Do you have a passion for writing?Join Ayra as a Writertoday and start earning.

ಬ್ರಹ್ಮ ಹತ್ಯಾ - ದೋಷ

ಭಾಗ -01

ProfileImg
24 May '24
2 min read


image

ಹಿಂದೆ ಕೃತಯುಗದಲ್ಲಿ ವೃತಾಸುರನೆಂಬ ರಾಕ್ಷಸನಿದ್ದ.ಇವನು ಬ್ರಾಹ್ಮಣ ಕುಲದ ಮಹಾಋಷಿಯ ಮಗನಾಗಿದ್ದನು. ಇವನು ದೇವಲೋಕಕ್ಕೆ ನುಗ್ಗಿ  ದೇವತೆಗಳಿಗೆ ತುಂಬಾ ತೊಂದರೆ ಕೊಡುತ್ತಿದ್ದನು ಹಾಗೂ ಇಂದ್ರ ಲೋಕಕ್ಕೆ ಹೋಗಿ ಇಂದ್ರನಿಗೆ ತುಂಬಾ ತೊಂದರೆ ಕೊಡುತ್ತಿದ್ದನು. ಆಗ ಇಂದ್ರನು ಇವನ ಕಾಟ ತಾಳಲಾರದೆ ಪೂಜಾ ಕಾರ್ಯದಲ್ಲಿ ನಿರತವಾಗಿದ್ದಾಗ ಅವನನ್ನು ಹತ್ಯೆ ಮಾಡಿದನು. ಇದರಿಂದ ಇಂದ್ರನಿಗೆ ಬ್ರಹ್ಮ ಹತ್ಯಾ  ದೋಷ ಉಂಟಾಯಿತು. ಇದರಿಂದಾಗಿ ಇಂದ್ರನಿಗೆ ದೇವಲೋಕದಲ್ಲಿ ಮತ್ತೆ ಪದವಿ ಸಿಗಲಿಲ್ಲ.ಕೊನೆಗೆ ಈ ಬ್ರಹ್ಮ ಹತ್ಯೆಯೆಂಬ  ರಾಕ್ಷಸಿ ಬೆನ್ನತ್ತಿ ಕಾಡಲು ಪ್ರಾರಂಭಿಸಿತು...ಕೊನೆಗೆ ತಪ್ಪಿಸಿಕೊಳ್ಳಲು ಕಷ್ಟವಾಗಿ ನದಿಯಲ್ಲಿ ಅರಳಿದ ಕಮಲದಲ್ಲಿ ಸೇರಿಕೊಂಡು ಬ್ರಹ್ಮ ನ ಮೊರೆ ಹೋದನು.  ಇದನ್ನ ನೋಡಿ ಇಂದ್ರನಿಗೆ ಒಂದು ಪರಿಹಾರವನ್ನು ಕೊಡುತ್ತಾನೆ.

ಈ ಬ್ರಹ್ಮ ಹತ್ಯಾ ದೋಷವನ್ನು ನಾಲ್ಕು ಭಾಗಗಳಾಗಿ ಮಾಡಿದನು  ಒಂದನ್ನು  ಭೂ ಮಾತೆಗೆ  ಎರಡನೇ ಭಾಗವನ್ನು ಮರಗಳಿಗೆ ಮೂರನೇ ಭಾಗವನ್ನು ನದಿಗೆ ನಾಲ್ಕನೇ ಭಾಗವನ್ನು ಸ್ತ್ರೀಗೆ ಕೊಡಲು ನಿರ್ಧರಿಸುತ್ತಾರೆ. ಆದರೆ ಮೊದಲಿಗೆ ಈ ದೋಷವನ್ನು ಸ್ವೀಕರಿಸಲು ನಿರಾಕರಿಸಿತ್ತಾರೆ.ಆದರೆ ಬ್ರಹ್ಮನು ಅದಕ್ಕೆ ಪ್ರತಿಫಲವಾಗಿ ವರವನ್ನು ನೀಡುತ್ತಾನೆ.
* ಮೊದಲನೆಯ ಭಾಗವನ್ನು ಭೂ ಮಾತೆಗೆ ಬ್ರಹ್ಮ ಹತ್ಯ ದೋಷವನ್ನು ನೀಡಿದಾಗ ದೋಷ ಪಡೆದ ಭೂಮಿಯು ಮರುಭೂಮಿಯಾಗಿ ಬದಲಾವಣೆ ಹೊಂದಿತು.
ಹಾಗೆ ಬ್ರಹ್ಮದೇವನು ವರವನ್ನು ಸಹ ನೀಡುತ್ತಾನೆ ಯಾವ ಸಾಧು ಸಂತರು ,ದೇವಗಣಗಳು,ಅವರ ಪಾದಗಳಿಂದ ನಿನ್ನ ಸ್ಪರ್ಶಿಸುತ್ತಾರೋ ನಿನ್ನ ಪಾಪ ಕರ್ಮಗಳೆಲ್ಲಾ ನಾಶವಾಗಿ ಪುಣ್ಯ ಪ್ರಾಪ್ತವಾಗುತ್ತದೆ.

