ಬಾಳೆಹಣ್ಣು ತಿಂದರೆ ಇದೆ ಆರೋಗ್ಯಕ್ಕೆ ಭಾರಿ ಲಾಭ

ಅಜೀರ್ಣ, ಕೊಬ್ಬು ಕರಗಿಸಲು ಉತ್ತಮ ಹಣ್ಣು

ProfileImg
26 May '24
3 min read


image

ಮಗು ಬಾಳೆ ಹಣ್ಣು ತಿನ್ನುತ್ತಿರುವುದು ವರ್ಷದ ಯಾವುದೇ ಸಮಯದಲ್ಲಿ ಸಿಗುವಂತಹ ಪೋಷಕಾಂಶಗಳಿರುವ ಹಣ್ಣೆಂದರೆ ಅದು ಬಾಳೆಹಣ್ಣು. ಇದರ ಸೇವನೆ ಮಾಡಿದರೆ, ಅದರಿಂದ ದೇಹಕ್ಕೆ ಹಲವಾರು ಬಗೆಯ ಲಾಭಗಳು ಸಿಗುವುದು ನಿಶ್ಚಿತ. ಬಾಳೆಹಣ್ಣಿನಲ್ಲಿ ವಿಟಮಿನ್ ಗಳಾಗಿರುವ ವಿಟಮಿನ್ ಸಿ ಮತ್ತು ವಿಟಮಿನ್ ಬಿ೬ ಸಮೃದ್ಧವಾಗಿದ್ದು, ವಿಟಮಿನ್ ಸಿ ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು ಅದೇ ರೀತಿಯಲ್ಲಿ ವಿಟಮಿನ್ ಬಿ೬ ಮೆದುಳಿನ ಕಾರ್ಯವನ್ನು ವೃದ್ಧಿಸಲು ಸಹಕಾರಿ. ಅದೇ ರೀತಿಯಲ್ಲಿ ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ನಾರಿನಾಂಶ ಹಾಗೂ ಪೊಟಾಶಿಯಂ ಕೂಡ ಇದೆ.

ನಾರಿನಾಂಶವು ಜೀರ್ಣಕ್ರಿಯೆಗೆ ಸಹಕರಿಸಿ, ಕರುಳಿನ ಕ್ರಿಯೆ ಸರಾಗವಾಗಿರಿಸಲು ಸಹಕಾರಿ ಮತ್ತು ಮಲಬದ್ಧತೆ ನಿವಾರಣೆ ಮಾಡುವುದು. ಇದರಲ್ಲಿ ಇರುವ ಪೊಟಾಶಿಯಂ ಅಂಶವು ರಕ್ತದೊತ್ತಡ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯ ರಕ್ತನಾಳದ ಅಪಾಯವನ್ನು ತಗ್ಗಿಸಲು ಸಹಕಾರಿ. ನಿತ್ಯವೂ ಎರಡು ಬಾಳೆಹಣ್ಣು ಸೇವನೆ ಮಾಡಿದರೆ ಅದರಿಂದ ದೇಹದ ಕಾರ್ಯಕ್ಕೆ ಹಲವಾರು ಲಾಭಗಳು ಸಿಗುವುದು.

ಜೀರ್ಣಕ್ರಿಯೆ ಸುಧಾರಣೆ

ಜೀರ್ಣಕ್ರಿಯೆ ಸಮಸ್ಯೆ ಮತ್ತು ಕರುಳಿನ ಕ್ರಿಯೆಯ ಕಾರ್ಯಗಳು ಸರಿಯಾಗಿ ಆಗದೆ ಇದ್ದರೆ ಆಗ ದಿನಕ್ಕೆ ಎರಡು ಬಾಳೆಹಣ್ಣು ಸೇವನೆ ಮಾಡಿದರೆ ಆಗ ಇದು ಜೀರ್ಣಕ್ರಿಯೆ ಆರೋಗ್ಯ ಸುಧಾರಣೆ ಮಾಡಲು ತುಂಬಾ ಸಹಕಾರಿ ಆಗಿರುವುದು.

