ಬೆಂಗಳೂರು ಮಹಾನಗರ ಪಾಲಿಕೆ

ProfileImg
21 Jun '24
2 min read


image

ಬೆಂಗಳೂರು ಮಹಾನಗರ ಪಾಲಿಕೆ      

ಬೆಂಗಳೂರು ಮೊದಲಿನಿಂದಲೂ ಗಾರ್ಡನ್ ಸಿಟಿ ಅಂತ ವಿಶ್ವ ವಿಖ್ಯಾತಿ ಯಾಗಿದೆ, ಇನ್ನು ಮುಂದೆಯೂ ಈ ಹೆಸರನ್ನು ಉಳಿಸಿಕೊಳ್ಳಬೇಕು ಎಂದರೆ ಕೆಲವು ಬದಲಾವಣೆ ಗಳನ್ನು ಅನುಸರಿಸಬೇಕು.

ಕೆಂಪೇಗೌಡರು ಆಗ ನಾಲಕ್ಕೂ ದಿಕ್ಕುಗಳಲ್ಲೂ ಎತ್ತರವಾಗಿ ಚಿಕ್ಕ ಮಂದಿರವನ್ನು ಸ್ಥಾಪಿಸಿದರು ನಮ್ಮ ಬೆಂಗಳೂರು ನಗರ ಇಷ್ಟೇ ಬೆಳಯ ಬಹುದು ಅಂತ ಅದನ್ನು ನಿರ್ಮಿಸಲಾಯಿತು. ಆದರೆ ಅವರ ಅಂದಾಜು ಹುಸಿಯಾಯಿತು ನಾಲಕ್ಕೂ ದಿಕ್ಕುಗಳಲ್ಲೂ ಅತೀ ವೇಗವಾಗಿ ನಗರ ಬೆಳೆಯುತ್ತಾ ಹೋಗ್ತಾಯಿದೆ, ಇದರಿಂದ ಸಾರ್ವಜನಿಕರಿಗೂ ಕಷ್ಟವಾಗುತ್ತಿದೆ ಕಾರಣ ರಸ್ತೆಗಳು ಸರಿಯಿಲ್ಲದಿರುವುದು ಗುಂಡಿಗಳಮಯವಾಗಿದೆ, ದಿನೇ ದಿನೇ ವಾಹನ ಸಂಚಾರ ಜಾಸ್ತಿಯಾಗುತ್ತಲೇ ಇದೆ ರಸ್ತೆಗಳ ಅಗಲೀಕರಣ, ಟ್ರಾಫಿಕ್ ಜಾಮ್ಮ್, ಮಳೆ ಗಳದಲ್ಲಿ ಒಂದು ತರ ತೊಂದರೆ, ಮೋರಿಗಳಲ್ಲಿ ಹೂಳು ಎತ್ತದೆ ಇರುವುದು ಇದರಿಂದ ರಸ್ತೆಗಳಲ್ಲಿ ನೀರು ನಿಲ್ಲುವುದು ವಾಹನ ಚಾಲಕರಿಗೂ ತೊಂದರೆ, ದ್ವಿಚಕ್ರ ವಾಹನ ಓಡಿಸುವವರಿಗಂತೂ ಕಷ್ಟ ಹೇಳ ತೀರದು. 

ರಸ್ತೆಗಳು, ಚರಂಡಿಗಳು, ಗುಂಡಿಗಳು ವಾಹನ ಲಾಯಿಸುವವರು ಅಪಘಾತದಲ್ಲಿ ಸತ್ತರು ಎಲ್ಲವುದಕ್ಕೂ ಬೆಂಗಳೂರು ಮಹಾನಗರ ಪಾಲಿಕೆಯೇ ಕಾರಣ ಅಂತ ದಿನ ನಿತ್ಯ ಪತ್ರಿಕೆಗಳಲ್ಲಿ, ಟಿವಿ ವಾರ್ತೆಗಳಲ್ಲಿ ಪಾಲಿಕೆಯ ಬಗ್ಗೆಯೇ ಕೆಟ್ಟದಾಗಿ ಮಾತಾಡುತ್ತಾರೆ.

