ಲಿಂಗೊ ಪೇನ್ ( ಲಿಂಗೊ ದೇವರು) ಬಸ್ತರ್ ಬುಡಕಟ್ಟು ಜನರು ಆರಾಧನೆ ಮಾಡುವ ದೇವರು.
ಈತ ಘೋಟುಲ್ ನ ಸಂಸ್ಥಾಪಕ ( ಚಿತ್ರ ದಲ್ಲಿ ಬಸ್ತರ್ ನ ಘೋಟುಲ್ ಅನ್ನು ನೋಡಬಹುದು) ಇದೊಂದು ಗುರುಕುಲ ಮಾದರಿಯ ಬುಡಕ ್ಟು ಜನರ ಕಲಿಕಾ ಕೇಂದ್ರ
ಈತ ನಾಗದೇವಿಯ ಮಗ ಎಂಬ ನಂಬಿಕೆ ಅಲ್ಲಿ ಇದೆ
ಲಿಂಗೊ ಪೇನ್ ಬಸ್ತರ್ ಪರಿಸರದ ಸಾಂಸ್ಕೃತಿಕ ವೀರ . ಈತ ಯುದ್ಧ ವೀರನಲ್ಲ .ಆದರೆ ಸಂಗೀತದ ಶಕ್ತಿಯ ಮೂಲಕ ಅನೇಕ ಕೆಟ್ಟ ಶಕ್ತಿಗಳನ್ನು ದೈತ್ಯರನ್ನು ಲಿಂಗೋ ಪೇನ್ ನಾಶ ಮಾಡುತ್ತಾನೆ .pene ಎಂದರೆ ದೇವ ಎಂಬದಕ್ಕೆ ಪರ್ಯಾಯ ವಾಚಿಯಾಗಿರುವ ಪದ .ಬಸ್ತರ್ ಪ್ರದೇಶದ ಬುಡಕಟ್ಟು ಜನಾಂಗದ ಜನರು ಆತನನ್ನು ದೇವರೆಂದೇ ಆರಾಧಿಸುತ್ತಾರೆ . ಲಿಂಗೊ ಸಂಗೀತ ನೃತ್ಯಗಳ ಪ್ರವರ್ತಕ .ಅವನು ಸಂಗೀತಗಾರ ಮಾತ್ರವಲ್ಲ ಸಂಗೀತದ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟವನು .ಆದ್ದರಿಂದಲೇ ಆತನಿಗೆ ಆಗ್ರಾ ಪೂಜೆ
ನಿನಗೆ ಮೊದಲು ಮದ್ಯ ನೀಡಿದೆ
ನಿನಗೆ ಮೊದಲ ಅರಶಿನವು
ನಿನ್ನ ಜೊತೆ ಹಾಡುಗಳು ಒಲಿದು ಬರುವವು
ಎಂದು ಲಿಂಗೊ ಪೇನ್ ಕುರಿತಾದ ಜನಪದ ಕಾವ್ಯದಲ್ಲಿ ಹಲ್ಬಿ ಬುಡಕಟ್ಟಿನ ಜನರು ಆತನನ್ನು ಸ್ತುತಿಸಿದ್ದಾರೆ
ಲಂಗೋ ಪೇನ್ ಬಸ್ತರ್ ಪ್ರದೇಶಕ್ಕೆ ಮಾತ್ರ ಸೀಮಿತನಾಗಿಲ್ಲ.. ಅವನು ಗೋಂಡಿಗಳು ನಿರ್ಮಿಸಿದ ಗೊಂಡವನ ಸೇರಿದಂತೆ ವಿಸ್ತಾರವಾದ ವಲಯದಲ್ಲಿ ಪ್ರಚಲಿತನಾಗಿದ್ದು ಗೌರವವನ್ನು ಪಡೆದಿದ್ದಾನೆ.ಲಿಂಗೋ ಪೆನ್ ನ ದಂತ ಕತೆಯು ಸಣ್ಣ ಪುಟ್ಟ ವ್ಯತ್ಯಾಸಗಳೊಂದಿಗೆ ರೇವ ಬೇತುಲ ಮಂಡ್ಲ ,ಹಾಗೂ ನಾಗಪುರದಿಂದ ದಾಂತೇವಾಡ ತನಕ ಹರಡಿಕೊಂಡಿದೆ.ಇದರ ಪಾvಟಾಂತರಗಳು ಆಂಧ್ರ ಪ್ರದೇಶದ ಅಲಹಾಬಾದ್ ಮತ್ತು ಒರಿಸ್ಸಾದ ಕೆಲವು ಭಾಗಗಳಲ್ಲಿ ಕೂಡಾ ವಿರಳವಾಗಿ ಸಿಗುತ್ತವೆ.ಲಿಂಗೋ ಪೆನ್ ಮಳೆಯನ್ನು ನೀಡುವ ದೇವರು,ಗೊಂದರ ದೇವರುಗಳಿಗೆ ಮುಕ್ತಿಯನ್ನು ನೀಡಿದವನು ಎಂದು ಪರಿಗಣಿಸಲ್ಪಟ್ಟಿದ್ದಾನೆ.
ಲಿಂಗಾ ಪಿನ್ನು ಪ್ರಪಂಚವನ್ನು ನಿರ್ಮಿಸಿದ
ಲಿಂಗಾ ಪಿನ್ನು ಸಾಹಿಬ್ಸ ಅನ್ನು ನಿರ್ಮಿಸಿದ
ಲಿಂಗಾ ಪಿನ್ನು ಸಾಂಬಾರನ್ನು ನಿರ್ಮಿಸಿದ
ಲಿಂಗಾ ಪಿನ್ನು ಹಸುಗಳನ್ನು ನಿರ್ಮಿಸಿದ
ಲಿಂಗಾ ಪಿನ್ನು ಮರದ ಬೇರುಗಳನ್ನು ನಿರ್ಮಿಸಿದ
“ ಅವನು ನಮಗೆ ಬೀಜಗಳನ್ನು ನೀಡಿದ”
ಹೀಗೆ ಲಿಂಗೋ ಪೇನ್ ನ ಕುರಿತು ವಿವಿಧ ಪ್ರದೇಶಗಳಲ್ಲಿ ಪ್ರಚಲಿತವಿರುವ ಬೇರೆ ಬೇರೆ ಐತಿಹ್ಯ ಗಳನ್ನು ಗಮನಿಸಿದಾಗ ಈತ ಪುರಾಣದ ದೇವರುಗಳಾದ ಬ್ರಹ್ಮ ವಿಷ್ಣು ಶಿವ ವಿಶ್ವ ಕರ್ಮ, ಮನು ,ಪ್ರಜಾಪತಿ,ಅಪೋಲೋ ಮೊದಲಾದವರ ಸಾಮ್ಯತೆಗಳು ಕಾಣಿಸುತ್ತವೆ.
