ಬೆಳಗಿನ ತಿಂಡಿ ಪುರಾಣ

ಬ್ರೇಕ್ ಫಾಸ್ಟ್ ಕಥೆ ವ್ಯಥೆ

ProfileImg
16 May '24
2 min read


image

ಆಹಾ !,ಏನು ಪ್ರಶ್ನೆ ,ಇದು ನಿತ್ಯದ ಗೋಳು ಹೆಂಗಸರಿಗೆ .ನಾಳೆ ಏನು ಮಾಡುವುದು ,ಯಾರ್ಯಾರು ಏನೇನು ತಿನ್ನುತ್ತಾರೆ ಯಾರಿಗೆ ಏನು ಸೇರೋಲ್ಲ ಇತ್ಯಾದಿ ಪ್ರಶ್ನೆ ಬಂದಾಗ ತಲೆ ಸಿಡಿಯುತ್ತದೆ.ಆದರೂ ಸಮಾಧಾನ ವಾಗಿ ಏನಾದರೂ ಹೊಂದಿಸಿ ಮಾಡಿ ಬಿಡುವುದು.ಈ ತಿಂಡಿ ಪ್ರಶ್ನೆ ಇತ್ತೀಚೆಗೆ ಬಂದದ್ದು. ಹಿಂದೆಲ್ಲ ಆಯಾ ಪ್ರಾಂತ್ಯದಲ್ಲಿ ಒಂದೊಂದು ತಿಂಡಿಗಳು ಇದ್ದವು.ನಮ್ಮ ಹಾಸನ ಮೈಸೂರು ಬೆಂಗಳೂರು ಮಂಡ್ಯ ಜಿಲ್ಲೆ ಕಡೆ ಬೆಳಗಾತ ಎದ್ದರೆ ರೊಟ್ಟಿ .ಅದು ಅಕ್ಕಿ ರೊಟ್ಟಿ ರಾಗಿ ರೊಟ್ಟಿ ಎರಡರಲ್ಲಿ ಒಂದು.ಅದರ ಜೊತೆಗೆ ಬೇಕಲ್ಲ ,ಅದಕ್ಕೆ ತರಕಾರಿ ಪಲ್ಯೆ ,ಕಾಳಿನ ಉಸಲಿ ,ತೆಂಗಿನಕಾಯಿ ಚಟ್ನಿ ,🥥ತರಕಾರಿ ಗೊಜ್ಜುಗಳು 🍆🍆ಆಗುತ್ತಿತ್ತು.ಕರಾವಳಿ ಯವರು ಬಿಡಿ ಈಗಲೂ ನೀರು ದೋಸೆ ಚಟ್ನಿ ,ಕಡುಬು ,ಉದ್ದಿನ ದೋಸೆ 🍳ಅಂತಾರೆ..ಇನ್ನು ಉತ್ತರ ಕನ್ನಡ ಜಿಲ್ಲೆಯ ಲ್ಲಿ ಹವ್ಯಕರ ನೀರು ದೋಸೆ🍳🍲 ,ಮಗೇಕಾಯಿ ದೋಸೆ ತೇಲ್ಲೆವು ಚಟ್ನಿ ಜೋನಿ ಬೆಲ್ಲ.ಉತ್ತರ ಕರ್ನಾಟಕದ ಲ್ಲಿ ಜೋಳ ಸಜ್ಜೆ ರೊಟ್ಟಿ🍳 ಜೊತೆಗೆ ಪಲ್ಯೆಗಳು.ಅಬ್ಬ ಈಗ ಹಾಗಲ್ಲ ಇರೋ ನಾಲ್ಕು ಜನಕ್ಕೆ  ನಾಲ್ಕು ಬಗೆ ತಿಂಡಿಗಳು .ಒಬ್ಬರಿಗೆ ಅನ್ನದ ಪದಾರ್ಥ,ಇನ್ನೊಬ್ಬರಿಗೆ ಮುಸುರೆ ಇಲ್ಲದ ಚಪಾತಿ ಪೂರಿ ಉಪ್ಪಿಟ್ಟು, ಇನ್ನೊಬ್ಬರಿಗೆ ಉಪ್ಪಿಟ್ಟ ಅನ್ನೋ ಉದ್ಗಾರ ,ಏನು ಮಾಡುವುದು.ನಾನು ಹೀಗೆ ಮಾಡೋದು ಓದಿ.ದೋಸೆ ಹಿಟ್ಟು ಮಾಡಿ ಇಡೋದು ಅದರ ಜೊತೆಗೆ ಚಟ್ನಿ ಪುಡಿ ,ಚಟ್ನಿ ,ಟೊಮೆಟೊ ತೊಕ್ಕು ,ಹುಣಸೆ ತೊಕ್ಕು  ಏನಾದರೂ ಇರುತ್ತೆ .ಇದು ಅರ್ಜೆಂಟ್ ಗೆ ತಿಂಡಿ.ಇನ್ನು ಊಟ ಕೊಂಡು ಹೋಗಲು ಪುಳಿಯೋಗರೆ ಚಿತ್ರಾನ್ನ ,ಪುಲಾವ್ ,ವಿಧ ವಿಧವಾದ ತರಕಾರಿ ಬಾತುಗಳು ತರಕಾರಿ ಕಲಸನ್ನ, ವಾಂಗೀಬಾತ್ ,ಬಿಸಿಬೇಳೆ ಬಾತ್ ತಯಾರು ಮಾಡಿ ಕೊಡ್ತೇನೆ.