* ಎರಡನೇ ಭಾಗವನ್ನು ಮರಗಳಿಗೆ ನೀಡುತ್ತಾನೆ.. ಬ್ರಹ್ಮ ಹತ್ಯಾ ದೋಷದಿಂದ ಮರಗಳು ಅಂಟು ದ್ರವ ಸ್ರವಿಸುತ್ತವೆ.ಹಾಗೆ ವರವಾಗಿ ಯಾರೂ ಮರವನ್ನು ಕಡಿದರೂ ನೀನು ಮತ್ತೆ ಚಿಗುರಿ ಬರುವೆ ಎಂದು ವರ ನೀಡುತ್ತಾನೆ
* ಮೂರನೇ ಭಾಗವನ್ನು ನದಿಗೆ ನೀಡಿದಾಗ ಮೊದಲ ಮಳೆಯಲ್ಲಿ ಬರುವ ಕಸ ಕರ್ಮಗಳೆಲ್ಲಾ ನದಿ ಸೇರುತ್ತವೆ ಹಾಗೆ ವರವಾಗಿ ಜನರ ಪಾಪ ಕರ್ಮಗಳನ್ನು ತೊಳೆಯುವ ಭಾಗ್ಯವನ್ನು ನೀಡುತ್ತಾನೆ.
* ನಾಲ್ಕನೇ ಭಾಗವನ್ನೂ ಸ್ತ್ರೀಯರಿಗೆ ನೀಡಿದಾಗ ಸ್ತ್ರೀಯರು ಪ್ರತೀ ಮಾಸದಂದು ಮುಟ್ಟಾಗುವರು. ವರವಾಗಿ ಪತಿಯ ಅರ್ಧ ಪುಣ್ಯ ಪತ್ನಿಗೆ ಹಾಗೂ ಪತ್ನಿಯ ಅರ್ಧ ಪಾಪ ಪತಿಗೆ ಸೇರುತ್ತದೆ ಎಂದು ವರ ನೀಡುತ್ತಾನೆ.
ಹಾಗೆ ಮುಟ್ಟಾದ ಹೆಣ್ಣು ಮಕ್ಕಳು ಗಿಡ ಬಳ್ಳಿಯನ್ನು ಮುಟ್ಟಿದರೆ ಬತ್ತಿ ಹೋಗುತ್ತವೆ. ಹಸುಗೂಸುಗಳನ್ನು ಮುಟ್ಟಲು ಬಿಡುತ್ತಿರಲಿಲ್ಲ. ಈ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳು ಆವರಿಸಿಕೊಳ್ಳುವ ಪರಿಣಾಮ ಹೊರಗಡೆ ಬಿಡುತ್ತಿರಲಿಲ್ಲ..... ಇವೆಲ್ಲಾ ಹಿಂದೆ ಪೂರ್ವಜರು ಕಂಡ , ಕೇಳಿದ ತಮ್ಮ ಅನುಭಗಳನ್ನು ಹೇಳುತ್ತಿದ್ದರು ಹಾಗೂ ಪುರಾಣ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. 

ಈ ಆಧುನಿಕ ಕಲಿಯುಗದ ಪ್ರಭಾವದಿಂದ ಜನ ನಂಬುವುದು ಕಷ್ಟವಾಗಿದೆ... 
ಸೂರ್ಯ,ಚಂದ್ರ, ಭೂಮಿ,ಪ್ರಕೃತಿಗಳು ಹೇಗೆ ಸುಳ್ಳಲ್ಲವೋ ಹಾಗೇ ನಮ್ಮ ಗುರುಗಳು, ಸಿದ್ದಪುರುಷ, ಹಿರಿಯರು ಹೇಳುವ ಮಾತು ಸುಳ್ಳಲ್ಲ……✍️SPK

Category:Spirituality


ProfileImg

Written by Kavitha A.R Surahonne

Writer..✍️