ಅವನು ಬ್ರಹ್ಮನಂತೆ ಸೃಷ್ಟಿ ಕಾರ್ಯ ಮಾಡಿದ್ದಾನೆ. ಶಿವ ಹಾಗು ಇನ್ನಿತರ ದೇವತೆಗಳ ಪಾತ್ರವನ್ನು ವಹಿಸಿದ್ದಾನೆ.
ಲಿಂÀಗೋ ಪೇನ್ ಪವಿತ್ರನೂ ದೋಷ ರಹಿತನೂ ,ಕೆಟ್ಟ ವಿಚಾರಗಳಿಂದ ದೂರ ಇರುವವನೂ ಆಗಿದ್ದಾನೆ.
ನೀರಲ್ಲಾದರೂ ಕಲೆ ಇರಬಹುದು
ಅವನಲ್ಲಿ ಎಂದಿಗೂ ಕಲೆ ಇಲ್ಲ.
ಲಿಂಗೋ ಪೇನ್ ವಿಷು ್ಣ ವಿನಂತೆ ಪಾಲಕ .ಅವನು ಕಾಡು ಮತ್ತು ಕೃಷಿಯನ್ನು ಕಲಿಸಿ ಕೊಟ್ಟವನು.
“ಲಿಂಗಾ ಪಿನ್ನು ನಮ್ಮನ್ನು ಕಾಡಿಗೆ ಕರೆದು ಕೊಂಡು ಹೋದ
ಅವನು ನಮಗೆ ತುಂಡರಿಸಲು ಮತ್ತು ಬೆಂಕಿ ಉರಿಸುವುದನ್ನು ಕಲಿಸಿದ
ನಮ್ಮ ಬೆಳೆಗೆ ಅವನು ಬೇಜವನ್ನು ನೀಡಿದ”
ಅವನು ವಿಶ್ವಕರ್ಮನಂತೆ ಕರ ಕುಶಲ ವಸ್ತುಗಳನ್ನು ನಿರ್ಮಿಸಿದ್ದಾನೆ.ಆತ ಮನುವಿನಂತೆ ನಿಯಮಗಳನ್ನು ರೂಪಿಸಿದ್ದಾನೆ. ಗ್ರೀಕ್-ರೋಮನ್ ದೇವತೆ ಅಪೋಲೋನಂತೆ ಸಂಗೀತ ಹಾಗು ಸಂಗೀತ ವಾದ್ಯಗಳನ್ನು ಆವಿಷ್ಕರಿಸಿÀದ್ದಾನೆ ಎಲ್ಲಕ್ಕಿಂತ ಹೆಚ್ಚಾಗಿ ಬಸ್ತರ್ ಪ್ರದೇಶದ ಸಂಗೀತ ,ನೃತ್ಯಗಳಿಗೆ ಪ್ರೇರಣೆಯಾಗಿದ್ದುಕೊಂಡು ಇಲ್ಲಿನ ಬುಡಕಟ್ಟು ಸಂಸೃತಿಗೊಂದು ಹೆಗ್ಗುರುತನ್ನು ನೀಡಿದ್ದಾನೆ
ಲಿಂಗೋ ಪೇನ್ ಸಂಗೀತ, ನೃತ್ಯಗಳನ್ನು ಅಳವಡಿಸಿದ್ದು ಮಾತ್ರವಲ್ಲ , ಸಂಗೀತದ ಶಕ್ತಿಯನ್ನು ಕೂಡಾ ಪ್ರತಿಷ್ಠಾಪಿಸಿದ್ದಾನೆ.ಅವನು ಏಕ ಕಾ¯ಕ್ಕೆ ಹದಿನೆಂಟು ಸಂಗೀತ ವಾದ್ಯಗಳನ್ನು ನುಡಿಸ ಬಲ್ಲ ಚತುರನಾಗಿದ್ದಾನೆ.
“ಪಿತ್ರೊಕ ಗಂಟೆ ಮೊಣಕಾಲಿನಲ್ಲಿ, ಗುಲ್ಗುಡ ಡ್ರಮ್ ಮಣಿಕಟ್ಟಿನಲ್ಲಿದೆ
ಒಂದು ಭುಜದಿಂದ ಮೇಂಡರಿನ್ ಡ್ರಮ್ ಇನ್ನೊಂದು ಭುಜದಿಂದ ಡೋಲು ತೂಗಾಡುತ್ತಿದೆ.
ಗಂಟೆಗಳು ಬೆನ್ನಿಗೆ ಕಟ್ಟಲ್ಪಟ್ಟಿವೆ ಪೈಜಾನ ಅವನ ಕಾಲುಗಳಲ್ಲಿವೆ.....”
ಲಿಂಗೊ ಪೇನ್ ಸಾಮಾನ್ಯ ಸಂಗೀತಗಾರನಲ್ಲ, ಅವನು ಸಂಗೀತದ ಶಕ್ತಿಯನ್ನು ಅರಿತು ಕೊಂಡಿದ್ದ ಮತ್ತು ಅದನ್ನು ಒಳಿತಿಗಾಗಿ ಉಪಯೋಗಿಸಿದ್ದಾನೆ. ಅವನ ಮಡದಿ ಹಾಗು ದೈತ್ಯನೊಬ್ಬ ಆಕ್ರಮಣ ಮಾಡಿದಾಗ ಅವನು ಸಂಗೀತದ ಶಕ್ತಿಯನ್ನು ಬಳಸಿ ಅವರಿಬ್ಬರನ್ನು ನಿಷ್ಕ್ರಿಯಗಳಿಸಿದ್ದಾನೆ. ಅವನು ಸುತ್ತಮುತ್ತ ನೋಡಿದಾಗ ಅವನಿಗೆ ಅಲ್ಲಿ ಮೂರು ಹೀರೆ ಕಾಯಿಗಳು ಮತ್ತು ಒಂದು ಬಿದಿರಿನ ಕೋಲು ಸಿಕ್ಕಿತು ಇವುಗಳಿಂದ ಅವನು ಒಣದು ಸಂಗೀತ ವಾದ್ಯವನ್ನು ಸಿದ್ದ ಪಡಿಸುತ್ತಾನೆ. “ಅವನು ಬಿದಿರಿನ ಕೋಲನ್ನು ಹೀಕಾಯಿಯ ಒಳಗೆ ತೂರಿಸಿದ ಮತ್ತು ಗ್ವಾಯ್ಟರನ್ನು ತಯಾರಿಸಿದ
ಅವನು ತನ್ನ ಎರಡು ಕೂದಲನ್ನು ಕಿತ್ತ ಮತ್ತು ಅದನ್ನು ತಂತಿ ಮಾಡಿದ
ಒಂದು ಬಾಣ ಹಿಡಿದ ಮತ್ತು ಆ ಒಂದು ಕೋಲಿಗೆ ಹನ್ನೊಂದು ಕೀಗಳನ್ನು ಅಳವಡಿಸಿ ಹಾಡಿದ
ಲಿಂಗೊ ಗ್ವಾಯಿಟರನ್ನು ತನ್ನ ಕೈಗಳಲ್ಲಿ ತೆಗೆದು ಕೊಂಡ
ಮತ್ತು ಹಿಡಿದು ಮೀಟಿದ ಮತ್ತು ಅದರಿಂದ ಒಳ್ಳೆಯ ಸ್ವರ ಹೊರಟಿತು
ಅದರಿಂದ ನೂರು ರಾಗಗಳನ್ನು ಸೃಜಿಸಿದ
ಅವನು ಧ್ವನಿಯೆತ್ತಿ ಹಾಡಿದಾಗ ಅದು ಇಂಪಾಗಿ ಕೇಳಿಸಿತು
ಈ ಧ್ವನಿಗೆ ಮರ ಗಿಡಗಳು ಗುಡ್ಡ ಬೆಟ್ಟಗಳು ಮೌನವಾದವು.
