ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ
ಆಯ್ರಾ ಜೂನ್ 2024 ರ 'ಓಪನ್ ಥೀಮ್' ಬರವಣಿಗೆ ಸ್ಪರ್ಧೆಗೆ ಉದಯೋನ್ಮುಖ ಬರಹಗಾರರು, ಪತ್ರಕರ್ತರು, ವಿದ್ಯಾರ್ಥಿಗಳು ಮತ್ತು ಹವ್ಯಾಸಿ ಲೇಖಕರನ್ನು ಆಹ್ವಾನಿಸುತ್ತೇವೆ.
ಸ್ಪರ್ಧೆಗೆ ನೋಂದಣಿ ಉಚಿತ!
ವಯಸ್ಸು: 13+
ಭಾಷೆಗಳು: ಕನ್ನಡ, ಹಿಂದಿ ಮತ್ತು ಇಂಗ್ಲಿಷ್
ವರ್ಗಗಳು : ಲೇಖನ, ಕಥೆ
ಪದದ ಮಿತಿ : ಕನಿಷ್ಠ 350 ಪದಗಳು ಮತ್ತು ಗರಿಷ್ಠ 2000 ಪದಗಳು
ಸ್ಪರ್ಧೆಯ ಪ್ರಾರಂಭ ದಿನಾಂಕ: 10 ಜೂನ್ 2024
ಲೇಖನವನ್ನು ಸಲ್ಲಿಸಲು ಕೊನೆಯ ದಿನಾಂಕ: 30 ಜೂನ್ 2024
ಫಲಿತಾಂಶಗಳ ಪ್ರಕಟಣೆ ದಿನಾಂಕ: 15 ಜುಲೈ 2024
ಪ್ರಶಸ್ತಿ ಹಣ:
- ಮೊದಲನೇ ಬಹುಮಾನ : 4,000 ರೂ
- ಎರಡನೇ ಬಹುಮಾನ: 2,000 ರೂ
- ಮೂರನೇ ಬಹುಮಾನ: 1,000 ರೂ
ಸ್ಪರ್ಧೆಯಲ್ಲಿ ಭಾಗವಹಿಸಲು ಈ ಕೆಳಗಿನ ಷರತ್ತುಗಳನ್ನು ಕಡ್ಡಾಯವಾಗಿ ಅನುಸರಿಸಬೇಕು:
- ಲೇಖನವು ನಿಮ್ಮ ಸ್ವಂತ ಲೇಖನವಾಗಿರಬೇಕು. ಸಾಮಾಜಿಕ ಮಾಧ್ಯಮ, ಪತ್ರಿಕೋದ್ಯಮ ಅಥವಾ ನಿಮ್ಮ ಸ್ವಂತ ವೆಬ್‌ಸೈಟ್ ಅಥವಾ ಬ್ಲಾಗ್ ಪೋಸ್ಟ್ ಸೇರಿದಂತೆ ಬೇರೆಲ್ಲಿಯೂ ಹಿಂದೆ ಪ್ರಕಟವಾಗಿರಬಾರದು.
- ಒಮ್ಮೆ ನಿಮ್ಮ ಲೇಖನವನ್ನು ಸ್ಪರ್ಧೆಗೆ ಆಯ್ರಾದಲ್ಲಿ ಸಲ್ಲಿಸಿದ ನಂತರ ನೀವು ಯಾವುದೇ ಸಾಮಾಜಿಕ ಮಾಧ್ಯಮ, ಪತ್ರಿಕೋದ್ಯಮ ಅಥವಾ ನಿಮ್ಮ ಸ್ವಂತ ವೆಬ್‌ಸೈಟ್ ಅಥವಾ ಬ್ಲಾಗ್ ಪೋಸ್ಟ್ ಸೇರಿದಂತೆ ಬೇರೆಲ್ಲಿಯೂ ಪ್ರಕಟಿಸಬಾರದು.
- ಸ್ಪರ್ಧೆಗೆ ಗರಿಷ್ಠ 3 ಲೇಖನಗಳನ್ನು ಸಲ್ಲಿಸಬಹುದು. ನೀವು ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಲೇಖನವನ್ನು ಸಲ್ಲಿಸಬಹುದು.