    ಇದೆಲ್ಲಾ ಸರಿಪಡಿಸುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ ಒಂದು ಬಲೂನ್ ನಲ್ಲಿ ಗಾಳಿ ತುಂಬಿಸಿದಷ್ಟು ಉಬ್ಬುತ್ತದೆ ಗಾಳಿ ಜಾಸ್ತಿ ಆಯ್ತು ಅಂದ್ರೆ ಬಲೂನ್ ಒಡೆದು ಹೋಗುತ್ತದೆ, ಇದರ ಅರ್ಥ ಇಷ್ಟೇ ಒಬ್ಬ ಅಧಿಕಾರಿಗೆ ಎಷ್ಟು ಜವಾಬ್ದಾರಿ ಕೊಡಬೇಕೋ ಅಷ್ಟು ಕೊಟ್ಟರೆ ಅದನ್ನು ನಿಬಾಯಿಸ ಬಲ್ಲ ಶಕ್ತಿ ಅವನಲ್ಲಿರುತ್ತದೆ ಅದೂ ಬಿಟ್ಟು ಮಿತಿ ಮೀರಿ ಜವಾಬ್ದಾರಿ ಕೊಟ್ಟರೆ ಯಾವ ಕೆಲವು ಸರಿಯಾಗುವುದಿಲ್ಲ, ಇದಕ್ಕೆಲ್ಲ ಒಂದು ಪರಿಹಾರವೆಂದರೆ ಬೆಂಗಳೂರು ಮಹಾನಗರ ಪಾಲಿಕೆಯು ನಾಲಕ್ಕೂ ದಿಕ್ಕುಗಳಲ್ಲೂ ನಾಲಕ್ಕೂ ಅಧಿಕಾರಿಗಳನ್ನು ನೇಮಿಸಿ, ಇದೊಂದು ರೀತಿ ಸ್ಪರ್ಧಾತ್ಮಕ ರೀತಿಯಲ್ಲಿ ನಗರ ಅಭಿವೃದ್ದೀಯತ್ತ ಹೆಜ್ಜೆ ಹಾಕುತ್ತ ಹೋಗುತ್ತದೆ, ಆಗ ಸಾರ್ವಜನಿಕರ ಬಾಯಲ್ಲಿ ನಮ್ಮ ಉತ್ತರ ದಿಕ್ಕಿನಲ್ಲಿ ಎನ್ ಅಭಿವೃದ್ದಿ ಯಾಗಿದೆ ಅಂತ ಹೋಗಳುತ್ತಾರೆ, ಅದನ್ನ ನೋಡಿಕೊಂಡು ಇನ್ನು ಉಳಿದ ದಿಕ್ಕುಗಳ ಅಧಿಕಾರಿಗಳು ಸುಮ್ಮನೆ ಕೂರುವುದಿಲ್ಲ ಅವರಿಗಿಂತ ನಾವೇನು ಕಮ್ಮಿ ಅಂತ ನಾಲಕ್ಕೂ ದಿಕ್ಕುಗಳಲ್ಲೂ ಅಭಿವೃದ್ಧಿಯಾಗುತ್ತ ಹೋಗುತ್ತದೆ,

ಇನ್ನೊಂದು ಮುಖ್ಯವಾದ ವಿಷಯವೆಂದರೆ ಈಗ ನಮ್ಮ ಮನೆಗಳಲ್ಲಿ ಸಾದಾರಣವಾಗಿ ಸ್ನಾನದ ಮನೆಯ ನೀರು ಮನೆಯ ಮುಂದಿನ ಮೋರಿಗೆ ಕೊಳುವೆ ಮುಕಾಂತರ ಸ್ನಾನ ಮಾಡಿದ ನೀರು ಬಟ್ಟೆ ಒಗೆದ ನೀರು ಇದೆಲ್ಲಾ ನೇರ ಮೋರಿಗೆ ಸೇರುತ್ತದೆ, ವೃತ i ನೀರನ್ನು ಇಂಗು ಗುಂಡಿಗಳಲ್ಲಿ ಬಿಟ್ಟರೆ ಅಂತರ್ ಜಲವು ವ್ರಿದ್ದಿ ಯಾಗುತ್ತದೆ.ಹೀಗೆ ಮಾಡಿದರೆ ಮನೆ ಮುಂದಿರುವ ಮೋರಿಗಳು ತುಂಬುವುದಿಲ್ಲ ಗಬ್ಬುನತವು ಬರುವುದಿಲ್ಲ, ಇಂಗು ಗುಂಡಿಗಳು ಮಳೆ ನೀರನ್ನು ಮಾತ್ರ ಇಂಜಿಸಬೇಕೆಂದಿಲ್ಲ, ಹೀಗೆ ಅಭಿವೃದ್ಧಿ ಕಾಣಬಹುದು.

   

Category:Social Commentary



ProfileImg

Written by Vasudeva rao HN

0 Followers

0 Following