರೂಂ ಬಳಿ  ಹೊರಟೆವು.

ನಾವೆಲ್ಲರು ಸಿದ್ದವಾಗಿ ನಮ್ಮ ಬೆಟಾಲಿಯನ್ ಕಮೋಂಡ್ ಗಳನ್ನ  ಟೆಂಟ್ ನಲ್ಲಿ ಬಿಟ್ಟು, ನಾನು ಕರ್ನಲ್ ನೇತ್ರ ರಾವ್ ರವರನ್ನ ಭೇಟಿ ಯಾಗಿ ಸೇನಾ ಗೌರವ ಸೂಚಿಸಿದೆ. ನಂತರ ನೇತ್ರರಾವ್ ರವರು ಕೈ ಕುಲುಕುತ್ತಾ ಕುಳಿತುಕೊಳ್ಳುವಂತೆ ಎದುರುಗಿರುವ ಚೇರ್ ತೋರಿಸಿದರು.

" ನನ್ನ ಮೇಲೆ ಕೋಪನ....? ಜಗನ್ " ಎಂದರು ನಗುತ್ತಾ
" ನೋ ಸಾರ್. ನನಗೆ ದೇಶ ಮೊದಲು ನಂತರ
ನಾನು ನನ್ನ ಸಂಸಾರ. ನೀವು ಮತ್ತೆ ನನ್ನ ಕರೆಸಿದ್ದೀರ ಅಂದರೆ ಅದು ಮಹತ್ವದ್ದು ಅನಿಸುತ್ತೆ ಮತ್ತು ಅದಕ್ಕೆ ನಾನೆ ಸರಿಯಾದ ವ್ಯಕ್ತಿಯೆಂದು ಆಯ್ಕೆ ಮಾಡಿದ್ದಕ್ಕೆ
ನನಗೆ ಹೆಮ್ಮೆ ಆಗುತ್ತಿದೆ " ಎಂದೆ.
" ಹೌದು. ನಮ್ಮ ಆರ್ ಆರ್ ಬೆಟಲಿಯಾನ್ ನಲ್ಲೆ ನಿಮ್ಮದು ಶ್ರೇಷ್ಟವಾದುದು ಒಳ್ಳೆ ಅಂಕ ಪಡೆದಿದೆ. ಹಿಂದೆ ನೆಡೆದ ಕಾರ್ಗಿಲ್,ಅಕ್ಷರಧಾಮ,ತಾಜ್... ಸೇನಾ ಕಾರ್ಯಾಚರಣೆಯಲ್ಲಿ ನಿಮ್ಮ ಶೌರ್ಯ   ಶತೃಗಳ ಎದೆ ನಡುಗಿಸಿದೆ. ಅದಕ್ಕೆ ಈ ಬಾರಿಯೂ ಈ ಮಿಷನ್ ನಿಮ್ಮ ಬೆಟಾಲಿಯನ್ ಗೆ ಕೊಡೊಣಾಂತ ನಿರ್ಧರಿಸಿದೆ "  ಎಂದರು.

ನಾನು ಹೆಮ್ಮೆಯಿಂದ " ಥ್ಯಾಂಕ್ಯೊ ಸಾರ್.  ನಮ್ಮ ಬೆಟಾಲಿಯನ್ ನ ಶೂರತನದಲಿ ನಂಬಿಕೆಯಿಟ್ಟು ಆಯ್ಕೆ
ಮಾಡಿದ್ದಕ್ಕೆ...." ಎಂದೆ ಹುಮ್ಮಸ್ಸುನಿಂದ " ಆದರೆ ಈ ಬಾರಿ ನಿಮಗೆ ವಿಭಿನ್ನ ಟಾಸ್ಕ್.  ನಿಮಗೆ ತಿಳಿದಿರುವಂತೆ ನೂರಾರು ಬಂಕರ್ ಗಳನ್ನಾ ಪಾಕಿಸ್ಥಾನದ ಶತ್ರುಗಳಿಂದ ರಕ್ಷಿಸಿಕೊಳ್ಳಲು ನಮ್ಮ ದೇಶದ ನಾಗರಿಕರಿಗೆ ನಿರ್ಮಿಸಿ ಕೊಟ್ಟಿದ್ದೆವೆ. ಆದರೆ ಎಂಥ ವಿಪರ್ಯಾಸ ಅಂದರೆ ನಾವು ಈ ಪೂಂಚ್....

ಗಡಿಯಲ್ಲಿ ಬಂಕರ್ ನಿರ್ಮಿಸಲು ಆಗುತ್ತಿಲ್ಲ. ಈ ಗಡಿಯಲ್ಲಿ ಪ್ರತಿಬಾರಿ ಬಂಕರ್ ನಿರ್ಮಿಸಲು ಪ್ರಾರಂಭಿಸಿದಾಗ.... ಆಕಡೆ ಶತೃ ಸೈನಿಕರಿಂದ ಗುಂಡಿನ
ಹೊಡೆತ ಪ್ರಾರಂಭವಾಗುತ್ತೆ. ವರುಷಗಳು ಉರುಳುತ್ತಿವೆ
ಈ ಗಡಿ ಭಾಗದಲ್ಲಿ ಬಂಕರ್ ನಿರ್ಮಿಸಲು ಯೋಜನೆ
ಮಾಡಿ ಆ ಕೆಲಸ  ಇನ್ನೂ ಪ್ರಾರಂಭಿಸಿಲ್ಲ... " ಎಂದರು.
" ಸರಕಾರ ಏನು ಹೇಳುತ್ತೆ...? " ಎಂದೆ.
ನೇತ್ರರಾವ್ ನಗುತ್ತಾ, ಟೇಬಲ್ ಮೇಲಿದ್ದ ಚುಟ್ಟ ತೆಗೆದು ತುಟಿಗಿಟ್ಟು ಬೆಂಕಿಕಡ್ಡಿ  ಗೀರಿ ಜೋರಾಗಿ ಧಂ ಎಳೆದು ಹೊರಬೀಡುತ್ತಾ.... ಚುಟ್ಟ ಕಟ್ಟು ನನ್ನ ಬಳಿ
ಹಿಡಿದರು.
ನಾನು ಹಿಂಜರಿಯುತ್ತ  " ನಿಮ್ಮ ಮುಂದೆ ಸೇದುವುದೆ... "  ಎಂದು ಅನುಮಾನಿಸಿದೆ.
ಹೇ ಪರವಾಗಿಲ್ಲಂತ ಮುಖ ಭಾವ ತೋರುತ್ತಾ ಕೊಟ್ಟರು. ನಾನು ಹೆಚ್ಚು ಹೇಳಿಸಿಕೊಳ್ಳದೆ ಚುಟ್ಟ ತುಟಿಗಿಟ್ಟೆ.

