ಬ್ರಹ್ಮ ಹತ್ಯಾ -ದೋಷ

ಭಾಗ -3

ProfileImg
07 Jun '24
2 min read


image

ಭಗವಾನ್ ಶ್ರೀ ರಾಮನು ತನ್ನ ಸಹೋದರ ಲಕ್ಷ್ಮಣ, ಆಂಜನೇಯ ಮತ್ತು ಕಪಿ ಸೈನ್ಯದೊಂದಿಗೆ ತನ್ನ ಸೀತೆಯನ್ನು  ರಾವಣನಿಂದ ರಕ್ಷಿಸಲು ಲಂಕೆಯನ್ನು ಪ್ರವೇಶಿಸಿ ರಾವಣನೊಂದಿಗೆ  ಯುದ್ಧ ಮಾಡುತ್ತಾನೆ. 

* ರಾವಣನು  ಮಹಾ ವಿದ್ವಾಂಸನೂ ಹಾಗೂ ಮಹಾ ಪರಾಕ್ರಮಿಯು ಆಗಿದ್ದರಿಂದ ಅವನ ರಾಕ್ಷಸ ಗುಣವನ್ನು ಮಟ್ಟ ಹಾಕಲು ಶ್ರೀರಾಮನು ರಾವಣನನ್ನು ಸಂಹಾರ ಮಾಡುತ್ತಾನೆ.ಇದರಿಂದ ಶ್ರೀರಾಮ ದೇವರಿಗೆ ಬ್ರಹ್ಮ ಹತ್ಯದೋಷ ಉಂಟಾಯಿತು.  ಇದರಿಂದ ಶ್ರೀರಾಮನು ತುಂಬಾ ಪಶ್ಚಾತಾಪಗೊಳಾಗುತ್ತಾನೆ

* ಏಕೆಂದರೆ ರಾವಣನು ಮಹಾಶಿವ ಭಕ್ತನಾಗಿದ್ದನು ಹಾಗೂ ಬ್ರಾಹ್ಮಣ  ಕುಲದವನಾಗಿದ್ದನು.  

* ಬ್ರಹ್ಮ ಹತ್ಯಾದೋಷದಿಂದ ಪಾರಾಗಲು ತುಂಬಾ ಪ್ರಯತ್ನ ನಡೆಸುತ್ತಾನೆ. ಪರಿಹಾರಕ್ಕಾಗಿ ಪರಿತಪಿಸುತ್ತಿರುವಾಗ  ಮಹಾಋಷಿ ಅಗಸ್ತ್ಯರವರ ಸಲಹೆಯಂತೆ ಶ್ರೀರಾಮನು ಹನುಮಂತನಿಗೆ ಶಿವಲಿಂಗವನ್ನು ತರಲು ಸೂಚಿಸುತ್ತಾನೆ.

* ಹನುಮಂತನು ಒಂದು ಜ್ಯೋತಿರ್ಲಿಂಗವನ್ನು ಕೈಯಲ್ಲಿ ಹಿಡಿದುಕೊಂಡು ಆಕಾಶ ಮಾರ್ಗದಲ್ಲಿ ಬರುತ್ತಿರುವಾಗ ನಾರದ ಮಹಾಮುನಿಗಳು ಎದುರು ಸಿಗುತ್ತಾರೆ ಅವರು ಹನುಮಂತನಿಗೂ ಬ್ರಹ್ಮ ಹತ್ಯದೋಷ ಇರುವ ಕಾರಣ ಒಂದು ಜ್ಯೋತಿರ್ಲಿಂಗ ಸಾಕಾಗುವುದಿಲ್ಲ ಇದರ ಜೊತೆ ಇನ್ನೊಂದು ಜ್ಯೋತಿರ್ಲಿಂಗವನ್ನು ತಂದು ಪ್ರತಿಷ್ಠಾಪಿಸಿ ಪೂಜೆ ಮಾಡಿ ಎಂದು ತಿಳಿಸುತ್ತಾನೆ. ಹಾಗೆ ಮಾರ್ಗ ಮಧ್ಯದಿಂದ ಪುನಃ ವಾಪಾಸ್ ತೆರಳಿ ಆಂಜನೇಯ ಎರಡು ಜ್ಯೋತಿರ್ಲಿಂಗಗಳನ್ನು ಹಿಡಿದುಕೊಂಡು ಬರುತ್ತಾನೆ.

