ಜೇನುಹುಳ

ಕೊಲ್ಲು ಕೊಲ್ಲೆನುವರಯ್ಯ..!!

ProfileImg
17 Jun '24
1 min read


image

ಜೇನುಹುಳ ಹಾರಿ ಬರಲು ಹೂವಿನ ಪರಾಗಸ್ಪರ್ಶ.. 

ಗೂಡು ಕಟ್ಟಿ ಕಂಡಿತು ಅಂಟೆಂಬ ನಂಟಿನಲಿ ಹರ್ಷ..

ಮಧುವಲ್ಲಿ ಮಧುರಸ ಸವಿಯಲು ಬೇಕು ವರ್ಷ..

ಕೈಗೆ ಸಿಗದಾಗ ಹುಳವ ಕೊಲ್ಲು ಕೊಲ್ಲೆನುವರಯ್ಯ..!!

ಎಲ್ಲಿಂದಲೋ ಕಷ್ಟದಲಿ ಹುಡುಕಿ ತರಲು ಹೂವು..

ಮನುಜನಿಗೆ ಸಿಹಿಯ ಕೊಟ್ಟಳಿಸುವುದು ನೋವು..

ಶುಭಕಾರ್ಯಕೆ ಜೇನುತುಪ್ಪ ಬಳಸುವೆವು ನಾವು..

ಅಜ್ಞಾನದ ದುಷ್ಟತನಕೆ ಕೊಲ್ಲು ಕೊಲ್ಲೆನುವರಯ್ಯ..!!

ಹುಳಗಳಳಿದರೆ ಇಂದು ಮನುಕುಲವೇ ಸರ್ವನಾಶ..

ಬಾಳು ಬೆಳಗಲು ಬೆಳೆಸಬೇಕಿದೆ ಹುಳಗಳಲ್ಲಿ ಪಾಶ..

ಕಚ್ಚಿದ ಕ್ಲೇಶಕೆ ಮುಖದಲಿ ಮೂಡುವುದು ರೋಷ..

ಲಾಭವ ಗಳಿಸದೆ ಹುಳವ ಕೊಲ್ಲು ಕೊಲ್ಲೆನುವರಯ್ಯ..!!

ಅಂದು, ಇಂದು, ಎಂದೂ ದೇವನ ಸೇವೆಗೆ ಸಲ್ಲುವುದು..

ರೋಗಕೆ ರಾಮಬಾಣವಾಗಿ ಜಗದೆದುರು ನಿಲ್ಲುವುದು..

ಜೇನುತುಪ್ಪ ಮನುಜಗೌಷಧಿಯಾಗಿ ಮನವ ಗೆಲ್ಲುವುದು.. 

ಯೋಗವನುಭವಿಸದೆ ಹುಳವ ಕೊಲ್ಲು ಕೊಲ್ಲೆನುವರಯ್ಯ..!!

✍ ಮುರಳಿಕೃಷ್ಣ ಕಜೆಹಿತ್ತಿಲು

 

Category:Poetry



ProfileImg

Written by Murali Krishna

DTP Worker, Vittal, Mangalore