" ಸರಕಾರ ಗುಂಡಿನ ಚಕಮಕಿ ಇಲ್ಲದೆ ಬಂಕರ್ ನಿರ್ಮಿಸಲು ಆದೇಶ. ಈ ವಿಷಯ ಗಡಿಯಲ್ಲಿ ಶತೃವಿಗೂ ತಿಳಿದು, ಅವರ ಗಡಿಯಲ್ಲಿ ಹತ್ತು ಬಂಕರ್ ನಿರ್ಮಿಸಿದ್ದಾರೆ. ಬೆಳಗ್ಗೆ ಎದ್ದರೆ ಸಾಕು ಅವರಿಗೆ ಗುಂಡು ಹಾರಿಸುವುದು ಸಾಮಾನ್ಯ ವಾಗಿದೆ. ಶಾಂತಿ ಮಾತುಕತೆಯಲ್ಲಿ  ' ನೀವು ಹಾರಿಸುವ ಗುಂಡು ನಿಮ್ಮ ಸರಕಾರಕ್ಕೆ ಲೆಕ್ಕ ಕೊಡಬೇಕು. ನಾವು ಯಾರಿಗೂ ಲೆಕ್ಕ ಕೊಡಬೇಕಾಗಿಲ್ಲ ' ಎನ್ನುವ ಮಾತು ಅವರು ಹೇಳುವುದು ಸಹಜವಾಗಿ ಬಿಟ್ಟಿದೆ. ಈ ಮಾತು ಪಕ್ಕಕ್ಕೆಸರಿಸೋಣ. ಸರಕಾರ ಯಾವುದೇ ಇರಲಿ ಬರಲಿ  ನಮ್ಮಲ್ಲೇರ ನಿಷ್ಟೇ ಭಾರತಾಂಬೆಗೆ. ಈಗ ವಿಷಯ ಏನಂದರೆ ಅಲ್ಲಿನ ಸೇನೆಯೇ  ಭಾರಿ ಪ್ರಮಾಣದಲ್ಲಿ ತರಬೇತಿ ಹೊಂದಿದ ಉಗ್ರಗಾಮಿಗಳನ್ನ ನಮ್ಮ ದೇಶದಲ್ಲಿ ಒಳಕ್ಕೆ ನುಸುಳುವಿಕೆಗೆ ಸಜ್ಜಾಗುತ್ತಿದೆಯೆಂದು ನಮ್ಮ ಗುಪ್ತಚರ ಮಾಹಿತಿಯನ್ನು ಕಳಿಸಿದೆ...." ಎನ್ನುತ್ತಾ ಮುಗಿದ ಚುಟ್ಟ
ಬಿಸಾಟು ಮತ್ತೊಂದು ಚುಟ್ಟ ಹಚ್ಚಿದರು.

ನಾನು ಶ್ರದ್ದೆಯಿಂದ ಕೇಳುತ್ತಿದ್ದೆನೆ. ರಾವ್ ಮಾತು ಮುಂದುವರೆಸಿದರು " ಐವತ್ತರಿಂದ ಅರವತ್ತ ಸಂಖೈ ಉಗ್ರಗಾಮಿಗಳು ಇರಬಹುದು. ಇಷ್ಟು
ಮೃಗಗಳು ಬಂದರೆ ಈ ಕಣಿವೆಯ ನಾಗರಿಕರ ಪಾಡೇನು..?.ನಂತರ ಇವರು ಮುಂಬಯಿ, ಬೆಂಗಳೂರ್, ಪುಣೆ, ಕಲ್ಕತ್ತ...ನಗರಗಳಿಗೆ ಪ್ರವೇಶ ಮಾಡಿ, ಅಲ್ಲಿರುವ ಹುಡುಗರ ಬ್ರೈನ್ ವಾಷ್ ಮಾಡಿ ದೇಶ ದ್ರೋಹಿ ಕೃತ್ಯಗಳಿಗೆ ಬಳಸಿಕೊಳ್ಳಲು ತೊಡಗಿದರೆ.... ಆ ಅನುಹುತದ ನಂತರ..... ಅವರನ್ನ ಈ ನುಸುಳಿದ ಉಗ್ರಗಾಮಿಗಳನ್ನ ಹಿಡಿಯುವುದೆಂದರೆ ಕೆಲವೊಮ್ಮೆ   'ಖಾಲಿ ಕೈಲಿ ಸಾಗರದಲಿ ಮೀನು ಹಿಡಿದಂತೆ ' ಅದಕ್ಕೆ ಹೇಗಾದರೂ ತಡಯಲೇ ಬೇಕು. ನಿಮ್ಮ ಬುದ್ದಿವಂತಿಕೆ ಇಂದ " ಎಂದರು. ಆಳವಾಗಿ ಧಂ ಎಳೆಯುತ್ತಾ.

