ಭಗವಾನ್ ಬ್ರಹ್ಮದೇವನಿಗೆ 5 ತಲೆಗಳಿದ್ದವು. ಅದು ಕೋಪ ಮತ್ತು ಅಹಂಕಾರ ಪ್ರತಿರೂಪವಾಗಿತ್ತು.
* ನಾನೇ ಹೆಚ್ಚು ಎಂಬ ಅಹಂಕಾರದಿಂದ ಎಲ್ಲಾ ದೇವಾನು - ದೇವತೆಗಳಿಗೆ ಅವಮಾನಿಸುತ್ತಿದ್ದನು. ಆದ್ದರಿಂದ ಶಿವನು ಕೋಪದಿಂದ ತನ್ನ 3ನೇ ಕಣ್ಣನ್ನು ಬಿಟ್ಟಾಗ ಹೊರ ಹೊಮ್ಮುವ ಕೋಪದ ಜ್ವಾಲೆಯಿಂದ ಭೈರವನು ಉದ್ಭವಿಸಿದನು....
* ಭೈರವನು ಕೋಪದಿಂದ ಬ್ರಹ್ಮನ ಐದನೇ ತಲೆಯನ್ನು ಕತ್ತರಿಸಿದನು.
* ಆಗ ಬ್ರಹ್ಮನ ತಲೆಯ ಬುರುಡೆಯು ಭೈರವನ ಕೈಗೆ ಅಂಟಿಕೊಂಡು ಬ್ರಹ್ಮ ಹತ್ಯಾ ದೋಷ ಉಂಟಾಯಿತು. ಬ್ರಹ್ಮ ಹತ್ಯೆ ರಾಕ್ಷಸಿಯು ಭೈರವನ ಕಾಡಲು ಪ್ರಾರಂಭಿಸಿದಳು.
* ಮಹಾ ಬ್ರಾಹ್ಮಣನಾದ ಬ್ರಹ್ಮನ ತಲೆಯನ್ನ ಕತ್ತರಿಸಿದ ಪಾಪ ಭೈರವನ ಕಾಡಲು ಪ್ರಾರಂಭಿಸಿತು.
* ಇದರಿಂದ ಪಾರಾಗಲು ಭೈರವನು ಶಿವನ ಮೊರೆ ಹೋಗುತ್ತಾನೆ. ಶಿವನು ಅದಕ್ಕೆ ನೀನು ಬ್ರಹ್ಮ ಹತ್ಯೆ ರಾಕ್ಷಸಿಯು ನಿನ್ನ ಹಿಂಬಾಲಿಸಿ ಕಾಶಿಯನ್ನು ತಲಪುವ ಮೊದಲೇ ನೀನು ಕಾಶಿಯನ್ನು ತಲುಪಿ ನಿನ್ನ ಪಾಪವನ್ನು ಕಳೆದುಕೊ ಎಂದು ಪರಿಹಾರ ಸೂಚಿಸುತ್ತಾನೆ.
ಭೈರವನು ಬ್ರಹ್ಮ ಹತ್ಯಾ ದೋಷದಿಂದ ಪ್ರಾಯಶ್ಚಿತ್ತದೊಂದಿಗೆ ಬ್ರಹ್ಮನ ಕಾಪಾಲವನ್ನು ಹಿಡಿದು ಭಿಕ್ಷಾಟನೆ ಪ್ರಾರಂಭಿಸಿ ವಾರಣಸಿಯನ್ನು ತಲುಪುತ್ತಾನೆ.
* ಇದರಿಂದ ಭೈರವನ ದೋಷ ನಿವಾರಣೆ ಆಯಿತು..
* ಶಿವನು ಬ್ರಹ್ಮದೇವನ 5ನೇ ತಲೆಯನ್ನು ಕತ್ತರಿಸುವುದರ ಅರ್ಥವೇನು ಎಂದರೆ ಒಬ್ಬ ವ್ಯಕ್ತಿ ಎಂದಿಗೂ ಇತರರಿಗಿಂತ ತಾನೇ ಶ್ರೇಷ್ಠ ಎಂದು ಪಡಬಾರದು. ಇತರ ದೌರ್ಬಲ್ಯಗಳನ್ನು ಕಂಡು ಅವಮಾನಿಸಬಾರದು ಎಂಬ ಉದ್ದೇಶದಿಂದ ಕೋಪ ಮತ್ತು ಅಹಂಕಾರದ ಪ್ರತಿರೂಪವಾಗಿದ್ದ ಬ್ರಹ್ಮನ 5ನೇ ತಲೆಯನ್ನು ಕತ್ತರಿಸಿದ್ದಾನೆ.
* ನಂತರ ಪುರಾಣ ಉಲ್ಲೇಖಗಳ ಪ್ರಕಾರ ಬ್ರಹ್ಮ ಹತ್ಯೆ ರಕ್ಷಸಿಯನ್ನು ಪಾತಳ ಲೋಕಕ್ಕೇ ತಳ್ಳಲಾಯಿತು.
* ನಂತರ ಬ್ರಹ್ಮನ ನಾಲ್ಕು ತಲೆಗಳಿಂದ ನಾಲ್ಕು ವೇದಗಳು ಹುಟ್ಟಿದವು. ಎಂದು ತಿಳಿಸಲಾಗಿದೆ..✍️Kavith Spk
Writer..✍️
0 Followers
0 Following