- 'ಓಪನ್ ಥೀಮ್' ನಲ್ಲಿ ತಂತ್ರಜ್ಞಾನ, ಆಟೋಮೊಬೈಲ್, ಅಡುಗೆ, ಮನೆ/ಇಂಟೀರಿಯರ್ ಡಿಸೈನ್, ವೈಯಕ್ತಿಕ ಅನುಭವ, ಸಂಬಂಧಗಳು, ಜೀವನಶೈಲಿ, ಆರೋಗ್ಯ, ಹಣಕಾಸು ಮತ್ತು ಇನ್ನೂ ವಿವಿಧ ವಿಷಯಗಳನ್ನು ಒಳಗೊಂಡಂತೆ ನೀವು ವೈವಿಧ್ಯಮಯ ಲೇಖನಗಳನ್ನು ಬರೆಯಬಹುದು. ಅದಲ್ಲದೇ, ನೀವು ಕಥೆಗಳನ್ನು ಸಹ ಬರೆಯಬಹುದು.
- ನ್ಯೂಸ್, ರಾಜಕೀಯ, ಧರ್ಮ, ವಿಕೃತ ಲೈಂಗಿಕ ವಿಷಯ, ದ್ವೇಷ ಅಥವಾ ತಾರತಮ್ಯವನ್ನು ಉತ್ತೇಜಿಸುವ ವಿಷಯಗಳನ್ನು ಒಳಗೊಂಡಂತೆ, ವಿವಾದಕ್ಕೆ ಕಾರಣವಾಗಬಹುದಾದ ಯಾವುದೇ ವಿಷಯಗಳನ್ನು ಬರೆಯಬಾರದು.
- ಸ್ಪರ್ಧೆಗೆ ನಿಮ್ಮ ಲೇಖನವನ್ನು ಆಯ್ರಾ ವೆಬ್ಸೈಟ್ನಲ್ಲಿ ಪ್ರಕಟಿಸ ಬೇಕು. ಲೇಖನವನ್ನು ಆಯ್ರಾದಲ್ಲಿ ಪ್ರಕಟಿಸಲು, ಈ ಲಿಂಕ್‌ನಲ್ಲಿರುವ ಸೂಚನೆಗಳನ್ನು ನೋಡಿ.
- ಆಯ್ರಾದಲ್ಲಿ ಬರಹಗಾರರಾಗಿ ನೋಂದಾಯಿಸಿಕೊಳ್ಳಲು ಈ ವಿಡಿಯೋ ನೋಡಿ
https://www.youtube.com/watch?v=-IdFUW9Zbxs
ಸ್ಪರ್ಧೆಯ ನಿರ್ಣಯದ ಮಾನದಂಡಗಳು: ಓದುಗರು ಮತ್ತು ನಮ್ಮ ತೀರ್ಪುಗಾರರು ಯಾವ ಲೇಖನವನ್ನು ಹೆಚ್ಚು ಓದುತ್ತಾರೆ ಮತ್ತು ಇಷ್ಟಪಡುತ್ತಾರೆ, ಆ ಲೇಖನವನ್ನು ವಿಜೇತ ಎಂದು ಗುರುತಿಸಲಾಗುತ್ತದೆ. ಓದುಗರ ಸ್ಕೋರ್ 50% ಮತ್ತು ತೀರ್ಪುಗಾರರ ಸ್ಕೋರ್ 50% ಎಣಿಕೆಯಾಗುತ್ತದೆು. ಭಾಷೆಯಾದ್ಯಂತ ಲೇಖನಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಪ್ರತಿ ಭಾಷೆಗೆ ಪ್ರತ್ಯೇಕ ಬಹುಮಾನವಿಲ್ಲ
ಸ್ಪರ್ಧೆಯ ಕುರಿತು ನಿಮಗೆ ಯಾವುದೇ ಪ್ರಶ್ನೆ ಇದ್ದರೆ ನಮ್ಮನ್ನು [email protected] ನಲ್ಲಿ ಇಮೇಲ್ ಮೂಲಕ ಅಥವಾ +919740878425 ನಲ್ಲಿ ವಾಟ್ಸಪ್ಪ್ ಮೂಲಕ ನಮ್ಮನ್ನು ಸಂಪರ್ಕಿಸಿ.
ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