ನಾನು ಶ್ರದ್ದೆಯಿಂದ ಕೇಳಿ ಪೂರ್ಣವಾಗಿ ವಿಷಯ
ತಿಳಿದು ಅರಿತು ಕೊಂಡೆ. " ನಾವೆಲ್ಲಾ ಸೈನ್ಯಕ್ಕೆ ಸೇರಿರುವುದೇ ಶತೃಗಳನ ಸಂಹಾರ ಮಾಡೋಕೆ ಇಲ್ಲಂದರೆ ವೀರ ಮರಣ ಹೊಂದುವದಕ್ಕೆ. ನಮ್ಮ ಮೇಲೆ ಅಟ್ಯಾಕ್ ಆದಾಗ ನಾವು ಗುಂಡುಗಳು ಹಾರಿಸುವುದಕ್ಕೆ ಮೇಲಿನವರು ಆರ್ಡರ್ ಬೇಕು, ಆ ಆರ್ಡರ್ ಕೊಡುವವರಿಗೆ  ರಾಜಕೀಯ ಧುರೀಣರ  ಒಪ್ಪಿಗೆ ಬೇಕು. ಎಂಥ ಪರಿಸ್ಥಿತಿಯಲ್ಲಿ  ಇದ್ದೀವಿ ಅಲ್ವ ಸಾರ್...." ಎಂದೆ  ತುಸು ಆವೇಷದಲ್ಲಿ ನೇತ್ರರವರ ಮುಖ ನೋಡುತ್ತಾ ಮತ್ತೋಂದು ಚುಟ್ಟ ನನ್ನ ಮುಂದೆ ಹಿಡಿದರು ನನಗೆ ಬೇಡ ಎನ್ನುವುದಕ್ಕೆ ಮನಸ್ಸು ಬರಲಿಲ್ಲ. ಚುಟ್ಟಕ್ಕೆ ಕಡ್ಡಿಗೀರಿ ಜೋರಾಗಿ ಧಂ ಎಳೆದೆ.

" ಸಮಧಾನ ಮಾಡಿಕೊಳ್ಳಿ ಜಗನ್. ಕೂಲ್ ಆಗಿ. ಅಲ್ಲಿ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಏನೇನು ಒತ್ತಡ ಇರುತ್ತೊ.... ಅದನ್ನ ಸಹ ನಾವು ಗಮನಿಸ ಬೇಕಾಗುತ್ತದೆ ". ಎಂದರು " ಅದೇ ಸಾರ್ ಇಲ್ಲಿ ಎರಡಮೂರು ಬಲಿದಾನ
ಆಗಬೇಕು. ಆಗ ಸಿಮೀತ ಆರ್ಡರ್ ಸಿಗುತ್ತೆ. ಇದೆಲ್ಲಾ ನಾವೆಲ್ಲ ನೋಡಿಕೊಂಡು ಬಂದಿರುವುದೇ ತಾನೆ " ಎಂದೆ.

" ಇದರ ಬಗ್ಗೆ ಎಷ್ಟು ಚರ್ಚೆ ಮಾಡಿದರೂ ಅಷ್ಟೇ ಮುಂದಿನ ಕೆಲಸದ ಬಗ್ಗೆ ಅಲೋಚನೆ ಮಾಡಿ. ನೀವು ಈ ಕೆಲಸ ಮುಗಿಸುತ್ತೀರಾ... " ಎಂದೆ.
ಚುಟ್ಟ ಮುಗಿಯುವುದರೊಳಗೆ ಒಂದು ವಿಶಿಷ್ಟ ಆಲೋಚನೆ ಬಂತು. ತಕ್ಷಣ " ನಮ್ಮ ಟ್ರೈನಿಂಗ್ ಕ್ಯಾಂಪ್ ನ್ನು ಈಗ ನಾನು ನೋಡ ಬೇಕು. " ಎಂದೆ ಎದ್ದೆಳುತ್ತಾ
ನನ್ನನ್ನು ವಿಚಿತ್ರ ವಾಗಿ ನೋಡುತ್ತಾ " ಸರಿ ಬನ್ನಿ. ತೋರಿಸುತ್ತೀನಿ." ಎಂದರು.

