ಮಾನವ ಗುಣ ತೊರೆದೊಡೇನು ಸುಖವಿದೆ
ಪ್ರಾಣಿಯಂತೆ ಬದುಕಲೇನು ಸೊಗಸಿದೆ
ಗೋವು ನೀರ ಕೊಡುವುದೇ
ಭುವಿಯು ಬಸಿರ ನುಂಗ್ವುದೇ
ಮಳೆಯ ಮುಗಿಲು ಬೆಂಕಿ ಸುರಿಪುದೆ
ನವಿಲು ತನ್ನ ಗರಿಯನ್ನು ಕಿತ್ತೆಸೆಯುವುದೇ
ರವಿ ಚಂದ್ರರು ಬೆಳಕನ್ನು ಕೊಡದಿಹರೇ
ನದಿ ಸಾಗರ ತೊರೆಯುವುದೇ ಹಾಲು ವಿಷವಾಗ್ವುದೇ
ಮನುಜನೇಕೆ ವಿವೇಕ ಮರೆತಿರುವನೋ
ಶ್ರೀಗಂಧವು ತನ್ನ ಕಂಪು ಮರೆಯುವುದೇ
ಗಿಡಮರಗಳು ಗಾಳಿಯನು ಕೊಡದಿಹುದೇ
ವಿಕೃತ ಮನಸು ಏತಕೆ ಕಾಮಾಂಧನಾದೆ ಏತಕೆ
ಮನುಜ ಗುಣವು ಮಸಣವನು ಸೇರಿಹುದೇಕೆ
ಕಸವ ತಿಂದ ಪಶು ಹಾಲು ಕೊಡುತಿಹುದು
ಮಣ್ಣ ತಿಂದ ಮರ ಹಣ್ಣು ನೀಡಿಹುದು
ಪ್ರಕೃತಿ ಬದುಕು ಕೊಟ್ಟಿದೆ ನೀರು ನೆರಳು ನೀಡಿದೆ
ಸಂಸ್ಕಾರ ಪಡೆದ ಮನುಜನೇಕೋ ವಿಕೃತನಾಗಿಹನು
ಎಚ್ಛೆತುಕೋ ಓ ಮನುಜ
ಆಗಬೇಕಿದೆ ನೀ ಕುಲಜ
ಕಟ್ಟಲು ಬಾರಯ್ಯ ನವ ಸಮಾಜ
ಪ್ರೀತಿ ಪ್ರೇಮ ಮರೆಯದಿರು
ದುಷ್ಟತನವ ಮೆರೆಯದಿರು
ಈ ಜಗಕೆ ನೀನಾಗು ಬಾ ಉಸಿರು
✍️ ವಿಜಯ ಲಕ್ಷ್ಮಿ ನಾಡಿಗ್ ಮಂಜುನಾಥ್ ಕಡೂರು
0 Followers
0 Following