ಹೇ ತಾಯಿ ಏನೆಂದು ಸ್ತುತಿಸಲೆ ನಿನ್ನ ನಾ ll
ನವಮಾಸವನು ತನ್ನ ಉದರದಲ್ಲಿರಿಸಿಕೊಂಡು
ಏನೆಲ್ಲಾ ನೋವು ಪ್ರಸವ ವೇದನೆ ಸಹಿಸಿಕೊಂಡು
ಜನ್ಮ ನೀಡಿ ಈ ಜಗಕೆ ನನ್ನ ತಂದಿತ್ತ .
ಸಹನೆಯಿಂದಲೆ ಎಲ್ಲವನು ತಿದ್ದಿ ತೀಡಿ ಕಲಿಸಿ
ಪ್ರೀತಿಯಿಂದಲೇ ನನ್ನ ಮಲ ಮೂತ್ರ ತೊಳೆದು
ಜಗದಲಿ ಎಲ್ಲರಂತೆ ನನ್ನನ್ನು ಒಬ್ಬ ನಾಗರಿಕನನ್ನಾಗಿಸಿದ
ಅವ್ವ ಎನ್ನುತ್ತಲೇ ಈ ಭುವಿಗೆ ಕಾಲಿರಿಸಿದ ಎನಗೆ
ಪ್ರಾಥಮಿಕ ಜ್ಞಾನದ ಅರಿವು ಮೂಡಿಸಿದ ನಿನ್ನ ತಾಣವೇ
ಮೊದಲ ಪಾಠಶಾಲೆಯಾಗಿ ನೀನೆ ನನ್ನ ಮೊದಲ ಗುರುವಾಗಿಹ
Writer
0 Followers
0 Following