ಇಬ್ಬರು ಜೀಪಲ್ಲಿ ಕುಳಿತು ಟ್ರೈನಿಂಗ್ ಕ್ಯಾಂಪ್  ಬಂದೆವು.
ಟ್ರೈನಿಂಗ್ ಕ್ಯಾಂಪ್ ಉಗ್ರಾಣ ಪ್ರವೇಶ ಮಾಡಿದೆ. ಅವರಲ್ಲಿರುವ ಸರಕು ಸರಂಜಾಮು ನೋಡಿ ತೃಪ್ತಿಪಟ್ಟು, ನನಗೆ    ಒಂದು ಬಂಕರ್  ನಿರ್ಮಿಸಲು ಆದೇಶ ಇದ್ದಿದ್ದು.. ಐದು ನಿರ್ಮಿಸಲು ಅಯಾಯ ಕಟ್ಟಿನಲ್ಲಿ ಕೇಳಿದೆ. ಒಪ್ಪಿಗೆ ಕೊಟ್ಟರು. ಐದು ಬಂಕರ್ ನಿರ್ಮಿಸಲು ಬೇಕಾಗಿದ್ದ  ಬೇಕಾಗಿದ್ದ ಹಾರೆ, ಗುದ್ದಲಿ, ಪಿಕಾಸಿ....ಸಲಕರಣೆಯನ್ನು ಒಂದು ಟ್ರಕ್, ಟ್ರಾಕ್ಟರ್ ಮತ್ತು ನೆಲ ಆಗೆಯುವ ನೇಗಿಲು ರೀತಿಯ ದೊಡ್ಡ ದೊಡ್ಡ ಬ್ಲೆಡ್ ರೀತಿಯದ್ದನ್ನ ಸಲಕರಣೆ  ಸಿದ್ದಪಡಿಸಿಕೊಂಡು ಮತ್ತು ಮುಖ್ಯವಾಗಿ ಬೇಕಾಗಿದ್ದ  ಮೂರು  MMG ಗನ್ ಮೀಷನ್, ಹತ್ತು HET ರಾಕೆಟ್ ಲಾಂಚರ್ ಮತ್ತು ಸಾಕಷ್ಟು ಮದ್ದು ಗುಂಡುಗಳನ್ನ ಮತ್ತೊಂದು ಟ್ರಕ್ ಗೆ ತುಂಬಿಸುತ್ತಾ  ಬಂಕರ್ ಸ್ಥಳದ ಹೆಸರು ‌ಹೇಳಿ ಹೊರಡಿ ಎಂದು ನನ್ನ ಬೆಟಾಲಿಯನ್ ಗೆ ಆದೇಶ ಕೊಟ್ಟೆ. 
ಸ್ಥಳಕ್ಕೆ ಬಂದೆವು.

ನಮ್ಮ ಬೆಟಾಲಿಯನ್ ಹುರಿದುಂಬಿಸುಲು ಮಾತನಾಡುವದಕ್ಕೆ ಶುರು ಮಾಡಿದೆ. " ಹಲೋ ಯಂಗ್ ಗಾಯ್ಸ ನೀವು ಒಬ್ಬಬ್ಬರು ‌ಹೆಬ್ಬುಲಿ ಇದ್ದಂತೆ. ನಿಮ್ಮ ಶಕ್ತಿ
ಮದಸಿದ ಅನೆಯಂತೆ. ವೇಗವಂತು ಚಿರತೆಯನ್ನು ಮೀರಿಸುತ್ತದೆ ನಿಮ್ಮೇಲ್ಲರದು. ಇಡೀ ನಮ್ಮ ಸೇನ ಶಕ್ತಿಯಲ್ಲೇ  ನಮ್ಮ ಆರ್ ಅರ್ ಬೆಟಾಲಿಯನ್ ತುಂಬ ಜವಾಬ್ಧಾರಿ ಹೊಂದಿರುವಂತದ್ದು. ನಿಮಗೆ ಗೊತ್ತಿರುವಂತೆ ಈ ಗಡಿ ರೇಖೆಯ ದಾಟಿ ಶತೃ ದೇಶದ ಸೈನಿಕ ಅಥವಾ ಯಾವುದೆ ಉಗ್ರಗಾಮಿ ಒಳ ನುಸುಳಿದರೆ ಅವನನ್ನು ಜೀವಂತ ಬಂದಿಸುವುದು ಸಾಧ್ಯವಾಗದಿದ್ದಾಗ ಸಾಯಿಸುವುದು. ಇಂಥಹ ಉಗ್ರಗಾಮಿಗಳನ್ನು ಸಾಕಷ್ಟು ಬಂಧಿಸಿ ಅವರಿಂದ ಸಾಕಷ್ಟು ಮಾಹಿತಿ ದೇಶ ವಿರೋಧಿ ಕೃತ್ಯದ ಮಾಹಿತಿಯನ್ನು ಅವರಿಂದ ಬಾಯಿ ಬಿಡಿಸಿದ್ದೆವೆ. ನಮ್ಮ ದೇಶದೊಳಗೆ ಆಗುವ ಹಾನಿ ತಡೆದಿದ್ದೆವೆ. ಅಂದರೆ ನಾವು ಇಲ್ಲಿ ಪ್ರಾರಂಭದಲ್ಲಿ  ಶತೃಗಳನ್ನಾ ತಡೆಯುವು ತುಂಬ ಪ್ರಮುಖವಾದ ಕೆಲಸ. ಇಂಥಹ ಕೆಲಸ ನಿರಂತರ ಮಾಡಲು ನಮಗೆ ಕೆಲವು ಅನುಕೂಲವಾಗಳು ಖಂಡಿತ ಬೇಕಾಗುತ್ತದೆ. ಆ ಅನುಕೂಲ ನಾವು ನಿಂತಿರುವ ಗಡಿ ರೇಖೆಯ ಸ್ಥಳದಲ್ಲಿ ಇಲ್ಲ. ಇಲ್ಲಿ ಬಂಕರ್ ನಿರ್ಮಿಸಲು ದಶಕಗಳಿಂದಲೂ ನಮ್ಮ ಸೇನೆ ಪ್ರಯತ್ನಿಸುತ್ತಿದೆ. ಆ ಕೆಲಸ ಪ್ರಾರಂಭಿಸಿ ಪೂರ್ಣ ಗೊಳಿಸಲು ಶತೃಗಳು ಅವಕಾಶ ಕೊಟ್ಟಿಲ್ಲ. ನಮ್ಮ ನೆಲದಲ್ಲಿ ಬಂಕರ್ ನಿರ್ಮಿಸಲು ಅವಕಾಶ ಕೊಟ್ಟಿಲ್ಲಂದರೆ ಆ ದೇಶಕ್ಕೆ ಎಷ್ಟು ಕೊಬ್ಬಿರಬೇಕು. ಆ ಕೊಬ್ಬು ಇಳಿಸುವ ಸಮಯ ಈಗ ಬಂದಿದೆ. ಅಂದರೆ ಇಲ್ಲಿ ಐದು ಬಂಕರ್ ನಿರ್ಮಿಸುತ್ತಿದ್ದೆವೆ. ಅದು ಈ ಒಂದು ದಿನದೊಳಗಾಗಿ.