ಆದರೆ ಈ ತಿಂಡಿ ತಿನಿಸು ಹುಡುಕೊದೆ ಕಷ್ಟ.,🌊🍳🍲🥣🥗.ಇತ್ತೀಚೆಗೆ ನಗರ ಪ್ರದೇಶಗಳಲ್ಲಿ,🥪🌮🥙🍔🥐🍞🥞ಈ ಬ್ರೆಡ್ಡ್ ಬರ್ಗರ್ ಪಿಜ್ಜ್ ನೂಡಲ್ಸ್ ಬಂದು ಈ ಕಾಲದಲ್ಲಿ ನ ಮಮ್ಮಿಯರಿಗೆ ಸುಲಭವಾಗಿ ದೇ.ಆದರೆ ನನ್ನ ತರದವರು ಇದನ್ನು ಮಾಡೋಲ್ಲ ತಿನ್ನೋಲ್ಲ.ಬೆಳಗ್ಗೆ ಉಪ್ಪಿಟ್ಟು ಮಾಡಿದ್ರೆ ಈರುಳ್ಳಿ ಹಾಕಲೇ ಬೇಕು...ಇಲ್ಲ್ ಅಂದರೆ ನನ್ನವರು ತಿನ್ನೋಲ್ಲ ಹಾಕಿದ್ರೆ ಮಗಳು ಹೋಗೋ  ಗುರುಕುಲದ ಶಾಲೆಯಲ್ಲಿ ಕೊಟ್ಟು ಕಳಿಸುವ ಹಾಗಿಲ್ಲ.ದೊಡ್ಡವಳಿ ಗೆ ರವೆ ಉಪ್ಪಿಟ್ಟು ಗಂಟಲಿಗೆ ಇಳಿಯೋಲ್ಲ🍲.ದೋಸೆ ಮಾಡಿದ್ರೆ ಪಲ್ಯ ಚಟ್ನಿ ಇಲ್ವಾ ಅಂತಾಳೆ ರುಚಿ ಹುಡುಕುವ ಸಣ್ಣ ಮಗಳು.ಇಡ್ಲಿ ಮಾಡಿದ್ರೆ ಸಾಂಬಾರ್ ಬೇಕಿತ್ತು ದೊಡ್ಡವಳ ಉವಾಚ.ಚಪಾತಿ ಪೂರಿ ಬಾಂಬೆ ಸಾಗು ಮಾಡಿದಾದ್ರೆ ಮಾತ್ರ ಪೂರಿ ತಿನ್ನೋದು ಗಂಡ ನ ಪ್ರತಿಕ್ರಿಯೆ.🥡🍛🍧🍧🍧🍧ಕೆಲವೊಮ್ಮೆ ಈ ಐಸ್ ಕ್ರೀಮ್ ತರ ನಾನು ತಣ್ಣಗೆ ಕುಳಿತು ಯೋಚಿಸಿ ದಿಢೀರ್ ಅಂತ ಏನಾದ್ರು ಮಾಡಿ ಬಿಡ್ತೀನಿ ನೋಡಿ ಚಪ್ಪರಿಸಿ ತಿಂತಾರೆ ಎಲ್ಲರೂ.ಅದೇನು ಅರ್ಜೆಂಟ್ ಲ್ಲಿ ಚೆನ್ನಾಗಿ ಮಾಡ್ತೀಯ ಎಲ್ಲರೂ ಒಟ್ಟಿಗೆ ಕೇಳ್ತಾರೆ.🌞🌞🌞ಆಗಾಗ ಸೂರ್ಯ ಪಶ್ಚಿಮದ ಲ್ಲಿ ಹುಟ್ಟುತ್ತಾನೆ.ಆಗ ಚೆನ್ನಾಗಿರುತ್ತೆ.ಸ್ವಲ್ಪ ಕಾಯಿತುರಿ ,ಟೊಮ್ಯಾಟೋ ,ದೊಣ್ಣೆ ಮೆಣಸು, ಬಟಾಣಿ ಹಾಕಿ ಅವಲಕ್ಕಿ ಒಗ್ಗರಣೆ ಹಾಕುದ್ರೆ ಗಟ್ಟಿ ಮೊಸರು ಸೇರಿಸಿ ಲೊಟ್ಟೆ ಹೊಡೆದು ತಿಂತಾರೆ ಅಪ್ಪ ಮಕ್ಕಳು.🍲🥣ಅಪರೂಪದ ಲ್ಲಿ ರವೆ ಇಡ್ಲಿ ,ರವೆ ದೋಸೆ ಹಾಕುದ್ರೆ ಮುಗಿತು..