Do you have a passion for writing?Join Ayra as a Writertoday and start earning.

ದಕ್ಷಿಣ ಭಾರತದಲ್ಲಿ ದಲಿತ ಚಳುವಳಿಯನ್ನು ಮುನ್ನೆಡೆಸಿದ ಬಿ.ಶ್ಯಾಮಸುಂದರ್image

ದಕ್ಷಿಣಭಾರತದಲ್ಲಿ ದಲಿತ ಚಳುವಳಿಯನ್ನು ಮುನ್ನೆಡೆಸಿದ ಬಿ.ಶ್ಯಾಮಸುಂದರ್

ಭಾರತದಇತಿಹಾಸವನ್ನು ಗಮನಿಸಿದಾಗ ವರ್ಣ ಹಾಗೂ ವರ್ಗ ಎರಡೂ ಒಂದರೊಡನೊಂದು ಸೇರಿಕೊಂಡಿರುವುದನ್ನು ನೋಡಬಹುದು. ಸಾಮಾಜಿಕ ಮತ್ತು ಆರ್ಥಿಕ ಶೋಷಣೆಯನ್ನು ಪೋಷಿಸುವ ರೀತಿಯಲ್ಲಿಯೇ ಭಾರತೀಯ ಸಮಾಜ ಬೆಳೆದು ಬಂದಿದೆ. ದಲಿತರು, ಹಿಂದುಳಿದವರು ಮತ್ತು ಮಹಿಳೆಯರನ್ನು ವಸ್ತುವಿನ ರೀತಿಯಲ್ಲಿ ನಡೆಸಿಕೊಂಡು ಬಂದ ಸಮಾಜ ನಮ್ಮದು. ಇಂತಹ ಅನಿಷ್ಠ ಮತ್ತು ಕ್ರೂರ, ಅವೈಜ್ಞಾನಿಕ ಹಾಗೂ ಅಮಾನವೀಯ ವ್ಯವಸ್ಥೆಯ ವಿರುದ್ಧ ಅನೇಕ ಮಹಾಪುರುಷರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಡಾ.ಬಾಬಾ ಸಾಹೇಬ್ಅಂಬೇಡ್ಕರ್, ಸಂತ ಕಬೀರ, ಗೌತಮಬುದ್ಧ, ಜ್ಯೋತಿಬಾಪುಲೆ, ನಾರಾಯಣಗುರು, ಪೆರಿಯಾರ್ ಮುಂತಾದ ಮಹನೀಯರಿಂದ ಉತ್ತೇಜನಗೊಂಡು ದಕ್ಷಿಣ ಭಾರತದಲ್ಲಿ ದಲಿತ ಚಳುವಳಿಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡ ಹೋಗುವ ದೊಡ್ಡ ಕೆಲಸವನ್ನು ಮಾಡಿದವರು ಬಿ.ಶ್ಯಾಮಸುಂದರ್‌ರವರು. ಭೀಮಸೇನಾ ಎಂಬ ಸಂಘಟನೆಯನ್ನು ಸ್ಥಾಪಿಸುವ ಮೂಲಕ  ದಲಿತಚಳುವಳಿಗೆ ಹೊಸ ಆಯಮವೊಂದನ್ನು ನೀಡಿದರು.

ಸ್ವಾತಂತ್ರ್ಯಪೂರ್ವದಿಂದ ಇಂದಿನವರೆಗೂ ಈ ದೇಶದ ದೀನದಲಿತರಿಗೆ, ಅಸ್ಪೃಶ್ಯರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಹೋರಾಟ ನಡೆಯಿತು. ಈ ಹೋರಾಟದ ಮಹತ್ವದಘಟ್ಟವೆಂದರೆ ದಕ್ಷಿಣ ಭಾರತದಲ್ಲಿ ಬಿ.ಶ್ಯಾಮಸುಂದರ್ ಅವರಿಂದನಡೆದ ಹೋರಾಟ. ಹೋರಾಟ ಮತ್ತು ಸಂಘಟನೆಯ ಮನೋಭಾವವನ್ನು ಜನಮಾನಸದಲ್ಲಿ ಯಶಸ್ವಿಯಾಗಿ ದಲಿತ ಶೋಷಿತರಲ್ಲಿ ಹಚ್ಚಿದ ದೀಮಂತ ನಾಯಕ ಬಿ.ಶ್ಯಾಮಸುಂದರ್ ಅವರು. ಮಹಾರಾಷ್ಟದ ಔರಂಗಾಬಾದ್ ನಗರದಲ್ಲಿ ಮಾಣಿಕ್ಯಂ ಮತ್ತು ಸುಧಾಬಾಯಿಯವರ ಪುತ್ರರಾಗಿ ಡಿಸೆಂಬರ್ ೨೦, ೧೯೦೮ರಲ್ಲಿ ಅವರು ಜನಿಸಿದರು. ಉಸ್ಮಾನಿಯ ವಿಶ್ವವಿದ್ಯಾಲಯದಿಂದ  ಬಿ.ಎ. ಪದವಿಯನ್ನು ಪಡೆದರು. ಎಲ್‌ಎಲ್‌ಬಿ ಪದವಿಯನ್ನು ಪೂರ್ಣಗೊಳಿಸಿದಅವರು ೧೯೪೪ರಲ್ಲಿ ಉಸ್ಮಾನಿಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ನೇಮಕಗೊಂಡರು.

