ಬಟ್ಟಲು ಕಂಗಳ ಸುಂದರಿ..

ನಿನಗಾಗಿ ನನ್ನೀ ಹೃದಯ....

ProfileImg
21 May '24
1 min read


image

ಹೇ ಬಟ್ಟಲು ಕಂಗಳ ಸುಂದರಿ..
ನಿನ್ನಲ್ಲಿ ನಾ ಕಂಡೆ ಪ್ರೀತಿಯ ಪರಿ..
ಆ ಪ್ರೀತಿಗೆ ಸೋತು ನಾನಿಡಿದೆ ಪ್ರೇಮದ ದಾರಿ..
ನಿನಗಾಗಿ ನನ್ನೀ ಹೃದಯ ಚಡಪಡಿಸಿದೆ ಹಾರಿ..
ಬಿಟ್ಟರೂ ಬಿಡದು ಈ ಭಾಂದವ್ಯದ ಗರಿ..
ಹಾಗಾಗಿಯೇ ನಿನಗಾಗಿ ತಪಿಸಿದೆ ಪರಿ ಪರಿ..
ಅದಕ್ಕಾಗಿ ಈ ಸಂಬಂಧದ ಆಳವ ನೀ ಅರಿ..
ಸದಾ ಹೀಗೆ ಇರು ಜೊತೆ ಸೇರಿ... 
ನೀ ಒಪ್ಪಿದರೆ ಆಗೋಣ ಸುಮಧುರ ಸಂಬಂಧದ ಝರಿ....

Category:PoemProfileImg

Written by VEDAMURTHY N H

ಹವ್ಯಾಸಿ ಬರಹಗಾರನಾಗಿ ಕನ್ನಡ ಸಾಹಿತ್ಯಕ್ಕೆ ಅಳಿಲು ಸೇವೆ ಸಲ್ಲಿಸುವ ಆಶಯದೊಂದಿಗೆ.....