ಬಾಳೆಹಣ್ಣಿನಲ್ಲಿ ಕರಗುವ ಮತ್ತು ಕರಗದ ನಾರಿನಾಂಶವಿದ್ದು, ಇದು ಜೀರ್ಣಕ್ರಿಯೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ. ಕರಗುವ ನಾರಿನಾಂಶವು ನೀರನ್ನು ಹೀರಿಕೊಂಡು ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಸಾಗುವುದು, ಲೋಳೆಯನ್ನು ಅಂಶವನ್ನು ಇದು ಉತ್ಪತ್ತಿ ಮಾಡಿ ಮಲವನ್ನು ಮೆತ್ತಗೆ ಮಾಡುವುದು ಮತ್ತು ಅದು ಸರಾಗವಾಗಿ ಹೊರಗೆ ಹೋಗಲು ಸಹಕರಿಸುವುದು.

ಇದರಿಂದ ಮಲಬದ್ಧತೆಯು ಕಡಿಮೆ ಆಗುವುದು ಮತ್ತು ನಿಯಮಿತವಾಗಿ ಮಲವು ಹೊರಗೆ ಹೋಗಲು ಸಹಕಾರಿ. ಕರಗದೆ ಇರುವ ನಾರಿನಾಂಶವು ಮಲವನ್ನು ಒಟ್ಟು ಮಾಡಿ ಕರುಳಿನಲ್ಲಿ ಅದರ ವೇಗವನ್ನು ಹೆಚ್ಚು ಮಾಡುವುದು. ಇದರಿಂದ ಹೊಟ್ಟೆ ಉಬ್ಬರ ಕಡಿಮೆ ಆಗುವುದು ಮತ್ತು ದೇಹದಿಂದ ಸರಿಯಾದ ಪ್ರಮಾಣದ ಕಲ್ಮಷವು ಹೊರಗೆ ಹೋಗುವುದು. ದಿನಕ್ಕೆ ಎರಡು ಬಾಳೆಹಣ್ಣು ಸೇವನೆ ಮಾಡಿದರೆ, ಆಗ ಇದು ದೇಹದ ಸಂಪೂರ್ಣ ಆರೋಗ್ಯ ಕಾಪಾಡುವುದು..

ಹೃದಯ ಆರೋಗ್ಯ ಮತ್ತು ರಕ್ತದೊತ್ತಡ ನಿಯಂತ್ರಿಸುವುದು

ಹೃದಯದ ಸಮಸ್ಯೆಯು ಇಂದಿನ ದಿನಗಳಲ್ಲಿ ಅತಿಯಾಗಿ ಎಲ್ಲರನ್ನು ಕಾಡುತ್ತಲಿದ್ದು, ಇದರಿಂದ ಸಾವಿನ ಸಂಖ್ಯೆಯು ಹೆಚ್ಚುತ್ತಿದೆ. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಇದರ ಅಪಾಯ ಕಡಿಮೆ ಮಾಡಬಹುದಾಗಿದ್ದು, ಪೊಟಾಶಿಯಂ ಇರುವ ಬಾಳೆಹಣ್ಣನ್ನು ದಿನಕ್ಕೆ ಎರಡು ಸೇವನೆ ಮಾಡಿದರೆ ಆಗ ಇದು ಹೃದಯದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವುದು. ಎಲೆಕ್ಟ್ರೋಲೈಟ್ಸ್ ಆಗಿರುವ ಬಾಳೆಹಣ್ಣು ರಕ್ತದೊತ್ತಡ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಪೊಟಾಶಿಯಂ ಸರಿಯಾದ ಪ್ರಮಾಣದಲ್ಲಿ ಇದ್ದರೆ ಆಗ ಇದು ರಕ್ತನಾಳಗಳಿಗೆ ಆಗುವ ಹಾನಿಯನ್ನು ಕಡಿಮೆ ಮಾಡುವುದು. ಬಾಳೆಹಣ್ಣಿನಲ್ಲಿರುವ ನಾರಿನಾಂಶ ಮತ್ತು ಆ್ಯಂಟಿಆಖ್ಸಿಡೆಂಟ್ ಕೂಡ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವಲ್ಲಿ ನಾರಿನಾಂಶವು ಸಹಕಾರಿ. ಆ್ಯಂಟಿಆಕ್ಸಿಡೆಂಟ್ ಆಕ್ಸಿಡೇಟಿವ್ ಒತ್ತ, ರಕ್ತನಾಳಗಳಿಗೆ ಆಗುವ ಹಾನಿಯನ್ನು ಕಡಿಮೆ ಮಾಡುವುದು. ದಿನಕ್ಕೆ ಎರಡು ಬಾಳೆಹಣ್ಣು ಸೇವನೆ ಮಾಡಿದರೆ ಅದರಿಂದ ಹೃದಯದ ಆರೋಗ್ಯ ಕಾಪಾಡಬಹುದು ಮತ್ತು ರಕ್ತದೊತ್ತಡವನ್ನು ನಿಭಾಯಿಸಬಹುದು.