ವಕೀಲಿ ವೃತ್ತಿಯನ್ನು ಪ್ರವೇಶಿಸಿದ ಅವರು ಸಾಮಾಜಿಕ ಹೋರಾಟಕ್ಕಾಗಿ ವಕೀಲಿ ವೃತ್ತಿಯನ್ನು ತೊರೆದು ನಿಮ್ನ ವರ್ಗದವರ ಉದ್ಧಾರಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಅಂದಿಗೆ ಅಸ್ಪೃಶ್ಯರು ಹೊಸ ಬಟ್ಟೆಗಳನ್ನು ಉಡುವಂತಿರಲಿಲ್ಲ. ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ. ಮುಖದ ಮೇಲೆ ಮೀಸೆ ಬಿಡುವಂತಿರಲಿಲ್ಲ ಇಂತಹ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ೧೯೪೬ರಲ್ಲಿ ನಾಂದೇಡ್ ಪಟ್ಟಣದಲ್ಲಿ ಬಹಿರಂಗ ಸಮ್ಮೇಳನವೊಂದನ್ನು ಆಯೋಜಿಸಿದರು. ಈ ಸಮ್ಮೇಳನದಲ್ಲಿ ಭಾಗವಹಿಸಲುಇಚ್ಚಿಸುವ ದಲಿತರು ಮೀಸೆ ಬೆಳೆಸಿಕೊಂಡು, ಹೊಸ ಬಟ್ಟೆ ಹಾಕಿಕೊಂಡು, ಪಾದರಕ್ಷೆಗಳನ್ನು ಹಾಕಿಕೊಂಡು ಬರಬೇಕೆಂಬ ಕ್ರಾಂತಿಕಾರಕವಾದ ನಿಯಮವನ್ನು ಹಾಕಿದರು. 