ಅವನ ಹಾಡಿನ ಮೋಡಿಗೆ ಆ ದೈತ್ಯ ವಶವಾದ .ತಾನೂ ಹೆಜ್ಜೆ ಹಾಕಿ ನರ್ತಿಸಿದ .ತಾನು ಯಾಕೆ ಬಂದೆ ಎನ್ನುವುದನ್ನೇ ಮರೆತು ಬಿಟ್ಟ.!
ಲಿಂಗೊ ಪೇನ್ ನ ಹುಟ್ಟು ಕೂಡ ಅಲೌಕಿಕವಾದುದು .ಆತನ ತಾಯಿ ಒಂದು ಹಾವು . ಆ ರಾಜ್ಯದಲ್ಲಿ ದುರಕ್ ಸಾಯಿ ಎಂಬ ರಾಜ ಆಳುತ್ತಿದ್ದ .ಆತನ ಮಡದಿ ಕನಕ್ ದೈ .ಅವರಿಗೆ ಸಂತಾನ ಇರಲಿಲ್ಲ .ಅವರ ಅರಮನೆ ದನ ಕರುಗಳಿಂದ ಕೂಡಿ ಡಿ ಸಮೃದ್ಧವಾಗಿತ್ತು ಅವರ ಹಸುಗಳ ಹಟ್ಟಿಯ ಒಂದು ಮೂಲೆಯಲ್ಲಿ ಹಾವೊಂದು ವಾಸವಾಗಿತ್ತು .ಒಂದು ದಿನ ಅದು ಏಳು ಗಂಡು ಮಕ್ಕಳಿಗೆ ಜನ್ಮ ನೀಡುತ್ತದೆ .ಆ ಮಕ್ಕಳು ಜೋರಾಗಿ ಅಳುತ್ತವೆ .ಅವು ಅಳುವ ಧ್ವನಿಯನ್ನು ಕೇಳಿ ರಾಣಿ ಕನಕ್ ದೈ ಗೆ ಎಚ್ಚರವಾಗುತ್ತದೆ .ಮಕ್ಕಳ ಅಳುವಿನ ಧ್ವನಿಯನ್ನು ಹಿಂಬಾಲಿಸಿ ಹಟ್ಟಿಗೆ ಬರುತ್ತಾಳೆ ಅಲ್ಲಿ ಏಳು ಶಿಶುಗಳನ್ನು ನೋಡಿ ತನ್ನ ಗಂಡನನ್ನು ಕರೆ ತರುತ್ತಾಳೆ ಮಕ್ಕಳಿಲ್ಲದ ಆ ದಂಪತಿಗಳು ಆ ಮಕ್ಕಳನ್ನು ಅರಮನೆಗೆ ಕರೆದುಕೊಂಡು ಹೋಗಿ ದತ್ತು ಪಡೆದು ಸಾಕಲು ನಿರ್ಧರಿಸಿ ಎತ್ತಿಕೊಳ್ಳುತ್ತಾರೆ .ಆಗ ಆ ಮಕ್ಕಳ ತಾಯಿ ಯಾಗಿರುವ ಸರ್ಪ ಬಂದು ತಡೆಯುತ್ತದೆ ಆಗ ರಾಣಿ ಅವಳಲ್ಲಿ ಸೆರಗೊಡ್ಡಿ “ನಮಗೆ ಮಕ್ಕಳಿಲ್ಲ ಈ ಮಕ್ಕಳನ್ನು ನಂಗೆ ಕೊಡು “ಎಂದು ಬೇಡಿಕೊಳ್ಳುತ್ತಾಳೆ .ಆಗ ಶಾಂತವಾದ ಆ ಸರ್ಪ ಅವರಿಗೆ ಆ ಮಕ್ಕಳನ್ನು ಕೊಡುತ್ತದೆ .
ರಾಜ ಮತ್ತು ರಾಣಿ ಬಹಳ ಸಂತಸದಿಂದ ಅವರನ್ನು ಸಾಕಿ ಸಲಹುತ್ತಾರೆ .ಏಳು ಜನ ಮಕ್ಕಳು ದೊಡ್ಡವರಾಗುತ್ತಾರೆ .ಆ ಏಳು ಜನ ಮಕ್ಕಳಲ್ಲಿ ಲಿಂಗೊ ಪೇನ್ ಎಲ್ಲರಿಗಿಂತ ಚಿಕ್ಕವನು.ದೊಡ್ಡವರಾದ ಆರುಜನರಿಗೆ ಮದುವೆಯಾಗುತ್ತದೆ .ಲಿಂಗೊ ಮದುವೆಯಾಗದೆ ಹಾಗೆ ಉಳಿಯುತ್ತಾನೆ .ಅವನು ಸಂಗೀತದ ಸಾಧನೆ ಮಾಡುತ್ತಾನೆ .ಒಂದು ದಿನ ಅವನ ಆರು ಜನ ಅತ್ತಿಗೆಯಂದಿರು ಅವನ ಹಾಡನ್ನು ಕೇಳಿ ತನ್ಮಯರಾಗುತ್ತಾರೆ .ಅವರ ಕೆಲಸವನ್ನು ಮರೆಯುತ್ತಾರೆ .ಅವರ ಗಂಡಂದಿರಿಗೆ ಸಿಟ್ಟು ಬರುತ್ತದೆ .ಪ್ರತಿ ದಿನ ಇದು ಮುಂದುವರೆಯುತ್ತದೆ .ಇದರಿಂದ ಆರುಜನ ಅಣ್ಣಂದಿರು ಲಿಂಗೊ ನನ್ನು ಸಾಯಿಸ ಬೇಕೆಂದು ನಾನಾ ಉಪಾಯಗಳನ್ನು ಮಾಡುತ್ತಾರೆ .ಆದರೆ ಎಲ್ಲ ಕಡೆಯೂ ಲಿಂಗೊ ಪಾರಾಗಿ ಬರುತ್ತಾನೆ .