ನಮ್ಮ ಸೇನೆ ಅಂದರೆ ಏನು ಎಂಬುದು ತೋರಿಸೊಣ
ಅದರಲ್ಲಿ ಅರ್ ಅರ್ ಬೆಟಾಲಿಯನ್ ಹುಲಿಗಳು ಅಂದರೆ
ಏನಂತ ಮತ್ತೋಮ್ಮೆ ಮನವರಿಕೆಯನ್ನು ಶತೃ ದೇಶದ ಕುನ್ನಿಗಳಿಗೆ ಮನವರಿಕೆ ಮಾಡಿಸೋಣ. ಇಲ್ಲಿ ಬಂಕರ್ ನಿರ್ಮಿಸೋಣ. ಏನಂತೀರಿ..." ಎಂದೆ.
"  ನೀವು ಆದೇಶ ಕೊಡಿ ಸಾರ್ "  ಒಕ್ಕೂರಲಿಂದ ಕೂಗಿದರು. ನನಗೆ ಎದೆ ಉಬ್ಬಿ ಬಂತು."  ವೆರಿಗುಡ್ ಮೈ ಬಾಯ್ಸ್ "  ಎನ್ನುತ್ತಾ ... ಯಾವ ಸ್ಥಳದಲ್ಲಿ ಬಂಕರ್ ನಿರ್ಮಿಸ ಬೇಕೊ ಆ ಸ್ಥಳವನ್ನ ಗುರುತಿಸಿ, ಅಲ್ಲೇಲ್ಲಾ ಮಾರ್ಕ್ ಹಾಕಿ, ಬಂಕರ್ ಗೆ ಬೇಕಾಗುವ ಸರಂಜಾಮು ನಮ್ಮ ಹುಡುಗರು ಸಾಗಿಸುತ್ತಿದ್ದಾಗ..... ನಾನು ನಿರೀಕ್ಷಿಸಿದ್ದಂತೆ  ಆ ಕಡೆಯಿಂದ  ಬಂದೂಕಿನಿಂದ ಒಂದು ಗುಂಡು ಹಾರಿ ಬಂತು.

ನನಗೂ ಇದೇ ಬೇಕಾಗಿದಿದ್ದೂ ಈ ಸಮಯಕ್ಕಾಗಿಯೇ ಕಾಯುತ್ತಿದ್ದುದು  ಕೈಗೆ ಮೈಕ್ ತೆಗೆದುಕೊಂಡು ಎತ್ತರದ ಜೋರು ಧ್ವನಿಯಲ್ಲಿ  " ಈಗ ಬಂದಿರುವುದು ಕಮಾಂಡರ್  ಜಗನ್ ಯಾರ ಅಪ್ಪನ ಮಾತು ಕೇಳೋಲ್ಲಾ. ಅಷ್ಟೇಕೆ ಒಂದು ಬಾರಿ
ಮನಸ್ಸಲ್ಲಿ ಒಂದು ಕೆಲಸ ಮಾಡಬೇಕಂಥ ನಿರ್ಧರಿಸಿದರೆ ಅದನ್ನ ಬದಲಾಯಿಸೋಕೆ ನಾನೇ ಒಪ್ಪೋಲ್ಲಾ. ಹುಚ್ಚು ದೇಶ ಪ್ರೇಮಿ ನಾನು. ನೋಡ್ರೋ ಕುನ್ನಿಗಳ ಈ ಸ್ಯಾಂಪಲ್ ನ ..... ಎಂದು  " ರಾಕೇಶ್, ದೇವ್, ಶಿವ     MMG ಬೆಲ್ಟ್ ಬಾಕ್ಸ್ ಲೋಡ್ .... ಗನ್ ಫೈರ್ "  ಎಂದೆ ಅಷ್ಟೇ.....

ಒಂದೆ ಕ್ಷಣದಲ್ಲಿ ಮೂರು ..... ಗನ್ ನಿಂದ ಸತತವಾಗಿ ಅಂದರೆ ಹದಿನೈದು ನಿಮಿಷದಲ್ಲಿ ಎರಡು ಸಾವಿರದ ನೂರು ಮದ್ದು ಗುಂಡುಗಳು ಸರ ಮಾಲೆಯಿಂದ  ನುಗ್ಗಿ ಮುನ್ನುಗ್ಗಿ ಶತೃ ಶಿಬಿರದ ಕಡೆ ಹೋಗುತ್ತಿದೆ. ಒಂದೊಂದು ಗನ್ ಸಾಮರ್ಥ್ಯ ಎಳುನೂರು ಗುಂಡುಗಳು. ನಂತರ ಎರಡೇ ಕ್ಷಣದಲ್ಲೇ ರಾಕೆಟ್  ಉಡಾಯಿಸಿಲು ಅದೇಶ ಕೊಟ್ಟೆ ಹತ್ತು ರಾಕೆಟ್ಟುಗಳು ಶತೃ ಸೈನಿಕರ ಬಂಕರ್ ಪಕ್ಕದಲ್ಲಿ ನುಗ್ಗಿ ಮುನ್ನುಗ್ಗಿ ಹೋಗ ತೊಡಗಿತು.