* ತುಂಬಾ ಹೊತ್ತು ಕಾದ ನಂತರ ಸೀತಾದೇವಿಯು ಅಲ್ಲೇ ಕಡಲ ತೀರದಲ್ಲಿ ಲಭ್ಯವಿದ್ದ ಮರಳಿನಿಂದ ಸಣ್ಣ ಶಿವಲಿಂಗವನ್ನು ರಚಿಸಿ ಪ್ರತಿಷ್ಠಾಪನೆ ಮಾಡುತ್ತಾಳೆ. ಇದನ್ನು ರಾಮಲಿಂಗವೆಂದೇ ಕರೆಯಲಾಯಿತು.

* ಶ್ರೀರಾಮನು ತನ್ನ ಸೀತಾದೇವಿಯು ನಿರ್ಮಿಸಿದ ಶಿವಲಿಂಗಕ್ಕೆ ಪೂಜೆ ಮತ್ತು ಅರ್ಚನೆ ಮಾಡಿ ಮುಗಿಸುತ್ತಾನೆ. ಅದೇ ಸಮಯದ ಹೊತ್ತಿಗೆ ಹನುಮಂತನು ಎರಡು ಲಿಂಗಗಳನ್ನು ಹಿಡಿದುಕೊಂಡು ಅಲ್ಲಿಗೆ ಬಂದು ತಲುಪುತ್ತಾನೆ. 

* ಶ್ರೀರಾಮನು ಪೂಜಾ ಮುಗಿಸಿದ್ದೇನೆ ಎಂದು ಹೇಳಿದಾಗ ಹನುಮಂತನು ಹೇಳುತ್ತಾನೆ ದೇವ ನೀನು ಪೂಜೆ ಮಾಡಿದ್ದು ಮರಳಿನ ಲಿಂಗಕ್ಕೆ ನಾನು ಕಾಶಿಯಿಂದ ಜ್ಯೋತಿರ್ಲಿಂಗವನ್ನು ತಂದಿದ್ದೇನೆ ಅದಕ್ಕೆ ಪೂಜೆ ಮಾಡು ಎನ್ನುತ್ತಾನೆ ಮತ್ತು ಮರಳಿನ ಲಿಂಗವನ್ನು ಸಮುದ್ರಕ್ಕೆ ಎಸೆಯಿರಿ ಹೇಳುತ್ತಾನೆ ಅದಕ್ಕೆ ಶ್ರೀರಾಮನು ಹೇಳುತ್ತಾನೆ ತಾನು ಪೂಜೆ ಮಾಡಿದ್ದ ಲಿಂಗವನ್ನು ಸಮುದ್ರಕ್ಕೆ ಎಸೆಯುವುದಕ್ಕೆ ಆಗುವುದಿಲ್ಲ ಆದರೆ ನೀನು ತಂದ ಲಿಂಗವನ್ನು ಅದರ ಜೊತೆಗೆ ಪ್ರತಿಷ್ಠಾಪನೆ ಮಾಡುತ್ತೇನೆ ಎಂದು ಹೇಳುತ್ತಾನೆ.ಸೀತಾಮಾತೆ ರಚಿಸಿದ ಲಿಂಗದ ಪಕ್ಕದಲ್ಲೇ ಹನುಮನು ತಂದ ಕಪ್ಪು ಲಿಂಗವನ್ನು ಇರಿಸುತ್ತಾನೆ ಇದ್ದನ್ನು ವಿಶ್ವ ಲಿಂಗ ಎನ್ನುತ್ತಾರೆ. ಈಗಲೂ ಸಹ ಪ್ರತಿಯೊಬ್ಬರೂ ತಮಿಳ  ನಾಡಿನ ರಾಮೇಶ್ವರಕ್ಕೆ ಭೇಟಿ  ನೀಡಿ ಪಾಪಗಳನ್ನ  ಕಳೆದುಕೊಳ್ಳುತ್ತಾರೆ......✍️KAVITH SPK

Category:Spirituality



ProfileImg

Written by Kavitha A.R Surahonne

Writer..✍️

0 Followers

0 Following