ಮುಂದೆ ಲಿಂಗೊ ಏಳುಜನ ಬ್ರಾಹ್ಮಣ ಕನ್ಯೆಯರನ್ನು ವಿವಾಹವಾಗುತ್ತಾನೆ ಆರು ಜನರು ಮಾತಗಾತಿಯರಾಗಿ ಅವನಿಂದ ದೂರ ಸರಿಯುತ್ತಾರೆ.ಒಬ್ಬಳು ಅವನೊಂದಿಗೆ ಸಂಸಾರ ಮಾಡುತ್ತಾಳೆ ಒಬ್ಬ ಮಗ ಕೂಡಾ ಜನಿಸುತ್ತಾನೆ .ಒಂದು ದಿನ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ತುಂಡ ಕ್ಷತ್ರಿಯನೊಬ್ಬ ಬಂದು ಅವಳನ್ನುಅಪಹರಿಸುತ್ತಾನೆ ಆಗ ಅವಳ ಮಗ ಅಳುತ್ತಾನೆ ಆಗ ಅಲ್ಲಿಗೆ ಬಂದ ಲಿಂಗೊ ಅವರಿಬ್ಬರನ್ನು ಹಿಂಬಾಲಿಸುತ್ತಾನೆ .ಅವನ ಮಡದಿ ಸಿಕ್ಕಾಗ ಅವಳನ್ನು ಏಳು ತುಡು ಮಾಡಿ ಬಿಸಾಡುತ್ತಾನೆ .ಆ ಕ್ಷತ್ರಿಯ ಒಂದು ಗುಹೆಯನ್ನು ಹೊಕ್ಕು ಅಡಗಿ ಕುಳಿತಾಗ ಅದರೊಳಗೆ ಹೋಗೆ ತುಂಬಿಸಿ ಅವನನ್ನು ಓಡಿಸುತ್ತಾನೆ
ಮುಂದೆ ಲಿಂಗೊ ಪರ್ತಬಿ ಕುಟುಂಬ ವನ್ನು ಆಶ್ರಯಿಸುತ್ತಾನೆ
ಸೋನ ಮತ್ತು ರೂಪ ಪರ್ತಬಿಗಳಿಗೆ ಏಳು ಜನ ಸೊಸೆಯದಿರು ಇರುತ್ತಾರೆ ಅವರು ಹುಲ್ಲು ಮಾಡಲು ಹೋಗುತ್ತಾರೆ ಹುಲ್ಲು ಕೊಯ್ದು ಕಟ್ಟ ಮಾಡುತ್ತಾರೆ ಚಿಕ್ಕವಳ ಕೈಳಲ್ಲಿ ಏಳು ಕೈಗಳಷ್ಟು ಹುಲ್ಲು ಸಿಗುತ್ತತ್ತದೆ .ಲಿಂಗೊ ಪೇನ್ ಅವಳನ್ನು ಇಷ್ಟ ಪಡುತ್ತಾನೆ ಆರು ಜನರು ಹುಲ್ಲಿನ ಕಟ್ಟನ ನು ತಮ್ಮ ತಲೆಯಲ್ಲಿ ಇಟ್ಟುಕೊಳ್ಳುತ್ತಾರೆ
ಚಿಕ್ಕವಳಿಗೆ ಸಾಧ್ಯವಾಗುವುದಿಲ್ಲ .ಏಳುಜನ ಸೇರಿ ಹೇಗೋ ಅವಳ ತಲೆಯಲ್ಲಿ ಇಡುತ್ತಾರೆ .ಮನೆಗೆ ಹೋದಾಗ ಯಾರು ಜನರ ತಲೆಯಿಂದ ಹುಲ್ಲಿನ ಕಟ್ಟ ಕೆಳಗೆ ಇರಿಸುತ್ತಾರೆ ಆದರೆ ಚಿಕ್ಕವಳ ತಲೆಯಲ್ಲಿ ಹುಲ್ಲಿನ ಕಟ್ಟು ಅಂಟಿರುತ್ತದೆ.ಹೇಗೋ ಎಳೆದು ಅದನ್ನು ಕೆಳಗೆ ಹಾಕುತ್ತಾರೆ ಅದನ್ನು ತಿಂದ ಕೋಣಗಳು ಎಮ್ಮೆಗಳು ಹಂದಿಗಳು ಕೋಳಿಗಳು ಸಾಯುತ್ತವೆ .ಇದೇಕೆ ಹೀಗೆ ಎಂದು ಪರ್ತಬಿಗಳಿಗೆ ಆಶರ್ಯವಾಗುತ್ತದೆ .ಆಗ ಚಿಕ್ಕವಳು ಸಿರಹ “ಲಿಂಗೊ ಮುಡಿಯಾಲ ದೇವನ ಗುರುತು “ಚಿಹ್ನೆ “ಕಾಣಿಸುತ್ತದೆ .ನೀವು ಲಿಂಗೊ ನನ್ನು ಆರಾಧಿಸಬೇಕು ಎಂದು ಹೇಳುತ್ತಾಳೆ .ಲಿಂಗೊ ನನ್ನು ಪ್ರಾರ್ಥಿಸಿದ ಕೂಡಲೇ ಸತ್ತ ಹಂದಿ ಕೋಳಿ ಎಮ್ಮೆ ಕೋಣಗಳು ಜೀವ ತಳೆದು ಎದ್ದು ನಿಲ್ಲುತ್ತವೆ .ಹೀಗೆ ಲಿಂಗೊ ದೇವರಾಗಿ ಆರಾಧಿಸಲ್ಪದುತ್ತಾನೆ ಅವನ ಅನೇಕ ಮಹಿಮೆಗಳನ್ನು ಈ ಜನಪದ ಕಾವ್ಯದಲ್ಲಿ ವರ್ಣಿಸಲಾಗಿದೆ .ಬಸ್ತರ್ ಪ್ರದೇಶದ ಬುಡಕಟ್ಟುಗಳ ಅಧ್ಯಯನದಲ್ಲಿ ಲಿಂಗೊ ಪೇನ್ ನ ದಂತ ಕಥೆಯು ಬಹಳಮುಖ್ಯ ಪಾತ್ರವನ್ನು ವಹಿಸುತ್ತದೆ