ಐದು ನಿಮಿಷ ಎಲ್ಲೇಲ್ಲೂ ಭಯಂಕರವಾದ ನಿಶ್ಯಬ್ದ. ಮತ್ತೆ ಮೈಕ್ ತೆಗೆದುಕೊಂಡು " ಇದು ಸ್ಯಾಂಪಲ್ ಮಾತ್ರ. ಬೇಕಂತ ಮೊದಲ ಬಾರಿ ಗುರಿ ತಪ್ಪಿಸಿದ್ದೀನಿ. ಈ ಬಾರಿ ನೇರಾ ನೇರ. ನಿಮ್ಮ ಕಡೆಯಿಂದ ಇನ್ನೋಂದು

ಬುಲೆಟ್ ಈ ಕಡೆ ಬಂದರೆ ಅಲ್ಲಿರುವ ಒಂದು ಟೆಂಟ್ ಮತ್ತು ಬಂಕರ್ ಉಳಿಯೋಲ್ಲ ಅದರಲ್ಲಿರುವ ನೀವು ಜೀವಂತ ಬದುಕಿ ಉಳಿಯೋಲ್ಲ. ನೋಡಿ ಬೇಕಾದರೆ...  ಬಾಯ್ಸ್ ಲೋಡೆಡ್ ದ ಗನ್.... ರೆಡಿ ಟು ಫೈಟ್.... ಎನ್ನುತ್ತಾ....

" ಧಂ ಇದ್ದರೆ ಈಗ ಫೈರ್ ಮಾಡಿ " ಮೈಕ್ ನಲ್ಲಿ ಹೇಳುತ್ತಾ ಚೇರ್ ಮೇಲೆ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಂಡೆ. ಮೈಕ್ ಅಫ್ ಮಾಡಿ " ಬಾಯ್ಸ್ ಹರಿಯಪ್ ಸ್ಟಾರ್ಟ್ ವರ್ಕ್ ಕ್ಟಿಕ್...." ಎಂದು ಹುರಿದುಂಬಿಸಿದೆ.

ನನ್ನ ಬೆಟಾಲಿಯನ್ ಹದಿನೈದು  ಹುಡುಗರು ಹಾರೆ ಗುದ್ದಲಿ ಚೆಲಕೆಗಳಿಂದ ಟ್ರಾಕ್ಟರ್ ನಿಂದ  ನೋಡುತ್ತಿದ್ದಂತೆ ನಿಮಿಷಗಳಲ್ಲೆ ಹತ್ತು ಅಡಿ ಅಗಲ ಇಪ್ಪತ್ತು ಅಡಿ ಉದ್ದವುಳ್ಳ ವಿಸ್ತೀರ್ಣದಲ್ಲಿ ಹತ್ತು ಅಡಿ ಕ್ರಮಬದ್ದವಾಗಿ ಆಳ ತೆಗೆದ ಪ್ರಾರಂಭದ ಬಂಕರ್ ನೆಲ ಮಾಳಿಗೆಯಂತೆ  ಸಿದ್ದವಾಯಿತು. ನಾನು ಅದನ್ನು ಆಗಾಗ ಪರಿಶೀಲನೆಯ ಮಾಡಿದ  ಮನಸ್ಸಿಗೆ ಹಿಡಿಸಿದ ನಂತರ... ಅದೇ ರೀತಿ ಮತ್ತೆ ನಾಲ್ಕು ನೆಲ ಮಾಳಿಗೆಯ ತರಹ ಸಿದ್ದ ಪಡಿಸಿ... ಮೊದಲೆ ಸಿದ್ದ ಪಡಿಸಿದ್ದ ಸಲಕರಣೆಯನ್ನಾ ಅಂದರೆ ಡೊಡ್ಡ ಡೊಡ್ಡ ಮರದ ದಿಮ್ಮಿಗಳನ್ನಾ ಚೈನ್ ಪುಲ್ಲಿಗಳಲ್ಲಿ ವೇಗವಾಗಿ ಉರುಳಿಸಿ ನೆಲಮಾಳಿಗೆಯ ಮೇಲ್ ಚಾವಣಿಯಂತೆ ಸಾಲಾಗಿ ಐದಕ್ಕೆ ಸಹ ಜೋಡಿಸಿದರು.

ಅದರ ಮೇಲೆ ತೆಳುವಾದ ಬಂಡೆ ಹರಡಿ ಅದರ ಮೇಲೆ ಗುಣಮಟ್ಟದ ಟಾರ್ಪಲ್ ಹೊದೆಸಿ, ಅದರ ಮೇಲೆ ಅಲ್ಲೆ ಇದ್ದ ಮಣ್ಣನ್ನು ಐದು ಬಂಕರ್ ಮೇಲೆಲ್ಲಾ ಒಂಚೂರು ಕಾಣದಂತೆ ಹರಡಿ...ನೆಲ ಮಟ್ಟಕ್ಕೆ ಸಮತಟ್ಟು  ಮಾಡ ತೊಡಗಿದರು. ಅದರ ಮೇಲೆ ಸಣ್ಣ ಸಣ್ಣ ಗಿಡಗಳನ್ನ  ನೆಟ್ಟರು. ಸಹಜವಾಗಿ ಭುಮಿ ಕಾಣುವಂತೆ. ಈಗ ಏನಂದ್ದರೂ ಒಳಂಗಣ ಕೆಲಸ ಅದು ತುಂಬ ಸಲಿಸು.