ಅಸ್ಪೃಶ್ಯತೆಯವಿರುದ್ಧದ ಹೋರಾಟ ನಡೆಸುವ ಗುರಿಯನ್ನು ಇಟ್ಟುಕೊಂಡು ಹೈದರಾಬಾದಿನಲ್ಲಿ ಅಸ್ಥಿತ್ವಕ್ಕೆ ಬಂದಿದ್ದ ಯಂಗ್ ಮೆನ್ಸ್ ಅಸೋಸಿಯೇಷನ್ ಆಫ್ ಹೈದರಾಬಾದ್ ಸಂಘಟನೆಯಲ್ಲಿ ೧೯೩೧ ರಿಂದ ೧೯೩೪ರವರೆಗೂ ಸಂಚಾಲಕರಾಗಿ ಅವರು ಸೇವೆ ಸಲ್ಲಿಸಿದರು. ೧೯೩೨ರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಲಂಡನ್‌ನಲ್ಲಿ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅಂಬೇಡ್ಕರ್ ಅವರ ನಿಲುವನ್ನು ಬೆಂಬಲಿಸಿದರು. ೧೯೩೫ರ ಕಾಲಘಟ್ಟದಲ್ಲ ಅಸ್ಪೃಶ್ಯರು ಸಾಮೂಹಿಕವಾಗಿ ಅನ್ಯ ಧರ್ಮಕ್ಕೆ ಮತಾಂತರ ಹೊಂದುವ ಪರಿವರ್ತನೆಯ ದಾರಿಯಲ್ಲಿದ್ದರು. ದಲಿತರು ಯಾವುದೇ ಕಾರಣಕ್ಕೂ ಅನ್ಯ ಧರ್ಮವನ್ನು ಸ್ವೀಕರಿಸಬಾರದು ಎಂದು ಶ್ಯಾಮಸುಂದರ್ ಹೇಳಿದರು. ತಮ್ಮ ವಿಚಾರವನ್ನು ಪ್ರಚಾರ ಮಾಡಲು ಅವರು ಮೈಸೂರು ಸಂಸ್ಥಾನ, ಮಹಾರಾಷ್ಟç ಮತ್ತು ಆಂಧ್ರಪ್ರದೇಶದಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದರು. ಅವರು ದೀನ-ದಲಿತ-ಶೋಷಿತರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರು. ‘ಬಿಟ್ಟಿ ಚಾಕ್ರಿ ಬಿಡಬೇಕು, ಸ್ವಾಭಿಮಾನದ ಬದುಕು ಸಾಗಿಸಬೇಕು’ಎಂದು ದಲಿತರಲ್ಲಿ ಅರಿವಿನ ಹಣತೆಯನ್ನು ಹಚ್ಚಿದರು. ದೇವಾಲಯಗಳ ಪ್ರವೇಶಕ್ಕಾಗಿ ಹೋರಾಟಗಳನ್ನು ನಡೆಸಿದರು. ಅವರ ನೇತೃತ್ವದಲ್ಲಿ ನಡೆದ ಕಲಬುರ್ಗಿಯ ಶರಣಬಸವೇಶ್ವರ ದೇವಾಲಯ ಪ್ರವೇಶ ಚಳುವಳಿ ದಲಿತರಲ್ಲಿ ನೈತಿಕ ಧೈರ್ಯವನ್ನು ಉಂಟು ಮಾಡಿತು.

ದಲಿತರುಭಾರತದ ಮೂಲ ನಿವಾಸಿಗಳಾಗಿದ್ದಾರೆ, ಅವರು ಯಾವ ಧರ್ಮಕ್ಕೂ ಸೇರದವರಲ್ಲ. ಅವರಿಗೆ ಯಾವ ಧರ್ಮದ ಅಗತ್ಯವೂ ಇಲ್ಲ ಎಂದು ಶ್ಯಾಮಸುಂದರ್ ಪ್ರತಿಪಾದಿಸಿದರು. ೧೯೩೬ರಲ್ಲಿ ಪುಣೆಯಲ್ಲಿ ಪಂಡಿತ್ ಮದನ್‌ಮೋಹನ್ ಮಾಳವೀಯರವರ ಅಧ್ಯಕ್ಷತೆಯಲ್ಲಿ ನಡೆದ ಹಿಂದೂ ಮಹಾಸಭೆಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ತಮ್ಮ ಭಾಷಣದಲ್ಲಿ ತಮ್ಮ ದಲಿತ ಪರ ನಿಲುವನ್ನು ಸಮರ್ಥವಾಗಿಮಂಡಿಸಿದ ಜೊತೆಗೆ ಹಿಂದೂ ಧರ್ಮದಲ್ಲಿ ತಾಂಡವವಾಡುತ್ತಿದ್ದ ನ್ಯೂನತೆಗಳನ್ನು ಎತ್ತಿ ತೋರಿಸಿದರು. ೧೯೪೨ರಲ್ಲಿ ಮಹಾರಾಷ್ಟçದ ನಾಂದೇಡ್‌ನಲ್ಲಿನಡೆದ ಭಾರತೀಯ ಡಿಪ್ರೆಸ್‌ಡ್ ಕ್ಲಾಸಸ್ ಸಮ್ಮೇಳನದಅಧ್ಯಕ್ಷತೆಯನ್ನು ಅವರು ವಹಿಸಿ ಮಾಡಿದ ೬೪ ಪುಟಗಳ ಸುದೀರ್ಘಭಾಷಣದಲ್ಲಿ ಭಾರತೀಯ ಸಮಾಜದ ಅನಿಷ್ಟಗಳ ಕುರಿತು ಸಮರ್ಪಕವಾಗಿ ವಿಷಯವನ್ನು ಮಂಡಿಸಿದರು. ಮುಂದೆ ೧೯೪೫ರಲ್ಲಿ ಭಾರತೀಯ ಡಿಪ್ರೆಸ್‌ಡ್ ಕ್ಲಾಸಸ್ ಅಸೋಸಿಯೇಷನ್ಅಧ್ಯಕ್ಷರಾದರು. ೧೯೪೬ರಲ್ಲಿ ಹಿಂದುಳಿದ ವರ್ಗದ ಕಷ್ಟಗಳನ್ನು ಕಂಡು ಮರುಗಿದ ಅವರು ಹಿಂದುಳಿದ ವರ್ಗಗಳ ಜನರಲ್ಲಿ ಒಗ್ಗಟ್ಟು ಮೂಡಿಸಿ ಅವರನ್ನು ಹೋರಾಟಕ್ಕೆ ಸಜ್ಜುಗೊಳಿಸುವ ಸಲುವಾಗಿ ಇಂಡಿಪೆAಡೆAಟ್  ಕಾಸ್ಡಸ್ ಫೆಡರೇಷನ್ ಎಂಬ ಸಂಘಟನೆಯನ್ನು ಶುರು ಮಾಡಿದರು.