ಲಿಂಗೊ ಪೇನ್ ಬಸ್ತರ್ ಪರಿಸರದ ಸಾಂಸ್ಕೃತಿಕ ವೀರ . ಈತ ಯುದ್ಧ ವೀರನಲ್ಲ .ಆದರೆ ಸಂಗೀತದ ಶಕ್ತಿಯ ಮೂಲಕ ಅನೇಕ ಕೆಟ್ಟ ಶಕ್ತಿಗಳನ್ನು ದೈತ್ಯರನ್ನು ಲಿಂಗೋ ಪೇನ್ ನಾಶ ಮಾಡುತ್ತಾನೆ .pene ಎಂದರೆ ದೇವ ಎಂಬದಕ್ಕೆ ಪರ್ಯಾಯ ವಾಚಿಯಾಗಿರುವ ಪದ .ಬಸ್ತರ್ ಪ್ರದೇಶದ ಬುಡಕಟ್ಟು ಜನಾಂಗದ ಜನರು ಆತನನ್ನು ದೇವರೆಂದೇ ಆರಾಧಿಸುತ್ತಾರೆ . ಲಿಂಗೊ ಸಂಗೀತ ನೃತ್ಯಗಳ ಪ್ರವರ್ತಕ .ಅವನು ಸಂಗೀತಗಾರ ಮಾತ್ರವಲ್ಲ ಸಂಗೀತದ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟವನು .ಆದ್ದರಿಂದಲೇ ಆತನಿಗೆ ಅಗ್ರ ಪೂಜೆ
ನಿನಗೆ ಮೊದಲು ಮದ್ಯ ನೀಡಿದೆ
ನಿನಗೆ ಮೊದಲ ಅರಶಿನವು
ನಿನ್ನ ಜೊತೆ ಹಾಡುಗಳು ಒಲಿದು ಬರುವವು
ಎಂದು ಲಿಂಗೊ ಪೇನ್ ಕುರಿತಾದ ಜನಪದ ಕಾವ್ಯದಲ್ಲಿ ಹಲ್ಬಿ ಬುಡಕಟ್ಟಿನ ಜನರು ಆತನನ್ನು ಸ್ತುತಿಸಿದ್ದಾರೆ
ಲಂಗೋ ಪೆನ್ ಬಸ್ತರ್ ಪ್ರದೇಶಕ್ಕೆ ಮಾತ್ರ ಸೀಮಿತನಾಗಿಲ್ಲ.. ಅವನು ಗೋಂಡಿಗಳು ನಿರ್ಮಿಸಿದ ಗೊಂಡವನ ಸೇರಿದಂತೆ ವಿಸ್ತಾರವಾದ ವಲಯದಲ್ಲಿ ಪ್ರಚಲಿತನಾಗಿದ್ದು ಗೌರವವನ್ನು ಪಡೆದಿದ್ದಾನೆ.ಲಿಂಗೋ ಪೆನ್ ನ ದಂತ ಕತೆಯು ಸಣ್ಣ ಪುಟ್ಟ ವ್ಯತ್ಯಾಸಗಳೊಂದಿಗೆ ರೇವ ಬೇತುಲ ಮಂಡ್ಲ ,ಹಾಗೂ ನಾಗಪುರದಿಂದ ದಾಂತೇವಾಡ ತನಕ ಹರಡಿಕೊಂಡಿದೆ.ಇದರ ಪಾvಟಾಂತರಗಳು ಆಂಧ್ರ ಪ್ರದೇಶದ ಅಲಹಾಬಾದ್ ಮತ್ತು ಒರಿಸ್ಸಾದ ಕೆಲವು ಭಾಗಗಳಲ್ಲಿ ಕೂಡಾ ವಿರಳವಾಗಿ ಸಿಗುತ್ತವೆ.ಲಿಂಗೋ ಪೆನ್ ಮಳೆಯನ್ನು ನೀಡುವ ದೇವರು,ಗೊಂದರ ದೇವರುಗಳಿಗೆ ಮುಕ್ತಿಯನ್ನು ನೀಡಿದವನು ಎಂದು ಪರಿಗಣಿಸಲ್ಪಟ್ಟಿದ್ದಾನೆ.
ಲಿಂಗಾ ಪಿನ್ನು ಪ್ರಪಂಚವನ್ನು ನಿರ್ಮಿಸಿದ
ಲಿಂಗಾ ಪಿನ್ನು ಸಾಹಿಬ್ಸ ಅನ್ನು ನಿರ್ಮಿಸಿದ
ಲಿಂಗಾ ಪಿನ್ನು ಸಾಂಬಾರನ್ನು ನಿರ್ಮಿಸಿದ
ಲಿಂಗಾ ಪಿನ್ನು ಹಸುಗಳನ್ನು ನಿರ್ಮಿಸಿದ
ಲಿಂಗಾ ಪಿನ್ನು ಮರದ ಬೇರುಗಳನ್ನು ನಿರ್ಮಿಸಿದ
“ ಅವನು ನಮಗೆ ಬೀಜಗಳನ್ನು ನೀಡಿದ”
ಹೀಗೆ ಲಿಂಗೋ ಪೆನ್ ನ ಕುರಿತು ವಿವಿಧ ಪ್ರದೇಶಗಳಲ್ಲಿ ಪ್ರಚಲಿತವಿರುವ ಬೇರೆ ಬೇರೆ ಐತಿಹ್ಯ ಗಳನ್ನು ಗಮನಿಸಿದಾಗ ಈತ ಪುರಾಣದ ದೇವರುಗಳಾದ ಬ್ರಹ್ಮ ವಿಷ್ಣು ಶಿವ ವಿಶ್ವ ಕರ್ಮ, ಮನು ,ಪ್ರಜಾಪತಿ,ಅಪೋಲೋ ಮೊದಲಾದವರ ಸಾಮ್ಯತೆಗಳು ಕಾಣಿಸುತ್ತವೆ.ಅವನು ಬ್ರಹ್ಮನಂತೆ ಸೃಷ್ಟಿ ಕಾರ್ಯ ಮಾಡದ್ದಾನೆ. ಶಿವ ಹಾಗು ಇನ್ನಿತರ ದೇವತೆಗಳ ಪಾತ್ರವನ್ನು ವಹಿಸಿದ್ದಾನೆ.