ಹೋಟೆಲ್ ಫೀಲ್ ನಲ್ಲಿ ತಿಂದು ಮುಗಿಸುತ್ತಾರೆ.ನೀರು ದೋಸೆ ಪಂಚಕಜ್ಜಾಯ ಏನೇ ಆಗಲಿ ಕರಾವಳಿ ಯ ಮೂಲ ವೇ ತಾನೇ ,🍳🍳🥣ಒಳಗೆ ಸಲೀಸಾಗಿ ಇಳಿಯುತ್ತೆ.ರೊಟ್ಟಿ ದೋಸೆ ಚಪಾತಿ ಗೊಜ್ಜವಲಕ್ಕಿ ,ಒಗ್ಗರಣೆ ಅವಲಕ್ಕಿ ಉಪ್ಪಿಟ್ಟು ಹಂ ಎಲ್ಲ ಓ ಕೆ ನೆ..ಆದರೆ ಪೊಂಗಲ್ ಮಾತ್ರ ಸುತಾರಾಂ ಮುಟ್ಟೋದಿಲ್ಲ. ಅದೇನು ಗಂಜಿ ತರ ಅದನ್ನು ತಿನ್ನೋದು..ಗಂಜಿ ಗೆ ಉಪ್ಪು ಹಾಕಿ ಬೇಯಿಸಿ ರುತ್ತೇವೆ ಇದಕ್ಕೆ ಸ್ವಲ್ಪ್ ಎಡ್ಡೆಮುಂಚಿ ಹಾಕಿರ್ತಿಯ್ ಅಷ್ಟೇ  ನನ್ನ ವನು ಹೇಳೋದು ,ಎಡ್ಡೆಮುಂಚಿ ಅಂದ್ರೆ ಕಾಳು ಮೆಣಸು ಕಣ್ರೀ.ದಿನಕ್ಕೊಂದು ತಿಂಡಿ ಹುಡುಕುವುದು ಗೃಹಿಣಿಯರ ಸವಾಲ  ಗೊತ್ತಾ. ಆದರೂ ಕರ್ನಾಟಕದ ರೊಟ್ಟಿ  ಚಟ್ನಿ ,ದೋಸೆ ಪಲ್ಯ ಇಡ್ಲಿ ಸಾಂಬಾರ್ ಮುಂದೆ ಬೇರೆಲ್ಲ ಬ್ರೇಕ್ ಫಾಸ್ಟ್ ಚಿಕ್ಕದಾಗಿ ಕಾಣುತ್ತೇ.ಆದರೂ ನಮ್ಮ ಮನೆಯಲ್ಲಿ ನಿತ್ಯ ನಾನು ಮಾಡುವ ಅಡಿಗೆ ತಿಂಡಿ ಗೆ ಬಾಯಲ್ಲಿ ಕಾಮೆಂಟ್ ಹಾಕ್ತಾ ಹೊಟ್ಟೆಗೆ ಇಳಿಸಿ ಬಿಡ್ತಾರೆ ಮೂವರು. ಒಟ್ಟಿನಲ್ಲಿ ನಾ ಮಾಡಿದ ಪಾತ್ರೆ ಕಾಲಿ.ನಿಜ ಹೇಳಬೇಕೆಂದರೆ ತಿಂಡಿ ಮಾಡುವುದು ಸುಲಭ ಸಾಧ್ಯ.ನಿಮ್ಮ ಮನೆಯಲ್ಲಿ ಮಾಡೋ ತಿಂಡಿ ನೆನಪಿಸಿಕೊಳ್ಳುತ್ತನನ್ನ ತಿಂಡಿ ಪುರಾಣ ಓದಿ.ಎಚ್ ಎಸ್ ಭವಾನಿಉಪಾಧ್ಯ.
 


 

Category:Food and Cooking



ProfileImg

Written by H. S.Bhavani Upadhya

ನಾನು ಲೇಖಕಿ.ಬರೆಯುವುದು ನನಗೆ ಅತ್ಯಂತ ಇಷ್ಟ. ಓದು ಬರಹ ನನ್ನ ಬದುಕಿನ ಭಾಗ.6363008419

0 Followers

0 Following