ಸ್ವಾತಂತ್ರ್ಯಪೂರ್ವದಲ್ಲಿ ಶ್ಯಾಮಸುಂದರ್‌ರವರು ಸ್ಥಾಪಿಸಿದ ‘ದಲಿತ ಮುಸ್ಲಿಂ ಒಕ್ಕೂಟ’ಅತ್ಯಂತ ಮಹತ್ವದ ಸಂಘಟನೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನಿರ್ಲಕ್ಷಿಸಲ್ಪಟ್ಟಿದ್ದ ಈ ಎರಡೂ ಸಮುದಾಯಗಳಸಾಮಾಜಿಕ ಸ್ವರೂಪವನ್ನು ಅಭ್ಯಸಿಸಿ ಆರಂಭಿಸಿದ ಈ ಒಕ್ಕೂಟವು ಪ್ರಗತಿಪರವಾಗಿತ್ತು. ಅವರು ಮುಸಲ್ಮಾನರೊಂದಿಗೆ ಮಧುರವಾದ ಬಾಂಧವ್ಯವನ್ನು ಹೊಂದಿದ್ದರಿAದ ಹಲವರು ಅವರನ್ನುದೇಶ ದ್ರೋಹಿ ಎಂದು ಕರೆದರು. 

೧೯೪೭ರಲ್ಲಿಹೈದರಾಬಾದ್ ಶಾಸನ ಸಭೆಯ ಸದಸ್ಯರಾಗಿ ಆಯ್ಕೆಯಾದರು. ಇದೇ ಸಭೆಗೆ ಅವರು ೧೯೪೮ರಲ್ಲಿ ಉಪಸಭಾಪತಿಯಾಗಿ ಆಯ್ಕೆಯಾದರು. ಇದೇ ವರ್ಷ ಬಿ.ಎಸ್.ವೆಂಕಟರಾವ್‌ರವರೊAದಿಗೆ ತಮ್ಮ ಒಂದು ಲಕ್ಷ ಜನ ಅನುಯಾಯಿಗಳೊಂದಿಗೆ ಭೂ ಮಾಲಿಕತ್ವವನ್ನುರದ್ದುಗೊಳಿಸುವಂತೆ ಮತ್ತು ಉಳುವವನಿಗೆ ಭೂಮಿ ಕೊಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಯನ್ನು ಮಾಡಿದರು. ಇದರ ಫಲವಾಗಿ ಹೈದರಾಬಾದ್‌ನ ನಿಜಾಮರ ಸರ್ಕಾರಬಡವರಿಗೆ ಮತ್ತು ದೀನದಲಿತರಿಗೆ ಭೂಮಿ ಹಂಚಲು ಮುಂದಾಯಿತು. ಅವರ ಈ ಹೋರಾಟದಿಂದಾಗಿ ಜನರುಅವರನ್ನು ಶೇರ್ ಎ ದಕ್ಕನ್ ಎಂದುಸಂಬೋಧಿಸಿದರು. ಹೈದರಾಬಾದ್ ಸಂಸ್ಥಾನದಲ್ಲಿ ೪೦ರ ದಶಕದಲ್ಲಿ ದಲಿತರ ಶಿಕ್ಷಣಕ್ಕಾಗಿ ಒಂದು ಕೋಟಿ ರೂಪಾಯಿಗಳ ನಿಧಿಯೊಂದನ್ನು ಸ್ಥಾಪಿಸಿದರು. ಔರಂಗಾಬಾದ್‌ನಲ್ಲಿ ಒಟ್ಟು ೨೮ ವಸತಿ ನಿಲಯಗಳನ್ನುಆರಂಭಿಸಿದರು. ಆ  ಮೂಲಕದಲಿತರ ಶಿಕ್ಷಣವನ್ನು ಪ್ರೋತ್ಸಾಹಿಸಿದರು. ಅವರೊಬ್ಬ ವಿಚಾರವಾದಿಯಾಗಿದ್ದಲ್ಲದೆ ಮಾರ್ಕ್ಸ್ವಾದಿ ಸಿದ್ದಾಂಗಳಲ್ಲಿ ಒಲವು ಹೊಂದಿದ್ದರು.