ಲಿಂÀಗೋ ಪೆನ್ ಪವಿತ್ರನೂ ದೋಷ ರಹಿತನೂ ,ಕೆಟ್ಟ ವಿಚಾರಗಳಿಂದ ದೂರ ಇರುವವನೂ ಆಗಿದ್ದಾನೆ.
ನೀರಲ್ಲಾದರೂ ಕಲೆ ಇರಬಹುದು
ಅವನಲ್ಲಿ ಎಂದಿಗೂ ಕಲೆ ಇಲ್ಲ.
ಲಿಂಗೊ ಪೇನ್ ವಿಷು ್ಣ ವಿನಂತೆ ಪಾಲಕ .ಅವನು ಕಾಡು ಮತ್ತು ಕೃಷಿಯನ್ನು ಕಲಿಸಿ ಕೊಟ್ಟವನು.
“ಲಿಂಗಾ ಪಿನ್ನು ನಮ್ಮನ್ನು ಕಾಡಿಗೆ ಕರೆದು ಕೊಂಡು ಹೋದ
ಅವನು ನಮಗೆ ತುಂಡರಿಸಲು ಮತ್ತು ಬೆಂಕಿ ಉರಿಸುವುದನ್ನು ಕಲಿಸಿದ
ನಮ್ಮ ಬೆಳೆಗೆ ಅವನು ಬೇಜವನ್ನು ನೀಡಿದ”
ಅವನು ವಿಶ್ವಕರ್ಮನಂತೆ ಕರ ಕುಶಲ ವಸ್ತುಗಳನ್ನು ನಿರ್ಮಿಸಿದ್ದಾನೆ.ಆತ ಮನುವಿನಂತೆ ನಿಯಮಗಳನ್ನು ರೂಪಿಸಿದ್ದಾನೆ. ಗ್ರೀಕ್-ರೋಮನ್ ದೇವತೆ ಅಪೋಲೋನಂತೆ ಸಂಗೀತ ಹಾಗು ಸಂಗೀತ ವಾದ್ಯಗಳನ್ನು ಆವಿಷ್ಕರಿಸಿÀದ್ದಾನೆ ಎಲ್ಲಕ್ಕಿಂತ ಹೆಚ್ಚಾಗಿ ಬಸ್ತರ್ ಪ್ರದೇಶದ ಸಂಗೀತ ,ನೃತ್ಯಗಳಿಗೆ ಪ್ರೇರಣೆಯಾಗಿದ್ದುಕೊಂಡು ಇಲ್ಲಿನ ಬುಡಕಟ್ಟು ಸಂಸೃತಿಗೊಂದು ಹೆಗ್ಗುರುತನ್ನು ನೀಡಿದ್ದಾನೆ
ಲಿಂಗೋ ಪೆನ್ ಸಂಗೀತ, ನೃತ್ಯಗಳನ್ನು ಅಳವಡಿಸಿದ್ದು ಮಾತ್ರವಲ್ಲ , ಸಂಗೀತದ ಶಕ್ತಿಯನ್ನು ಕೂಡಾ ಪ್ರತಿಷ್ಠಾಪಿಸಿದ್ದಾನೆ.ಅವನು ಏಕ ಕಾ¯ಕ್ಕೆ ಹದಿನೆಂಟು ಸಂಗೀತ ವಾದ್ಯಗಳನ್ನು ನುಡಿಸ ಬಲ್ಲ ಚತುರನಾಗಿದ್ದಾನೆ.
“ಪಿತ್ರೊಕ ಗಂಟೆ ಮೊಣಕಾಲಿನಲ್ಲಿ, ಗುಲ್ಗುಡ ಡ್ರಮ್ ಮಣಿಕಟ್ಟಿನಲ್ಲಿದೆ
ಒಂದು ಭುಜದಿಂದ ಮೇಂಡರಿನ್ ಡ್ರಮ್ ಇನ್ನೊಂದು ಭುಜದಿಂದ ಡೋಲು ತೂಗಾಡುತ್ತಿದೆ.
ಗಂಟೆಗಳು ಬೆನ್ನಿಗೆ ಕಟ್ಟಲ್ಪಟ್ಟಿವೆ ಪೈಜಾನ ಅವನ ಕಾಲುಗಳಲ್ಲಿವೆ.....”
ಲಿಂಗೋ ಪೆನ್ ಸಾಮಾನ್ಯ ಸಂಗೀತಗಾರನಲ್ಲ, ಅವನು ಸಂಗೀತದ ಶಕ್ತಿಯನ್ನು ಅರಿತು ಕೊಂಡಿದ್ದ ಮತ್ತು ಅದನ್ನು ಒಳಿತಿಗಾಗಿ ಉಪಯೋಗಿಸಿದ್ದಾನೆ. ಅವನ ಮಡದಿ ಹಾಗು ದೈತ್ಯನೊಬ್ಬ ಆಕ್ರಮಣ ಮಾಡಿದಾಗ ಅವನು ಸಂಗೀತದ ಶಕ್ತಿಯನ್ನು ಬಳಸಿ ಅವರಿಬ್ಬರನ್ನು ನಿಷ್ಕ್ರಿಯಗಳಿಸಿದ್ದಾನೆ. ಅವನು ಸುತ್ತಮುತ್ತ ನೋಡಿದಾಗ ಅವನಿಗೆ ಅಲ್ಲಿ ಮೂರು ಹೀರೆ ಕಾಯಿಗಳು ಮತ್ತು ಒಂದು ಬಿದಿರಿನ ಕೋಲು ಸಿಕ್ಕಿತು ಇವುಗಳಿಂದ ಅವನು ಒಣದು ಸಂಗೀತ ವಾದ್ಯವನ್ನು ಸಿದ್ದ ಪಡಿಸುತ್ತಾನೆ. “ಅವನು ಬಿದಿರಿನ ಕೋಲನ್ನು ಹೀರೇಕಾಯಿಯ ಒಳಗೆ ತೂರಿಸಿದ ಮತ್ತು ಗ್ವಾಯ್ಟರನ್ನು ತಯಾರಿಸಿದ
ಅವನು ತನ್ನ ಎರಡು ಕೂದಲನ್ನು ಕಿತ್ತ ಮತ್ತು ಅದನ್ನು ತಂತಿ ಮಾಡಿದ
ಒಂದು ಬಾಣ ಹಿಡಿದ ಮತ್ತು ಆ ಒಂದು ಕೋಲಿಗೆ ಹನ್ನೊಂದು ಕೀಗಳನ್ನು ಅಳವಡಿಸಿ ಹಾಡಿದ
ಲಿಂಗೊ ಗ್ವಾಯಿಟರನ್ನು ತನ್ನ ಕೈಗಳಲ್ಲಿ ತೆಗೆದು ಕೊಂಡ
ಮತ್ತು ಹಿಡಿದು ಮೀಟಿದ ಮತ್ತು ಅದರಿಂದ ಒಳ್ಳೆಯ ಸ್ವರ ಹೊರಟಿತು
ಅದರಿಂದ ನೂರು ರಾಗಗಳನ್ನು ಸೃಜಿಸಿದ
ಅವನು ಧ್ವನಿಯೆತ್ತಿ ಹಾಡಿದಾಗ ಅದು ಇಂಪಾಗಿ ಕೇಳಿಸಿತು
ಈ ಧ್ವನಿಗೆ ಮರ ಗಿಡಗಳು ಗುಡ್ಡ ಬೆಟ್ಟಗಳು ಮೌನವಾದವು.