ಪ್ರತಿರೋಧಕ ಶಕ್ತಿ ವೃದ್ಧಿ

ಸೋಂಕು ಮತ್ತು ಅನಾರೋಗ್ಯ ವಿರುದ್ಧ ಹೋರಾಡಲು ಪ್ರತಿರೋಧಕ ಶಕ್ತಿಯು ಬಲಿಷ್ಠವಾಗಿರುವುದು ಅಗತ್ಯ. ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು ದೇಹದಲ್ಲಿನ ಪ್ರತಿರೋಧಕ ಶಕ್ತಿ ಬಲಪಡಿಸುವುದು. ಬಾಳೆಹಣ್ಣಿನಲ್ಲಿ ಇರುವ ವಿಟಮಿನ್ ಸಿ ಅಂಶವು ಪ್ರತಿರೋಧಕ ಶಕ್ತಿ ವೃದ್ಧಿ ಮಾಡಲು ಸಹಕಾರಿ. ಈ ವಿಟಮಿನ್ ಆ್ಯಂಟಿಆಕ್ಸಿಡೆಂಟ್ ರೀತಿಯಲ್ಲಿ ಕೆಲಸ ಮಾಡಿ, ಹಾನಿಕಾರಕ ಫ್ರೀ ರ್ಯಾಡಿಕಲ್ ನಿಂದ ರಕ್ಷಣೆ ನೀಡುವುದು. ಪ್ರತಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿರುವಂತಹ ಬಿಳಿ ರಕ್ತ ಕಣಗಳು ಕಾರ್ಯವನ್ನು ಬೆಂಬಲಿಸುವುದು.

ಬಾಳೆಹಣ್ಣಿನಲ್ಲಿ ಇರುವ ವಿಟಮಿನ್ ಬಿ೬ ಮತ್ತು ಸತುವಿನ ಅಂಶವು ಪ್ರತಿರೋಧಕ ವ್ಯವಸ್ಥೆಗೆ ಸಹಕಾರಿ. ವಿಟಮಿನ್ ಬಿ೬ ದೇಹದಲ್ಲಿ ಆ್ಯಂಟಿಬಾಡಿ ನಿರ್ಮಾಣ ಮಾಡುವುದು, ಅದೇ ಸತುವಿನ ಅಂಶವು ಕಿಣ್ವಗಳ ಚಟುವಟಿಕೆಯನ್ನು ಸುಧಾರಿಸಿ ಪ್ರತಿರೋಧಕ ಶಕ್ತಿ ವೃದ್ಧಿಸುವುದು. ದಿನಕ್ಕೆ ಎರಡು ಬಾಳೆಹಣ್ಣು ಸೇವನೆ ಮಾಡಿದರೆ ಆಗ ಇದು ಪ್ರತಿರೋಧಕ ವ್ಯವಸ್ಥೆಯನ್ನು ಕಾಪಾಡಲು ಸಹಕಾರಿ.

ದೇಹದಲ್ಲಿ ಶಕ್ತಿಯ ಮಟ್ಟವನ್ನು ವೃದ್ಧಿಸಲು ನೈಸರ್ಗಿಕ ವಿಧಾನವನ್ನು ಅನುಸರಿಸಬೇಕು ಎಂದಿದ್ದರೆ ಆಗ ಬಾಳೆಹಣ್ಣು ನೆರವಾಗುವುದು. ವೈವಿಧ್ಯತೆ ಹೊಂದಿರುವ ಈ ಹಣ್ಣು ದೇಹಕ್ಕೆ ಶಕ್ತಿ ಒದಗಿಸಲು ಸಹಕಾರಿ. ಬಾಳೆಹಣ್ಣಿನಲ್ಲಿ ಅಧಿಕ ಮಟ್ಟದ ಕಾರ್ಬೋಹೈಡ್ರೇಟ್ಸ್ ಗಳಾಗಿರುವ ಗ್ಲುಕೋಸ್, ಫ್ರಾಕ್ಟೋಸ್ ಮತ್ತು ಸುಕ್ರೋಸ್ ಇದೆ. ಇದು ದೇಹಕ್ಕೆ ಶಕ್ತಿ ಒದಗಿಸುವ ಮೂಲಗಳು. ಇದು ದೇಹಕ್ಕೆ ಹಠಾತ್ ಆಗಿ ಶಕ್ತಿ ಒದಗಿಸುವುದು ಮಾತ್ರವಲ್ಲದೆ, ದೈಹಿಕ ಚಟುವಟಿಕೆ ವೇಳೆ ಆಗುವ ಹಾನಿಯನ್ನು ತಪ್ಪಿಸಲು ಪೊಟಾಶಿಯಂ ಸಹಕಾರಿ.

