ಆಯ್ರಾ ಬರವಣಿಗೆ ಸ್ಪರ್ಧೆ - ಮೇ 2024

ProfileImg
30 Apr '24
2 min read


image

ಆಯ್ರಾ ಮೇ 2024 ರ ಬರವಣಿಗೆ ಸ್ಪರ್ಧೆಗೆ ಉದಯೋನ್ಮುಖ ಬರಹಗಾರರು, ಪತ್ರಕರ್ತರು, ವಿದ್ಯಾರ್ಥಿಗಳು ಮತ್ತು ಹವ್ಯಾಸಿ ಲೇಖಕರನ್ನು ಆಹ್ವಾನಿಸುತ್ತೇವೆ.

ಇಂದು ಭಾಗವಹಿಸಿ ಮತ್ತು ಡಬಲ್ ಇನ್ಸೆಂಟಿವ್ಸ್ / ಪ್ರೋತ್ಸಾಹಧನ ಗೆಲ್ಲಿರಿ

ಸ್ಪರ್ಧೆಗೆ ನೋಂದಣಿ ಉಚಿತ!

ವಯಸ್ಸು: 13+
ಭಾಷೆಗಳು: ಕನ್ನಡ, ಹಿಂದಿ ಮತ್ತು ಇಂಗ್ಲಿಷ್
ಪದದ ಮಿತಿ

  • ಲೇಖನಗಳು ಮತ್ತು ಕಥೆಗಳು: ಕನಿಷ್ಠ 300 ಪದಗಳು 
  • ಕವಿತೆ ಮತ್ತು ಕವನ: ಕನಿಷ್ಠ 40 ಪದಗಳು 

ಸ್ಪರ್ಧೆಯ ಪ್ರಾರಂಭ ದಿನಾಂಕ: 26 ಏಪ್ರಿಲ್ 2024
ಸ್ಪರ್ಧೆಯ ಕೊನೆಯ ದಿನಾಂಕ: 20 ಮೇ 2024
ಫಲಿತಾಂಶಗಳ ಪ್ರಕಟಣೆ ದಿನಾಂಕ: 21 ಮೇ  2024 

ಸ್ಪರ್ಧೆಯಲ್ಲಿ ಭಾಗವಹಿಸಲು ಈ ಕೆಳಗಿನ ಷರತ್ತುಗಳನ್ನು ಕಡ್ಡಾಯವಾಗಿ ಅನುಸರಿಸಬೇಕು:

  1. 26ನೇ ಏಪ್ರಿಲ್ 2024 ರಿಂದ 20ನೇ ಮೇ 2024 ರ ನಡುವೆ ಲೇಖನ ಅಥವಾ ಕಥೆ ಅಥವಾ ಕವನ ಅಥವಾ ಕವಿತೆಯನ್ನು ಪ್ರಕಟಿಸಿ.
  2. ಪ್ರೇಕ್ಷಕರ ಅಂಕಗಳ ಆಧಾರದ ಮೇಲೆ ಟಾಪ್ 10 ಬರಹಗಾರರಲ್ಲಿ ಒಬ್ಬರಾಗಿರಿ ಮತ್ತು ನಿಮ್ಮ ಪೋಸ್ಟ್‌ಗೆ ಡಬಲ್ ಇನ್ಸೆಂಟಿವ್ಸ್ / ಪ್ರೋತ್ಸಾಹಧನ  ಗೆಲ್ಲಿರಿ ಮತ್ತು ಉನ್ನತ ಬರಹಗಾರರ ಇ-ಪ್ರಮಾಣಪತ್ರವನ್ನು ಪಡೆಯಿರಿ.
  3. ಟಾಪ್ 10 ಬರಹಗಾರರನ್ನು ಎಲ್ಲಾ ವಿಭಾಗಗಳು ಮತ್ತು ಭಾಷೆಗಳಿಂದ ಆಯ್ಕೆ ಮಾಡಲಾಗುತ್ತದೆ. ವರ್ಗಗಳು ಅಥವಾ ಭಾಷೆಗಳ ಆಧಾರದ ಮೇಲೆ ಶ್ರೇಯಾಂಕಗಳು ಈ ಸ್ಪರ್ಧೆಗೆ ಅನ್ವಯಿಸುವುದಿಲ್ಲ.
  4. ಬರಹಗಾರರು ಎಷ್ಟು ಬರವಣಿಗೆಯನ್ನು ಬೇಕಾದರೂ ಸಲ್ಲಿಸಬಹುದು, ಆದರೆ ಉತ್ತಮ ಪ್ರದರ್ಶನ ನೀಡುವ ಬರವಣಿಗೆಯನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ.
  5. ವಿಶಿಷ್ಟ ಓದುಗರ ಸಂಖ್ಯೆ, ಸರಾಸರಿ ಓದುವ ಸಮಯ, ಲೈಕಗಳು  ಮತ್ತು ಕಾಮೆಂಟ್‌ಗಳಿಂದ ಪ್ರೇಕ್ಷಕರ ಸ್ಕೋರ್ ಪ್ರಭಾವಿತವಾಗಿರುತ್ತದೆ.
  6. ಬರವಣಿಗೆ ನಿಮ್ಮ ಸ್ವಂತ ಬರವಣಿಗೆವಾಗಿರಬೇಕು ಮತ್ತು AI ನಿಂದ  ರಚಿತವಾಗಿರಬಾರದು. ಸಾಮಾಜಿಕ ಮಾಧ್ಯಮ, ಪತ್ರಿಕೋದ್ಯಮ ಅಥವಾ ನಿಮ್ಮ ಸ್ವಂತ ವೆಬ್‌ಸೈಟ್ ಅಥವಾ ಬ್ಲಾಗ್ ಪೋಸ್ಟ್ ಸೇರಿದಂತೆ ಬೇರೆಲ್ಲಿಯೂ ಹಿಂದೆ ಪ್ರಕಟವಾಗಿರಬಾರದು.
  7. ಒಮ್ಮೆ ನಿಮ್ಮ ಬರವಣಿಗೆಯನ್ನು ಸ್ಪರ್ಧೆಗೆ ಆಯ್ರಾದಲ್ಲಿ ಸಲ್ಲಿಸಿದ ನಂತರ ನೀವು ಯಾವುದೇ ಸಾಮಾಜಿಕ ಮಾಧ್ಯಮ, ಪತ್ರಿಕೋದ್ಯಮ ಅಥವಾ ನಿಮ್ಮ ಸ್ವಂತ ವೆಬ್‌ಸೈಟ್ ಅಥವಾ ಬ್ಲಾಗ್ ಪೋಸ್ಟ್ ಸೇರಿದಂತೆ ಬೇರೆಲ್ಲಿಯೂ ಪ್ರಕಟಿಸಬಾರದು.
  8. ಸ್ಪರ್ಧೆಗೆ ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬರವಣಿಗೆಯನ್ನು ಸಲ್ಲಿಸಬಹುದು.
  9. ರಾಜಕೀಯ, ಧರ್ಮ, ವಿಕೃತ ಲೈಂಗಿಕ ವಿಷಯ, ದ್ವೇಷ ಅಥವಾ ತಾರತಮ್ಯವನ್ನು ಉತ್ತೇಜಿಸುವ ವಿಷಯಗಳನ್ನು ಒಳಗೊಂಡಂತೆ, ವಿವಾದಕ್ಕೆ ಕಾರಣವಾಗಬಹುದಾದ ಯಾವುದೇ ವಿಷಯಗಳನ್ನು ಬರೆಯಬಾರದು. 
  10. ಸ್ಪರ್ಧೆಗೆ ನಿಮ್ಮ ಬರವಣಿಗೆಯನ್ನು ಆಯ್ರಾ ವೆಬ್ಸೈಟ್ನಲ್ಲಿ ಪ್ರಕಟಿಸ ಬೇಕು. ಬರವಣಿಗೆಯನ್ನುಆಯ್ರಾದಲ್ಲಿ ಪ್ರಕಟಿಸಲು, ಈ ಲಿಂಕ್‌ನಲ್ಲಿರುವ ಸೂಚನೆಗಳನ್ನು ನೋಡಿ.
  11. ಆಯ್ರಾ ಬರಹಗಾರರ ನಿಯಮಗಳು V4.0 ಪ್ರಕಾರ ಪ್ರೋತ್ಸಾಹ ಧನ ಪಾವತಿಯು ಪ್ರಸ್ತುತ ಪ್ರೋತ್ಸಾಹದ ಹಣಕ್ಕಿಂತ ದ್ವಿಗುಣವಾಗಿರುತ್ತದೆ. ಪಾಲಿಸಿ ಡಾಕ್ಯುಮೆಂಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ.
  12. ಡಬಲ್ ಇನ್ಸೆಂಟಿವ್ ಮೊತ್ತವನ್ನು ಪ್ರತಿ ಬರಹಗಾರರಿಗೆ ರೂ 1000 ವರೆಗೆ ಮಿತಿಗೊಳಿಸಲಾಗಿದೆ.
  13. ಸ್ಟ್ಯಾಂಡರ್ಡ್ ಆಯ್ರಾ ಬರಹಗಾರರ ನಿಯಮಗಳು ಅನ್ವಯವಾಗುತ್ತದೆ.
  14. ಯಾವುದೇ ಭಿನ್ನಾಭಿಪ್ರಾಯ ಉಂಟಾದರೆ, ಆಯ್ರಾ ತಂಡ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ.

ಸ್ಪರ್ಧೆಯ ನಿರ್ಣಯದ ಮಾನದಂಡಗಳು: ಓದುಗರು ಯಾವ ಲೇಖನವನ್ನು ಹೆಚ್ಚು ಓದುತ್ತಾರೆ ಮತ್ತು ಇಷ್ಟಪಡುತ್ತಾರೆ, ಆ ಲೇಖನವನ್ನು ವಿಜೇತ ಎಂದು ಗುರುತಿಸಲಾಗುತ್ತದೆ. ಭಾಷೆಯಾದ್ಯಂತ ಲೇಖನಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಪ್ರತಿ ಭಾಷೆಗೆ ಪ್ರತ್ಯೇಕ ಬಹುಮಾನವಿಲ್ಲ

ಸ್ಪರ್ಧೆಯ ಕುರಿತು ನಿಮಗೆ ಯಾವುದೇ ಪ್ರಶ್ನೆ ಇದ್ದರೆ ನಮ್ಮನ್ನು [email protected] ನಲ್ಲಿ ಇಮೇಲ್ ಮೂಲಕ ಅಥವಾ +919740878425 ನಲ್ಲಿ ವಾಟ್ಸಪ್ಪ್ ಮೂಲಕ ನಮ್ಮನ್ನು ಸಂಪರ್ಕಿಸಿ.

Disclaimer: This post has been published by Ayra Admin from Ayra and has not been created, edited or verified by Ayra
Category:

Contest




ProfileImg

Written by Ayra Admin

Verified