ಅವನ ಹಾಡಿನ ಮೋಡಿಗೆ ಆ ದೈತ್ಯ ವಶವಾದ .ತಾನೂ ಹೆಜ್ಜೆ ಹಾಕಿ ನರ್ತಿಸಿದ .ತಾನು ಯಾಕೆ ಬಂದೆ ಎನ್ನುವುದನ್ನೇ ಮರೆತು ಬಿಟ್ಟ.!
ಲಿಂಗೊ ಪೇನ್ ನ ಹುಟ್ಟು ಕೂಡ ಅಲೌಕಿಕವಾದುದು .ಆತನ ತಾಯಿ ಒಂದು ಹಾವು . ಆ ರಾಜ್ಯದಲ್ಲಿ ದುರಕ್ ಸಾಯಿ ಎಂಬ ರಾಜ ಆಳುತ್ತಿದ್ದ .ಆತನ ಮಡದಿ ಕನಕ್ ದೈ .ಅವರಿಗೆ ಸಂತಾನ ಇರಲಿಲ್ಲ .ಅವರ ಅರಮನೆ ದನ ಕರುಗಳಿಂದ ಕೂಡಿ ಡಿ ಸಮೃದ್ಧವಾಗಿತ್ತು ಅವರ ಹಸುಗಳ ಹಟ್ಟಿಯ ಒಂದು ಮೂಲೆಯಲ್ಲಿ ಹಾವೊಂದು ವಾಸವಾಗಿತ್ತು .ಒಂದು ದಿನ ಅದು ಏಳು ಗಂಡು ಮಕ್ಕಳಿಗೆ ಜನ್ಮ ನೀಡುತ್ತದೆ .ಆ ಮಕ್ಕಳು ಜೋರಾಗಿ ಅಳುತ್ತವೆ .ಅವು ಅಳುವ ಧ್ವನಿಯನ್ನು ಕೇಳಿ ರಾಣಿ ಕನಕ್ ದೈ ಗೆ ಎಚ್ಚರವಾಗುತ್ತದೆ .ಮಕ್ಕಳ ಅಳುವಿನ ಧ್ವನಿಯನ್ನು ಹಿಂಬಾಲಿಸಿ ಹಟ್ಟಿಗೆ ಬರುತ್ತಾಳೆ ಅಲ್ಲಿ ಏಳು ಶಿಶುಗಳನ್ನು ನೋಡಿ ತನ್ನ ಗಂಡನನ್ನು ಕರೆ ತರುತ್ತಾಳೆ ಮಕ್ಕಳಿಲ್ಲದ ಆ ದಂಪತಿಗಳು ಆ ಮಕ್ಕಳನ್ನು ಅರಮನೆಗೆ ಕರೆದುಕೊಂಡು ಹೋಗಿ ದತ್ತು ಪಡೆದು ಸಾಕಲು ನಿರ್ಧರಿಸಿ ಎತ್ತಿಕೊಳ್ಳುತ್ತಾರೆ .ಆಗ ಆ ಮಕ್ಕಳ ತಾಯಿ ಯಾಗಿರುವ ಸರ್ಪ ಬಂದು ತಡೆಯುತ್ತದೆ ಆಗ ರಾಣಿ ಅವಳಲ್ಲಿ ಸೆರಗೊಡ್ಡಿ “ನಮಗೆ ಮಕ್ಕಳಿಲ್ಲ ಈ ಮಕ್ಕಳನ್ನು ನಂಗೆ ಕೊಡು “ಎಂದು ಬೇಡಿಕೊಳ್ಳುತ್ತಾಳೆ .ಆಗ ಶಾಂತವಾದ ಆ ಸರ್ಪ ಅವರಿಗೆ ಆ ಮಕ್ಕಳನ್ನು ಕೊಡುತ್ತದೆ .
ರಾಜ ಮತ್ತು ರಾಣಿ ಬಹಳ ಸಂತಸದಿಂದ ಅವರನ್ನು ಸಾಕಿ ಸಲಹುತ್ತಾರೆ .ಏಳು ಜನ ಮಕ್ಕಳು ದೊಡ್ಡವರಾಗುತ್ತಾರೆ .ಆ ಏಳು ಜನ ಮಕ್ಕಳಲ್ಲಿ ಲಿಂಗೊ ಪೇನ್ ಎಲ್ಲರಿಗಿಂತ ಚಿಕ್ಕವನು.ದೊಡ್ಡವರಾದ ಆರುಜನರಿಗೆ ಮದುವೆಯಾಗುತ್ತದೆ .ಲಿಂಗೊ ಮದುವೆಯಾಗದೆ ಹಾಗೆ ಉಳಿಯುತ್ತಾನೆ .ಅವನು ಸಂಗೀತದ ಸಾಧನೆ ಮಾಡುತ್ತಾನೆ .ಒಂದು ದಿನ ಅವನ ಆರು ಜನ ಅತ್ತಿಗೆಯಂದಿರು ಅವನ ಹಾಡನ್ನು ಕೇಳಿ ತನ್ಮಯರಾಗುತ್ತಾರೆ .ಅವರ ಕೆಲಸವನ್ನು ಮರೆಯುತ್ತಾರೆ .ಅವರ ಗಂಡಂದಿರಿಗೆ ಸಿಟ್ಟು ಬರುತ್ತದೆ .ಪ್ರತಿ ದಿನ ಇದು ಮುಂದುವರೆಯುತ್ತದೆ .ಇದರಿಂದ ಆರುಜನ ಅಣ್ಣಂದಿರು ಲಿಂಗೊ ನನ್ನು ಸಾಯಿಸ ಬೇಕೆಂದು ನಾನಾ ಉಪಾಯಗಳನ್ನು ಮಾಡುತ್ತಾರೆ .ಆದರೆ ಎಲ್ಲ ಕಡೆಯೂ ಲಿಂಗೊ ಪಾರಾಗಿ ಬರುತ್ತಾನೆ .