ವಿಟಮಿನ್ ಸಿ ಮತ್ತು ವಿಟಮಿನ್ ಬಿ೬ ಕೂಡ ಬಾಳೆಹಣ್ಣಿನಲ್ಲಿದ್ದು, ಇದು ಚಯಾಪಚಯ ಪ್ರಕ್ರಿಯೆಗೆ ಸಹಕಾರಿ ಮತ್ತು ಶಕ್ತಿ ವೃದ್ಧಿ ಮಾಡುವುದು. ನಾರಿನಾಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಮತ್ತು ಶಕ್ತಿಯು ಬೇಗನೆ ಕುಂದದಂತೆ ತಡೆಯುವುದು. ಶಕ್ತಿಯ ಮಟ್ಟ ಕಾಪಾಡು ದಿನಕ್ಕೆ ಎರಡು ಬಾಳೆಹಣ್ಣು ಸೇವಿಸಿ.

ಅರಿವಿನ ಕಾರ್ಯ ಮತ್ತು ಮೆದುಳಿನ ಆರೋಗ್ಯಕ್ಕೆ

ಅರಿವಿನ ಕಾರ್ಯ, ನೆನಪು ಮತ್ತು ಸಂಪೂರ್ಣ ಆರೋಗ್ಯಕ್ಕೆ ಮೆದುಳನ್ನು ಆರೋಗ್ಯವಾಗಿಡುವುದು ಅಗತ್ಯ. ಬಾಳೆಹಣ್ಣನ್ನು ನಿಯಮಿತವಾಗಿ ಸೇವನೆ ಮಾಡಿದರೆ ಆಗ ಇದರಿಂದ ಮೆದುಳಿನ ಆರೋಗ್ಯ ಕಾಪಾಡಬಹುದು. ಬಾಳೆಹಣ್ಣಿನಲ್ಲಿ ವಿಟಮಿನ್ ಬಿ೬ ಸಮೃದ್ಧವಾಗಿದೆ. ಸೆರೊಟೊನಿನ್ ಮತ್ತು ಡೊಪಮೈನ್ ನ್ನು ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಿಂದ ಮನಸ್ಥಿತಿ ಸುಧಾರಣೆ, ನಿದ್ರೆಯ ಆವರ್ತನ ಮತ್ತು ಅರಿವಿನ ಕಾರ್ಯವು ಸುಧಾರಣೆ ಆಗುವುದು.

ಬಾಳೆಹಣ್ಣಿನಲ್ಲಿ ಡೊಪಮೈನ್ ಮತ್ತು ಕ್ಯಾಟಚಿನ್ ಎನ್ನುವ ಆ್ಯಂಟಿಆಕ್ಸಿಡೆಂಟ್ ಗಳು ಇದ್ದು, ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವುದು. ವಯಸ್ಸಾಗುವ ವೇಳೆ ಕಂಡುಬರುವ ಅರಿವಿನ ಸಮಸ್ಯೆಗಳನ್ನು ಇದು ದೂರ ಮಾಡುವುದು. ಬಾಳೆಹಣ್ಣಿನಲ್ಲಿ ಇರುವ ಮೆಗ್ನಿಶಿಯಂ ಅಂಶವು ರಕ್ತಸಂಚಾರವನ್ನು ಸರಾಗವಾಗಿಸುವುದು ಮತ್ತು ರಕ್ತನಾಳಗಳನ್ನು ಆರಾಮವಾಗಿಸುವುದು. ಇದರಿಂದ ಮೆದುಳಿಗೆ ಸರಿಯಾಗಿ ಆಮ್ಲಜನಕವು ಸರಬರಾಜು ಆಗಿ ಮೆದುಳಿನ ಕಾರ್ಯವನ್ನು ಸುಧಾರಿಸುವುದು

Disclaimer: The views expressed in this article are solely those of the author and do not represent the views of Ayra or Ayra Technologies. The information provided has not been independently verified. It is not intended as medical advice. Readers should consult a healthcare professional or doctor before making any health or wellness decisions.
Category:Health and Wellness



ProfileImg

Written by Balu Kukke8277

0 Followers

0 Following