೧೯೫೭ರಲ್ಲಿಮೈಸೂರು ರಾಜ್ಯದ ಭಾಲ್ಕಿ ಜಂಟಿ ಮತ ಕ್ಷೇತ್ರದಿಂದ ವಿಧಾನಸಭೆಗೆಚುನಾವಣೆಗೆ ಸ್ಪರ್ಧಿಸಿ ಜಯಶಾಲಿಯಾದರು. ಮೈಸೂರು ರಾಜ್ಯದ ಶಾಸಕರಾಗಿ ದಲಿತರ ಸಮಸ್ಯೆಗಳು ಮತ್ತು ಅವರ ಅಭಿವೃದ್ಧಿಯ ಕುರಿತು ವಿಧಾನಸಭೆಯಲಿ ಗಮನ ಸೆಳೆದರು. ಅತಿ ಹಿಂದುಳಿದ ಪ್ರದೇಶವಾಗಿದ್ದ ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಗುಡಿ ಕೈಗಾರಿಕೆಗಳು ಮತ್ತು ಕಾರ್ಖಾನೆಗಳನ್ನು ಆರಂಭಿಸಬೇಕೆAದು ಒತ್ತಾಯಿಸಿದರು. ೧೯೬೮ರಲ್ಲಿಭಾರತೀಯ ಭೀಮ ಸೇನಾ ಎಂಬ ಸಂಘಟನೆಯನ್ನು ಆರಂಭಿಸಿದರು. ಆ ಮೂಲಕ ದಲಿತಚಳುವಳಿಯನ್ನು ಜೀವಂತವಾಗಿರುವAತೆ ನೋಡಿಕೊಂಡ ಜೊತೆಗೆದಲಿತ ಚಳುವಳಿಗೆ ತಾತ್ವಿಕ ನೆಲೆಗಟ್ಟು ದೊರೆಯುವಂತೆ ಮಾಡಿದರು. ಮಹಾರಾಷ್ಟದ ನಾಂದೇಡ್ ಮತ್ತು ಔರಂಗಾಬಾದ್ ಜಿಲ್ಲೆಗಳು ಹಾಗೂ ಹೈದರಾಬಾದ್ ಕರ್ನಾಟಕದ ಮೂರು ಜಿಲ್ಲೆಗಳ ದಲಿತ ಸಮುದಾಯದ ಜಾಗೃತಿ ಪ್ರಜ್ಞೆಗೆ ಬಿ.ಶ್ಯಾಮಸುಂದರ್ ತಮ್ಮದೇಆದ ಕೊಡುಗೆಯನ್ನು ನೀಡಿದರು. ವಿಶೇಷವೆಂದರೆ ಈ ಸಂಘಟನೆಗೆ ಭಾರತದಾದ್ಯಂತಸುಮಾರು ಎರಡು ಲಕ್ಷ ಜನ ಸದಸ್ಯರಿದ್ದರು. ಅವರುತಮ್ಮ ನೇರವಾದ ಮಾತುಗಾರಿಕೆಯಿಂದಾಗಿ ಹಲವು ಬಾರಿ ಸೆರೆಮನೆ ವಾಸ ಅನುಭವಿಸಬೇಕಾಯಿತು.