ಮುಂದೆ ಲಿಂಗೊ ಏಳುಜನ ಬ್ರಾಹ್ಮಣ ಕನ್ಯೆಯರನ್ನು ವಿವಾಹವಾಗುತ್ತಾನೆ ಆರು ಜನರು ಮಾತಗಾತಿಯರಾಗಿ ಅವನಿಂದ ದೂರ ಸರಿಯುತ್ತಾರೆ.ಒಬ್ಬಳು ಅವನೊಂದಿಗೆ ಸಂಸಾರ ಮಾಡುತ್ತಾಳೆ ಒಬ್ಬ ಮಗ ಕೂಡಾ ಜನಿಸುತ್ತಾನೆ .ಒಂದು ದಿನ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ತುಂಡ ಕ್ಷತ್ರಿಯನೊಬ್ಬ ಬಂದು ಅವಳನ್ನುಅಪಹರಿಸುತ್ತಾನೆ ಆಗ ಅವಳ ಮಗ ಅಳುತ್ತಾನೆ ಆಗ ಅಲ್ಲಿಗೆ ಬಂದ ಲಿಂಗೊ ಅವರಿಬ್ಬರನ್ನು ಹಿಂಬಾಲಿಸುತ್ತಾನೆ .ಅವನ ಮಡದಿ ಸಿಕ್ಕಾಗ ಅವಳನ್ನು ಏಳು ತುಡು ಮಾಡಿ ಬಿಸಾಡುತ್ತಾನೆ .ಆ ಕ್ಷತ್ರಿಯ ಒಂದು ಗುಹೆಯನ್ನು ಹೊಕ್ಕು ಅಡಗಿ ಕುಳಿತಾಗ ಅದರೊಳಗೆ ಹೋಗೆ ತುಂಬಿಸಿ ಅವನನ್ನು ಓಡಿಸುತ್ತಾನೆ
ಮುಂದೆ ಲಿಂಗೊ ಪರ್ತಬಿ ಕುತುಂಬ ವನ್ನು ಆಶ್ರಯಿಸುತ್ತಾನೆ ಸೋನ ಮತ್ತು ರೂಪ ಪರ್ತಬಿಗಳಿಗೆ ಏಳು ಜನ ಸೋಸೆಯದಿರು ಇರುತ್ತಾರೆ ಅವರು ಹುಲ್ಲು ಮಾಡಲು ಹೋಗುತ್ತಾರೆ ಹುಲ್ಲು ಕೊಯ್ದು ಕಟ್ಟ ಮಾಡುತ್ತಾರೆ ಚಿಕ್ಕವಳ ಕೈಳಲ್ಲಿ ಏಳು ಕೈಗಳಷ್ಟು ಹುಲ್ಲು ಸಿಗುತ್ತತ್ತದೆ .ಲಿಂಗೊ ಪೇನ್ ಅವಳನ್ನು ಇಷ್ಟ ಪಡುತ್ತಾನೆ ಆರು ಜನರು ಹುಲ್ಲಿನ ಕತ್ತನ್ನು ತಮ್ಮ ತಲೆಯಲ್ಲಿ ಇಟ್ಟುಕೊಳ್ಳುತ್ತಾರೆ
ಚಿಕ್ಕವಳಿಗೆ ಸಾಧ್ಯವಾಗುವುದಿಲ್ಲ .ಏಳುಜನ ಸೇರಿ ಹೇಗೋ ಅವಳ ತಲೆಯಲ್ಲಿ ಇಡುತ್ತಾರೆ .ಮನೆಗೆ ಹೋದಾಗ ಯಾರು ಜನರ ತಲೆಯಿಂದ ಹುಲ್ಲಿನ ಕಟ್ಟ ಕೆಳಗೆ ಇರಿಸುತ್ತಾರೆ ಆದರೆ ಚಿಕ್ಕವಳ ತಲೆಯಲ್ಲಿ ಹುಲ್ಲಿನ ಕಟ್ಟು ಅಂಟಿರುತ್ತದೆ.ಹೇಗೋ ಎಳೆದು ಅದನ್ನು ಕೆಳಗೆ ಹಾಕುತ್ತಾರೆ ಅದನ್ನು ತಿಂದ ಕೋಣಗಳು ಎಮ್ಮೆಗಳು ಹಂದಿಗಳು ಕೋಳಿಗಳು ಸಾಯುತ್ತವೆ .ಇದೇಕೆ ಹೀಗೆ ಎಂದು ಪರ್ತಬಿಗಳಿಗೆ ಆಶ್ಚರ್ಯ ವಾಗುತ್ತದೆ .ಆಗ ಚಿಕ್ಕವಳು ಸಿರಹ “ಲಿಂಗೊ ಮುಡಿಯಾಲ ದೇವನ ಗುರುತು “ಚಿಹ್ನೆ “ಕಾಣಿಸುತ್ತದೆ .ನೀವು ಲಿಂಗೊ ನನ್ನು ಆರಾಧಿಸಬೇಕು ಎಂದು ಹೇಳುತ್ತಾಳೆ .ಲಿಂಗೊ ನನ್ನು ಪ್ರಾರ್ಥಿಸಿದ ಕೂಡಲೇ ಸತ್ತ ಹಂದಿ ಕೋಳಿ ಎಮ್ಮೆ ಕೋಣಗಳು ಜೀವ ತಳೆದು ಎದ್ದು ನಿಲ್ಲುತ್ತವೆ .ಹೀಗೆ ಲಿಂಗೊ ದೇವರಾಗಿ ಆರಾಧಿಸಲ್ಪದುತ್ತಾನೆ ಅವನ ಅನೇಕ ಮಹಿಮೆಗಳನ್ನು ಈ ಜನಪದ ಕಾವ್ಯದಲ್ಲಿ ವರ್ಣಿಸಲಾಗಿದೆ .ಬಸ್ತರ್ ಪ್ರದೇಶದ ಬುಡಕಟ್ಟುಗಳ ಅಧ್ಯಯಾದಲ್ಲಿ ಲಿಂಗೊ ಪೇನ್ ನ ದಂತ ಕಥೆಯಅದ್ಯಯನ ಬಹಳಮುಖ್ಯ ಪಾತ್ರವನ್ನು ವಹಿಸುತ್ತದೆ
ಡಾ.ಲಕ್ಷ್ಮಿ ಜಿ ಪ್ರಸಾದ
ಆಧಾರ Bustar folklore - pro Umaram
0 Followers
0 Following