ಈಗ ಸುಮಾರು ಹದಿನೈದು ಅಡಿ ದೂರದಿಂದಲೂ ನೋಡಿದರು ಇದು ಬಂಕರ್ ಇದೆಯೆಂದು ಯಾರಿಗೂ ತಿಳಿಯುತ್ತಿರಲಿಲ್ಲ. ನನಗಂತೂ ಹೇಳ ತೀರದಷ್ಟು ಸಂತೋಷವಾಯಿತು. ತಕ್ಷಣ ಬಂಕರ್ ನ ಫೋಟೋ

ತೆಗೆದು ನೇತ್ರರಾವ್ ರವರಿಗೆ ಸೆಂಡ್ ಮಾಡಿದೆ.

 ಅವರಿಂದ ಪೋನ್ " ವೆಲ್ಡನ್ ಜಗನ್. ನಿಮಗೆ ಮತ್ತು ನಿಮ್ಮ ಬೆಟಾಲಿಯನ್ ಗೆ ಅವರಿಗೂ ತಿಳಿಸಿಬಿಡಿ " ಎಂದರು.

" ಥ್ಯಾಂಕ್ಯೊ ಸಾರ್.  ಎನಿ ಮೆಸೇಜ್...." ಎಂದೆ ನಗುತ್ತಾ 

" ಶ್ಯೂರ್. ನೀವು ಅಂದುಕೊಂಡ ಹಾಗೆ ಹೈಯರ್

ಅಫೀಸರ್ ನಿಂದ ನೋಟಿಸ್.... " ಎಂದರು

" ಸರಿ ಸಾರ್ . ಇಲ್ಲಿ ಕೊನೆ ಕೆಲಸ ಇದೆ. ಮುಗಿಸಿ ಒಂದು ಗಂಟೆಯಲ್ಲಿ ಬರುತ್ತೇನೆ " ಎಂದೆ.

ಬಂಕರ್ ಒಳಗೆ ಅಚ್ಚುಕಟ್ಟು ಮಾಡುವ ವಿಧಾನ ಹೇಳಿ, ಅದಕ್ಕೆ ಬೇಕಾಗುವ ವಸ್ತುಗಳನ್ನು ತಲುಪಿಸಲಿಕ್ಕೆ ಕರ್ನಲ್ ರವರಿಗೆ ಪೋನ್ ಲ್ಲಿ ಹೇಳಿದೆ. ಮತ್ತು ಅಲ್ಲಿರುವ ಗಡಿ ಭದ್ರತ ಪಡೆಯ ಸೈನಿಕರೂ ಈ ಬಂಕರ್ ಬೆಳಗಿನಿಂದ ಬಳಸಿಕೊಳ್ಳ ಬಹುದೆಂದು ಹೇಳಿದೆ.

ನನ್ನ ಬೆಟಾಲಿಯನ್ ಹುಲಿಗಳಿಗೆ ಕೆಲಸಕ್ಕೆ ಹುರಿದುಂಬಿಸಿ, ಈ ರಾತ್ರಿಯೊಳಗೆ ಐದು ಬಂಕರ್ ಒಳಂಗಣ ಕೆಲಸ ಮಾಡಿ ಮುಗಿಸಬೇಕೆಂದು ನಿರ್ದೇಶನ ಕೊಟ್ಟು, ಅವರಿಗೆ ಬೇಕಾಗುವ ಒಳ್ಳೆ ಊಟದ ವ್ಯವಸ್ಥೆ ಮಾಡಿ, ನಾನು ಮುಂಜಾನೆ ಬರುತ್ತೆನೆ. ಈ ಕೆಲಸ ಮುಗಿಸಿದ ನಂತರ ನಿಮಗೆಲ್ಲಾ ಒಂದು ದಿನ ಪೂರ್ಣ ವಿಶ್ರಾಂತಿ ಎಂದು ಹೇಳಿ, ಆ ಕಡೆ ಗಡಿ ಭಾಗದಲ್ಲಿ ಗುಂಡು ಬಂದರೆ ನನಗೆ ಮೆಸೇಜ್ ಮಾಡಿ. ನೀವು ಗುಂಡು ಹಾರಿಸಿ ಎಂದು ಧೈರ್ಯ ತುಂಬಿ ಅಲ್ಲಿಂದ ಹೊರಟೆ.

ಕರ್ನಲ್ ನೇತ್ರ ರಾವ್ ಮುಂದೆ ಕುಳಿತು ಅವರು ಕೊಟ್ಟ ನೋಟಿಸ್ ನಿಧಾನವಾಗಿ ಓದಿದೆ. 

" ಪಾಕಿಸ್ಥಾನದ ಹೈ ಕಮಿನಿಷರ್ ನಮ್ಮ ಭಾರತ

ಹೈ ಕಮಿಷನರ್ ರವರಿಗೆ ಬರೆದ ಪತ್ರ. ಸಾರಂಭಷ ಈ ರೀತಿ ಇದೆ.   ನೀವೇ ಮೊದಲು ನಮ್ಮ ಗಡಿ

ದಿಕ್ಕಿಗೆ ಸತತ ಸಾವಿರ  ಗುಂಡು ಹಾಗೂ ರಾಕೆಟ್ಟುಗಳು

ಉಡಾಯಿಸಿ, ಶಾಂತಿ ಕದಡಲು ಪ್ರಾರಂಭಿಸಿದ್ದೀರಿ. ಇದಕ್ಕೆ

ನಿಮ್ಮ ಉತ್ತರ ಏನು..?  ಎಂದು ಪತ್ರ ಬರೆದಿದ್ದಾರೆ. 

