ಬಾ ಮಳೆಯೇ ಬಾ
ನಾನು ನಿನಗಾಗಿ ಕಾದಿರುವ ಕಡಲು,
ಹನಿ ಹನಿಯಾಗಿ ಸುರಿದು,
ಈ ಭುವಿಯ ದಾಹವ ಇಂಗಿಸಲು,
ಮಿಕ್ಕಿದ್ದು ನೀರಾಗಿ ಉಕ್ಕಿ ಹರಿಯಲು,
ಬಾ ಮಳೆಯೇ ಬಾ
ಕಡಲ ಒಡಲ ಸೇರಲು..
ಬಿಸಿಯಾಗಿ ಒಣಗಿಹ ಈ ಭೂ ಸಿರಿಯ ತಣಿಸಿ ಹಸಿರಾಗಿಸು ಬಾ,
ಭುವಿಯ ಉಳುವ ರೈತನ ಮೊಗದಲಿ ನಗುವ ತರಿಸು ಬಾ,
ಹನಿಗಳಾಗಿ ಸುರಿದು ಬೇಸರದೀಮನಕೆ ನೀರಾಗಿ ಸೋಕಿ ಅಪ್ಪಿಕೊಳ್ಳು ಬಾ,
ನಿನ್ನ ಹನಿಗಳಲ್ಲಿ ಮೈ ಒಡ್ಡಿ ಕುಣಿಯಬೇಕೆಂಬ ಈ ಮನದ ಮಹದಾಸೆಯ ತೀರಿಸಲು ಬಾ ಮಳೆಯೇ ಬಾ…
ಶಾಂತಾರಾಮ ಹೊಸ್ಕೆರೆ,
ತಾ-ಶಿರಸಿ, ಉತ್ತರ ಕನ್ನಡ…
ಬರಹಗಾರ...
0 Followers
0 Following