ವಿಶ್ವಸಂಸ್ಥೆಯಭದ್ರತಾ ಮಂಡಳಿಯಲ್ಲಿ ಹೈದರಾಬಾದ್ ನಿಜಾಮರ ನಿಯೋಗದ ಸದಸ್ಯರಾಗಿ ಭಾಗವಹಿಸಿದ್ದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾಷಣ ಮಾಡಿದ ಮೊದಲ ಸ್ವಾತಂತ್ರ್ಯ ನಂತರದ ಅಸ್ಪೃಶ್ಯರ ಪರವಾದ ಹೋರಾಟಗಾರರಾಗಿದ್ದಾರೆ. ಡಾ. ರಾಮ ಮನೋಹರ್ ಲೋಹಿಯಾ ಅವರ ನಿಧನದ ನಂತರ ಶ್ಯಾಮಸುಂದರ್ ಅವರು ಪ್ರಜಾ ಸಮಾಜವಾದಿ ಪಕ್ಷದ ಅಧ್ಯಕ್ಷರಾದರು. ೧೨ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ಉದಾತ್ತ ಚಿಂತಕರಾಗಿದ್ದರು.

ಹೈದ್ರಾಬಾದ್ಕರ್ನಾಟಕ, ಮಹಾರಾಷ್ಟ ಮತ್ತು ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಮತ್ತು ದಲಿತರ ಉದ್ಧಾರಕ್ಕಾಗಿ ತಮ್ಮ ಜೀವಮಾನವನ್ನೇ ಸವೆಸಿದ ಬಿ.ಶ್ಯಾಮಸುಂದರ್ ಅವರಹೆಸರು ಚರಿತ್ರೆಯಲ್ಲಿ ದಾಖಲಾಗುವ ಮೂಲಕ ಅಜರಾಮರರಾಗಬೇಕಾಗತ್ತು. ಅಂಬೇಡ್ಕರ್ ಅವರ ಕಾಲಘಟ್ಟದಲ್ಲಿ ಮತ್ತು ಆನಂತರ ದಲಿತರ ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗಾಗಿ ಈ ಭಾಗದಲ್ಲಿ ಅನೇಕಕ್ರಾಂತಿಕಾರಕ ಹೋರಾಟಗಳನ್ನು ಅವರು ಮಾಡಿದರು. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಕೆಳವರ್ಗದವರನ್ನು ಮೇಲೆತ್ತಲು ತಮ್ಮದೇ ಆದ ಮಾರ್ಗಗಳ ಮೂಲಕದುಡಿದರು. ಆದರೆ ದುರದೃಷ್ಟವಶಾತ್ ಅವರ ಹೆಸರು ಜನನಾಯಕ ಪಟ್ಟಿಯಿಂದ ವಂಚಿತವಾದುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. 

ಬಿ.ಶ್ಯಾಮಸುಂದರ್ ಅವರು ಬಾಬಾಸಾಹೇಬರ ಕಟ್ಟಾ ಅನುಯಾಯಿಗಳಾಗಿದ್ದರು. ಸಾಂಪ್ರದಾಯಿಕ ವ್ಯವಸ್ಥೆಯನ್ನು ದಿಕ್ಕರಿಸಿದ ಅವರು ಜಾತಿ ಪದ್ದತಿ ಮತ್ತು ಶೋಷಣೆಯನ್ನು ನಿರ್ಮೂಲನೆ ಮಾಡಲು ಶ್ರಮಿಸಿದರು. ಸಾಮಾಜಿಕ ನೆಲೆಯಲ್ಲಿ ನಿಂತು ಧಾರ್ಮಿಕ ವ್ಯವಸ್ಥೆಗೆ ಸೆಡ್ಡು ಹೊಡೆದ ಅವರ ವ್ಯಕ್ತಿತ್ವ ಆಳವಾದ ಚಿಂತನೆಗಳಿAದ ಕೂಡಿತ್ತು. ನೊಂದವರಪರ ನಿಂತು ಹೋರಾಡಿದ ಅತ್ಯುತ್ತಮ ಸಂಘಟಕ, ವಾಗ್ಮಿ, ಸಾಹಿತಿ-ಚಿಂತಕ, ಬಹುಭಾಷಾ ಪಂಡಿತ ಮತ್ತು ಸಮಾಜ ಸುಧಾರಕ ಎಂಬುದಕ್ಕೆ ಅನೇಕ ಪುರಾವೆಗಳಿವೆ. 

Category : History


ProfileImg

Written by ಡಾ.ಅಮ್ಮಸಂದ್ರ ಸುರೇಶ್

ಲೇಖಕರುಮತ್ತು ಮಾಧ್ಯಮ ವಿಶ್ಲೇಷಕರ