ಅದಕ್ಕೆ ನಮ್ಮ ಕಮಿಶನರ್ ಇಪ್ಪತ್ತನಾಲ್ಕು  ಗಂಟೆ ಯೊಳಗೆ ನನಗೆ ಉತ್ತರಿಸ ಬೇಕೆಂದು ನನಗೆ ಹೇಳಿದ್ದಾರೆ.

ನಾನು  ನೀವು  ನನಗೆ  ಉತ್ತರಿಸ ಬೇಕೆಂದು  ನಿಮಗೆ ಈ ನೋಟಿಸ್.  ನಿಮ್ಮ ಕೈ ಲಿ ಇರುವದು. " ಎಂದರು.

ನಾವಿಬ್ಬರು ಜೋರಾಗಿ ನಗ ತೋಡಗಿದೆವು. ನಂತರ ನಾನು ಹೌದೆಂದು ತಲೆ ಆಡಿಸಿ. ಅಲ್ಲಿದ್ದ ಬಿಳಿ ಹಾಳೆ ಪಡೆದು, ವಿಷಯ ಈ ರೀತಿ ಪ್ರಾರಂಭ ಮಾಡಿದೆ.

ಇಂಥ ದಿನಾಂಕ ಈ ಸಮಯದಲ್ಲಿ  ಇಂಥಹ ಜಾಗದಲ್ಲಿ ಗುಂಡು ಮತ್ತು ರಾಕೆಟ್ ಉಡಾವಣೆ ಮಾಡಿದ್ದು ಸತ್ಯ ಆದರೆ " ಆ ಗುಂಡು ಮತ್ತು ರಾಕೆಟ್ " ನಾವು ಬಳಸಿದ್ದು  ಯುದ್ಧಕ್ಕೆ ಬಳಸಿದ ಖಾತೆಯಿಂದ ಬಳಸಿದ್ದು ಅಲ್ಲಾ. ಅದರ ವಿವರ ಮತ್ತೊಂದು ಪುಟದಲ್ಲಿ ಲಗತ್ತಿಸಿದ್ದೇನೆ. ಮುಖ್ಯ  ವಿಷಯ ಏನಂದರೆ ಈಗ ಬಳಸಿದ ಗುಂಡು ಮತ್ತು ರಾಕೆಟ್ ನಮ್ಮ ನಿರಂತರ ಅಭ್ಯಾಸಕ್ಕೆ ಬಳಸಿದ್ದು.... ಇದು ಆಗಾಗ ಗಡಿಯಲ್ಲಿ ಅಭ್ಯಾಸದ ಕ್ರಿಯೆ ಅಷ್ಟೇ. ನೆನ್ನ ಸಹ ಎಂದಿನಂತೆಯೇ  ಅಂದು ಸಹ ನಮ್ಮ ಗಡಿ ರೇಖೆಯೊಳಗೆ ನೆಡೆದಿರುವಂತದ್ದು.. ಶತೃಗಳ ವಿರುದ್ದವಾಗಿ ಗುಂಡು ಹಾರಿಸಿಲ್ಲ, ನಿಮ್ಮ ಆದೇಶವಿಲ್ಲದೆ ಹಾರಿಸುವುದು ಇಲ್ಲ.  ಯಾವುದೇ ಪರಿಸ್ಥತಿಯಲ್ಲು ನಾವು ನಮ್ಮ ಸರಹದ್ದು ದಾಟಿಲ್ಲ  ಎಂದು ಪ್ರಾಮಾಣಿಕರಿಸಿದೆ. ನೆನ್ನೆ ನೆಡೆದುದು ಅದೊಂದು ಸೈನಿಕರ ಅಭ್ಯಾಸದ ಘಟಣೆಯಷ್ಟೆ ಎಂದು ಮತ್ತೊಮ್ಮೆ ಧೃಢಪಡಿಸುತ್ತೇನೆ.

ಉತ್ತರವನ್ನು ಕ್ರಮಬದ್ದವಾಗಿ ಬರೆದು ಕರ್ನಲ್ ರವರಿಗೆ ಕೊಟ್ಟೆ. ಅವರು ದೀರ್ಘ ವಾಗಿ ಓದಿ " ಸರಿ " ಎಂದರು ನಗುತ್ತಾ 

ನಾನು ಎದ್ದು ಕೈ ಕುಲುಕಿದೆ.

" ಆ ಸಮಯದಲ್ಲಿ ಮತ್ತೆ  ಶತೃಗಳಿಂದ ಗುಂಡು ಹಾರಿದ್ದರೆ ಏನು ಮಾಡುತ್ತಿದ್ದೀರಿ. ಇದು ನನ್ನ ವೈವ್ಯಕ್ತಿಕ ಪ್ರಶ್ನೆ..." ಎಂದರು.

ನಾನು ಸುಮ್ಮನೆ ನಕ್ಕು ಮೇಲಕ್ಕೆ ಕೈ ತೋರಿಸಿದೆ. 
ನಂತರ ಮನಸ್ಸಿನಲ್ಲಿ  ನಾನು ಖಂಡಿತ ನನ್ನ ಲೆಕ್ಕದಲ್ಲಿ ಗುಂಡು  ಹಾರಿಸಿ ನನ್ನ ಬೆಟಾಲಿಯನ್ ಹುಡುಗರನ್ನಾ ಕಾಪಾಡುತ್ತಿದ್ದೆ. ನಮ್ಮ ಭಾರತದ ಶಕ್ತಿ ತೋರಿಸುತ್ತಿದ್ದೆ.

Category:Stories



ProfileImg

Written by RAGHAVENDRA RAO DA Raj